ಸುದ್ದಿ 

ಹಾನಗಲ್ ತಾಲೂಕಿನ ಇನಾಂ ನಿರಲಗಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ವ್ಯಕ್ತಿ ದುರ್ಮರಣ

Taluknewsmedia.com

Taluknewsmedia.com ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಇನಾಂ ನಿರಲಗಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಹೊಲದಲ್ಲಿ ವಿದ್ಯುತ್ ತಂತಿ ತಗುಲಿ ದುರ್ಮರಣವಾಗಿದೆದಿನಾಂಕ:27/08/2025 ರಂದು ಮುಂಜಾನೆ: 04-30 ಗಂಟೆಯಿಂದ ಮುಂಜಾನೆ: 06-00 ಗಂಟೆಯ ನಡುವಿನ ಅವಧಿಯಲ್ಲಿ ಇನಾಂ ನೀರಲಗಿ ಗ್ರಾಮದ ಪ್ರಭು ಚನ್ನಪ್ಪ ಹಾವೇರಿ ಹಾಗು ಅಭಿ ಫಕ್ಕೀರಪ್ಪ ಶಿಗ್ಗಾಂವಿ ಇವರು ಸಾ” ಇನಾಂ ನಿರಲಗಿ ಇವರ ಜಮೀನಿಗೆ ಮೃತ ಅಣ್ಣಪ್ಪ ಕ್ಯಾಸನೂರ ಮತ್ತು ಗಾಯಾಳು ಮಂಜುನಾಥ ಸಿದ್ದಮ್ಮನವರ ಸಾ:ಇನಾಂನೀಲರಲಗಿ ತಾ:ಹಾನಗಲ್ಲ ಇವರು ಇಬ್ಬರು ಬೆಳಗಿನಜಾವ ಗಣಪತಿ ಮಂಟಪಕ್ಕೆ ಅಲಂಕಾರ ಮಾಡಲು ಮಾವಿನ ತೋರಣ ಮತ್ತು ಗೋವಿನ ಜೋಳದ ತೆನೆ, ಬಾಳೆ ದಿಂಡನ್ನು ತರಲು ಜಮೀನಿಗೆ ಹೋಗಿದ್ದು ಆರೋಪಿತರಾದ ಪ್ರಭು ಹಾವೇರಿ ಮತ್ತು ಅಭಿ ಶಿಗ್ಗಾಂವ ಇವರ ಕೂಡಿಕೊಂಡು ತಮ್ಮ ಜಮೀನಿನಲ್ಲಿ ವಿದ್ಯುತ್ ತಂತಿಯನ್ನು ಏಳೆದರೆ ಜೀವಹಾನಿ ಸಂಬವಿಸುತ್ತದೆ ಅಂತಾ ಗೊತ್ತಿದ್ದರೂ ಕೂಡಾ ತಮ್ಮ ಗೋವಿನ ಜೋಳ ಜಮೀನಿನಲ್ಲಿ ಇರುವ ಜೋಡು…

ಮುಂದೆ ಓದಿ..
ಸುದ್ದಿ 

ತಾಲೂಕಿನ ಆಡುರನಲ್ಲಿ ಬೈಕ್ ಕಳ್ಳತನ

Taluknewsmedia.com

Taluknewsmedia.com ತಾಲೂಕಿನ ಆಡುರನಲ್ಲಿ ಬೈಕ್ ಕಳ್ಳತನಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ಮತ್ತೆ ಹೆಚ್ಚಾದ ಬೈಕ್ ಕಳ್ಳರ ಹಾವಳಿದಿನಾಂಕ 17/08/2025ರಂದು ಹಾನಗಲ್ ನಗರದ ಪ್ರಕಾಶ ರಾಮಪ್ಪ ಬಾಗಾಸುರ ಇವರ ಮನೆಯ ಮುಂದೆ ನಿಲ್ಲಿಸಿದ್ದ ತಮ್ಮ ಕಪ್ಪು ಮತ್ತು ಸಿಲ್ವರ ಬಣ್ಣದ ಹೀರೊ ಸ್ಪೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂಬರ ಕೆಎ-27/ಇ-6370 ಚೆಸ್ಸಿ ನಂ: MBLHAW127NHB00871, ಇಂಜಿನ್ ನಂ: HA11EYNHB00319 ಅಂದಾಜು 40,000/- ರೂ ಬೆಲೆಯದ್ದು ಹಾಗೂ ಮತ್ತೊಬ್ಬ ಮಹಾಂತೇಶ್ ತಂದೆ ಬಸವಣ್ಣಪ್ಪ ಮಾದಿಗಮಿನ ಇವರ ನೀಲಿ ಮತ್ತು ಪರ್ಪಲ್ ಬಣ್ಣದ ಹೀರೋ ಸ್ಪೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂಬರ ಕೆಎ-53/ಇಸಿ-5298 ಚೆಸ್ಸಿ ನಂ: MBLHA10AMDHF14141, ಇಂಜಿನ್ ನಂ: HA10EJDHF23408 ಅಂದಾಜು 40,000/- ರೂ ಬೆಲೆಯವು ದಿನಾಂಕ: 17-08-2025 ರಂದು ರಾತ್ರಿ 11-00 ಘಂಟೆಯಿಂದ ದಿನಾಂಕ: 18-08-2025 ರಂದು ಬೆಳಿಗ್ಗೆ 07-00 ಘಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ…

