ಸುದ್ದಿ 

ಆಟೋ ಚಾಲಕ ಮೂರ್ತಿ ಕಾಣೆ: ಕುಟುಂಬದಲ್ಲಿ ಆತಂಕದ ವಾತಾವರಣ

Taluknewsmedia.com

Taluknewsmedia.comಬೆಂಗಳೂರು, ಜುಲೈ 4, 2025: ನಗರದ ನಿವಾಸಿಯಾದ ಆಟೋ ಚಾಲಕ ಜಿ.ಮೂರ್ತಿ (54) ಕಳೆದ ಕೆಲವು ದಿನಗಳಿಂದ ಕಾಣೆಯಾಗಿದ್ದು, ಈ ಬಗ್ಗೆ ಪತ್ನಿಯವರು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಮೂರ್ತಿ ಅವರು ದಿನಾಂಕ 29 ಜೂನ್ 2025 ರಂದು ಬೆಳಿಗ್ಗೆ ಸುಮಾರು 08:00 ಗಂಟೆಗೆ ತಮ್ಮ ಮೊಬೈಲ್‌ನ್ನು ಮನೆಯಲ್ಲೇ ಬಿಟ್ಟು ಹೊರಗೆ ತೆರಳಿದ್ದು, ಬಳಿಕ ಮನೆಗೆ ಹಿಂದಿರುಗಿಲ್ಲ. ಆತಂಕಗೊಂಡ ಕುಟುಂಬದವರು ತಕ್ಷಣವೇ ತಮ್ಮ ಆತ್ಮೀಯರು ಮತ್ತು ಪರಿಚಿತರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಕಾಣೆಯಾಗಿರುವ ಮೂರ್ತಿ ಅವರ ವಿವರಗಳು ಈ ಕೆಳಗಿನಂತಿವೆ: ಹೆಸರು: ಜಿ. ಮೂರ್ತಿ ವಯಸ್ಸು: 54 ವರ್ಷ ಎತ್ತರ: 5.5 ಅಡಿ ಮೈಬಣ್ಣ: ಕಪ್ಪು ಶರೀರದ ಸ್ಥಿತಿ: ಸದೃಢ ಕೂದಲು: ಕಪ್ಪು ಧರಿಸಿದ್ದ ಬಟ್ಟೆ: ಬಿಳಿ ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್…

ಮುಂದೆ ಓದಿ..
ಸುದ್ದಿ 

ಬೆಂಗಳೂರು ನಗರದಲ್ಲಿ ಪೈಪ್‌ ಕಳವು ಪ್ರಕರಣ – 1 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತು ಕಳವು

