ಅಂಕಣ 

ಸರ್ಕಾರಿ ( ತೆರಿಗೆ ) ಹಣದ ದುಂದು ವೆಚ್ಚ……..

ಸರ್ಕಾರಿ ( ತೆರಿಗೆ ) ಹಣದ ದುಂದು ವೆಚ್ಚ…….. ಕೆಲವು ಸಾಮಾನ್ಯ ಉದಾಹರಣೆಗಳು…….. ಒಂದು ಆಶ್ಚರ್ಯಕರ ವಿಷಯ ಸಾಮಾನ್ಯ ಜನರ ಅರಿವಿಗೆ ಇನ್ನೂ ಬಂದಿಲ್ಲವೆನಿಸುತ್ತದೆ. ಸರ್ಕಾರ ಖರ್ಚು ಮಾಡುವ ವೆಚ್ಚದಲ್ಲಿ ಶೇಕಡಾ 20/30% ವ್ಯರ್ಥ ಅಥವಾ ದುಂದು ವೆಚ್ಚ ಆಗಿರುತ್ತದೆ. ದಯವಿಟ್ಟು ಗಮನಿಸಿ. ಇದರಲ್ಲಿ ಭ್ರಷ್ಟಾಚಾರ ಸೇರಿಲ್ಲ. ಅದು ಪ್ರತ್ಯೇಕ. ಹಾಗಾದರೆ ಈ ದುಂದು ವೆಚ್ಚ ಹೇಗಾಗುತ್ತದೆ……. ಮೊದಲನೆಯ ಅತಿಹೆಚ್ಚು ದುಂದು ವೆಚ್ಚ ಸರ್ಕಾರಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯಲ್ಲಿ ನಮ್ಮ ತೆರಿಗೆಯ ಹಣ ಪೋಲಾಗುತ್ತದೆ. ಸರ್ಕಾರದ ವತಿಯಿಂದ ಆಗುವ ಯಾವುದೇ ಹೊಸ ಕಟ್ಟಡ, ರಸ್ತೆ, ಭವನ, ಯೋಜನೆ, ಕಾರ್ಯಾಲಯ, ಉದ್ಘಾಟನಾ ಸಭೆ ಸಮಾರಂಭಗಳು ಅದು ಸರ್ಕಾರದ ಕರ್ತವ್ಯದ ಒಂದು ಭಾಗವಾಗಿದ್ದರೂ, ಅದನ್ನು ಸ್ಥಳೀಯವಾಗಿ ಒಂದು ಸಣ್ಣ ಹಣದಲ್ಲಿ ಅವಶ್ಯಕತೆ ಇದ್ದಲ್ಲಿ ಪೂಜೆ ಮಾಡಿ ಮುಗಿಸಬಹುದು. ಆದರೆ ಅದಕ್ಕಾಗಿ ಸರ್ಕಾರ ಲಕ್ಷಗಟ್ಟಲೆ ಹಣ ಖರ್ಚು ಮಾಡುತ್ತದೆ. ಸರ್ಕಾರದಲ್ಲಿ…