ಮುಂದೆ ಓದಿ..
ಸುದ್ದಿ 

ಸವಣೂರಿನಲ್ಲಿ ಹೆಚ್ಚಿದ ಜೂಜಾಟ ಅಂದರ್ ಬಾಹರ್

Taluknewsmedia.com

Taluknewsmedia.comಸವಣೂರಿನಲ್ಲಿ ಹೆಚ್ಚಿದ ಜೂಜಾಟ ಅಂದರ್ ಬಾಹರ್ ಸವಣೂರಿನಲ್ಲಿ ಹೆಚ್ಚಿದ ಜೂಜಾಟ ಅಂದರ್ ಬಾಹರ್ ದಿನಾಂಕ: 24-08-2025 ರಂದು 13-00 ಗಂಟೆ ಸುಮಾರಿಗೆ ಸವಣೂರ ಶಹರದ ಕಲಿವಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸುಮಾರು 6-7 ಜನರು ಗುಂಪಾಗಿ ಕುಳಿತುಕೊಂಡು ಇಸ್ಪೆಟ್ ಎಲೆಗಳ ಆಟ ಆಡಿಸಿ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಮತ್ತು ನೀವು ಬಂದು ರೇಡ ಮಾಡಿದರೆ ಸಿಗುತ್ತಾರೆ ಅಂತಾ ಆ ಊರಿನ ಒಬ್ಬ ಗ್ರಾಮಸ್ಥ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ತಕ್ಷಣ ರೇಡ್ ಮಾಡಿದಾಗ ತಪ್ಪಿಸಿಕೊಂಡಿದ್ದಾರೆ ಸದರಿ ವ್ಯಕ್ತಿಗಳ ಮೇಲೆ ಕಲಂ: 87 ಕೆ. ಪಿ. ಯಾಕ್ಟ್ ಅಡಿಯಲ್ಲಿ ಸವಣೂರು ಪೊಲೀಸ ಠಾಣೆಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ: ವರದಿಪ್ರಮೋದ್ ಜನಗೇರಿಹಾನಗಲ್ ತಾಲೂಕ್ ಆಲದಕಟ್ಟಿತಾಲೂಕ್ ನ್ಯೂಸ್ .ಹಾವೇರಿ6360821691https://taluknewsmedia.com/PRAMODJANAGERI.html

