ವಿಶೇಷ ಸುದ್ದಿ 

ಗ್ರಾಮೀಣಾಭಿವೃದ್ದಿ ಯೋಜನೆಯ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಅಪರಾಧ ನಡೆದಿರುವುದು, ಮೈಕ್ರೊ ಫೈನಾನ್ಸ್ ನಡೆಸಿರುವ ಆರೋಪಗಳು ವ್ಯಾಪಕವಾಗಿದೆ.

ಧರ್ಮಸ್ಥಳ ಅಪರಾಧ ಪ್ರಕರಣಗಳ ಕುರಿತಾದ ಹೋರಾಟಗಳ ವಿಷಯದಲ್ಲಿ ತಪ್ಪು ಮಾಹಿತಿ ಹರಡುತ್ತಿರುವ ಸಂದರ್ಭದಲ್ಲಿ .. ಮುಸುಕುದಾರಿ ಚಿನ್ನಯ್ಯ ಕೊಟ್ಟ ದೂರಿನ ಬಳಿಕ ಧರ್ಮಸ್ಥಳ ದೌರ್ಜನ್ಯದ ವಿರುದ್ಧದ ಹೋರಾಟ ಪ್ರಾರಂಭವಾಗಿದ್ದಲ್ಲ. ಧರ್ಮಸ್ಥಳದ ಅಸಹಜ ಸಾವುಗಳು, ಕೊಲೆ, ಅತ್ಯಾಚಾರ, ಭೂ ಅಕ್ರಮ, ಮೈಕ್ರೋ ಫೈನಾನ್ಸ್ ದೌರ್ಜನ್ಯಗಳನ್ನು ತನಿಖೆ ನಡೆಸಲು ನೆಲ ಅಗೆಯಬೇಕಿಲ್ಲ. ಚಿನ್ನಯ್ಯ ಅನಾಮಿಕರಾಗಿ ಬಂದು ದೂರು ನೀಡಿದ ಬಳಿಕ ಅಸಹಜ ಸಾವುಗಳಾದ ಶವಗಳನ್ನು ಹೂತ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಯಿತೇ ವಿನಹ, ಅದು ಹೋರಾಟದ ಪ್ರಾರಂಭವಲ್ಲ. ಚಿನ್ನಯ್ಯರ ದೂರೇ ಹೋರಾಟದ ಮುಖ್ಯವಸ್ತುವಲ್ಲ. ಎಡಪಂಥೀಯ, ದಲಿತ, ಸಮಾನತಾವಾದಿ, ಮಹಿಳಾ ಹೋರಾಟಗಾರರು, ಚಿಂತಕರು ಯಾವತ್ತೂ ಕೂಡಾ ಹೋರಾಟಕ್ಕೆ ಅಪರಿಚಿತವಾಗಿದ್ದ ಚಿನ್ನಯ್ಯ, ಸುಜಾತ ಭಟ್ ರವರ ಹಿಂದೆ ಹೋಗಿದ್ದಿಲ್ಲ. ‘ಅವರ ದೂರಿಗೂ ನ್ಯಾಯ ಒದಗಿಸಿ’ ಎಂಬುದಷ್ಟೇ ನಮ್ಮೆಲ್ಲರ ಹೇಳಿಕೆಯಾಗಿತ್ತು. ಹಾಗಾಗಿ, ಚಿನ್ನಯ್ಯ, ಸುಜಾತ ಭಟ್ ರವರುಗಳು ಯೂಟರ್ನ್ ಹೊಡೆದ್ರು ಎಂಬುದೆಲ್ಲಾ ಸಾವು, ದೌರ್ಜನ್ಯ,…