ಮುಂದೆ ಓದಿ..
ಸುದ್ದಿ 

ಕಾಣೆಯಾದ ಯುವತಿ – ಪೊಲೀಸರು ತನಿಖೆ ಆರಂಭಿಸಿದರು

ಕಾಣೆಯಾದ ಯುವತಿ – ಪೊಲೀಸರು ತನಿಖೆ ಆರಂಭಿಸಿದರು ಬೆಂಗಳೂರು: 30 ಆಗಸ್ಟ್ 2025ರಾಜಾಜಿನಗರದ ಶ್ರೀಮತಿ ಭಾಗಮ್ಮ ಅವರ ಮಗಳಾದ ಕುಮಾರಿ ದುರ್ಗಾ (16 ವರ್ಷ) ಅವರು 27 ಆಗಸ್ಟ್ 2025, ಬುಧವಾರ ಸಂಜೆ 4.00 ಗಂಟೆಗೆ ಮನೆ ಕೆಲಸಕ್ಕೆಂದು ಹೊರಟು ಹೋದವರು ಇಂದಿಗೂ ಮನೆಗೆ ವಾಪಸ್ಸು ಬಂದಿಲ್ಲ ಎಂದು ಯಲಹಂಕ ಉಪನಗರ ಪೊಲೀಸರು ತಿಳಿಸಿದ್ದಾರೆ. ಕುಮಾರಿ ದುರ್ಗಾ ಅವರು ಹೊರಡುವಾಗ ಪಿಂಕ್ ಬಣ್ಣದ ಚೂಡಿದಾರ ಧರಿಸಿದ್ದರು. ಅವರ ಮೈಕಟ್ಟು ಸಾದಾರಣವಾಗಿದ್ದು, ಮೈಬಣ್ಣ ಗೋದಿ ಬಣ್ಣವಾಗಿದೆ. ಕಾಣೆಯಾದ ಯುವತಿ ಸುಮಾರು ₹30,000 ನಗದು ಹಾಗೂ 2.50 ತೋಲೆ ಬಂಗಾರವನ್ನು ಕೂಡ ತೆಗೆದುಕೊಂಡು ಹೋಗಿರುವುದಾಗಿ ಕುಟುಂಬಸ್ಥರು ದೂರು ನೀಡಿದ್ದಾರೆ. ಮಗಳಿಗಾಗಿ ಎಲ್ಲೆಡೆ ಹುಡುಕಿದರೂ ಪತ್ತೆಯಾಗದ ಕಾರಣದಿಂದ ತಾಯಿ ಭಾಗಮ್ಮ ಅವರು ಯಲಹಂಕ ಉಪನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕಾಣೆಯಾದ ಯುವತಿಯನ್ನು ಪತ್ತೆಹಚ್ಚಲು ತನಿಖೆ ಪ್ರಾರಂಭಿಸಿದ್ದಾರೆ.

ಮುಂದೆ ಓದಿ..
ಸುದ್ದಿ 

ರಾಜಾಜಿನಗರದ 31 ವರ್ಷದ ವಕೀಲೆಯರು ಕಾಣೆಯಾದ ಘಟನೆ

ಬೆಂಗಳೂರು: 30 ಆಗಸ್ಟ್ 2025ನಗರದ ರಾಜಾಜಿನಗರದ ನಿವಾಸಿ ಹಾಗೂ ವಕೀಲೆಯಾದ ದಿಶಾ ಕೆ. ದಿನಕರ್ (31) ಅವರು ಕಳೆದ ಕೆಲವು ದಿನಗಳಿಂದ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಯಲಹಂಕ ಉಪನಗರ ಪೊಲೀಸರ ಮಾಹಿತಿ ಪ್ರಕಾರ, ದಿಶಾ ಅವರು ರಾಜಾಜಿನಗರದಲ್ಲಿ ವಕೀಲೆಯಾಗಿ ಕೆಲಸ ಮಾಡುತ್ತಿದ್ದು, ಶಶಿಕುಮಾರ್ ಎಂಬುವರೊಂದಿಗೆ ಸ್ನೇಹ ಹೊಂದಿದ್ದರು. ಈ ಸಂಬಂಧವನ್ನು ಮನೆಯವರು ವಿರೋಧಿಸಿದ್ದರು. ನಂತರ, 18 ಮಾರ್ಚ್ 2025ರಂದು ಮನೆಯಿಂದ ತೆರಳಿ, ಕೊರಮಂಗಲದ ಪಿಜಿ ವಸತಿಗೃಹದಲ್ಲಿ ವಾಸಿಸಲು ಆರಂಭಿಸಿದ್ದರು. ಆದರೆ, 9 ಆಗಸ್ಟ್ 2025ರಂದು “ಮನೆಗೆ ಬರುತ್ತೇನೆ” ಎಂದು ತಿಳಿಸಿ ಹೊರಟಿದ್ದರೂ ಇಂದಿನವರೆಗೆ ವಾಪಸ್ ಆಗಿರಲಿಲ್ಲ. ಮೊಬೈಲ್ ಕರೆಗೂ ಸ್ಪಂದಿಸದೆ, ಕೆಲಸದ ಸ್ಥಳ ಮತ್ತು ಸ್ನೇಹಿತರ ಬಳಿ ವಿಚಾರಿಸಿದರೂ ಯಾವುದೇ ಸುಳಿವು ಸಿಗಲಿಲ್ಲ ಎಂದು ಕುಟುಂಬಸ್ಥರು ಯಲಹಂಕ ಉಪನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಕಾಣೆಯಾದ ದಿಶಾ ಕೆ. ದಿನಕರ್ ಅವರು 31 ವರ್ಷದವರಾಗಿದ್ದು, ಎತ್ತರ 5.4…