ಮುಂದೆ ಓದಿ..
ಸುದ್ದಿ 

ಬೆಂಗಳೂರಿನಲ್ಲಿ ಆಸ್ತಿ ಹಗರಣ – ಸ್ನೇಹಿತನ ವಿಶ್ವಾಸಕ್ಕೆ ಮೋಸ

Taluknewsmedia.com

Taluknewsmedia.comಬೆಂಗಳೂರು:ನಗರದ ಜಾಲಹಳ್ಳಿ ಪ್ರದೇಶದಲ್ಲಿ ಮನೆ ಹೊಂದಿದ್ದ ಮಹಿಳೆ, ಆರ್ಥಿಕ ತೊಂದರೆಯಿಂದ ಸಾಲ ಪಡೆದು ತೀರಿಸಲಾಗದೆ ಸಂಕಷ್ಟಕ್ಕೀಡಾದ ವೇಳೆ, ಸಹಾಯ ಮಾಡುವ ನೆಪದಲ್ಲಿ ಸ್ನೇಹಿತ ಹಾಗೂ ಇತರರು ಸೇರಿ ಲಕ್ಷಾಂತರ ರೂಪಾಯಿಗಳ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಅರುಣ್ ರವರ ಪ್ರಕಾರ, ಅವರು 2018ರಲ್ಲಿ ಶೇಷಾದ್ರಿಪುರಂನ ಎನ್.ಕೆ.ಜಿ.ಎಸ್.ಬಿ ಕೋ-ಆಪರೇಟಿವ್ ಸೊಸೈಟಿ ಬ್ಯಾಂಕ್ನಿಂದ ರೂ.40 ಲಕ್ಷ ಸಾಲ ಪಡೆದಿದ್ದರು. ಆದರೆ ಬಡ್ಡಿ ಸೇರಿ ರೂ.68 ಲಕ್ಷ ತೀರಿಸಲಾಗದೆ ಮನೆಯು ಹರಾಜಿಗೆ ಬಂದಿತ್ತು. ಈ ಸಂದರ್ಭದಲ್ಲಿ ಸ್ನೇಹಿತರ ಮೂಲಕ ಪರಿಚಯವಾದ ಆನಂದ್ ಹೆಚ್.ಆರ್ ಸಹಾಯ ಮಾಡುವುದಾಗಿ ಹೇಳಿ, “ಸ್ವತ್ತು ನನ್ನ ಹೆಸರಿಗೆ ಮಾಡಿಕೊಡಿ” ಎಂದು ನಂಬಿಸಿ, ಅರುಣ್ ರವರಿಂದ ಒಟ್ಟಾರೆ ರೂ.68 ಲಕ್ಷ ಪಡೆದುಕೊಂಡಿದ್ದಾನೆ. ಆದರೆ, ಆ ಹಣವನ್ನು ಆರೋಪಿಗಳು (ಎ1 ರಿಂದ ಎ6) ತಮ್ಮಲ್ಲಿ ಹಂಚಿಕೊಂಡು, ಅರುಣ್ ರವರಿಗೆ ತಿಳಿವಳಿಕೆ ಇಲ್ಲದೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, 2019ರ ಜುಲೈ…

ಮುಂದೆ ಓದಿ..
ವಿಶೇಷ ಸುದ್ದಿ 

ಗ್ರಾಮೀಣಾಭಿವೃದ್ದಿ ಯೋಜನೆಯ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಅಪರಾಧ ನಡೆದಿರುವುದು, ಮೈಕ್ರೊ ಫೈನಾನ್ಸ್ ನಡೆಸಿರುವ ಆರೋಪಗಳು ವ್ಯಾಪಕವಾಗಿದೆ.

Taluknewsmedia.com

Taluknewsmedia.comಧರ್ಮಸ್ಥಳ ಅಪರಾಧ ಪ್ರಕರಣಗಳ ಕುರಿತಾದ ಹೋರಾಟಗಳ ವಿಷಯದಲ್ಲಿ ತಪ್ಪು ಮಾಹಿತಿ ಹರಡುತ್ತಿರುವ ಸಂದರ್ಭದಲ್ಲಿ .. ಮುಸುಕುದಾರಿ ಚಿನ್ನಯ್ಯ ಕೊಟ್ಟ ದೂರಿನ ಬಳಿಕ ಧರ್ಮಸ್ಥಳ ದೌರ್ಜನ್ಯದ ವಿರುದ್ಧದ ಹೋರಾಟ ಪ್ರಾರಂಭವಾಗಿದ್ದಲ್ಲ. ಧರ್ಮಸ್ಥಳದ ಅಸಹಜ ಸಾವುಗಳು, ಕೊಲೆ, ಅತ್ಯಾಚಾರ, ಭೂ ಅಕ್ರಮ, ಮೈಕ್ರೋ ಫೈನಾನ್ಸ್ ದೌರ್ಜನ್ಯಗಳನ್ನು ತನಿಖೆ ನಡೆಸಲು ನೆಲ ಅಗೆಯಬೇಕಿಲ್ಲ. ಚಿನ್ನಯ್ಯ ಅನಾಮಿಕರಾಗಿ ಬಂದು ದೂರು ನೀಡಿದ ಬಳಿಕ ಅಸಹಜ ಸಾವುಗಳಾದ ಶವಗಳನ್ನು ಹೂತ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಯಿತೇ ವಿನಹ, ಅದು ಹೋರಾಟದ ಪ್ರಾರಂಭವಲ್ಲ. ಚಿನ್ನಯ್ಯರ ದೂರೇ ಹೋರಾಟದ ಮುಖ್ಯವಸ್ತುವಲ್ಲ. ಎಡಪಂಥೀಯ, ದಲಿತ, ಸಮಾನತಾವಾದಿ, ಮಹಿಳಾ ಹೋರಾಟಗಾರರು, ಚಿಂತಕರು ಯಾವತ್ತೂ ಕೂಡಾ ಹೋರಾಟಕ್ಕೆ ಅಪರಿಚಿತವಾಗಿದ್ದ ಚಿನ್ನಯ್ಯ, ಸುಜಾತ ಭಟ್ ರವರ ಹಿಂದೆ ಹೋಗಿದ್ದಿಲ್ಲ. ‘ಅವರ ದೂರಿಗೂ ನ್ಯಾಯ ಒದಗಿಸಿ’ ಎಂಬುದಷ್ಟೇ ನಮ್ಮೆಲ್ಲರ ಹೇಳಿಕೆಯಾಗಿತ್ತು. ಹಾಗಾಗಿ, ಚಿನ್ನಯ್ಯ, ಸುಜಾತ ಭಟ್ ರವರುಗಳು ಯೂಟರ್ನ್ ಹೊಡೆದ್ರು ಎಂಬುದೆಲ್ಲಾ ಸಾವು, ದೌರ್ಜನ್ಯ,…