ಮುಂದೆ ಓದಿ..
ಅಂಕಣ 

ಅಂತರಂಗದ ಗೆಳೆಯ ಗಣೇಶನಿಗೆ ಆತ್ಮೀಯ ಪತ್ರ………

ಅಂತರಂಗದ ಗೆಳೆಯ ಗಣೇಶನಿಗೆ ಆತ್ಮೀಯ ಪತ್ರ……… ಗೆಳೆಯ ಗಣೇಶ ನಿನಗೆ ಹಬ್ಬದ ಶುಭಾಶಯಗಳು……….‌‌ ಹೃದಯದ ಸ್ನೇಹಿತ ಗಣೇಶ, ಹೇಗಿದ್ದೀಯಾ ?ನಿನ್ನ ಹೊಟ್ಟೆ ನೋಡಿದರೆ ತುಂಬಾ ಆರಾಮವಾಗಿ ಇರಲೇಬೇಕು ಅನಿಸುತ್ತಿದೆ. ನಿನಗೇನು ಕಡಿಮೆ ಗೆಳೆಯ,100 ಕೋಟಿಗೂ ಹೆಚ್ಚು ಜನ ಪ್ರತಿನಿತ್ಯ ಭಕ್ಷ್ಯಬೋಜನಗಳನ್ನು ಉಣಬಡಿಸುತ್ತಾರೆ. ವರ್ಷಕ್ಕೊಮ್ಮೆ ನಿನ್ನನ್ನು ಹಾಡಿ ಹೊಗಳಿ ಬೀದಿಬೀದಿಗಳಲ್ಲಿ ಕುಣಿದು ಕುಪ್ಪಳಿಸುತ್ತಾರೆ.ನೀನು ಅದರಲ್ಲಿ ಮೈಮರೆತು ನಮ್ಮನ್ನು ಮರೆತಿರಬಹುದು. ಅದನ್ನು ನೆನಪಿಸುವ ಸಲುವಾಗಿಯೇ ಮತ್ತು ಇಲ್ಲಿನ ನಿಜ ಸ್ಥಿತಿ ನಿನಗೆ ತಿಳಿಸಲು ಈ ಪತ್ರ ಬರೆಯುತ್ತಿದ್ದೇನೆ. ಗೆಳೆಯ,ನಮ್ಮ ಜನ ನಿನ್ನನ್ನು ತುಂಬಾ ಪ್ರೀತಿಸುತ್ತಾರೆ. ನಿನ್ನನ್ನು ಕಂಡರೆ ಅವರಿಗೆ ಅಪಾರ ಅಭಿಮಾನ – ಬಹಳ ಭಕ್ತಿ. ನಮ್ಮ ಗಣೇಶ ನಮ್ಮೆಲ್ಲಾ ಕಷ್ಟ ಪರಿಹರಿಸುವ ವಿಘ್ನ ವಿನಾಯಕ ಎಂದು ನಂಬಿದ್ದಾರೆ.ಅನೇಕ ಹೆಸರುಗಳಿಂದ ನಿನ್ನನ್ನು ಕರೆಯುತ್ತಾರೆ. ಎಲ್ಲಾ ಶುಭ ಕಾರ್ಯಗಳಲ್ಲಿ ನಿನಗೇ ಅಗ್ರ ಪೂಜೆ. ಒಂಥರಾ ಎಲ್ಲರಿಗೂ ನೀನೇ ಬಾಸ್. ಆದರೆ ಗೆಳೆಯ,ನನ್ನ…

