ಸುದ್ದಿ 

ವಾಮಾಚಾರ ಶಂಕೆ: ಎರಡು ವರ್ಷದ ಮಗುವಿನ ರಕ್ಷಣೆ…

Taluknewsmedia.com

Taluknewsmedia.comವಾಮಾಚಾರ ಶಂಕೆ: ಎರಡು ವರ್ಷದ ಮಗುವಿನ ರಕ್ಷಣೆ… ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಪಟ್ಟಣದ ಜನತಾ ಕಾಲನಿಯಲ್ಲಿ ವಾಮಾಚಾರಕ್ಕೆ ಸಂಬಂಧಿಸಿದ ಗಂಭೀರ ಶಂಕೆಯೊಂದು ಬೆಳಕಿಗೆ ಬಂದಿದೆ. ನಿಧಿ ಲಾಭಕ್ಕಾಗಿ ಎರಡು ವರ್ಷದ ಗಂಡು ಮಗುವನ್ನು ಬಲಿಕೊಡುವ ಉದ್ದೇಶದಿಂದ ಸಿದ್ಧತೆ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ರಕ್ಷಿಸಲ್ಪಟ್ಟ ಮಗುವನ್ನು ತಕ್ಷಣ ದೇವನಹಳ್ಳಿಯ ಶಿಶುಮಂದಿರದ ಆರೈಕೆಗೆ ಒಪ್ಪಿಸಲಾಗಿದೆ. ಹುಣ್ಣಿಮೆ ದಿನವಾದ ಶನಿವಾರ ಮಗುವನ್ನು ಬಲಿ ನೀಡಲು ಯೋಜನೆ ರೂಪಿಸಲಾಗಿತ್ತು ಎಂಬುದು ಮೇಲ್ನೋಟದ ಪರಿಶೀಲನೆಯಲ್ಲಿ ಕಂಡುಬಂದಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಮುಂಜಾನೆ ಮಕ್ಕಳ ಸಹಾಯವಾಣಿಗೆ ಸಾರ್ವಜನಿಕರಿಂದ ಮಾಹಿತಿ ಬಂದ ಬಳಿಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಶಿವಮ್ಮ, ಮಕ್ಕಳ ರಕ್ಷಣಾಧಿಕಾರಿ…

ಮುಂದೆ ಓದಿ..
ಸುದ್ದಿ 

ಪೊಲೀಸರಿಗೆ ಶಹಬ್ಬಾಶ್‌ಗಿರಿ: ಹೊಸ ವರ್ಷ ಭದ್ರತೆಗೆ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅಭಿನಂದನೆ

Taluknewsmedia.com

Taluknewsmedia.comಪೊಲೀಸರಿಗೆ ಶಹಬ್ಬಾಶ್‌ಗಿರಿ: ಹೊಸ ವರ್ಷ ಭದ್ರತೆಗೆ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅಭಿನಂದನೆ ನಗರದಲ್ಲಿ 2026ರ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಬಿಗಿ ಪೊಲೀಸ್ ಭದ್ರತೆ, ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಹಾಗೂ ಫೇಸ್ ರಿಕಗ್ನಿಷನ್ ಕ್ಯಾಮರಾಗಳ ಪರಿಣಾಮ ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿಯುತವಾಗಿ ಹೊಸ ವರ್ಷ ಆಚರಣೆ ನಡೆದಿರುವುದು ಸಂತಸಕರ ಸಂಗತಿ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಎಂ.ಜಿ. ರಸ್ತೆ, ಚರ್ಚ್ ಸ್ಟ್ರೀಟ್, ಓಬೆರಾಯ್ ಜಂಕ್ಷನ್, ಇಂದಿರಾನಗರ, ಎಲೆಕ್ಟ್ರಾನಿಕ್ಸ್ ಸಿಟಿ, ಕೋರಮಂಗಲ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಭಾರೀ ಜನಸಂದಣಿ ಕಂಡುಬಂದಿತ್ತು. ಈ ಜನಸಂದಣಿಯನ್ನು ನಿಯಂತ್ರಿಸುವುದು, ಪರಿಸ್ಥಿತಿಯನ್ನು ನಿಖರವಾಗಿ ಅವಲೋಕಿಸುವುದು ಹಾಗೂ ಸಂಭವನೀಯ ಅಹಿತಕರ ಘಟನೆಗಳನ್ನು ಮುಂಚಿತವಾಗಿ ತಡೆಯುವ ಉದ್ದೇಶದಿಂದ ಎವಿರೋಸ್ ಎಐ ಪ್ಲಾಟ್‌ಫಾರ್ಮ್, ವಿಸನ್ ಎಐ ಅಪ್ಲಿಕೇಶನ್ ಹಾಗೂ ಬೆಂಗಳೂರು ಸೇಫ್ ಸಿಟಿ ವ್ಯವಸ್ಥೆಯ ಮೂಲಕ ವ್ಯಾಪಕ…