Taluknewsmedia.com

Taluknewsmedia.comಬೆಂಗಳೂರು, ಜುಲೈ 4, 2025: ನಗರದ ಶಿವರಾಮ್ ಕಾರಂತ್ ಬಡಾವಣೆಯ ಸೆಕ್ಟರ್–6 ರಲ್ಲಿ ನಡೆದ ಪೈಪ್‌ಗಳ ಕಳವು ಪ್ರಕರಣದಿಂದ ನಿರ್ಮಾಣ ಕಂಪನಿಗೆ ಭಾರೀ ನಷ್ಟವಾಗಿದೆ. ಸುಮಾರು ₹1,00,000 ಮೌಲ್ಯದ ಮೆಟಲ್ ಮಿಶ್ರಿತ ಸಿಮೆಂಟ್ ಕೊಟಿಂಗ್ (ಡಿ.ಐ) ವಾಟರ್ ಪೈಪ್‌ಗಳು ಅನಾತುರವಾಗಿ ಕಳವಾದ ಘಟನೆಯ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರ್‌.ಎಂ.ಎನ್ ಕಂಸ್ಟ್ರಕ್ಷನ್ ಕಂಪನಿಯ ಆಡ್ಮಿನ್ ಅಧಿಕಾರಿಯೊಬ್ಬರು ನೀಡಿದ ದೂರಿನ ಪ್ರಕಾರ, ಕಳೆದ ಮೂರು ವರ್ಷಗಳಿಂದ ಅವರು ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಕಂಪನಿಗೆ ಸೇರಿದ ಸೆಕ್ಟರ್-6 ಲೇಔಟ್‌ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಯೋಜನೆಯಡಿಯಲ್ಲಿ ಸುಮಾರು 25 ಪೈಪ್‌ಗಳನ್ನು ಅಳವಡಿಸಲಾಗಿತ್ತು. ಜೂನ್ 29ರಂದು, ಬೆಳಿಗ್ಗೆ 9 ಗಂಟೆಯಿಂದ ಸಂಜೆ 4:30ರವರೆಗೆ ಕಾರ್ಯಾಚರಣೆ ನಡೆಯಿತು. ಈ ವೇಳೆಯಲ್ಲಿ 16 ಪೈಪ್‌ಗಳನ್ನು ಸಂಪರ್ಕ ಮಾಡಲಾಗಿದ್ದು, ಉಳಿದ 9-10 ಪೈಪ್‌ಗಳನ್ನು ಸ್ಥಳದಲ್ಲಿಯೇ ಬಿಟ್ಟು ಮನೆಗೆ ತೆರಳಲಾಗಿತ್ತು. ಆದರೆ ಜೂನ್ 30ರಂದು ಬೆಳಿಗ್ಗೆ…

ಮುಂದೆ ಓದಿ..
ಸುದ್ದಿ 

ಅಬ್ಬಿಗೆರೆಯಲ್ಲಿ ವಿದ್ಯುತ್ ಉಪಕರಣಗಳ ಬ್ಯಾಟರಿ ಕಳ್ಳತನ – ಸಹಾಯಕ ಅಭಿಯಂತರರಿಂದ ಠಾಣೆಗೆ ದೂರು

Taluknewsmedia.com

Taluknewsmedia.comಬೆಂಗಳೂರು, ಜುಲೈ 4, 2025: ನಗರದ ಅಬ್ಬಿಗೆರೆ ಪ್ರದೇಶದಲ್ಲಿ ಡಾಸ್ ವಿದ್ಯುತ್ ಉಪಕರಣಗಳಲ್ಲಿ ಅಳವಡಿಸಲಾಗಿದ್ದ ಐದು ಬ್ಯಾಟರಿಗಳನ್ನು ಅಪರಿಚಿತರು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಬಿ.ಇ.ಎಸ್.ಕಾಂನಲ್ಲಿ ಸಹಾಯಕ ಅಭಿಯಂತರರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಮಂಜುನಾಥ್ ಎ.ಸಿ ಅವರು ದಿನಾಂಕ 02-07-2025 ರಂದು ಗಂಗಮ್ಮನ ಗುಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಬ್ಬಿಗೆರೆ ಪಾರ್ಕ್, ಅಬ್ಬಿಗೆರೆ ಹೋಳಿಗೆ ಮನೆ, ಹೆಚ್.ವಿ.ವಿ.ವಿ ವ್ಯಾಲಿ ಮತ್ತು ಕಲಾನಗರ ಎಂಟ್ರಿನ್ಸ್ ಘಟಕದಲ್ಲಿ ಅಳವಡಿಸಲಾಗಿದ್ದ 5 ಬ್ಯಾಟರಿಗಳನ್ನು 06-05-2025 ರಂದು ಕಳ್ಳತನ ಮಾಡಲಾಗಿದೆ. ಕಳವಾದ ಮಾಲಿನ ಮೌಲ್ಯವನ್ನು ರೂ. 42,480 ಎಂದು ಅಂದಾಜಿಸಲಾಗಿದೆ. ಸಂಸ್ಥೆಗೆ ನಷ್ಟ ಉಂಟುಮಾಡಿರುವ ಈ ಕೃತ್ಯ ಸಂಬಂಧಿಸಿ ಕಳ್ಳರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಾಗೂ ಕಳವಾದ ಬ್ಯಾಟರಿಗಳನ್ನು ಮರುಪಡೆಯುವಂತೆ ಅವರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಮುಂದೆ ಓದಿ..
ಸುದ್ದಿ 

