ಸುದ್ದಿ 

ಬೆಂಗಳೂರು: ಕಾರು ಖರೀದಿ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ ನಡೆದಿದೆ

Taluknewsmedia.com

Taluknewsmedia.com.ಬೆಂಗಳೂರು 20 ಆಗಸ್ಟ್ 2025ಶಿವಕುಮಾರ್ ಅವರ ದೂರಿನ ಪ್ರಕಾರ KA03 NB 5558 ನಂಬರಿನ ಕಾರು ಖರೀದಿಸಲು 30-05-2025 ರಂದು ಮಾರಾಟಗಾರ ಶ್ರೀಕಾಂತ್ ಅವರಿಗೆ ₹2.5 ಲಕ್ಷ ಮೊತ್ತವನ್ನು ಪಾವತಿಸಿದ್ದರು. ಉಳಿದ ₹9 ಲಕ್ಷ ನೀಡಿದ ಬಳಿಕ ವಾಹನ ಕೊಡುತ್ತೇನೆ ಎಂದು ಭರವಸೆ ನೀಡಿದರೂ, ಕಾರು ನೀಡದೇ ಹಣವನ್ನೂ ಮರಳಿಸದೇ ಸುಮ್ಮನಾಗಿದ್ದಾರೆ. ವಿಚಾರಿಸಲು ಕರೆ ಮಾಡಿದಾಗ, ಶ್ರೀಕಾಂತ್ ಅವರು “ಹಣ ಕೊಡೋದಿಲ್ಲ, ಕಾರೂ ಸಿಗೋದಿಲ್ಲ” ಎಂದು ಬೆದರಿಕೆ ಹಾಕಿರುವುದು ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರುದಲ್ಲಿ ಉಲ್ಲೇಖವಾಗಿದೆ. ಈ ಪ್ರಕರಣದ ಕೊಡುಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆಅಪರಿಚಿತರ ಮಾತಿಗೆ ನಂಬಿಕೆ ಇಟ್ಟು ದೊಡ್ಡ ಮೊತ್ತವನ್ನು ಆನ್‌ಲೈನ್ ಮೂಲಕ ಪಾವತಿಸುವ ಮುನ್ನ ದಾಖಲೆಗಳ ಪರಿಶೀಲನೆ ಮಾಡಬೇಕು.

ಮುಂದೆ ಓದಿ..
ಸುದ್ದಿ 

ಅಫೀಮ್ ಸಾಗಾಟ ಬಯಲು – ಬೈಕ್‌ ಸಹಿತ ಆರೋಪಿಯ ಬಂಧನ

Taluknewsmedia.com

Taluknewsmedia.comಬೆಂಗಳೂರು: 20 ಆಗಸ್ಟ್ 2025ನಗರದಲ ಬಾಲಾಜಿ ಲೆಹೌಟ್ ಕೊಡಿಗೆಹಳ್ಳಿಲಿ ಮತ್ತೊಂದು ಮಾದಕ ವಸ್ತು ಪ್ರಕರಣ ಬೆಳಕಿಗೆ ಬಂದಿದೆ. ಖಚಿತ ಮಾಹಿತಿಯ ಆಧಾರದ ಮೇಲೆ 18 ಆಗಸ್ಟ್‌ 2025ರಂದು ಬೆಳಿಗ್ಗೆ 8 ರಿಂದ 9 ಗಂಟೆಯೊಳಗೆ ದಾಳಿ ನಡೆಸಿದ ಕೊಡುಗೆಹಳ್ಳಿ ಪೊಲೀಸರು, ಜಿಜೆ-05 ಎನ್‌ಡಬ್ಲ್ಯೂ-8254 ನಂಬರ್‌ದ ಸೈಂಡರ್ ಪ್ಲಸ್ ಬೈಕ್‌ನಲ್ಲಿ ಅಫೀಮ್ ಸಾಗಿಸುತ್ತಿದ್ದ ಅಪರಿಚಿತ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯ ಬಳಿ ಪತ್ತೆಯಾದ ಅಫೀಮ್ ಸಾರ್ವಜನಿಕರಿಗೆ ಮಾರಾಟ ಮಾಡಲು ತಂದು ಇಟ್ಟಿದ್ದಾನೆ ಎಂದು ಕೊಡುಗೆಹಳ್ಳಿ ಪೊಲೀಸರು ತಿಳಿಸಿದ್ದಾರೆ.ಬೈಕ್ ಹಾಗೂ ಮಾದಕ ವಸ್ತುಗಳನ್ನು ವಶಕ್ಕೆ ಪಡೆದು, ಆರೋಪಿಯ ವಿರುದ್ಧ NDPS ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಮಾದಕ ವಸ್ತು ಪೂರೈಕೆ ಜಾಲದ ಬಗ್ಗೆ ತನಿಖೆ ಮುಂದುವರಿದಿದೆ.“ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸಿದರೆ ಯಾರನ್ನೂ ಬಿಡುವುದಿಲ್ಲ. ನಗರವನ್ನು ಡ್ರಗ್ ಮುಕ್ತಗೊಳಿಸಲು ಗಟ್ಟಿಯಾದ ಕ್ರಮ ಕೈಗೊಳ್ಳಲಾಗುವುದು” ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಮುಂದೆ ಓದಿ..
ಸುದ್ದಿ 