ಮುಂದೆ ಓದಿ..
ಸುದ್ದಿ 

ಎಂ.ಎಸ್ ಪಾಳ್ಯ ಮುಖ್ಯರಸ್ತೆಯಲ್ಲಿ ಗೂಡ್ಸ್ ವಾಹನ ಚಾಲಕನ ಮೇಲೆ ಹಲ್ಲೆ

Taluknewsmedia.com

Taluknewsmedia.comಬೆಂಗಳೂರು 23 ಆಗಸ್ಟ್ 2025ಯಲಹಂಕ ಎಂ.ಎಸ್ ಪಾಳ್ಯ ಮುಖ್ಯರಸ್ತೆಯ ಆಯೇಶಾ ಹೋಟೆಲ್ ಹತ್ತಿರ ಅಮೆಜಾನ್ ಗೂಡ್ಸ್ ವಾಹನದ ಚಾಲಕನ ಮೇಲೆ ಬೈಕ್ ಸವಾರ ಮತ್ತು ಅವನ ಸ್ನೇಹಿತರಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ಪೊಲೀಸರ ಮಾಹಿತಿಯ ಪ್ರಕಾರ, ಸಂಜಯ್ ತನ್ನ ಕುಟುಂಬದೊಂದಿಗೆ ವಾಸವಾಗಿದ್ದು ಟಾಟಾ ವಿನೋ ವಾಹನ (ನಂ. KA 04 S 1990) ಚಾಲನೆ ಮಾಡುತ್ತಾನೆ. ಬೆಳಿಗ್ಗೆ ಸುಮಾರು 8.45ಕ್ಕೆ ಯಲಹಂಕದ ಕಡೆಗೆ ತೆರಳುತ್ತಿದ್ದಾಗ, ಸುಮಾರು 9.10ರ ಸುಮಾರಿಗೆ ಆಯೇಶಾ ಹೋಟೆಲ್ ಹತ್ತಿರ ಕೆಎ 01 ಎಸ್ 7128 ನಂಬರಿನ ಬೈಕ್ ಸವಾರ ಏಕಾಏಕಿ ರಸ್ತೆ ಮಧ್ಯಕ್ಕೆ ಬಂದಿದ್ದಾನೆ. ಸಂಜಯ್ ಅವರು ತಕ್ಷಣ ಬ್ರೇಕ್ ಹಾಕಿ ಹಾರ್ನ್ ಹಾಕಿದ ಹಿನ್ನೆಲೆಯಲ್ಲಿ ಬೈಕ್ ಸವಾರ ಕೋಪಗೊಂಡು ಅವಾಚ್ಯ ಪದಗಳಿಂದ ನಿಂದಿಸಿ, ಶರ್ಟ್ ಕಾಲರ್ ಹಿಡಿದು ಮೂಗಿಗೆ ಹೊಡೆದಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳವಾಗಿ, ಸ್ಥಳಕ್ಕೆ…