ಆನೇಕಲ್‌ನಲ್ಲಿ 17 ವರ್ಷದ ಪಿಯುಸಿ ವಿದ್ಯಾರ್ಥಿನಿ ಕಾಣೆಯಾಗಿರುವ ಘಟನೆ: ಹುಡುಕಾಟ ಜೋರಾಗಿದೆ

Taluknewsmedia.com

Taluknewsmedia.comಆನೇಕಲ್, ಜುಲೈ 4, 2025: ಆನೇಕಲ್ ಪಟ್ಟಣದ ಎ.ಕೆ. ಕಾಲೋನಿ, ಜೈಭೀಮ್ ನಗರದಲ್ಲಿರುವ ನಿವಾಸಿ ವೆಂಕಟೇಶ್ ಅವರ 17 ವರ್ಷದ ಮಗಳು ಭವ್ಯ ಜೂನ್ 30ರಂದು ಬೆಳಿಗ್ಗೆ ಮನೆಯಿಂದ ಹೊರಟ್ಟಿದ ಬಳಿಕ ಕಾಣೆಯಾಗಿರುವ ಬಗ್ಗೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೋಷಕರ ಮಾಹಿತಿ ಪ್ರಕಾರ, ಭವ್ಯ ಆನೇಕಲ್ ಅಕ್ಷಯ ಪಿಯು ಕಾಲೇಜಿನಲ್ಲಿ 1ನೇ ಪಿಯುಸಿ ವ್ಯಾಸಂಗಿಸುತ್ತಿದ್ದಳು. ದಿನಾಂಕ 30/06/2025 ರಂದು ಬೆಳಿಗ್ಗೆ 9:30 ಗಂಟೆಗೆ ತಂದೆ ವೆಂಕಟೇಶ್ ರವರು ದಿನನಿತ್ಯದ ರೀತಿಯಲ್ಲಿ ಮಗಳನ್ನು ಕಾಲೇಜಿಗೆ ಬಿಟ್ಟು ಬಂದು ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಅದೇ ದಿನ ಬೆಳಿಗ್ಗೆ 11 ಗಂಟೆ ಸುಮಾರಿಗೆ ಕಾಲೇಜು ಸಿಬ್ಬಂದಿಯಿಂದ ಮಗಳ ಪತ್ತೆಯಾಗಿಲ್ಲ ಎಂಬ ಮಾಹಿತಿಯನ್ನು ಪತ್ನಿಗೆ ದೂರವಾಣಿ ಮೂಲಕ ತಿಳಿಸಲಾಯಿತು. ಈ ವಿಷಯ ತಿಳಿಯುತ್ತಿದ್ದಂತೆ, ಕುಟುಂಬಸ್ಥರು ಗಾಬರಿಗೊಂಡು ಆತ್ಮೀಯರು, ಸ್ನೇಹಿತರು ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದರು. ಆದರೆ ಎಲ್ಲೆಡೆ…

ಮುಂದೆ ಓದಿ..
ಸುದ್ದಿ 

ಜೆಪ್ಪೋ ಡೆಲಿವರಿ ಏಜೆಂಟ್ ವಿರುದ್ಧ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ

Taluknewsmedia.com

Taluknewsmedia.comಬೆಂಗಳೂರು ನಗರದ ಒಬ್ಬ ಮಹಿಳೆ ತಮ್ಮ ಮನೆಗೆ ಜೇಪ್ಪೋ ಆರ್ಡರ್ ವಿತರಣೆಗೆ ಬಂದ ಡೆಲಿವರಿ ಏಜೆಂಟ್ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ದಾಖಲಿಸಿದ್ದಾರೆ. ಈ ಸಂಬಂಧ ಮಹಿಳೆ ಅವರು 27/06/2025 ರಂದು ಮಧ್ಯಾಹ್ನ 1:00 ಗಂಟೆಗೆ ಪೊಲೀಸ್ ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದರು. ದಿನಾಂಕ 27/06/2025 ರಂದು ಬೆಳಿಗ್ಗೆ 9:30ಕ್ಕೆ ಅವರು ಜೆಪ್ಪೋ ಆ್ಯಪ್ ಮೂಲಕ ಮಾಡಿದ ಆರ್ಡರ್ (Order ID: MMTRIBLASN5997) ವಿತರಣೆಗೆ ಡೆಲಿವರಿ ಏಜೆಂಟ್ ಅವಿನಾಶ್ ಸಾಹಿ ಎಂಬುವರು ಮನೆಗೆ ಬಂದಿದ್ದರು. ವಿತರಣೆ ಸಮಯದಲ್ಲಿ ಆರೋಪಿಯು ಅವಾಸ್ಯಕವಾಗಿ ಸ್ಪರ್ಶಿಸಿ, ಅಸಭ್ಯವಾಗಿ ವರ್ತನೆ ತೋರಿದ್ದಾನೆ ಎಂಬುದು ದೂರಿನ ಸಾರಾಂಶ. ಈ ಘಟನೆಯು ಮುಸ್ಕಾನ್ ಮುಸ್ಮಾನ್ಮ ಅವರ ಪತಿಗೆ ತೀವ್ರ ಆತಂಕ ಮತ್ತು ಮಾನಸಿಕ ತೊಂದರೆ ಉಂಟುಮಾಡಿದ್ದು, ಮಹಿಳೆ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಮಾನವಾಗಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸರ್ಜಾಪುರ ಪೊಲೀಸರು…

ಮುಂದೆ ಓದಿ..
ಸುದ್ದಿ 

ತಂದೆ ಕಾಣೆಯಾಗಿರುವ ಪ್ರಕರಣ: ಕುಟುಂಬದವರಿಂದ ಪೊಲೀಸ್ ಠಾಣೆಗೆ ದೂರು

Taluknewsmedia.com

Taluknewsmedia.comನಗರದ ಬಾಬುರೆಡ್ಡಿ ಲೇಔಟ್ ನಿವಾಸಿಯಾಗಿರುವ ಕಾರ್ಪೆಂಟರ್ ಶ್ರೀ ಕುರುಮ್ ರಾವ್ (45) ಅವರು ಕೆಲಸಕ್ಕೆಂದು ಮನೆಬಿಟ್ಟು ಹೋಗಿದ್ದೇ ಮುಂದಾಗಿ ವಾಪಸ್ ಬಾರದಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಅವರ ಪುತ್ರರು ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪ್ರವೀಣ್ ಅವರ ವಿವರದಂತೆ, ಶ್ರೀ ರಾವ್ ದಿನಾಂಕ 07 ಜೂನ್ 2025 ರಂದು ಬೆಳಿಗ್ಗೆ 8 ಗಂಟೆಗೆ ಅಂಗಡಿಗೆ ತೆರಳಿದ್ದರು. ಮಧ್ಯಾಹ್ನ 12 ಗಂಟೆಗೆ ಅವರು ಊಟಕ್ಕಾಗಿ ಮನೆಗೆ ಬಂದಿದ್ದು, ನಂತರ ಪುನಃ ಕೆಲಸಕ್ಕೆಂದು ಹೊರಟಿದ್ದರು. ಆದರೆ ಆ ದಿನದ ನಂತರ ಅವರು ಮನೆಗೆ ಮರಳಿಲ್ಲ. ಕೋಟಂಬಿಕರು ಅವರ ಸಹೋದ್ಯೋಗಿಗಳ ಜೊತೆಗೆ ವಿಚಾರಣೆ ನಡೆಸಿದರೂ ಅವರು ಶ್ರೀ ರಾವ್ ಅವರ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ. ಕೆಲವು ದಿನಗಳ ಬಳಿಕ, ಅವರು ತಮಿಳುನಾಡಿನ ಚೆನ್ನೈನಲ್ಲಿ ತಮ್ಮ ಸ್ನೇಹಿತ ಚಿನ್ನಯ್ಯಪ್ಪನವರ ಬಳಿ ತಂಗಿರುವುದು ತಿಳಿದುಬಂದಿತು. ಚೆನ್ನೈನಿಂದ ಅವರು ಬೆಂಗಳೂರು…

