ಆರ್.ಎಂ.ಜೆಡ್ ಮಾಲ್ನಲ್ಲಿ 3 ಲಕ್ಷ ರೂ. ವಂಚನೆ – ಕ್ಲಸ್ಟರ್ ಮ್ಯಾನೇಜರ್ ವಿರುದ್ಧ ಪ್ರಕರಣ
ಬೆಂಗಳೂರು: ಆಗಸ್ಟ್ 11 2025ನಗರದ ಆರ್.ಎಂ.ಜೆಡ್ ಮಾಲ್ನಲ್ಲಿರುವ ಕವರ್ ಸ್ಟೋರಿ ಶೃತಿಂಗ್ ರೆಮಿಟೆಡ್ ಅಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕ್ಲಸ್ಟರ್ ಮ್ಯಾನೇಜರ್ ಫರ್ಹಾನ್ ಎಸ್.ಎಂ ಅವರು ಗ್ರಾಹಕರಿಂದ ಹಣ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಆಂತರಿಕ ತನಿಖೆ ಪ್ರಕಾರ, ಫರ್ಹಾನ್ ಅವರು 2025ರ ಫೆಬ್ರವರಿ 19ರಿಂದ ಮೇ 13ರವರೆಗೆ ಗ್ರಾಹಕರಿಂದ ವಸ್ತುಗಳಿಗಾಗಿ ಬಿಲ್ ನೀಡದೇ ಯುಪಿಐ ಮುಖಾಂತರ ಪಾವತಿಗಳನ್ನು ಸಂಗ್ರಹಿಸಿ ಆ ಮೊತ್ತವನ್ನು ತಮ್ಮ ವೈಯಕ್ತಿಕ ಖಾತೆಗೆ ಜಮಾ ಮಾಡುತ್ತಿದ್ದರು. ಕೆಲ ಸಂದರ್ಭಗಳಲ್ಲಿ ಮೂಲ ಬಿಲ್ಲುಗಳನ್ನು ಅಮಾನತುಗೊಳಿಸಿ, ಆ ವಹಿವಾಟಿನ ಹಣವನ್ನು ಸಹ ತಮ್ಮ ಹಿತಕ್ಕಾಗಿ ಬಳಸಿಕೊಂಡಿದ್ದರು. ಒಟ್ಟು 19 ಪ್ರಕರಣಗಳಲ್ಲಿ ₹3 ಲಕ್ಷ ಮೊತ್ತ ಹಾಗೂ ₹2,99,252 ಮೌಲ್ಯದ ಸರಕುಗಳು ಅಂಗಡಿಗೆ ನಷ್ಟವಾಗಿರುವುದು ಪತ್ತೆಯಾಗಿದೆ. ತನಿಖೆಯಲ್ಲಿ ಸಾಕ್ಷ್ಯಾಧಾರಗಳು ದೃಢಪಟ್ಟಿದ್ದು, ಫರ್ಹಾನ್ ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ. ಅಂಗಡಿ ನಿರ್ವಹಣೆ ಯಲಹಂಕ ಪೊಲೀಸರಿಗೆ ದೂರು ಸಲ್ಲಿಸಿದ್ದು, ಫರ್ಹಾನ್ ಎಸ್.ಎಂ ವಿರುದ್ಧ ಕಾನೂನು…
ಮುಂದೆ ಓದಿ..