ಮುಂದೆ ಓದಿ..
ಸುದ್ದಿ 

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಬೆಚ್ಚಿಬೀಳಿಸುವ ದೃಶ್ಯಗಳು ಬಹಿರಂಗ :

Taluknewsmedia.com

Taluknewsmedia.comಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಬೆಚ್ಚಿಬೀಳಿಸುವ ದೃಶ್ಯಗಳು ಬಹಿರಂಗ : ಕೈದಿಗಳು ಧೂಮಪಾನ, ಮದ್ಯಪಾನ, ಜೂಜಿನಲ್ಲಿ ತೊಡಗಿರುವ ವೀಡಿಯೋ ವೈರಲ್.. ಕಲಬುರಗಿ: ಕರ್ನಾಟಕದ ಕಲಬುರಗಿ ಕೇಂದ್ರ ಕಾರಾಗೃಹದೊಳಗೆ ಕೈದಿಗಳು ಧೂಮಪಾನ ಮಾಡುತ್ತಾ, ಮದ್ಯಪಾನ ಮಾಡುತ್ತಾ ಹಾಗೂ ಗುಂಪಾಗಿ ಜೂಜಿನಲ್ಲಿ ತೊಡಗಿರುವ ದೃಶ್ಯಗಳು ವೈರಲ್ ಆಗಿದ್ದು, ಹೈ-ಸೆಕ್ಯುರಿಟಿ ಜೈಲಿನ ಕಾರ್ಯವೈಖರಿಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ವೈರಲ್ ಆದ ವೀಡಿಯೋಗಳಲ್ಲಿ ಕೈದಿಗಳು ದುಬಾರಿ ಸಿಗರೇಟ್‌ಗಳನ್ನು ಸೇವಿಸುತ್ತಿರುವುದು, ಪಾನೀಯಗಳನ್ನು ಕುಡಿಯುತ್ತಿರುವುದು ಮತ್ತು ಪತ್ರಿಕೆಯ ಮೇಲೆ ಜೂಜಾಡುತ್ತಿರುವುದು ಕಂಡುಬಂದಿದೆ. ಇದರಿಂದ ಕಾರಾಗೃಹದೊಳಗೆ ನಿಷೇಧಿತ ವಸ್ತುಗಳು ಹೇಗೆ ಪ್ರವೇಶಿಸುತ್ತಿವೆ ಎಂಬ ಕುರಿತು ಶಂಕೆಗಳು ವ್ಯಕ್ತವಾಗಿವೆ. ಇಂತಹ ‘ಹೈ-ಪ್ರೊಫೈಲ್’ ಜೀವನಶೈಲಿ ಕೈದಿಗಳಿಗೆ ರೂಢಿಯಾಗಿರುವುದನ್ನು ಈ ದೃಶ್ಯಗಳು ಸೂಚಿಸುತ್ತಿವೆ.ಈ ಪ್ರಕರಣದ ಹಿನ್ನೆಲೆಯಲ್ಲಿ ಕಲಬುರಗಿ ಕೇಂದ್ರ ಜೈಲಿನ ನಾಲ್ವರು ಕೈದಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳಲ್ಲಿ ಆಕಾಶ್ ರಾಕೇಶ್, ಪ್ರಜ್ವಲ್ ಸೇರಿದಂತೆ ಇನ್ನೊಬ್ಬ ಕೈದಿ ಸೇರಿದ್ದಾರೆ. ಜೈಲು ಅಧೀಕ್ಷಕಿ…