ಮುಂದೆ ಓದಿ..
ಸುದ್ದಿ 

ರಸ್ತೆ ಅಪಘಾತ ಸುದ್ದಿ ವರದಿ

ಬೆಂಗಳೂರು, 30 ಆಗಸ್ಟ್ 2025– ನಗರದ ಹೊಳಲಮಾವಿನ ಬಳಿ ನಡೆದ ರಸ್ತೆ ಅಪಘಾತದಲ್ಲಿ 17 ವರ್ಷದ ಬಾಲಕ ಸಣ್ಣಮೀರ ಗಂಭೀರವಾಗಿ ಗಾಯಗೊಂಡಿದ್ದಾನೆ. ಮಾಹಿತಿಯ ಪ್ರಕಾರ, KA-04-KW-3619 ಸಂಖ್ಯೆಯ ಕಾರ್ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಿಸುತ್ತಿದ್ದ ವೇಳೆ, ಸಿಗ್ನಲ್ ಬಳಿ ನಿಂತಿದ್ದ KA-04-AA-7411 ಸಂಖ್ಯೆಯ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಸಣ್ಣಮೀರ ರಸ್ತೆಗಿಳಿದು ಬಿದ್ದು ಎಡಕಾಲಿಗೆ ಪಟ್ಟು ಬಿದ್ದು ಮೂಳೆ ಮುರಿದಿದೆ. ಸ್ಥಳಕ್ಕೆ ಬಂದ ಸಾರ್ವಜನಿಕರು ಗಾಯಗೊಂಡ ಬಾಲಕನನ್ನು ತಕ್ಷಣವೇ ಹತ್ತಿರದ ಆಶ್ವಿನಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಯಲಹಂಕ ಸಂಚಾರಿ ಪೊಲೀಸರು ಅಪಘಾತಕ್ಕೆ ಕಾರಣವಾದ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮುಂದೆ ಓದಿ..
ಸುದ್ದಿ 

ಯಲಹಂಕ ಸಂತೆ ಮಾರ್ಕೆಟ್‌ನಲ್ಲಿ ಮೊಬೈಲ್ ಕಳವು

ಬೆಂಗಳೂರು, ಆ.30 –2025ಯಲಹಂಕ ಸಂತೆ ಮಾರ್ಕೆಟ್‌ನಲ್ಲಿ ಖರೀದಿಗೆ ಬಂದಿದ್ದ ವ್ಯಕ್ತಿಯ ಮೊಬೈಲ್ ಫೋನ್ ಕಳುವಾದ ಪ್ರಕರಣ ವರದಿಯಾಗಿದೆ. ನರೇಂದ್ರ ವಿ ಅವರ ಪ್ರಕಾರ, ಅವರು 27 ಆಗಸ್ಟ್ 2025ರಂದು ಬೆಳಿಗ್ಗೆ 10.15 ಗಂಟೆಗೆ ದಿನಸಿ ವಸ್ತುಗಳನ್ನು ಖರೀದಿಸಲು ಸಂತೆ ಮಾರ್ಕೆಟ್‌ಗೆ ತೆರಳಿದ ವೇಳೆ, ತಮ್ಮ OnePlus 13 (Midnight Ocean Colour) ಮೊಬೈಲ್ ಫೋನ್ (IMEI: 869556070434734, ಫೋನ್ ನಂ: 9632173694) ಕಳುವಾಗಿದೆ. ಈ ಕುರಿತು ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚಿ ಕಳವಾದ ಮೊಬೈಲ್ ವಶಪಡಿಸಿಕೊಳ್ಳಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೊಲೀಸರು ಸಾರ್ವಜನಿಕರಿಗೆ – ಹಬ್ಬದ ಕಾಲದಲ್ಲಿ ಮತ್ತು ಜನಸಂದಣಿ ಪ್ರದೇಶಗಳಲ್ಲಿ ತಮ್ಮ ಮೊಬೈಲ್, ಚೀಲ ಹಾಗೂ ಬೆಲೆಬಾಳುವ ವಸ್ತುಗಳನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ಮುಂದೆ ಓದಿ..
ಸುದ್ದಿ 