ಮುಂದೆ ಓದಿ..
ಸುದ್ದಿ 

ಎಂ.ಎಸ್ ಪಾಳ್ಯ ಮುಖ್ಯರಸ್ತೆಯಲ್ಲಿ ಗೂಡ್ಸ್ ವಾಹನ ಚಾಲಕನ ಮೇಲೆ ಹಲ್ಲೆ

ಬೆಂಗಳೂರು 23 ಆಗಸ್ಟ್ 2025ಯಲಹಂಕ ಎಂ.ಎಸ್ ಪಾಳ್ಯ ಮುಖ್ಯರಸ್ತೆಯ ಆಯೇಶಾ ಹೋಟೆಲ್ ಹತ್ತಿರ ಅಮೆಜಾನ್ ಗೂಡ್ಸ್ ವಾಹನದ ಚಾಲಕನ ಮೇಲೆ ಬೈಕ್ ಸವಾರ ಮತ್ತು ಅವನ ಸ್ನೇಹಿತರಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ಪೊಲೀಸರ ಮಾಹಿತಿಯ ಪ್ರಕಾರ, ಸಂಜಯ್ ತನ್ನ ಕುಟುಂಬದೊಂದಿಗೆ ವಾಸವಾಗಿದ್ದು ಟಾಟಾ ವಿನೋ ವಾಹನ (ನಂ. KA 04 S 1990) ಚಾಲನೆ ಮಾಡುತ್ತಾನೆ. ಬೆಳಿಗ್ಗೆ ಸುಮಾರು 8.45ಕ್ಕೆ ಯಲಹಂಕದ ಕಡೆಗೆ ತೆರಳುತ್ತಿದ್ದಾಗ, ಸುಮಾರು 9.10ರ ಸುಮಾರಿಗೆ ಆಯೇಶಾ ಹೋಟೆಲ್ ಹತ್ತಿರ ಕೆಎ 01 ಎಸ್ 7128 ನಂಬರಿನ ಬೈಕ್ ಸವಾರ ಏಕಾಏಕಿ ರಸ್ತೆ ಮಧ್ಯಕ್ಕೆ ಬಂದಿದ್ದಾನೆ. ಸಂಜಯ್ ಅವರು ತಕ್ಷಣ ಬ್ರೇಕ್ ಹಾಕಿ ಹಾರ್ನ್ ಹಾಕಿದ ಹಿನ್ನೆಲೆಯಲ್ಲಿ ಬೈಕ್ ಸವಾರ ಕೋಪಗೊಂಡು ಅವಾಚ್ಯ ಪದಗಳಿಂದ ನಿಂದಿಸಿ, ಶರ್ಟ್ ಕಾಲರ್ ಹಿಡಿದು ಮೂಗಿಗೆ ಹೊಡೆದಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳವಾಗಿ, ಸ್ಥಳಕ್ಕೆ…

ಮುಂದೆ ಓದಿ..
ಸುದ್ದಿ 

ಹೊನ್ನೇನಹಳ್ಳಿ ಮಹಿಳೆಗೆ ಅಂಗಡಿ ಮಾಲೀಕರಿಂದ ಲೈಂಗಿಕ ಕಿರುಕುಳ – ಪ್ರಕರಣ ದಾಖಲೆ

ಬೆಂಗಳೂರು ಗ್ರಾಮಾಂತರ 23 ಆಗಸ್ಟ್ 2025ಹೊನ್ನೇನಹಳ್ಳಿಯ ಜರ್ ಸೆರಾಮಿಕ್ ಟೈಲ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅಂಗಡಿ ಮಾಲೀಕರಾದ ರವಿ ಅಗರ್ವಾಲ್ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಕವಿತಾ ಅವರ ದೂರಿನ ಪ್ರಕಾರ, ಆರೋಪಿಯು ಹಲವು ತಿಂಗಳುಗಳಿಂದ ಅವಳನ್ನು ಅಂಗಡಿಯ ಕ್ಯಾಬಿನ್‌ಗೆ ಕರೆಯಿಸಿ ಅಸಭ್ಯ ವರ್ತನೆ ಮಾಡುತ್ತಿದ್ದನು. ತನ್ನ XUV ಕಾರಿನಲ್ಲಿ ಕೂರಿಸಿಕೊಂಡು ಮನೆ ಹತ್ತಿರಕ್ಕೆ ಕರೆದುಕೊಂಡು ಹೋಗಿ ಶಾರೀರಿಕ ಕಿರುಕುಳ ನೀಡುತ್ತಿದ್ದನೆಂದು ದೂರಿನಲ್ಲಿ ಹೇಳಲಾಗಿದೆ. “ನಿನ್ನ ಗಂಡ ಬಿಕಾರಿ, ನನ್ನ ಬಳಿ 50–60 ಕೋಟಿ ಇದೆ, ನನಗೆ ಏನೂ ಮಾಡಲು ಯಾರಿಗೂ ಸಾಧ್ಯವಿಲ್ಲ” ಎಂದು ಅವಳಿಗೆ ಬೆದರಿಕೆ ಹಾಕುತ್ತಿದ್ದನೆಂದು ಆರೋಪವಿದೆ. ಇದಲ್ಲದೆ, “ನೀನು ತಿರುಪತಿಗೆ ಬರಬೇಕು, ಇಲ್ಲವಾದರೆ ನಿನ್ನ ಗಂಡ ಮತ್ತು ಮಗುವನ್ನು ಕೊಲೆ ಮಾಡಿಸುತ್ತೇನೆ” ಎಂದು ಬೆದರಿಸಿ ಅವಳನ್ನು ತಿರುಪತಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯಕ್ಕೆ ಪ್ರಯತ್ನಿಸಿದ ಘಟನೆ ದೂರುನಲ್ಲಿದೆ.…