ಮುಂದೆ ಓದಿ..
ಸುದ್ದಿ 

ಬಳ್ಳಾರಿಯಲ್ಲಿ ಬ್ಯಾನರ್ ಅಳವಡಿಕೆ ವಿಚಾರವಾಗಿ ಹಿಂಸಾಚಾರ:…

Taluknewsmedia.com

Taluknewsmedia.comಬಳ್ಳಾರಿಯಲ್ಲಿ ಬ್ಯಾನರ್ ಅಳವಡಿಕೆ ವಿಚಾರವಾಗಿ ಹಿಂಸಾಚಾರ:… ಬಳ್ಳಾರಿ ಎಸ್ಪಿ ಪವನ ನೆಜ್ಜೂರ್ ಅಮಾನತುಬಳ್ಳಾರಿ ನಗರದಲ್ಲಿ ಪ್ರತಿಮೆ ಅನಾವರಣ ಕಾರ್ಯಕ್ರಮದ ಮುನ್ನ ಬ್ಯಾನರ್ ಅಳವಡಿಕೆ ವಿಚಾರವಾಗಿ ನಡೆದ ಭೀಕರ ಹಿಂಸಾಚಾರದ ಹಿನ್ನೆಲೆಯಲ್ಲಿ, ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಪವನ ನೆಜ್ಜೂರ್ ಅವರನ್ನು ತಕ್ಷಣದಿಂದಲೇ ಅಮಾನತುಗೊಳಿಸಿ ತನಿಖೆ ನಡೆಸಲು ರಾಜ್ಯ ಸರ್ಕಾರ ಆದೇಶಿಸಿದೆ. ಗುರುವಾರ ಸಂಜೆ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಅವರ ಬೆಂಬಲಿಗರ ನಡುವೆ ನಡೆದ ಘರ್ಷಣೆಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಈ ಘಟನೆಗೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನಿಖೆಗೆ ಆದೇಶಿಸಿದ್ದಾರೆ. ಪವನ ನೆಜ್ಜೂರ್ ಅವರು ಜನವರಿ 1ರಂದು ಮಾತ್ರ ಬಳ್ಳಾರಿ ಜಿಲ್ಲಾ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಸರ್ಕಾರದ ಆದೇಶದ ಪ್ರಕಾರ, ಬಳ್ಳಾರಿಯ ಎಸ್ಪಿ ಸರ್ಕಲ್‌ನಲ್ಲಿ ವಾಲ್ಮೀಕಿ ಮಹರ್ಷಿ ಪ್ರತಿಮೆ ಅನಾವರಣ ಕಾರ್ಯಕ್ರಮದ ಹಿನ್ನೆಲೆಯಲ್ಲೇ ಗಲಾಟೆ ಉಂಟಾಗಿ ಕಲ್ಲು…

ಮುಂದೆ ಓದಿ..
ಸುದ್ದಿ 

ಉನ್ನಾವೋ ಅತ್ಯಾಚಾರ ಪ್ರಕರಣ : ಆನ್‌ಲೈನ್ ಅಪಪ್ರಚಾರದ ನಡುವೆಯೇ ಸಾರ್ವಜನಿಕ ಬೆಂಬಲಕ್ಕೆ ಸಂತ್ರಸ್ತೆಯ ಮನವಿ..