ಯಲಹಂಕ ರಾಜಾನಕುಂಟೆ ಸರ್ಕಲ್‌ನಲ್ಲಿ ಲಾರಿ-ಕಾರು ಡಿಕ್ಕಿ

ಯಲಹಂಕ ರಾಜಾನಕುಂಟೆ ಸರ್ಕಲ್‌ನಲ್ಲಿ ಲಾರಿ-ಕಾರು ಡಿಕ್ಕಿ ಬೆಂಗಳೂರು, ಆಗಸ್ಟ್ 30 :2025ಯಲಹಂಕ–ದೊಡ್ಡಬಳ್ಳಾಪುರ ರಸ್ತೆಯ ರಾಜಾನಕುಂಟೆ ಸರ್ಕಲ್ ಬಳಿ ಗುರುವಾರ ಸಂಜೆ ಅಪಘಾತ ಸಂಭವಿಸಿದೆ. ಸಂಜೆ ಸುಮಾರು 7 ಗಂಟೆ ವೇಳೆಗೆ ಕಾರು ಚಾಲನೆ ಮಾಡುತ್ತಿದ್ದ ರೀತ್ಯಾ ಅವರ ವಾಹನಕ್ಕೆ, ಯಲಹಂಕ ದಿಕ್ಕಿನಿಂದ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಬಂದ KA38A5858 ಲಾರಿ ಬಲಭಾಗದಲ್ಲಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರು ಹಾನಿಗೊಳಗಾದರೂ, ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಘಟನೆಯ ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು, ಲಾರಿ ಚಾಲಕನ ವಿರುದ್ಧ ಕೇಸ್ ನಂ. 244/2025 ಅಡಿಯಲ್ಲಿ BNS 281, 500 ಕಲಂ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ರಾಜನಕುಂಟೆ ಪೊಲೀಸರು ವಾಹನ ಸವಾರರು ವೇಗ ನಿಯಂತ್ರಣ ಕಾಪಾಡಿಕೊಂಡು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು ಎಂದು ಮನವಿ ಮಾಡಿದ್ದಾರೆ.

ಮುಂದೆ ಓದಿ..
ಸುದ್ದಿ 

ಭೂಮಿ ವಂಚನೆ ಪ್ರಕರಣ – ದೇವನಹಳ್ಳಿ ನ್ಯಾಯಾಲಯ ಆದೇಶದಂತೆ FIR ದಾಖಲು

ದೇವನಹಳ್ಳಿ ನ್ಯಾಯಾಲಯದ ಆದೇಶದ ಮೇರೆಗೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಭೂಮಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿದೆ. ಪ್ರಭಾಕರ ರವರ ದೂರಿನ ಪ್ರಕಾರ, ಅವರ ತಾತ ಶ್ರೀ ತಮ್ಮಣ (ತಿಮ್ಮಸಂದ್ರ ಗ್ರಾಮದವರು) ಅವರು 1983ರಲ್ಲಿ ನಿಧನರಾದರು. ನಂತರ ಪಿರ್ಯಾದುದಾರರ ಚಿಕ್ಕಪ್ಪ ಕೃಷ್ಣಪ್ಪ ಹಾಗೂ ಅವರ ಮಕ್ಕಳು ಆಸ್ತಿಗೆ ಸಂಬಂಧಿಸಿದಂತೆ ದೇವನಹಳ್ಳಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು (O.S No.2184/2006). ಕೃಷ್ಣಪ್ಪರು 2013ರಲ್ಲಿ ಮೃತಪಟ್ಟ ನಂತರ, ಅವರ ಮಗ ಹರಿಪ್ರಸಾದ್ ಪ್ರಭಾಕರರಿಗೆ ಸಮಪಾಲು ನೀಡುವುದಾಗಿ ಭರವಸೆ ನೀಡಿದ್ದರೂ, ನಂತರ ಪಾಲು ನೀಡದೆ ಇದ್ದಾರೆ. ಪ್ರಭಾಕರರು ಕೋರ್ಟ್ ಮುಖಾಂತರ ಹರಿಪ್ರಸಾದ್ ಅವರಿಗೆ ಲೀಗಲ್ ನೋಟೀಸ್ ಕಳುಹಿಸಿದಾಗ, ಹರಿಪ್ರಸಾದ್ ಅವರು ಆ ಜಮೀನನ್ನು ರಾಜೇಂದ್ರ ಪ್ರಸಾದ್ ಹಾಗೂ ಶ್ರೀರಾಜ್ ಪುರುಷೋತ್ತಮನ್ ರವರಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ. ದಾಖಲೆಗಳ ಪರಿಶೀಲನೆಯಲ್ಲಿ, ದಿನಾಂಕ 08/09/2011 ರಂದು ತುಪ್ಪ ಕ್ರಯದ ಕರಾರು ಹಾಗೂ 09/09/2011 ರಂದು ಶುದ್ಧ ಕ್ರಯ…