ಬೆಂಗಳೂರು: ಯಲಹಂಕದಲ್ಲಿ ವ್ಯಾಪಾರಿಯ ಮೇಲೆ ಗುಂಪು ದಾಳಿ – ಜೀವ ಬೆದರಿಕೆ ಆರೋಪ

Taluknewsmedia.com

Taluknewsmedia.comಬೆಂಗಳೂರು 20 ಆಗಸ್ಟ್ 2025 ಯಲಹಂಕದ ಭದ್ರಪ್ಪ ಲೇಔಟ್‌ನಲ್ಲಿ ಗುಂಪು ದಾಳಿಯ ಪ್ರಕರಣ ಬೆಳಕಿಗೆ ಬಂದಿದೆ. ಮಟನ್ ಶಾಪ್ ನಡೆಸುತ್ತಿದ್ದ ವ್ಯಾಪಾರಿಯೊಬ್ಬರು ಕೊಡುಗೆಹಳ್ಳಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರಕಾರ, ಆಗಸ್ಟ್ 17ರಂದು ರಾತ್ರಿ ಸುಮಾರು 7 ಗಂಟೆಯ ಸಮಯದಲ್ಲಿ ಶೋಭಾ ತುಲೀಪ್ ಹೋಟೆಲ್ ಎದುರು ನವೀದ್ ಮಟನ್ ಕಾಪ್ ಅಂಗಡಿಯನ್ನು ಮುಚ್ಚಿ ಹತ್ತಿರದ ಎನ್‌ಟಿಐ ಮೈದಾನಕ್ಕೆ ತೆರಳಿದ್ದ ವೇಳೆ, ಸುಮಾರು 10–12 ಜನರ ಗುಂಪು ತಡೆದಿದ್ದು, ಮೂವರು ಅಪರಿಚಿತ ಯುವಕರು ಹಠಾತ್ ವಾಗ್ವಾದ ಆರಂಭಿಸಿದ್ದಾರೆ. ನವೀದ್ ಪಾಷಾ ಅವರ ಪ್ರಕಾರ, ಆ ಯುವಕರು ವಿಳಾಸ ಕೇಳಿ ಕಿರಿಕಿರಿ ಮಾಡಿದ್ದು, ಬಳಿಕ ದೈಹಿಕ ದಾಳಿ ನಡೆಸಿದ್ದಾರೆ. ಮುಖ ಹಾಗೂ ಮೈಮೇಲೆ ಕೈಗಳಿಂದ ಹೊಡೆದು ಬೈಯುತ್ತಿರುವ ಸಂದರ್ಭದಲ್ಲಿ, ದೂರುದಾರರ ತಮ್ಮ ಶಾಹುಲ್ ನವಾಜ್ ಜಗಳ ಬಿಡಿಸಲು ಬಂದಾಗ, ಅವನ ಮೇಲೆಯೂ ಹಲ್ಲೆ ನಡೆಸಲಾಗಿದೆ. ಇದರ ನಂತರ ಆರೋಪಿಗಳು “ಇವತ್ತು…

