ಬೆಂಗಳೂರಿನಲ್ಲಿ ಟೆಂಪೋ ಕಳ್ಳತನ – ಪ್ರಕರಣ ದಾಖಲಾತಿ
ಬೆಂಗಳೂರು:23. 2025ನಗರದ ಯಲಹಂಕ ಉಪನಗರದ ‘ಬಿ’ ಸೆಕ್ಟರ್‌ನ ಸಂದೀಪ್ ಉನ್ನಿಕೃಷ್ಣನ್ ರಸ್ತೆಯ 8ನೇ ‘ಬಿ’ ಕ್ರಾಸ್‌ನಲ್ಲಿ ಪಾರ್ಕ್ ಮಾಡಿದ್ದ ಟೆಂಪೋವನ್ನು ಕಳ್ಳತನ ಮಾಡಲಾಗಿದೆ. ಪಿರ್ಯಾದಿದಾರರು ಕಟ್ಟಡ ನಿರ್ಮಾಣ ಕಾರ್ಯಕ್ಕೆ ಬಳಸುತ್ತಿದ್ದ ಟಾಟಾ ಎಸ್ ವಾಹನ (ನಂ. KA 50 3579) ಅನ್ನು ದಿನಾಂಕ 08/07/2025 ರಂದು ಸಂಜೆ 6 ಗಂಟೆಯ ಸುಮಾರಿಗೆ ಅಲ್ಲಿಗೆ ತಂದಿದ್ದರು. ದಿನಾಂಕ 13/07/2025 ರ ಬೆಳಗ್ಗೆ 6.30ರ ವೇಳೆಗೆ ವಾಹನ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಸ್ಥಳದ ಸಿಸಿ ಕ್ಯಾಮರಾದ ದೃಶ್ಯಾವಳಿಯಲ್ಲಿ ದಿನಾಂಕ 12/07/2025, ಮಧ್ಯಾಹ್ನ 12.30 ಕ್ಕೆ ಟ್ಯಾಂಪೋವನ್ನು ಯಾರೋ ಅಪರಿಚಿತರು ಕಳ್ಳತನ ಮಾಡಿರುವುದು ದೃಢಪಟ್ಟಿದೆ. ಕಳೆದ ದಿನಗಳಲ್ಲಿ ವಾಹನ ಪತ್ತೆಯಾಗದ ಕಾರಣ ದೂರು ನೀಡಲು ತಡವಾಗಿದೆ ಎಂದು ಪಿರ್ಯಾದಿದಾರರು ತಿಳಿಸಿದ್ದಾರೆ. ಕಳ್ಳತನ ಮಾಡಿರುವ ವ್ಯಕ್ತಿಗಳನ್ನು ಪತ್ತೆಹಚ್ಚಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಅವರು ಯಲಹಂಕ ಉಪನಗರ ಪೊಲೀಸರಿಗೆ ಮನವಿ ಮಾಡಿದ್ದಾರೆ. ವಾಹನದ…
ಮುಂದೆ ಓದಿ..
