” ಇದನ್ನು ಮಾಡುವುದು ಅಸಾಧ್ಯ ಎಂದು ಹೇಳುವವರು, ಆ ಕೆಲಸ ಮಾಡುತ್ತಿರುವವರಿಗೆ ಅಡ್ಡಿಯುಂಟು ಮಾಡಬಾರದು…..”
ಜಾರ್ಜ್ ಬರ್ನಾರ್ಡ್ ಶಾನೊಬೆಲ್ ಪ್ರಶಸ್ತಿ ಪುರಸ್ಕೃತ.ಕೇಳಿಸಿತೇ ಈ ವಾಕ್ಯಗಳು, ಅರ್ಥವಾಯಿತೇ ಈ ಮಾತುಗಳು, ಈಗಲೂ ಎಷ್ಟೊಂದು ಪ್ರಸ್ತುತ ಅಲ್ಲವೇ……. ಇದು ಸಹಜ ಸ್ವಾಭಾವಿಕ ಮತ್ತು ಒಳ್ಳೆಯ ವಿಷಯಗಳಿಗೆ ಮಾತ್ರ ಅನ್ವಯ. ದುಷ್ಟ, ವಿನಾಶಕಾರಿ ಮತ್ತು ಜೀವ ವಿರೋಧಿ ಕೆಲಸಗಳಿಗೆ ಇದು ಅನ್ವಯವಾಗುವುದಿಲ್ಲ.ನಾವು ಏನನ್ನಾದರೂ ವಿಭಿನ್ನ, ವಿಶಿಷ್ಟ, ಸಾಮಾನ್ಯರಿಗೆ ಅಸಾಮಾನ್ಯವಾಗಿ ಕಾಣುವಂತ ಪ್ರಯೋಗಾತ್ಮಕ ಕೆಲಸಕ್ಕೆ ಕೈಹಾಕಿದಾಗ ನಮ್ಮ ಸಮಾಜದ ಪ್ರತಿಕ್ರಿಯೆ ಹೆಚ್ಚು ನಕಾರಾತ್ಮಕವಾಗಿರುತ್ತದೆ. ಅದು ಒಳ್ಳೆಯ ಪ್ರತಿಕ್ರಿಯೆಯಲ್ಲ ಎಂದು ಖ್ಯಾತ ಸಾಹಿತಿ ನಾಟಕಕಾರ ಚಿಂತಕ ವಾಗ್ಮಿ ಬರ್ನಾರ್ಡ್ ಶಾ ಸುಮಾರು ನೂರು ವರ್ಷಗಳ ಹಿಂದೆಯೇ ಹೇಳಿದ್ದಾರೆ.ಇಲ್ಲಿ ಸಲಹೆಗಳು, ಹಿತ ನುಡಿಗಳು, ಮನವಿಗಳು, ಕಾಳಜಿ ಪೂರ್ವಕ ಒತ್ತಾಯಗಳು, ಪ್ರೀತಿ – ಆತಂಕ – ಮಮಕಾರದ ಮಾತುಗಳು ಖಂಡಿತ ಸ್ವೀಕಾರಾರ್ಹ. ಇದನ್ನು ಹೊರತುಪಡಿಸಿ ಲೇವಡಿ, ಹಾಸ್ಯ, ವ್ಯಂಗ್ಯ, ಅಜ್ಞಾನ, ಅಸೂಯೆ, ಕೀಟಲೆ, ಬೇಜವಾಬ್ದಾರಿ, ಉಡಾಫೆ ಮಾತುಗಳು ಮಾತ್ರ ಖಂಡನೀಯ ಮತ್ತು ಮೇಲಿನ…
ಮುಂದೆ ಓದಿ..