Taluknewsmedia.com

Taluknewsmedia.comಉನ್ನಾವೋ ಅತ್ಯಾಚಾರ ಪ್ರಕರಣ : ಆನ್‌ಲೈನ್ ಅಪಪ್ರಚಾರದ ನಡುವೆಯೇ ಸಾರ್ವಜನಿಕ ಬೆಂಬಲಕ್ಕೆ ಸಂತ್ರಸ್ತೆಯ ಮನವಿ.. ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ, ಶಿಕ್ಷಿತ ಮಾಜಿ ಬಿಜೆಪಿ ಶಾಸಕ ಕುಲದೀಪ್ ಸೇಂಗರ್ ಅವರ ಬೆಂಬಲಿಗರಿಂದ ತನ್ನ ವಿರುದ್ಧ ಹಾಗೂ ತನ್ನ ಪತಿಯ ವಿರುದ್ಧ ಸಂಯೋಜಿತ ಆನ್‌ಲೈನ್ ಅಪಪ್ರಚಾರ ನಡೆಯುತ್ತಿದೆ ಎಂದು ಆರೋಪಿಸಿ, ಸಾರ್ವಜನಿಕರಿಂದ ವ್ಯಾಪಕ ಬೆಂಬಲ ಕೋರಿದ್ದಾರೆ. ದೆಹಲಿ ಹೈಕೋರ್ಟ್ ಕುಲದೀಪ್ ಸೇಂಗರ್ ಅವರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಅಮಾನತುಗೊಳಿಸಿದ ಬಳಿಕ ಈ ವಿವಾದ ಮತ್ತೆ ಭಾರೀ ಚರ್ಚೆಗೆ ಬಂದಿತ್ತು. ಹೈಕೋರ್ಟ್ ಅವರು ಈಗಾಗಲೇ ಏಳು ವರ್ಷ ಐದು ತಿಂಗಳು ಜೈಲುಶಿಕ್ಷೆ ಅನುಭವಿಸಿದ್ದಾರೆ ಎಂಬ ಆಧಾರದಲ್ಲಿ ಶಿಕ್ಷೆ ಅಮಾನತುಗೊಳಿಸಿತ್ತು. ಆದರೆ ಈ ಆದೇಶದ ವಿರುದ್ಧ ಸಿಬಿಐ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು, ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದೆ ಎಂದು ಪಿಟಿಐ ವರದಿ ಮಾಡಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ…

ಮುಂದೆ ಓದಿ..
ಸುದ್ದಿ 

ಭಾರತದಲ್ಲಿ 10 ನಿಮಿಷಗಳಲ್ಲೇ ಮನೆಬಾಗಿಲಿಗೆ ಡೆಲಿವರಿ ಸಾಧ್ಯ. ಆದರೆ ಅನೇಕ ಡೆಲಿವರಿ ಕಾರ್ಮಿಕರು ಬೇಸತ್ತಿದ್ದಾರೆ…