ಮುಂದೆ ಓದಿ..
ಸುದ್ದಿ 

ಬೆಂಗಳೂರು: ವಿದೇಶಿ ಪ್ರಜೆಗೆ ಮನೆ ಬಾಡಿಗೆ – ಮಹಿಳೆ ವಿರುದ್ಧ ಪ್ರಕರಣ

Taluknewsmedia.com

Taluknewsmedia.comಬೆಂಗಳೂರು: ವಿದೇಶಿ ಪ್ರಜೆಗೆ ಮನೆ ಬಾಡಿಗೆ – ಮಹಿಳೆ ವಿರುದ್ಧ ಪ್ರಕರಣ ಬೆಂಗಳೂರು 20 ಆಗಸ್ಟ್ 2025ನಗರದ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಭದ್ರಪ್ಪ ಲೇಔಟ್, ಮಾರುತಿನಗರದಲ್ಲಿ ವಿದೇಶಿ ಪ್ರಜೆಗೆ ಅನಧಿಕೃತವಾಗಿ ಮನೆ ಬಾಡಿಗೆಗೆ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಆಗಸ್ಟ್ 17 ರಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಕೊಡಿಗೆಹಳ್ಳಿಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ, ಮಾರುತಿನಗರ 1ನೇ ಮುಖ್ಯರಸ್ತೆಯ ಮನೆ ನಂ.218, 1ನೇ ಮಹಡಿಯಲ್ಲಿ ವಾಸಿಸುತ್ತಿದ್ದ ವಿದೇಶಿ ಪ್ರಜೆಯ ಬಗ್ಗೆ ಮಾಹಿತಿ ದೊರಕಿತು. ಮನೆಯನ್ನು ಮಾಲೀಕರಾದ ಶ್ರೀಮತಿ ಗಂಗಾರಾಣಿ, ಸಂಜಯ್ ನಗರದ ನಿವಾಸಿ, ವಿದೇಶಿ ಪ್ರಜೆ ಡುಮೊ ಎಲ್.ಪಿ. ಫ್ರೆಡರಿಕ್ (39 ವರ್ಷ, ನೈಜೀರಿಯಾ ಮೂಲದವರು) ಅವರಿಗೆ ಬಾಡಿಗೆಗೆ ನೀಡಿರುವುದು ಪತ್ತೆಯಾಯಿತು. ಮನೆಯಿಂದ ದೊರೆತ ಮಾಹಿತಿಯ ಪ್ರಕಾರ, ಕಳೆದ 2 ತಿಂಗಳಿಂದ ಫ್ರೆಡರಿಕ್ ವಾಸವಾಗಿದ್ದು, ಪ್ರತಿ ತಿಂಗಳು ರೂ.9,450 ಬಾಡಿಗೆ ನೀಡುತ್ತಿದ್ದಾರೆ. ಆದರೆ, ಸಂಬಂಧಪಟ್ಟ…

