ಪದವೀಧರರ ಆಲೋಚನೆಗಳು ಯೋಜನೆಗಳು ದೇಶಕ್ಕೆ ಕೊಡುಗೆಯಾಗಬೇಕಿದೆ : ಡಾ.ಸೋಮನಾಥ್
Taluknewsmedia.comನಾಗಮಂಗಲ : ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪದವೀಧರರ ಸಂಖ್ಯೆ ಹೆಚ್ಚುತ್ತಿದೆ ಹೆಚ್ಚುತ್ತಿರುವ ಪದವೀಧರರ ಆಲೋಚನೆಗಳು ಯೋಜನೆಗಳು ದೇಶಕ್ಕೆಕೊಡುಗೆಯಾಗಬೇಕು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ( ಇಸ್ರೋ ) ಮಾಜಿ ಅಧ್ಯಕ್ಷ ಹಾಗೂ ಚಾಣಕ್ಯ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಆದ ಡಾ.ಎಸ್.ಸೋಮನಾಥ್ ಅಭಿಪ್ರಾಯ ಪಟ್ಟರು. ತಾಲ್ಲೂಕಿನ ಬಿ.ಜಿ ನಗರದಲ್ಲಿರುವ ಆದಿಚುಂಚನಗಿರಿ ವಿಶ್ವ ವಿದ್ಯಾಲಯದ ಐದನೇ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದರು. ಇಲ್ಲಿಯವರೆಗೆ ನಿಮ್ಮ ಬದುಕಿನ ದಿಕ್ಕೇ ಬೇರೆ. ಪದವೀಧರರಾದ ನಿಮಗೆ ಇಂದಿನಿಂದ ಖಾಸಗಿ ಹಾಗೂ ವೃತ್ತಿಪರ ಬದುಕು ತೆರೆದುಕೊಳ್ಳುತ್ತಾ ಹೋಗುತ್ತದೆ. ಇಂದಿನಿಂದ ನಿಮ್ಮಲ್ಲಿರುವ ಜ್ಞಾನದ ಜೊತೆಗೆ ಕೌಶಲ್ಯ ಕೂಡ ನೆರವಿಗೆ ಬರುತ್ತದೆ. ನಿಮ್ಮ ವೃತ್ತಿ ಹಾಗೂ ಖಾಸಗಿ ಜೀವನದಲ್ಲಿ ವ್ಯಕ್ತಿತ್ವ, ಪ್ರಾಮಾಣಿಕತೆ ಮತ್ತು ಸಮಗ್ರತೆಗೆ ಮನ್ನಣೆ ನೀಡಿ ಎಂದರು. ಇಂದು ಭಾರತ ವಿಶ್ವಕ್ಕೆ ತನ್ನ ಸಂಸ್ಕೃತಿಯ ಮೂಲಕ ಅನೇಕ ಕೊಡುಗೆ ನೀಡಿದೆ. ಅದೇ ರೀತಿ…
ಮುಂದೆ ಓದಿ..