Taluknewsmedia.com

Taluknewsmedia.comಭಾರತದಲ್ಲಿ 10 ನಿಮಿಷಗಳಲ್ಲೇ ಮನೆಬಾಗಿಲಿಗೆ ಡೆಲಿವರಿ ಸಾಧ್ಯ. ಆದರೆ ಅನೇಕ ಡೆಲಿವರಿ ಕಾರ್ಮಿಕರು ಬೇಸತ್ತಿದ್ದಾರೆ… ಭಾರತದಲ್ಲಿ ಆ್ಯಪ್ ಆಧಾರಿತ ಡೆಲಿವರಿ ಕೆಲಸಗಾರರಾದ ದಶಲಕ್ಷಾಂತರ ಮಂದಿ ಹೊಸ ವರ್ಷದ ಸಂಧರ್ಭದಲ್ಲಿ ಮುಷ್ಕರಕ್ಕೆ ಇಳಿದರು. 10 ನಿಮಿಷಗಳೊಳಗೆ ವಸ್ತುಗಳನ್ನು ತಲುಪಿಸಬೇಕೆಂಬ ನಿರಂತರ ಒತ್ತಡ, ಕಡಿಮೆ ಸಂಬಳ, ಭದ್ರತೆ ಇಲ್ಲದ ಕೆಲಸದ ಪರಿಸ್ಥಿತಿ ವಿರುದ್ಧ ಅವರು ಪ್ರತಿಭಟನೆ ನಡೆಸಿದರು. ಕಾರ್ಮಿಕರು “ನ್ಯಾಯಸಮ್ಮತ ವೇತನ, ಗೌರವ ಮತ್ತು ಸುರಕ್ಷತೆ”ಗಾಗಿ ಆಗ್ರಹಿಸಿದ್ದಾರೆ. ಸುಮಾರು 3 ಕಿಲೋಮೀಟರ್ ವ್ಯಾಪ್ತಿಯೊಳಗೆ 10 ನಿಮಿಷಗಳಲ್ಲಿ ಸರಕು ತಲುಪಿಸುವ ಭರವಸೆಯನ್ನು ತಕ್ಷಣ ನಿಷೇಧಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಟ್ರಾಫಿಕ್ ತುಂಬಿರುವ ಭಾರತೀಯ ನಗರಗಳಲ್ಲಿ ಇದು ಬಹಳ ಕಷ್ಟಕರವಾದ ಕಾರ್ಯವೆಂದು ಕಾರ್ಮಿಕರು ಹೇಳಿದ್ದಾರೆ. ಡೆಲಿವರಿ ತಡವಾದರೆ ಸ್ವಯಂಚಾಲಿತ ತಂತ್ರಾಂಶಗಳ ಮೂಲಕ ದಂಡ ವಿಧಿಸುವುದು, ರೇಟಿಂಗ್ ಕಡಿಮೆ ಮಾಡುವುದು ಕೂಡ ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ. ಜೊತೆಗೆ ಆರೋಗ್ಯ ವಿಮೆ, ಪಿಂಚಣಿ ಸೇರಿದಂತೆ ಸಮಗ್ರ ಸಾಮಾಜಿಕ…

ಮುಂದೆ ಓದಿ..
ಅಂಕಣ ಸುದ್ದಿ 

ಅತ್ಯಾಚಾರ–POCSO ಪ್ರಕರಣಗಳು ಹೆಚ್ಚಿದರೂ, ದಂಡನೆ ಪ್ರಮಾಣ ಅತಿ ಕಡಿಮೆ..

Taluknewsmedia.com

Taluknewsmedia.comಅತ್ಯಾಚಾರ–POCSO ಪ್ರಕರಣಗಳು ಹೆಚ್ಚಿದರೂ, ದಂಡನೆ ಪ್ರಮಾಣ ಅತಿ ಕಡಿಮೆ.. 2011–2025 ರ ಪೊಲೀಸ್ ಅಂಕಿ-ಅಂಶಗಳು ಬಹಿರಂಗ.. ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಕಳೆದ 14 ವರ್ಷಗಳಲ್ಲಿ ಅತ್ಯಾಚಾರ ಮತ್ತು ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ (POCSO) ಪ್ರಕರಣಗಳ ಸಂಖ್ಯೆ ನಿರಂತರವಾಗಿ ಹೆಚ್ಚಾಗಿದ್ದರೂ, ದೋಷಾರೋಪಣೆ ಹಾಗೂ ಶಿಕ್ಷೆ ಪ್ರಮಾಣ ಅತ್ಯಂತ ಕಡಿಮೆಯಾಗಿದೆ ಎಂಬುದು ಗಂಭೀರ ಚಿಂತೆಗೆ ಕಾರಣವಾಗಿದೆ. 2011ರಲ್ಲಿ 122 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದರೆ, ಕೇವಲ 14 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ಆಗಿದೆ. 2013 ರಲ್ಲಿಯೂ ಇದೇ ಸ್ಥಿತಿ ಮುಂದುವರಿದು 74 ಪ್ರಕರಣಗಳಿಗೆ ಕೇವಲ 2 ದಂಡನೆಗಳು ಮಾತ್ರ ದಾಖಲಾಗಿವೆ. 2014 ರಿಂದ POCSO ಪ್ರಕರಣಗಳು ತೀವ್ರ ಏರಿಕೆಯಾಗಿದ್ದು, 329 ಪ್ರಕರಣಗಳಲ್ಲಿ 51 ದಂಡನೆಗಳು ಮಾತ್ರ ನಡೆದಿವೆ. 2017 ರಿಂದ 2022 ರವರೆಗೆ ಅತ್ಯಾಚಾರ ಪ್ರಕರಣಗಳ ಸಂಖ್ಯೆ 100–150ರ ನಡುವೆಯೇ ಇರುವುದು ಕಂಡುಬಂದರೂ, ವರ್ಷಕ್ಕೆ 0ರಿಂದ…