ಮುಂದೆ ಓದಿ..
ಸುದ್ದಿ 

ಬೆಂಗಳೂರಿನ ತಿಮ್ಮಣ್ಣ ಲೇಔಟ್ ಕೊಡುಗೆ ಹಳ್ಳಿಯಲ್ಲಿ 54 ವರ್ಷದ ಉಮೇಶ್ ಕಾಣೆಯಾದ ಪ್ರಕರಣ

Taluknewsmedia.com

Taluknewsmedia.comಬೆಂಗಳೂರು 20 ಆಗಸ್ಟ್ 2025ತಿಮ್ಮಣ್ಣ ಲೇಔಟ್ ಕೊಡುಗೆಹಳ್ಳಿ ಎಲ್ಲಿ ವಾಸವಿರುವ 54 ವರ್ಷದ ಉಮೇಶ್ ಕಾಣೆಯಾದ ಪ್ರಕರಣ ದಾಖಲಾಗಿದೆ. ಕೊಡಿಗೆಹಳ್ಳಿ ಪೊಲೀಸರ ಪ್ರಕಾರ, ಯಶಸ್ ವಿ ಅವರು ನೀಡಿದ ಮಾಹಿತಿಯಂತೆ ಉಮೇಶ್ ತಮ್ಮ ಕುಟುಂಬ ಸಮೇತ ನಗರದ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದರು. ಇವರು ಮನೆಯಲ್ಲಿಯೇ ಇರುತ್ತಿದ್ದರೂ, ದಿನಾಂಕ 21-07-2025 ರಂದು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಮನೆಯಿಂದ ಹೊರಟ ಬಳಿಕ ವಾಪಸ್ ಮನೆಗೆ ಮರಳಿಲ್ಲ. ಹಿಂದೆಯೂ ಒಮ್ಮೆ ಮನೆಯಿಂದ ಹೊರಟು 15 ದಿನಗಳ ಬಳಿಕ ಮನೆಗೆ ವಾಪಸ್ ಬಂದಿದ್ದರು. ಆದರೆ ಈ ಬಾರಿ 10-08-2025 ರವರೆಗೂ ಕಾಯುತ್ತಿದ್ದರೂ ವಾಪಸ್ ಬಾರದ ಕಾರಣ, ಕುಟುಂಬಸ್ಥರು ಕೊಡುಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಂಧು-ಬಳಗ ಹಾಗೂ ಸ್ನೇಹಿತರ ಬಳಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಕಾಣೆಯಾದ ಉಮೇಶ್ ಅವರ ವಯಸ್ಸು 54 ವರ್ಷ. ಇವರ ಚಹರೆ: ಕೋಲು ಮುಖ, ಬಿಳಿ…

ಮುಂದೆ ಓದಿ..
ಸುದ್ದಿ 

ಬೆಂಗಳೂರು: 17 ವರ್ಷದ ಬಾಲಕಿ ಕಾಣೆಯಾದ ಪ್ರಕರಣ

Taluknewsmedia.com

Taluknewsmedia.com ಬೆಂಗಳೂರು 18 ಆಗಸ್ಟ್ 2025 ಹೆಬ್ಬಾಳ ಕೆಂಪಾಪುರದ ಜೈನ್ ಎಂಟೇಜ್ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯ 17 ವರ್ಷದ ಮಗಳು ಕಾಣೆಯಾದ ಘಟನೆ ಬೆಳಕಿಗೆ ಬಂದಿದೆ. ಯಲಹಂಕ ಉಪನಗರ ಪೊಲೀಸರ ಮಾಹಿತಿಯ ಪ್ರಕಾರ, ದೂರಿನುದಾರರ ಮಗಳು ಕುಮಾರಿ ನಮ್ರತಾ (17 ವರ್ಷ), ಯಲಹಂಕದ ಶೇಷಾದ್ರಿಪುರಂ ಕಾಲೇಜಿನಲ್ಲಿ 2ನೇ ವರ್ಷದ ಕಾರ್ಮಸ್ ವ್ಯಾಸಂಗ ಮಾಡುತ್ತಿದ್ದಾಳೆ. ದಿನಾಂಕ 16 ಆಗಸ್ಟ್ 2025 ರಂದು ಬೆಳಿಗ್ಗೆ 8 ಗಂಟೆಗೆ ಕಾಲೇಜಿಗೆ ತೆರಳಿದ ಆಕೆ ಮಧ್ಯಾಹ್ನ 1.30ರ ಸುಮಾರಿಗೆ ಯಾವುದೋ ಹುಡುಗನ ಜೊತೆ ವಿಡಿಯೋ ಕಾಲ್ ಮಾಡುತ್ತಿದ್ದಳು ಎಂದು ದೂರಿನುದಾರರ ಮಗ ಅನಿರುದ್ಧ ಹೇಳಿದ್ದಾನೆ. ಆ ನಂತರ ನಮ್ರತಾ ತನ್ನ ಸ್ನೇಹಿತರಿಗೆ ತಮಿಳುನಾಡಿಗೆ ಹೋಗುತ್ತಿದ್ದೇನೆ ಎಂದು ತಿಳಿಸಿ, ತನ್ನ ಫೋನ್ ಸ್ವಿಚ್ ಆಫ್ ಮಾಡಿ ಕಾಣೆಯಾಗಿದ್ದಾಳೆ. ಮನೆಯವರು, ಸ್ನೇಹಿತರು, ಬಂಧು-ಬಳಗ ಹಾಗೂ ಅಕ್ಕಪಕ್ಕದವರಲ್ಲಿ ವಿಚಾರಿಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಕಾಣೆಯಾದ ನಮ್ರತಾ…