ಮುಂದೆ ಓದಿ..
ಸುದ್ದಿ 

ಎಂ.ಎಸ್ ಪಾಳ್ಯ ಮುಖ್ಯರಸ್ತೆಯಲ್ಲಿ ಗೂಡ್ಸ್ ವಾಹನ ಚಾಲಕನ ಮೇಲೆ ಹಲ್ಲೆ

ಬೆಂಗಳೂರು 23 ಆಗಸ್ಟ್ 2025ಯಲಹಂಕ ಎಂ.ಎಸ್ ಪಾಳ್ಯ ಮುಖ್ಯರಸ್ತೆಯ ಆಯೇಶಾ ಹೋಟೆಲ್ ಹತ್ತಿರ ಅಮೆಜಾನ್ ಗೂಡ್ಸ್ ವಾಹನದ ಚಾಲಕನ ಮೇಲೆ ಬೈಕ್ ಸವಾರ ಮತ್ತು ಅವನ ಸ್ನೇಹಿತರಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ಪೊಲೀಸರ ಮಾಹಿತಿಯ ಪ್ರಕಾರ, ಸಂಜಯ್ ತನ್ನ ಕುಟುಂಬದೊಂದಿಗೆ ವಾಸವಾಗಿದ್ದು ಟಾಟಾ ವಿನೋ ವಾಹನ (ನಂ. KA 04 S 1990) ಚಾಲನೆ ಮಾಡುತ್ತಾನೆ. ಬೆಳಿಗ್ಗೆ ಸುಮಾರು 8.45ಕ್ಕೆ ಯಲಹಂಕದ ಕಡೆಗೆ ತೆರಳುತ್ತಿದ್ದಾಗ, ಸುಮಾರು 9.10ರ ಸುಮಾರಿಗೆ ಆಯೇಶಾ ಹೋಟೆಲ್ ಹತ್ತಿರ ಕೆಎ 01 ಎಸ್ 7128 ನಂಬರಿನ ಬೈಕ್ ಸವಾರ ಏಕಾಏಕಿ ರಸ್ತೆ ಮಧ್ಯಕ್ಕೆ ಬಂದಿದ್ದಾನೆ. ಸಂಜಯ್ ಅವರು ತಕ್ಷಣ ಬ್ರೇಕ್ ಹಾಕಿ ಹಾರ್ನ್ ಹಾಕಿದ ಹಿನ್ನೆಲೆಯಲ್ಲಿ ಬೈಕ್ ಸವಾರ ಕೋಪಗೊಂಡು ಅವಾಚ್ಯ ಪದಗಳಿಂದ ನಿಂದಿಸಿ, ಶರ್ಟ್ ಕಾಲರ್ ಹಿಡಿದು ಮೂಗಿಗೆ ಹೊಡೆದಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳವಾಗಿ, ಸ್ಥಳಕ್ಕೆ…