ಮುಂದೆ ಓದಿ..
ಸಿನೆಮಾ ಸುದ್ದಿ 

ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ‘ಉಶ್’ ಸದ್ದು: ಶರಣ್ ಧನಿಯಲ್ಲಿ ಮೂಡಿಬಂದಿದೆ ಕಿಕ್ಕೇರಿಸುವ ‘ವಾಣಿ ವೈನ್ಸ್’ ಹಾಡು!

Taluknewsmedia.com

Taluknewsmedia.comಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ‘ಉಶ್’ ಸದ್ದು: ಶರಣ್ ಧನಿಯಲ್ಲಿ ಮೂಡಿಬಂದಿದೆ ಕಿಕ್ಕೇರಿಸುವ ‘ವಾಣಿ ವೈನ್ಸ್’ ಹಾಡು! ಕನ್ನಡ ಚಿತ್ರರಂಗದ ಇತಿಹಾಸವನ್ನು ಗಮನಿಸಿದರೆ, ಕೆಲವು ಶೀರ್ಷಿಕೆಗಳು ಕೇವಲ ಹೆಸರಾಗಿ ಉಳಿಯದೆ ಒಂದು ಸಂಚಲನವನ್ನೇ ಸೃಷ್ಟಿಸಿರುತ್ತವೆ. ಅಂತಹ ಪಟ್ಟಿಯಲ್ಲಿ ‘ಉಶ್’ (Ush) ಎಂಬ ಹೆಸರಿಗೆ ಅಗ್ರಸ್ಥಾನವಿದೆ. ತೊಂಬತ್ತರ ದಶಕದಲ್ಲಿ ಉಪೇಂದ್ರ ಅವರ ಸೃಜನಶೀಲತೆಯಿಂದ ಹುಟ್ಟಿಕೊಂಡ ಈ ಶೀರ್ಷಿಕೆ ಇಂದು ಹೊಸಬರ ತಂಡವೊಂದಕ್ಕೆ ಸ್ಫೂರ್ತಿಯಾಗಿದೆ. ಗಾಂಧಿನಗರದ ಗಲ್ಲಿಗಳಲ್ಲಿ ಈಗ ಮತ್ತೆ ‘ಉಶ್’ ಸದ್ದು ಕೇಳಿಬರುತ್ತಿದೆ. ಹೊಸ ಪ್ರತಿಭೆಗಳ ಸೃಜನಾತ್ಮಕ ಹಸಿವು ಮತ್ತು ಹಿರಿಯ ತಂತ್ರಜ್ಞರ ಮಾರ್ಗದರ್ಶನದಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರ, ತನ್ನ ಆಕರ್ಷಕ ಹಾಡುಗಳ ಮೂಲಕ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ‘ಉಶ್’ (Ush): ಹೆಸರಿನಲ್ಲಿರುವ ಜವಾಬ್ದಾರಿ ಮತ್ತು ಮ್ಯಾಜಿಕ್…. ಕನ್ನಡಿಗರಿಗೆ ‘ಉಶ್’ ಎನ್ನುವ ಶಬ್ದ ಅತ್ಯಂತ ಪರಿಚಿತ ಹಾಗೂ ಹತ್ತಿರವಾದದ್ದು. ಇಂತಹ ಒಂದು ಐತಿಹಾಸಿಕ ತೂಕವಿರುವ ಶೀರ್ಷಿಕೆಯನ್ನು ತನ್ನ ಚಿತ್ರಕ್ಕೆ ಬಳಸಿಕೊಳ್ಳುವುದು…