ಮುಂದೆ ಓದಿ..
ಸುದ್ದಿ 

ದೇವನಹಳ್ಳಿ: ವೀಲಿಂಗ್ ಮಾಡುತ್ತಿದ್ದ ಯುವಕ ಬಂಧನ

Taluknewsmedia.com

Taluknewsmedia.com ಬೆಂಗಳೂರು 18 ಆಗಸ್ಟ್ 2025 ದೇವನಹಳ್ಳಿಯ ಬಿ.ಬಿ.ರಸ್ತೆಯ ಮೇಲೆ ಸ್ಕೂಟರ್‌ನಲ್ಲಿ ಅತಿವೇಗವಾಗಿ ಹಾಗೂ ಅಜಾಗರೂಕತೆಯಿಂದ ವೀಲಿಂಗ್ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. 15 ಆಗಸ್ಟ್ 2025ರಂದು ಬೆಳಿಗ್ಗೆ ಸುಮಾರು 8:20ರ ಹೊತ್ತಿಗೆ, ಕೋಗಿಲು ಜಂಕ್ಷನ್ ಬಳಿ ಪಹರೆಯಲ್ಲಿ ತೊಡಗಿದ್ದ ಯಲಹಂಕ ಟ್ರಾಫಿಕ್ ಪೊಲೀಸರು ಸಾರ್ವಜನಿಕರಿಂದ ಬಂದ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಹೊಂಡಾ ಡಿಯೋ (KA-04-CH-7706) ಮೇಲೆ ವೀಲಿಂಗ್ ಮಾಡುತ್ತಾ ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಿದ್ದ ಯುವಕನನ್ನು ತಡೆದು ಯಲಹಂಕ ಸಂಚಾರಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ತನಿಖೆಯಲ್ಲಿ ಬಂಧಿತ ಯುವಕನ ಹೆಸರು ರಿಹಾನ್ ಬಿನ್ ರಫೀ (19), ವಾಸ: ಕಾವಲ ಬೈರಸಂದ್ರ ಬಸ್ ನಿಲ್ದಾಣ ಹತ್ತಿರ, ಆರ್.ಟಿ.ನಗರ, ಬೆಂಗಳೂರು ಎಂದು ತಿಳಿದುಬಂದಿದೆ. ಪೊಲೀಸರು ಆರೋಪಿಯ ವಿರುದ್ಧ ಅತಿವೇಗ, ಅಜಾಗರೂಕ ಚಾಲನೆ ಹಾಗೂ ಸಾರ್ವಜನಿಕರ ಪ್ರಾಣಕ್ಕೆ ಅಪಾಯ ಉಂಟುಮಾಡುವಂತಹ ಕೃತ್ಯ ಕುರಿತಂತೆ ಪ್ರಕರಣ ದಾಖಲಿಸಿದ್ದಾರೆ.…