ಮುಂದೆ ಓದಿ..
ಸುದ್ದಿ 

ಮನೆ ಬೀಗ ಮುರಿದು ದರೋಡೆ: ಬಂಗಾರ, ಬೆಳ್ಳಿ ಆಭರಣಗಳು ಹಾಗೂ ನಗದು ಕಳವು!

Taluknewsmedia.com

Taluknewsmedia.comತಿಪಟೂರಿಗೆ ಕುಟುಂಬ ಸಮೇತ ತೋಟಕ್ಕೆ ಹೋಗಿದ್ದ ವೇಳೆ ಯಮರೆ ಗ್ರಾಮದ ಮನೆಯ ಬಾಗಿಲು ಮುರಿದು ಕಳ್ಳರು ನುಗ್ಗಿ ಲಕ್ಷಾಂತರ ಮೌಲ್ಯದ ಆಭರಣಗಳು ಹಾಗೂ ನಗದು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸುಧಾಕರ್ ಅವರು ನೀಡಿದ ದೂರಿನ ಪ್ರಕಾರ, ದಿನಾಂಕ 25-06-2025 ರಂದು ಸಂಜೆ 4:30ರ ವೇಳೆಗೆ ತಮ್ಮ ಮನೆಯ ಬೀಗ ಹಾಕಿಕೊಂಡು ತಿಪಟೂರಿಗೆ ತೆರಳಿದ್ದರು. ನಂತರ ದಿನಾಂಕ 26-06-2025 ರಂದು ಸಂಜೆ 3:00 ಗಂಟೆ ಸುಮಾರಿಗೆ ಮನೆಯ ಸಿ.ಸಿ. ಕ್ಯಾಮೆರಾ ದೃಶ್ಯಾವಳಿಗಳನ್ನು ಅವರ ಮಗ ಯಶಸ್ ಫೋನಿನಲ್ಲಿ ಪರಿಶೀಲಿಸಿದಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಬಾಗಿಲು ಮುರಿದು ಮನೆಯೊಳಗೆ ಪ್ರವೇಶಿಸಿರುವುದು ಕಾಣಿಸಿಕೊಂಡಿದೆ. ಈ ವಿಷಯವನ್ನು ಕೂಡಲೇ ಸರ್ಜಾಪುರ ಪೊಲೀಸ್ ಠಾಣೆಗೆ ದೂರವಾಣಿ ಮೂಲಕ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ತಡರಾತ್ರಿ 10 ಗಂಟೆ ವೇಳೆಗೆ ಮನೆಗೆ ಬಂದು ಪರಿಶೀಲಿಸಿದಾಗ, ಮನೆಯ ನಾಲ್ಕು ಕೋಣೆಗಳ ಕಬೋರ್ಡುಗಳನ್ನು…

