ವಿಮಾನ ತರಬೇತಿ ಕಂಪನಿಯಲ್ಲಿ ಹೂಡಿಕೆ ಹೆಸರಲ್ಲಿ ಮೋಸ – ಮಹಿಳೆಯರಿಂದ ಲಕ್ಷಾಂತರ ಹಣ ವಂಚನೆ!
ಬೆಂಗಳೂರು, ಜುಲೈ 31–2025ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಮಾನ ತರಬೇತಿ ಸಂಸ್ಥೆಯ ಹೂಡಿಕೆ ಹೆಸರಿನಲ್ಲಿ ಮಹಿಳೆಯೊಬ್ಬರು ಲಕ್ಷಾಂತರ ರೂ.ಗಳನ್ನು ಕಳೆದುಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮಹಿಳೆ ಯಲಹಂಕ ಉಪನಗರ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ದೂರುದಾರೆಯ ಪ್ರಕಾರ, ಜಲೀಲ್ ಮುಲಾ ಎಂಬವರು ವಿಮಾನ ತರಬೇತಿ ಕೋರ್ಸ್ ನಡೆಸಲು LLP ಸಂಸ್ಥೆಯು ಸ್ಥಾಪನೆ ಮಾಡಿದ್ದು, ಪ್ರತಿಯೊಬ್ಬ ಹೂಡಿಗಾರರಿಂದ ರೂ.2 ಲಕ್ಷ ಹಣ ಹೂಡಿಕೆ ಮಾಡುವ ಒಪ್ಪಂದವಿತ್ತು. ಆದರೆ, ಜಲೀಲ್ ಅವರು ಯಾವುದೇ ಹಣ ಹೂಡದೇ, ನಿರಂತರ ಭರವಸೆ ನೀಡಿ ದೂರುದಾರರಿಂದ ಎಲ್ಎಲ್ಪಿ ಖಾತೆಗೆ ರೂ.14,00,937/- ರಷ್ಟು ಹಣವನ್ನು ಹೂಡಿಕೆ ಮಾಡಿಸಿದ್ದಾರೆ. ಆರ್ಥಿಕ ಸಂಕಷ್ಟದ ಸಮಯದಲ್ಲಿ, ಆರ್ಥೋಪಚಾರಕ್ಕಾಗಿ ಹಣವನ್ನು ಹಿಂದಿರುಗಿಸುವಂತೆ ಹಲವಾರು ಬಾರಿ ಮನವಿ ಮಾಡಿದರೂ, ಆರೋಪಿಯು ಧಿಕ್ಕರಿಸಿ, ಅವಹೇಳನಕಾರಿ ಭಾಷೆಯಲ್ಲಿ (“ಫಕ್ ಆಫ್ ಬಿಚ್”) ನಿಂದಿಸಿ, ದೂರುದಾರರನ್ನು ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ…
ಮುಂದೆ ಓದಿ..
