ಆತ್ಮೀಯರೆ,………..
Taluknewsmedia.comಆತ್ಮೀಯರೆ,……….. ಜನಪ್ರಿಯತೆಯೇ ಸತ್ಯ ಎಂಬ ಒಂದು ಅಘೋಷಿತ ಮನೋಭಾವ ಇಂದಿನ ಆಧುನಿಕ ಸಮಾಜದಲ್ಲಿ ಬೆಳೆಯುತ್ತಿದೆ. ಸಿನಿಮಾ, ಸಂಗೀತ, ಸಾಹಿತ್ಯ, ರಾಜಕೀಯ, ಸಂಘಟನೆ, ಸಮಾಜ ಸೇವೆ ಮುಂತಾದ ಕ್ಷೇತ್ರಗಳಲ್ಲಿ ಇದು ವ್ಯಾಪಕವಾಗಿ ಹರಡಿದೆ. ಜನಪ್ರಿಯತೆಗೂ – ಸತ್ಯ ಮತ್ತು ವಾಸ್ತವತೆಗೂ ಬಹಳಷ್ಟು ವ್ಯತ್ಯಾಸವಿದೆ. ಎಳನೀರು ಮತ್ತು ಪೆಪ್ಸಿ – ಕೋಲಾ ಪಾನೀಯಗಳ ಉದಾಹರಣೆಗಳೊಂದಿಗೆ ಇದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬಹುದು. ಎಳನೀರು ಅತ್ಯಂತ ಪೌಷ್ಟಿಕಾಂಶದ ಅತ್ಯುತ್ತಮ ಪಾನೀಯ. ಆದರೆ ಇಂದಿನ ಯುವ ಜನಾಂಗ ಅದನ್ನು ಅನಾರೋಗ್ಯ ಸಮಯದಲ್ಲಿ ಅಥವಾ ತೀರಾ ಅಪರೂಪಕ್ಕೆ ಕುಡಿಯುತ್ತಾರೆ. ಆದರೆ, ಅನಾರೋಗ್ಯಕಾರಿ ವಿಷಕಾರಕ ಅಂಶಗಳುಳ್ಳ ಪೆಪ್ಸಿ ಕೋಲಾಗಳನ್ನು ಎಲ್ಲಾ ಸಂದರ್ಭದಲ್ಲಿಯೂ ಯಥೇಚ್ಛವಾಗಿ ಕುಡಿಯುತ್ತಾರೆ.ಜನಪ್ರಿಯತೆಯ ಮಾನದಂಡದಲ್ಲಿ ಪೆಪ್ಸಿ ಕೋಲಾಗಳೇ ಉತ್ತಮ ಪಾನೀಯ ಎಂದು ಪರಿಗಣಿಸಬೇಕಾಗುತ್ತದೆ. ಇದೇ ಆಧಾರದಲ್ಲಿ ಸಿನಿಮಾ ನಟರು, ರಾಜಕಾರಣಿಗಳು, ಪತ್ರಕರ್ತರು, ಸಾಹಿತಿಗಳು, ಧಾರ್ಮಿಕ ಮುಖಂಡರು ಇತ್ಯಾದಿಗಳು ಗಿಮಿಕ್ ಗಳನ್ನು ಮಾಡುತ್ತಾ ಪ್ರಚಾರ ಪಡೆದು ಜನಪ್ರಿಯರಾಗುತ್ತಾರೆ.…
ಮುಂದೆ ಓದಿ..