ಮುಂದೆ ಓದಿ..
ಸುದ್ದಿ 

ಬೆಂಗಳೂರು: 80 ಸಾವಿರ ರೂಪಾಯಿ ಮೌಲ್ಯದ ಸ್ಕೂಟರ್ ಕಳ್ಳತನ

Taluknewsmedia.com

Taluknewsmedia.com ಬೆಂಗಳೂರು 18 ಆಗಸ್ಟ್ 2025ಯಲಹಂಕ ತಾಲೂಕಿನ ಕಟ್ಟಿಗೆನಹಳ್ಳಿ ಯಲಿ ಮತ್ತೊಂದು ಸ್ಕೂಟರ್ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಮಾಹಿತಿಯ ಪ್ರಕಾರ, ದೂರುದಾರರ ಮಗ ಶೇಖ್ ಮುತಾಹಿರ್ ಅವರು ಬೂದು ಬಣ್ಣದ ಸ್ಕೂಟರ್ (KA-402120-125) ಅನ್ನು 27 ಜುಲೈ 2025 ರಂದು ಬೆಳಗ್ಗೆ ಸುಮಾರು 10:15 ಗಂಟೆಗೆ ಓಡಿಸಿಕೊಂಡು ಹೋಗಿದ್ದರು. ಆದರೆ, 28 ಜುಲೈ 2025 ರಂದು ಬೆಳಗ್ಗೆ 10 ಗಂಟೆಯ ವೇಳೆಗೆ ಸ್ಕೂಟರ್ ನಿಲ್ಲಿಸಿದ್ದ ಸ್ಥಳದಲ್ಲಿ ಕಾಣೆಯಾಗಿರುವುದು ಪತ್ತೆಯಾಗಿದೆ. ಅಪರಿಚಿತರು ವಾಹನವನ್ನು ಕಳವು ಮಾಡಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಕಳವಾದ ಸ್ಕೂಟರ್ ಮೌಲ್ಯವನ್ನು ಸುಮಾರು ₹80,000 ಎಂದು ಅಂದಾಜಿಸಲಾಗಿದೆ. ಫಿರ್ಯಾದಿನ ಮೇರೆಗೆ ಯಲಹಂಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಪತ್ತೆಹಚ್ಚಿ ಸ್ಕೂಟರ್ ವಾಪಸ್ ಪಡೆಯಲು ತನಿಖೆ ಆರಂಭಿಸಿದ್ದಾರೆ.