ಮುಂದೆ ಓದಿ..
ಸುದ್ದಿ 

ಬೆಂಗಳೂರು ಅಪಘಾತ – ಗಾರೆ ಕಾರ್ಮಿಕನ ಸಾವು

ಬೆಂಗಳೂರು 30 ಆಗಸ್ಟ್ 2025ನಗರದ ಸಂಪಿಗೆಹಳ್ಳಿ ಮುಖ್ಯರಸ್ತೆಯಲ್ಲಿರುವ ಸೋವೆನ್ ಸಾಚಿ ಅಪಾರ್ಟಮೆಂಟ್ ನಿರ್ಮಾಣ ಕಾರ್ಯ ನಡೆಯುತ್ತಿರುವ ವೇಳೆ ದುರಂತ ಸಂಭವಿಸಿದೆ. ಉಮಿಯಾ ಕನ್‌ಸ್ಟ್ರಕ್ಷನ್ ಲಿಮಿಟೆಡ್ ಕಂಪೆನಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಸಕಾಲ್ ದಾಸ್ (37) ಹಾಗೂ ನೀರಜ್ ಕುಮಾರ್ (22) ರವರು 27-08-2025 ರಂದು 6ನೇ ಮಹಡಿಯಲ್ಲಿ ಗೋಡೆ ಕೆಲಸ ಮಾಡುತ್ತಿದ್ದಾಗ ಅಕಸ್ಮಿಕವಾಗಿ ಬಾಲ್ಕನಿ ಸಾಬ್ ಕುಸಿದು ಬಿದ್ದಿದೆ. ಘಟನೆಯಲ್ಲಿ ಸಕಾಲ್ ದಾಸ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ನೀರಜ್ ಕುಮಾರ್ ಅವರಿಗೆ ಬೆನ್ನು, ಕೈ, ಕಾಲುಗಳಿಗೆ ತೀವ್ರ ಗಾಯವಾಗಿದ್ದು, ಪ್ರಸ್ತುತ ಯಲಹಂಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ಕುರಿತು ಸುರೇಶ್ ಕುಮಾರ್ ಅವರು ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕಂಪನಿಯ ಸಿವಿಲ್ ಎಂಜಿನಿಯರ್ ಆಸೀಪ್ ನಾಯ್ಕ, ಪ್ರಾಜೆಕ್ಟ್ ಮ್ಯಾನೇಜರ್ ಶೈಲೇಶ್, ಸೆಂಟ್ರಿಂಗ್ ಮಸ್ಕಿ ಸಮೀರ್ ಮತ್ತು ಲೇಬರ್ ಕಾಂಟ್ರಾಕ್ಟರ್ ಚಿತ್ರರಂಜನ್…