ಮುಂದೆ ಓದಿ..
ಸುದ್ದಿ 

ಕೊಡಿಗೆಹಳ್ಳಿ ವೇಶ್ಯಾವಾಟಿಕೆ ದಂಧೆ – ಮಹಿಳಾ ಸಂರಕ್ಷಣಾ ದಳದ ದಾಳಿ

ಬೆಂಗಳೂರು:23 ಆಗಸ್ಟ್ 2025ಬೆಂಗಳೂರು ನಗರದ ಕೊಡಿಗೆಹಳ್ಳಿಯಲ್ಲಿ ನಡೆಯುತ್ತಿದ್ದ ಅಕ್ರಮ ವೇಶ್ಯಾವಾಟಿಕೆ ದಂಧೆಯನ್ನು ಪತ್ತೆಹಚ್ಚುವಲ್ಲಿ ಸಿಸಿಬಿ ಮಹಿಳಾ ಸಂರಕ್ಷಣಾ ದಳ ಯಶಸ್ವಿಯಾಗಿದೆ. 2025ರ ಆಗಸ್ಟ್ 22ರಂದು ಸಂಜೆ 5.15ರ ಸುಮಾರಿಗೆ, ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಕೊಡುಗೆಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಪ್ರವೀಣ್ ಪ್ರೈ ಅವರು ನೀಡಿದ ಮಾಹಿತಿಯ ಮೇರೆಗೆ, ಕೊಡಿಗೆಹಳ್ಳಿಯ ವಿದ್ಯಾರಣ್ಯಪುರದಲ್ಲಿರುವ ಮನೆ ಮೇಲೆ ದಾಳಿ ನಡೆಸಲಾಯಿತು. ಪದ್ಮಾ (ಲೇಟ್ ಹೇಮಂತ್ ಕುಮಾರ್), ನಿವಾಸಿ – ನಂ.118, ವಿದ್ಯಾರಣ್ಯಪುರ, ಬೆಂಗಳೂರು, ಅವರು ತಮ್ಮ ಮನೆಯನ್ನು ಬಾಡಿಗೆಗೆ ಪಡೆದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರೆಂದು ಪತ್ತೆಯಾಗಿದೆ. ತನಿಖೆಯ ಪ್ರಕಾರ, ಅವರು ತಮ್ಮ ಮೊಬೈಲ್ ನಂಬರ್ 87929 79435 ಮುಖಾಂತರ ಗಿರಾಕಿಗಳನ್ನು ಸಂಪರ್ಕಿಸಿ, ಹೆಚ್ಚಿನ ಹಣ ಪಡೆದು ಸ್ಥಳೀಯ ಹಾಗೂ ಹೊರರಾಜ್ಯದ ಮಹಿಳೆಯರನ್ನು ಪುಸಲಾಯಿಸಿ, ಅಕ್ರಮ ವೇಶ್ಯಾವಾಟಿಕೆಗೆ ಒದಗಿಸುತ್ತಿದ್ದರು. ಅವರ ವಿರುದ್ಧ ಐಟಿಪಿ ಕಾಯ್ದೆ ಕಲಂ 3, 4, 5 ಹಾಗೂ ಬಿ.ಎನ್.ಎಸ್…

ಮುಂದೆ ಓದಿ..
ಸುದ್ದಿ 

ಬೆಂಗಳೂರಿನ ಸಹಕಾರನಗರದಲ್ಲಿ 34 ವರ್ಷದ ವ್ಯಕ್ತಿ ಕಾಣೆ

ಬೆಂಗಳೂರು 23 ಆಗಸ್ಟ್ 2025ಸಹಕಾರನಗರದಲ್ಲಿ 34 ವರ್ಷದ ಕೃಪ ಎಂಬ ವ್ಯಕ್ತಿ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಕುಟುಂಬದವರ ಮಾಹಿತಿಯಂತೆ, ಆಗಸ್ಟ್ 19, 2025 ರಂದು ಮಧ್ಯಾಹ್ನ 12 ಗಂಟೆಗೆ ಗಾರೆ ಕೆಲಸಕ್ಕಾಗಿ ಸಹಕಾರನಗರಕ್ಕೆ ತೆರಳಿದ ಕೃಪ ಅವರು ಅಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಆಕಸ್ಮಿಕವಾಗಿ ಕೈ ತಾಗಿದ್ದು, ಆಕೆ 112 ತುರ್ತು ಸೇವೆಗೆ ಕರೆ ಮಾಡಿ ದೂರು ನೀಡಿದರು. ಸ್ಥಳಕ್ಕೆ ಕೊಡಿಗೆಹಳ್ಳಿ ಪೊಲೀಸರು ಬಂದು ವಿಚಾರಣೆ ನಡೆಸುತ್ತಿದ್ದಾಗ ಭಯಗೊಂಡ ಕೃಪ ಓಡಿ ಹೋಗಿದ್ದು, ನಂತರ ಮನೆಗೆ ಮರಳಲಿಲ್ಲ. ಹಲವೆಡೆ ಹುಡುಕಿದರೂ ಅವರ ಪತ್ತೆಯಾಗಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ. ಕೃಪ ಅವರ ಲಕ್ಷಣಗಳು: ದುಂಡು ಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, 5 ಅಡಿ ಎತ್ತರ. ಅವರು ಕನ್ನಡ, ತೆಲುಗು ಹಾಗೂ ತಮಿಳು ಮಾತನಾಡಲು ಬಲ್ಲವರು. ಕಾಣೆಯಾಗುವ ವೇಳೆ ಪರ್ಪಲ್ ಬಣ್ಣದ ಶರ್ಟ್ ಮತ್ತು ಗ್ರೇ ಬಣ್ಣದ…

