ಫ್ಯಾಮಿಲಿ ಥ್ರಿಲ್ಲರ್ ಚಿತ್ರದಲ್ಲಿ ಕೃಷ್ಣ ಅಜಯರಾವ್ ಯೋಗರಾಜ ಭಟ್- ದಿನಕರ್ ಚಾಲನೆ
ನನ್ ಮಗಳೇ ಹೀರೋಯಿನ್ ಸೇರಿದಂತೆ ಹಲವು ಸದಭಿರುಚಿಯ ಚಿತ್ರಗಳ ನಿರ್ದೇಶಕ ಎಸ್.ಕೆ. ಬಾಹುಬಲಿ ಇದೀಗ ಕೃಷ್ಣ ಅಜೇಯ್ ರಾವ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪಿ.ಕೆ. ಪ್ರೊಡಕ್ಷನ್ಸ್ ಮೂಲಕ ನಿರ್ಮಾಪಕ ಕಿರಣ್ ಅವರು ಮೊದಲ ಬಾರಿಗೆ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದ ಮುಹೂರ್ತ ಸಮಾರಂಭ ಶ್ರೀ ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಪ್ರಥಮ ದೃಶ್ಯಕ್ಕೆ ಯೋಗರಾಜ ಭಟ್ಟರು ಕ್ಲಾಪ್ ಮಾಡಿದರೆ, ದಿನಕರ್ ತೂಗುದೀಪ ಕ್ಯಾಮೆರಾ ಚಾಲನೆ ಮಾಡಿದರು. ನಿರ್ದೇಶಕ ಎಂ.ಡಿ. ಶ್ರೀಧರ್, ಎಸ್. ನಾರಾಯಣ್, ಶಿವತೇಜಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಫ್ಯಾಮಿಲಿ ಥ್ರಿಲ್ಲರ್ ಚಿತ್ರದಲ್ಲಿ ಕೃಷ್ಣ ಅಜಯರಾವ್ ಯೋಗರಾಜ ಭಟ್- ದಿನಕರ್ ಚಾಲನೆ. ಲವರ್ ಬಾಯ್, ಆಕ್ಷನ್ ಹೀರೋ, ಭಗ್ನ ಪ್ರೇಮಿಯಾಗಿ ಕಾಣಿಸಿಕೊಂಡಿದ್ದ ಅಜಯ್ ರಾವ್ ಈ ಚಿತ್ರದ ಮೂಲಕ ರಗಡ್ ಹೀರೋ ಆಗುತ್ತಿದ್ದಾರೆ. ಮುಹೂರ್ತದ ನಂತರ ನಿರ್ದೇಶಕ ಬಾಹುಬಲಿ ಮಾತನಾಡುತ್ತ…
ಮುಂದೆ ಓದಿ..
