ಮೆರವಣಿಗೆಯಲ್ಲಿ ಜಗಳ – ಮೂವರು ವಿರುದ್ಧ ಎಫ್‌ಐಆರ್
ಬೆಂಗಳೂರು, ಜುಲೈ 31:2025 ನಗರದ ಯಲಹಂಕ ಸಮೀಪದ ಮರಿಯಣಪಾಳ್ಯದಲ್ಲಿ ನಡೆದ ಸಂತ ಯಾಗಪ್ಪರ ಹಬ್ಬದ ತೇರಿನ ಮೆರವಣಿಗೆಯಲ್ಲಿ ಜಗಳ ಸಂಭವಿಸಿದ್ದು, ಇದರಲ್ಲಿ ಭಾಗಿಯಾದ ಮೂವರ ವಿರುದ್ಧ ಅಮೃತಳ್ಳಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಚಂದ್ರು ಅವರ ವರದಿಯ ಪ್ರಕಾರ, ಅವರು ದಿನಾಂಕ 27-07-2025ರಂದು ತಮ್ಮ ಪತ್ನಿ ಕೃಷ್ಣವೇಣಿ, ಅತ್ತಿಗೆ ಅನಿತಾ ಹಾಗೂ ಅಣ್ಣನ ಮಗ ಕಿಶೋರ್ ಜೊತೆ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದರು. ಬೆಳಿಗ್ಗೆ ಸುಮಾರು 9:30ರ ಸುಮಾರಿಗೆ ಮೆರವಣಿಗೆ ಮರಿಯಣಪಾಳ್ಯ ಸರ್ಕಲ್ ಬಳಿ ತಲುಪಿದಾಗ, ರಾಜಪ್ಪ, ಪೀಟರ್ ಮತ್ತು ಪ್ರಶಾಂತ್ ಎಂಬವರು ಇವರನ್ನು ಅಡ್ಡಗಟ್ಟಿ, ಕಿಶೋರ್ ಅನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಂದನೆ ನಡೆಸಿದ್ದಾರೆ. ಈ ವೇಳೆ ಪ್ರತಿಸ್ಪಂದನೆ ನೀಡಿದ ಚಂದ್ರು ಅವರ ಕುಟುಂಬದ ಮೇಲೆ ಮೂವರು ಕೈಗಳಿಂದ ಹಲ್ಲೆ ಮಾಡಿ ಗಂಭೀರ ಗಾಯಮಾಡಿದ್ದಾರೆ. ಈ ಹಲ್ಲೆಯಿಂದ ಚಂದ್ರು ಅವರ ಪತ್ನಿಗೆ ತೀವ್ರ ಪೆಟ್ಟು ಬಿದ್ದು ಅವರನ್ನು ಯಲಹಂಕದ ಸರ್ಕಾರಿ…
ಮುಂದೆ ಓದಿ..