ಮುಂದೆ ಓದಿ..
ಸುದ್ದಿ 

ಕಾರ್ ಡ್ರೈವರ್ ಅರುಣ್ ಕುಮಾರ್ ನಾಪತ್ತೆ – ಪತ್ನಿಯಿಂದ ಠಾಣೆಗೆ ದೂರು

Taluknewsmedia.com

Taluknewsmedia.comಬೆಂಗಳೂರ ನಗರದಲ್ಲಿ ಕಾರು ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಅರುಣ್ ಕುಮಾರ್ ಎಂಬುವರುಮೂರು ದಿನಗಳಿಂದ ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಅವರ ಪತ್ನಿ ದಿನಾಂಕ 26/06/2025 ರಂದು ಸಂಜೆ 5:30 ಗಂಟೆಗೆ ಸ್ಥಳೀಯ ಸರ್ಜಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ತಿಳಿಸಿದಂತೆ, ಅರುಣ್ ಕುಮಾರ್ ಅವರು ದಿನಾಂಕ 23/06/2025 ರಂದು ಬೆಳಿಗ್ಗೆ 10:00 ಗಂಟೆಗೆ ತಮ್ಮ ನಿತ್ಯದ ಕೆಲಸಕ್ಕಾಗಿ ಹೊರಡಿದ್ದರು. ಅವರು ಹೋಗಿರುವುದರಿಂದ ಇಂದಿನವರೆಗೂ ಮನೆಗೆ ಮರಳಿಲ್ಲ. ಸಂಬಂಧಿಕರು ಹಾಗೂ ಪತ್ನಿ ಎಲ್ಲೆಡೆ ಹುಡುಕಾಡಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಪತ್ನಿಯ ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ನಾಪತ್ತೆಯಾದ ಅರುಣ್ ಕುಮಾರ್ ಅವರ ಪತ್ತೆಗೆ ಬೃಹತ್ ಹುಡುಕಾಟ ಆರಂಭವಾಗಿದೆ. ಯಾರಾದರೂ ಅರುಣ್ ಕುಮಾರ್ ಅವರ ಬಗ್ಗೆ ಮಾಹಿತಿ ಹೊಂದಿದ್ದಲ್ಲಿ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಪೊಲೀಸರು…

ಮುಂದೆ ಓದಿ..
ಸುದ್ದಿ 

ಜಮೀನಿನಲ್ಲಿ ಜೆಸಿಬಿ ಕೆಲಸದ ವೇಳೆಯಲ್ಲಿ ದಾಳಿ – ಹಲವು ಮಂದಿಗೆ ತೀವ್ರ ಗಾಯ

Taluknewsmedia.com

Taluknewsmedia.com ಜಮೀನಿನಲ್ಲಿ ನಡೆಯುತ್ತಿದ್ದ leveling ಕೆಲಸದ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ನಡುವೆ ತೀವ್ರ ಘರ್ಷಣೆ ಉಂಟಾಗಿ, ಎಂಟಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ. ಶ್ರೀಮತಿ ಕಾರ್ತಿಕವೇಣಿ ಕೊಂ ಶ್ರೀಧರ್ ರವರು ಠಾಣೆಗೆ ನೀಡಿದ ದೂರಿನ ಪ್ರಕಾರ, ಅವರು ತಮ್ಮ ಜಮೀನಿನಲ್ಲಿ ಜೆಸಿಬಿ ಮೂಲಕ ಸಮತಟ್ಟು ಮಾಡುವ ಕೆಲಸವನ್ನು ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ಸ್ಥಳಕ್ಕೆ ಬಂದು, ಕಾಮಗಾರಿ ಪ್ರಶ್ನಿಸಿದಾಗ ತೀವ್ರ ಮಾತಿನ ಚಕಮಕಿ ಉಂಟಾಗಿ, ಹಲ್ಲೆಗೆ ತಿರುಗಿತು. ಆರೋಪಿಗಳಾದ ಭರತ್, ಹರೀಶ್, ರಾಜು ಅಲಿಯಾಸ್ ಗಾರೆ ರಾಜು ಹಾಗೂ ಇತರರು ಸೇರಿ, ಕಾರ್ತಿಕವೇಣಿ ಅವರ ಕುಟುಂಬದವರಾದ ಪ್ರಸಾದ್, ಮುರಳಿ, ಕವಿತಾ, ವಿಜಯ್, ಶ್ರೀನಾಥ್, ಜಯಮ್ಮ ಮತ್ತು ದರ್ಶನ್‌ ರವರಿಗೆ ಕಬ್ಬಿಣದ ರಾಡು, ಕಲ್ಲು ಹಾಗೂ ದೊಣ್ಣೆಗಳೊಂದಿಗೆ ದಾಳಿ ನಡೆಸಿದ್ದಾರೆ. ಘಟನೆ ವೇಳೆ ಅಪಶಬ್ದಗಳನ್ನೂ ಬಳಸಿರುವುದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡಿರುವ ಪ್ರಸಾದ್…