ಮುಂದೆ ಓದಿ..
ಸುದ್ದಿ 

ಮುಳಬಾಗಿಲು: ’ಯಾವುದೇ ಜಾತಿ, ಧರ್ಮ ಭೇದಭಾವವಿಲ್ಲದೇ ಅತ್ಯಂತ ಕಡು ಬಡತನದ ಹಿನ್ನಲೆ ಹೊಂದಿರುವ ಮಕ್ಕಳನ್ನು ಗುರುತಿಸಿ ಗ್ರಾಮ ಭಾರತಿ ಟ್ರಸ್ಟ್ ವತಿಯಿಂದ ಉಚಿತ ಲ್ಯಾಪ್‌ಟಾಪ್ ವಿತರಿಸಲಾಗುತ್ತಿದೆ’

Taluknewsmedia.com

Taluknewsmedia.comಮುಳಬಾಗಿಲು: ’ಯಾವುದೇ ಜಾತಿ, ಧರ್ಮ ಭೇದಭಾವವಿಲ್ಲದೇ ಅತ್ಯಂತ ಕಡು ಬಡತನದ ಹಿನ್ನಲೆ ಹೊಂದಿರುವ ಮಕ್ಕಳನ್ನು ಗುರುತಿಸಿ ಗ್ರಾಮ ಭಾರತಿ ಟ್ರಸ್ಟ್ ವತಿಯಿಂದ ಉಚಿತ ಲ್ಯಾಪ್‌ಟಾಪ್ ವಿತರಿಸಲಾಗುತ್ತಿದೆ’ ಎಂದು ಕೆ ಎಂ ಎಫ಼್ ನಿರ್ದೇಶಕರು ಬಿ ವಿ ಸಾಮೆಗೌಡ ಹೇಳಿದರು. ಮುಳಬಾಗಿಲು ತಾಲೂಕಿನಲ್ಲಿ ಇದುವರಿಗೆ 5 ಲ್ಯಾಪ್ ಟಾಪ್ 10 ಟ್ಯಾಬ್ ಮತ್ತು ಕಂಪ್ಯೂಟರ್ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ವಿತರಿಸಿ ಅವರು ಮಾತನಾಡಿದರು. ಶೈಕ್ಷಣಿಕವಾಗಿ ಮುನ್ನಡೆ ಸಾಧಿಸಲು ಲ್ಯಾಪ್‌ಟಾಪ್‌ನಂತಹ ಪರಿಕರಗಳು ಅವಶ್ಯಕವಾಗಿವೆ. ಸಮಾಜದಲ್ಲಿ ಎತ್ತರಕ್ಕೆ ಬೆಳೆಯಬೇಕು ಎಂಬ ಉದ್ದೇಶದೊಂದಿಗೆ ಗ್ರಾಮ ಭಾರತಿ ಟ್ರಸ್ಟ್ ಅಧ್ಯಕ್ಷ ಎಂ ಬಿ ಕೃಷ್ಣಮೂರ್ತಿ ಯುವ ಉದ್ಯಮಿ ಸಿದ್ದಗಟ್ಟ ರಮೇಶ್ ರವರ ಮನವಿಗೆ ಸ್ಪಂದಿಸಿ ಮಕ್ಕಳಿಗೆ ಲ್ಯಾಪ್‌ಟಾಪ್ ವಿತರಿಸಲಾಗಿದೆ’ ಎಂದು ಹೇಳಿದರು. 2021ರಲ್ಲಿ ಆರಂಭಗೊಂಡ ಉಚಿತ ಲ್ಯಾಪ್‌ಟಾಪ್ ವಿತರಣೆ ಕಾರ್ಯ ಇಲ್ಲಿಯವರೆಗೆ ಬಂದಿದೆ. ಒಟ್ಟು ಒಂದು ಸಾವಿರ ಮಕ್ಕಳಿಗೆ ಲ್ಯಾಪ್‌ಟಾಪ್ ವಿತರಿಸುವ ಗುರಿ ಇದೆ.…