ಮುಂದೆ ಓದಿ..
ಸುದ್ದಿ 

ಆನ್‌ಲೈನ್ ಹಣಕಾಸು ಮೋಸ ಪ್ರಕರಣ

ಬೆಂಗಳೂರು, ಆಗಸ್ಟ್ 30:2025ನಗರದ ದೊಡ್ಡಬೊಮ್ಮಸಂದ್ರ ದಲ್ಲಿ ಮತ್ತೊಂದು ಆನ್‌ಲೈನ್ ಹಣಕಾಸು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಗಿರೀಶ್ ಎಸ್ ಅವರ ಹೇಳಿಕೆಯ ಪ್ರಕಾರ, ಅಪರಿಚಿತ ವ್ಯಕ್ತಿಗಳು ಹೂಡಿಕೆ ಮಾಡುವ ನೆಪದಲ್ಲಿ ಅವರಿಂದ ಹಲವು ಹಂತಗಳಲ್ಲಿ ಹಣ ಪಡೆದುಕೊಂಡಿದ್ದಾರೆ. ಅಸ್ಲಾಂ, ಸಲ್ಮಾನ್, ಹೊಸೈನ್ ಹಾಗೂ ನಯಾ ಲೆವಿಶಾಲ್ ಎಂಬವರ ಖಾತೆಗಳ ಮೂಲಕ ₹17,800, ₹49,800, ₹3,99,800, ₹2,00,000 ಮತ್ತು ₹3,00,000 ಸೇರಿ ಒಟ್ಟು ₹6,67,400 ಹಣವನ್ನು ದೂರುದಾರರಿಂದ ವಂಚನೆ ಮಾಡಿ ಕಸಿದುಕೊಂಡಿದ್ದಾರೆ. ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂಬ ನಂಬಿಕೆ ಮೂಡಿಸಿ, ಯಾವುದೇ ಲಾಭವನ್ನು ನೀಡದೇ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡಿರುವುದಾಗಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಈ ಬಗ್ಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರು ಜಾಗರೂಕರಾಗಿರಬೇಕೆಂದು ಎಚ್ಚರಿಕೆ ನೀಡಿದ್ದಾರೆ.

ಮುಂದೆ ಓದಿ..
ಸುದ್ದಿ 

ಹಿರಿಯೂರಿನಲ್ಲಿ 19 ವರ್ಷದ ಯುವತಿ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಹಿರಿಯೂರು: 19 ವರ್ಷದ ವಧು ಕಾಣೆಯಾಗಿರುವ ಪ್ರಕರಣ ಮೂರ್ತಿ ಅವರ ಪ್ರಕಾರ, ಅವರು ಡ್ರೈವರ್ ಕೆಲಸ ಮಾಡಿಕೊಂಡಿದ್ದು, ದಿನಾಂಕ 25-02-2025 ರಂದು ಹಿರಿಯರ ಸಮ್ಮುಖದಲ್ಲಿ ರಂಗಲಕ್ಷ್ಮಿ (ರಮಾ) (19) ಅವರನ್ನು ವಿವಾಹವಾಗಿದ್ದರು. ಮದುವೆಯ ನಂತರ ದಂಪತಿ ಸಾಮಾನ್ಯವಾಗಿ ಸಂತೋಷಕರ ಜೀವನ ನಡೆಸುತ್ತಿದ್ದರು. ಆದರೆ ದಿನಾಂಕ 25-08-2025 ರಂದು ಬೆಳಿಗ್ಗೆ 11.00 ಗಂಟೆಗೆ ಪತ್ನಿ ರಂಗಲಕ್ಷ್ಮಿ ಮನೆಯಿಂದ ಹೊರಟು ಮತ್ತೆ ವಾಪಸ್ಸಾಗಿಲ್ಲ. ಮನೆಯಲ್ಲಿ ಒಂದು ಕಾಗದ ಬರೆದು ಬಿಚ್ಚಿಟ್ಟು ಹೋಗಿರುವುದಾಗಿ ಕುಟುಂಬದವರು ತಿಳಿಸಿದ್ದಾರೆ. ಮನೆಯವರು ಎಲ್ಲೆಡೆ ಹುಡುಕಿದರೂ ಯಾವುದೇ ಸುಳಿವು ಸಿಗದ ಕಾರಣ ಮೂರ್ತಿ ಅವರು ಕೊಡುಗೆಹಳ್ಳಿ ಪೊಲೀಸ್ ಠಾಣೆಗೆ ಬಂದು ಕಾಣೆಯಾದ ಪತ್ನಿಯನ್ನು ಪತ್ತೆಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ. ಕಾಣೆಯಾದ ಯುವತಿ ವಿವರಗಳು: ಹೆಸರು: ರಂಗಲಕ್ಷ್ಮಿ (ರಮಾ) ವಯಸ್ಸು: 19 ವರ್ಷ ಎತ್ತರ: ಸುಮಾರು 5 ಅಡಿ ಮುಖ: ಕೋಲು ಮುಖ ಕೂದಲು: ಕಪ್ಪು ಮಾತನಾಡುವ ಭಾಷೆ: ಕನ್ನಡ…

ಮುಂದೆ ಓದಿ..