ಮುಂದೆ ಓದಿ..
ಸುದ್ದಿ 

ಆನೇಕಲ್‌ದಲ್ಲಿ ಕುಟುಂಬಗಳ ನಡುವಿನ ಗಲಾಟೆ: ನಾಲ್ವರಿಗೆ ಗಾಯ, ಪ್ರಕರಣ ದಾಖಲು

Taluknewsmedia.com

Taluknewsmedia.comಆನೇಕಲ್ ಪಟ್ಟಣದ ನಿವಾಸವೊಂದರಲ್ಲಿ ಜೂನ್ 29ರ ಬೆಳಿಗ್ಗೆ ಎರಡು ಕುಟುಂಬಗಳ ನಡುವೆ ಉದ್ಭವಿಸಿದ ಗಲಾಟೆ ಹಿಂಸಾತ್ಮಕ ತಿರುವು ಪಡೆದು, ನಾಲ್ವರಿಗೆ ಗಾಯವಾಗಿರುವ ಘಟನೆ ನಡೆದಿದೆ. ಗಾಯಗೊಂಡವರಲ್ಲಿ ಮಹಿಳೆಯರು ಮತ್ತು ಹಿರಿಯರೂ ಸೇರಿದ್ದಾರೆ. ಪೊಲೀಸ್ ಠಾಣೆಗೆ ಹಾಜರಾದ ಕುಮಾರಿ ಶುಭಾಶ್ರೀ ಬಿನ್ ರಾಜು ನೀಡಿದ ದೂರಿನ ಪ್ರಕಾರ, ಬೆಳಿಗ್ಗೆ 8 ಗಂಟೆ ಸುಮಾರಿಗೆ ಭರತ್, ಹರೀಶ್ ಮತ್ತು ಶ್ರೀಧರ್ ರವರ ಕುಟುಂಬದವರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಆರಂಭವಾಗಿದೆ. ಈ ವೇಳೆ ಪ್ರಸಾದ್, ಮುರಳಿ ಮತ್ತು ಸೀನಾ ಅವರು ಸೇರಿಕೊಂಡು, ಅಲ್ಲಿಯ ಬಿದ್ದ ದೊಣ್ಣೆಯಿಂದ ಹರೀಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಹರೀಶ್ ಪ್ರಜ್ಞೆ ತಪ್ಪಿಸಿ ನೆಲಕ್ಕೆ ಬಿದ್ದಿದ್ದಾರೆ. ಘಟನೆಯನ್ನು ಗಮನಿಸಿದ ಶುಭಾಶ್ರೀ ಅವರ ತಂದೆ ರಾಜು ಅವರು ಹರೀಶ್ ರವರಿಗೆ ಸಹಾಯ ಮಾಡಲು ಹೋಗಿದಾಗ, ಶ್ರೀಧರ್, ಕಾರ್ತಿಕ್ ವೇನಿ, ಶ್ರೀನಾಥ, ವಿಜಯಾ, ಪ್ರಸಾದ್, ಕವಿತಾ, ಮುರಳಿ…

ಮುಂದೆ ಓದಿ..