ಮುಂದೆ ಓದಿ..
ಸುದ್ದಿ 

ನಾಗಮಂಗಲಿಗರು ಶುದ್ಧ ಕನ್ನಡ ಮಾತನಾಡುವ ಜನ : ವ.ನಂ.ಶಿವರಾಮು

Taluknewsmedia.com

Taluknewsmedia.comನಾಗಮಂಗಲಿಗರು ಶುದ್ಧ ಕನ್ನಡ ಮಾತನಾಡುವ ಜನ : ವ.ನಂ.ಶಿವರಾಮು ನಾಗಮಂಗಲ : ಪ್ರಪಂಚದಲ್ಲಿ ಎಲ್ಲಾದರು ಕನ್ನಡ ಕೇಳಿದರೆ ಅದು ನಾಗಮಂಗಲದ ಜನರ ಧ್ವನಿ. ಶುದ್ಧ ಕನ್ನಡ ನಾಗಮಂಗಲ ಜನರಿಂದ ಮಾತ್ರ ಸಾಧ್ಯ ಎಂದು ಮೈಸೂರು ಇಪ್ರೊ ಜಾನಪದ ಮಹಾ ವಿದ್ಯಾಲಯದ ಶೈಕ್ಷಣಿಕ ನಿರ್ದೇಶಕ ಪ್ರೊ.ವ.ನಂ.ಶಿವರಾಮು ಅಭಿಪ್ರಾಯ ಪಟ್ಟರು. ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಾಲಯದ ಆವರಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ೭೦ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದಿನದ ಮಹತ್ವ ಕುರಿತು ಪ್ರಧಾನ ಉಪನ್ಯಾಸ ನೀಡಿ ಮಾತನಾಡಿದರು. ಕನ್ನಡ ಭಾಷೆ ಒಂದು ಸಂಸ್ಕೃತಿ. ಕನ್ನಡತನದ ಸೊಗಡು ಸಮಾಜದಲ್ಲಿ ಆವರಿಸಿದ್ದಾಗ ಸಂಬಂಧಗಳಲ್ಲಿ ಗಟ್ಟಿತನ ಇತ್ತು. ಆಂಟಿ ಅಂಕಲ್ ಸಂಸ್ಕೃತಿ ಬಂದಮೇಲೆ ಕನ್ನಡ ಸೊರಗಿ ಅನೈತಿಕ ಸಂಬಂಧ ಅನಾಚಾರ ಅತ್ಯಾಚಾರ ಹೆಚ್ಚಾಗಲು ಕಾರಣವಾಯಿತು ಎಂದು ಬೇಸರ ವ್ಯಕ್ತಪಡಿಸಿದರು. ಮಹಿಳೆಯರು ಮನಸ್ಸು ಮಾಡಿದರೆ ಮನೆ ಪೂರಾ ಕನ್ನಡವಾಗುತ್ತದೆ, ಕನ್ನಡ ಉಳಿಯುತ್ತದೆ. ಕನ್ನಡ…

ಮುಂದೆ ಓದಿ..