ಬೆಂಗಳೂರು: ವಿದೇಶಿ ಪ್ರಜೆಗೆ ಮನೆ ಬಾಡಿಗೆ – ಮಹಿಳೆ ವಿರುದ್ಧ ಪ್ರಕರಣ
ಬೆಂಗಳೂರು: ವಿದೇಶಿ ಪ್ರಜೆಗೆ ಮನೆ ಬಾಡಿಗೆ – ಮಹಿಳೆ ವಿರುದ್ಧ ಪ್ರಕರಣ ಬೆಂಗಳೂರು 20 ಆಗಸ್ಟ್ 2025ನಗರದ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಭದ್ರಪ್ಪ ಲೇಔಟ್, ಮಾರುತಿನಗರದಲ್ಲಿ ವಿದೇಶಿ ಪ್ರಜೆಗೆ ಅನಧಿಕೃತವಾಗಿ ಮನೆ ಬಾಡಿಗೆಗೆ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಆಗಸ್ಟ್ 17 ರಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಕೊಡಿಗೆಹಳ್ಳಿಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ, ಮಾರುತಿನಗರ 1ನೇ ಮುಖ್ಯರಸ್ತೆಯ ಮನೆ ನಂ.218, 1ನೇ ಮಹಡಿಯಲ್ಲಿ ವಾಸಿಸುತ್ತಿದ್ದ ವಿದೇಶಿ ಪ್ರಜೆಯ ಬಗ್ಗೆ ಮಾಹಿತಿ ದೊರಕಿತು. ಮನೆಯನ್ನು ಮಾಲೀಕರಾದ ಶ್ರೀಮತಿ ಗಂಗಾರಾಣಿ, ಸಂಜಯ್ ನಗರದ ನಿವಾಸಿ, ವಿದೇಶಿ ಪ್ರಜೆ ಡುಮೊ ಎಲ್.ಪಿ. ಫ್ರೆಡರಿಕ್ (39 ವರ್ಷ, ನೈಜೀರಿಯಾ ಮೂಲದವರು) ಅವರಿಗೆ ಬಾಡಿಗೆಗೆ ನೀಡಿರುವುದು ಪತ್ತೆಯಾಯಿತು. ಮನೆಯಿಂದ ದೊರೆತ ಮಾಹಿತಿಯ ಪ್ರಕಾರ, ಕಳೆದ 2 ತಿಂಗಳಿಂದ ಫ್ರೆಡರಿಕ್ ವಾಸವಾಗಿದ್ದು, ಪ್ರತಿ ತಿಂಗಳು ರೂ.9,450 ಬಾಡಿಗೆ ನೀಡುತ್ತಿದ್ದಾರೆ. ಆದರೆ, ಸಂಬಂಧಪಟ್ಟ…
ಮುಂದೆ ಓದಿ..