ಮುಂದೆ ಓದಿ..
ಸುದ್ದಿ 

ಬೆಂಗಳೂರು: ಮಾಜಿ ಕಾರ್ ಚಾಲಕನ ಮೇಲೆ ಕನ್‌ಸ್ಟ್ರಕ್ಷನ್ ಕಂಪನಿಯ ಗೋಡೌನ್ ಕಳ್ಳತನ ಪ್ರಕರಣ

Taluknewsmedia.com

Taluknewsmedia.comಬೆಂಗಳೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಿಯಾ ಎಸ್ಮಸ್ ಕನ್‌ಸ್ಟ್ರಕ್ಷನ್ ಕಂಪನಿಯ ಮಾದಪ್ಪನಹಳ್ಳಿಯಲ್ಲಿರುವ ಗೋಡೌನ್‌ನಲ್ಲಿ ಲಕ್ಷಾಂತರ ಮೌಲ್ಯದ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ರಾಜನಕುಂಟೆ ಪೊಲೀಸರ ಮಾಹಿತಿಯ ಪ್ರಕಾರ, ಈ ಪ್ರಕರಣದಲ್ಲಿ ಶಂಕಿತನಾಗಿ ತಮಿಳುನಾಡು ಮೂಲದ ಜೈ ಕೃಷ್ಣನ್ ಎಂಬ ವ್ಯಕ್ತಿಯ ವಿರುದ್ಧ FIR ದಾಖಲಾಗಿದೆ. ಆತ ಹಿಂದಿನ ದಿನಗಳಲ್ಲಿ ಕಂಪನಿಯ ಮಾಲೀಕರ ಕಾರ್ ಚಾಲಕರಾಗಿ ಕೆಲಸ ಮಾಡುತ್ತಿದ್ದು, ನಂತರ ಕಂಪನಿಗೆ ಕಾರ್ಮಿಕರನ್ನು ಒದಗಿಸುವ ಕೆಲಸವನ್ನೂ ಮಾಡುತ್ತಿದ್ದ. ಕಂಪನಿಯ ದೂರು ಪ್ರಕಾರ, ಕಾರ್ಮಿಕರಿಗೆ ಅಡ್ವಾನ್ಸ್ ಹಣ ಪಾವತಿಸುವ ವಿಚಾರದಲ್ಲಿ ಜೈ ಕೃಷ್ಣನ್ ಮತ್ತು ಕಾರ್ಮಿಕರ ನಡುವೆ ವಾದ-ವಿವಾದ ಉಂಟಾಗಿತ್ತು. ನಂತರ ಆತ ಕೆಲಸ ಬಿಟ್ಟು ಹೋದರೂ, 2025ರ ಜೂನ್ 19ರಂದು ಮಾದಪ್ಪನಹಳ್ಳಿಯ ಗೋಡೌನ್ ಒಳಗೆ ಪ್ರವೇಶಿಸಿ ಸುಮಾರು ₹3.5 ಲಕ್ಷ ಮೌಲ್ಯದ ಕಾನ್ಸ್ಟ್ರಕ್ಷನ್ ಸಾಮಾನುಗಳನ್ನು ಕದ್ದುಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಗೋಡೌನ್ ಬಾಗಿಲಿನ ಚಿಲಕ ಮುರಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನಕಲಿ ಕೀ…

ಮುಂದೆ ಓದಿ..
ಸುದ್ದಿ 

ರಾಜಾನುಕುಂಟೆ ಪೊಲೀಸರು ಅಕ್ರಮ ಮದ್ಯಪಾನ ದಾಳಿ – ಒಬ್ಬನ ಬಂಧನ

Taluknewsmedia.com

Taluknewsmedia.comಬೆಂಗಳೂರು ಗ್ರಾಮಾಂತರ 18 ಆಗಸ್ಟ್ 2025ಯಲಹಂಕ ತಾಲೂಕು ಭೈರಾಪುರ ಗ್ರಾಮದಲ್ಲಿ ರಾಜನಕುಂಟೆ ಪೊಲೀಸರು ಅಕ್ರಮ ಮದ್ಯಪಾನ ದಾಳಿ ನಡೆಸಿ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಆಗಸ್ಟ್ 16ರಂದು ಸಂಜೆ ಎ.ಎಸ್.ಐ ಗಂಗಯ್ಯ ನೇತೃತ್ವದ ತಂಡ ಗಸ್ತಿನ ವೇಳೆ ಭೈರಾಪುರದಲ್ಲಿ ಗೋವಿಂದಪ್ಪ (70) ತಮ್ಮ ಮನೆಯಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದಾನೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿತು. ಸ್ಥಳದಲ್ಲಿ 90 ಎಂ.ಎಲ್ ಒರಿಜಿನಲ್ ಚಾಯ್ಸ್ ಮದ್ಯದ 6 ಪ್ಯಾಕ್‌ಗಳು, 6 ಡಿಸ್ಪೋಜಬಲ್ ಗ್ಲಾಸ್‌ಗಳು ಹಾಗೂ 500 ಎಂ.ಎಲ್ ನೀರಿನ 6 ಬಾಟಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಗೋವಿಂದಪ್ಪನು ಮದ್ಯದ ಪ್ಯಾಕ್ ಹಾಗೂ ತಿಂಡಿ ಸಾಮಾನುಗಳನ್ನು ಹೆಚ್ಚುವರಿ ಬೆಲೆಯಲ್ಲಿ ಮಾರಾಟ ಮಾಡಿ ಲಾಭ ಪಡೆಯುತ್ತಿದ್ದನೆಂದು ರಾಜನಕುಂಟೆ ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಗ್ಗೆ KE Act 15(A) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

ಮುಂದೆ ಓದಿ..