ಮುಂದೆ ಓದಿ..
ಸುದ್ದಿ 

ಆನ್‌ಲೈನ್ ಹೂಡಿಕೆ ಮೋಸ – ಯುವಕನಿಗೆ ರೂ.2.53 ಲಕ್ಷ ನಷ್ಟ

ಬೆಂಗಳೂರು:23 ಆಗಸ್ಟ್ 2025ಆನ್‌ಲೈನ್‌ನಲ್ಲಿ ಸುಲಭ ಲಾಭದಾಸೆ ಜಾಹೀರಾತಿಗೆ ಮರುಳಾದ ಯುವಕನಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿರುವ ಘಟನೆ ವರದಿಯಾಗಿದೆ. ಶಶಿಕುಮಾರ್ ಅವರ ಹೇಳಿಕೆಯ ಪ್ರಕಾರ, 21-08-2025 ರಂದು http://hot.mkprosty/epromotions ಎಂಬ ಲಿಂಕ್ ಮೂಲಕ “ಹೂಡಿಕೆ ಮಾಡಿದರೆ 30% ಲಾಭ ದೊರೆಯುತ್ತದೆ” ಎಂಬ ಜಾಹೀರಾತನ್ನು ನೋಡಿ ನಂಬಿ, ತನ್ನ ICICI ಬ್ಯಾಂಕ್, SBI ಬ್ಯಾಂಕ್ ಮತ್ತು ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಖಾತೆಗಳಿಂದ ಒಟ್ಟು ರೂ.2,53,000/- ಹಣ ವರ್ಗಾವಣೆ ಮಾಡಿದ್ದಾರೆ. ಆದರೆ ಹೂಡಿಕೆ ಮಾಡಿದ ನಂತರ ಯಾವುದೇ ಲಾಭ ನೀಡದೆ ಹಣ ವಾಪಸು ಕೊಡದೇ ತಲೆಮರೆಸಿಕೊಂಡ ಆರೋಪಿಗಳ ವಿರುದ್ಧ ಶಶಿಕುಮಾರ್ ಅವರು ಕೊಡುಗೆಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆನ್‌ಲೈನ್ ಹೂಡಿಕೆ ಮೋಸದ ಕುರಿತು ತನಿಖೆ ಕೈಗೊಂಡಿದ್ದಾರೆ

ಮುಂದೆ ಓದಿ..
ಸುದ್ದಿ 

ಶಾಂತಿನಿಕೇತನ ಶಾಲಾ ವಿದ್ಯಾರ್ಥಿ ಕಾಣೆ –ಕೊಡುಗೆಹಳ್ಳಿ ಪೊಲೀಸರಲ್ಲಿ ದೂರು

ಬೆಂಗಳೂರು 23 ಆಗಸ್ಟ್ 2025ಕಾಳೀಗ ಜಾಜರಾಗಿ ನಿವಾಸಿ ಮಲ್ಲಯ್ಯ ಅವರ 13 ವರ್ಷದ ಮಗ ಯುವರಾಜ ಕಾಣೆಯಾಗಿರುವ ಘಟನೆ ನಡೆದಿದೆ. ಯುವರಾಜನು ಭದ್ರಪ್ಪ ಲೇಔಟ್‌ನ ಶಾಂತಿನಿಕೇತನ ಶಾಲೆಯ 8ನೇ ತರಗತಿಯಲ್ಲಿ ಓದುತ್ತಿದ್ದು, 21-08-2025 ರಂದು ಬೆಳಿಗ್ಗೆ 7.45ಕ್ಕೆ ಸೈಕಲ್‌ನಲ್ಲಿ ಶಾಲೆಗೆ ತೆರಳಿದ್ದ. ಆದರೆ ಸಂಜೆ ಮನೆಗೆ ಮರಳದೆ, ಪೋಷಕರು ಹುಡುಕಾಟ ನಡೆಸಿದಾಗ ಮನೆಯ ಪಕ್ಕದ ರಸ್ತೆಯಲ್ಲಿ ಅವನ ಸೈಕಲ್ ಮತ್ತು ಶಾಲಾ ಬ್ಯಾಗ್ ಸಿಕ್ಕಿವೆ. ಸ್ನೇಹಿತರು, ಆಟದ ಮೈದಾನ ಹಾಗೂ ಸಂಬಂಧಿಕರ ಬಳಿ ವಿಚಾರಿಸಿದರೂ ಬಾಲಕನ ಪತ್ತೆಯಾಗಿಲ್ಲ. ಕಾಣೆಯಾಗುವ ಸಮಯದಲ್ಲಿ ಅವನು ನೀಲಿ ಬಣ್ಣದ ಪ್ಯಾಂಟ್ ಮತ್ತು ಬಿಳಿ-ನೀಲಿ ಮಿಶ್ರಿತ ಶಾಲಾ ಸಮವಸ್ತ್ರ ಧರಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಕೊಡುಗೆಹಳ್ಳಿ ಪೊಲೀಸರು ಯುವರಾಜನ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ

ಮುಂದೆ ಓದಿ..
ಸುದ್ದಿ 

ಶಿಗ್ಗಾವಿಯಲ್ಲಿ ಮಟಕಾ ಜೂಜಾಟ ಪ್ರಕರಣ

ಶಿಗ್ಗಾವಿ ತಾಲೂಕಿನ ಕಾಮನಹಳ್ಳಿ ಗ್ರಾಮದ ಬಸವಣ್ಯನ ಸರ್ಕಲ್ ಬಳಿ ಸಾರ್ವಜನಿಕ ರಸ್ತೆಯಲ್ಲಿ ಮಟಕಾ ಜೂಜಾಟ ನಡೆಸುತ್ತಿದ್ದ ವ್ಯಕ್ತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಗಸ್ಟ್ 22, 2025ರಂದು ಮುಂಜಾನೆ ಸುಮಾರು 10.30 ಗಂಟೆಯ ಸುಮಾರಿಗೆ ಪ್ರಕಾಶ್ ಪೀರಪ್ಪಾ ಪಡುವಳ್ಳಿ ಎಂಬ ವ್ಯಕ್ತಿ ಸಾರ್ವಜನಿಕ ರಸ್ತೆಯಲ್ಲಿ ನಿಂತುಕೊಂಡು ಜನರಿಂದ ಹಣ ಪಡೆದು “₹1ಕ್ಕೆ ₹80 ಕೊಡುವುದಾಗಿ” ಹೇಳುತ್ತಾ ಒ.ಸಿ. ಚೀಟಿಗಳನ್ನು ಬರೆದು ಕೊಡುವ ಮೂಲಕ ಓ.ಸಿ. ಮಟಕಾ ಜೂಜಾಟ ನಡೆಸುತ್ತಿದ್ದನೆಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಯಿತು. ಈ ಹಿನ್ನೆಲೆಯಲ್ಲಿ ಶಿಗ್ಗಾವಿ ಪೊಲೀಸ್ ಠಾಣೆಯ ಪಿಎಸ್ಐ–2 ಅವರು ಸರ್ಕಾರಿ ಪರವಾಗಿ ಸ್ವತಃ ತಾವೇ ದೂರನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆಪ್ರಕರಣವು ಸಾರ್ವಜನಿಕ ವಿರೋಧಿ ಸ್ವರೂಪದ್ದಾಗಿದ್ದರಿಂದ ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡು ತನಿಖೆ ಮುಂದುವರಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. : ವರದಿಪ್ರಮೋದ್ ಜನಗೇರಿಹಾನಗಲ್ ತಾಲೂಕ್ ಆಲದಕಟ್ಟಿತಾಲೂಕ್ ನ್ಯೂಸ್ .ಹಾವೇರಿ6360821691

ಮುಂದೆ ಓದಿ..