ಮುಂದೆ ಓದಿ..
ಸುದ್ದಿ 

ಹೊನ್ನೇನಹಳ್ಳಿ ಮಹಿಳೆಗೆ ಅಂಗಡಿ ಮಾಲೀಕರಿಂದ ಲೈಂಗಿಕ ಕಿರುಕುಳ – ಪ್ರಕರಣ ದಾಖಲೆ

Taluknewsmedia.com

Taluknewsmedia.comಬೆಂಗಳೂರು ಗ್ರಾಮಾಂತರ 23 ಆಗಸ್ಟ್ 2025ಹೊನ್ನೇನಹಳ್ಳಿಯ ಜರ್ ಸೆರಾಮಿಕ್ ಟೈಲ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅಂಗಡಿ ಮಾಲೀಕರಾದ ರವಿ ಅಗರ್ವಾಲ್ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಕವಿತಾ ಅವರ ದೂರಿನ ಪ್ರಕಾರ, ಆರೋಪಿಯು ಹಲವು ತಿಂಗಳುಗಳಿಂದ ಅವಳನ್ನು ಅಂಗಡಿಯ ಕ್ಯಾಬಿನ್‌ಗೆ ಕರೆಯಿಸಿ ಅಸಭ್ಯ ವರ್ತನೆ ಮಾಡುತ್ತಿದ್ದನು. ತನ್ನ XUV ಕಾರಿನಲ್ಲಿ ಕೂರಿಸಿಕೊಂಡು ಮನೆ ಹತ್ತಿರಕ್ಕೆ ಕರೆದುಕೊಂಡು ಹೋಗಿ ಶಾರೀರಿಕ ಕಿರುಕುಳ ನೀಡುತ್ತಿದ್ದನೆಂದು ದೂರಿನಲ್ಲಿ ಹೇಳಲಾಗಿದೆ. “ನಿನ್ನ ಗಂಡ ಬಿಕಾರಿ, ನನ್ನ ಬಳಿ 50–60 ಕೋಟಿ ಇದೆ, ನನಗೆ ಏನೂ ಮಾಡಲು ಯಾರಿಗೂ ಸಾಧ್ಯವಿಲ್ಲ” ಎಂದು ಅವಳಿಗೆ ಬೆದರಿಕೆ ಹಾಕುತ್ತಿದ್ದನೆಂದು ಆರೋಪವಿದೆ. ಇದಲ್ಲದೆ, “ನೀನು ತಿರುಪತಿಗೆ ಬರಬೇಕು, ಇಲ್ಲವಾದರೆ ನಿನ್ನ ಗಂಡ ಮತ್ತು ಮಗುವನ್ನು ಕೊಲೆ ಮಾಡಿಸುತ್ತೇನೆ” ಎಂದು ಬೆದರಿಸಿ ಅವಳನ್ನು ತಿರುಪತಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯಕ್ಕೆ ಪ್ರಯತ್ನಿಸಿದ ಘಟನೆ ದೂರುನಲ್ಲಿದೆ.…

ಮುಂದೆ ಓದಿ..
ಸುದ್ದಿ 

ಎಂ.ಎಸ್ ಪಾಳ್ಯ ಮುಖ್ಯರಸ್ತೆಯಲ್ಲಿ ಗೂಡ್ಸ್ ವಾಹನ ಚಾಲಕನ ಮೇಲೆ ಹಲ್ಲೆ

Taluknewsmedia.com

Taluknewsmedia.comಬೆಂಗಳೂರು 23 ಆಗಸ್ಟ್ 2025ಯಲಹಂಕ ಎಂ.ಎಸ್ ಪಾಳ್ಯ ಮುಖ್ಯರಸ್ತೆಯ ಆಯೇಶಾ ಹೋಟೆಲ್ ಹತ್ತಿರ ಅಮೆಜಾನ್ ಗೂಡ್ಸ್ ವಾಹನದ ಚಾಲಕನ ಮೇಲೆ ಬೈಕ್ ಸವಾರ ಮತ್ತು ಅವನ ಸ್ನೇಹಿತರಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ಪೊಲೀಸರ ಮಾಹಿತಿಯ ಪ್ರಕಾರ, ಸಂಜಯ್ ತನ್ನ ಕುಟುಂಬದೊಂದಿಗೆ ವಾಸವಾಗಿದ್ದು ಟಾಟಾ ವಿನೋ ವಾಹನ (ನಂ. KA 04 S 1990) ಚಾಲನೆ ಮಾಡುತ್ತಾನೆ. ಬೆಳಿಗ್ಗೆ ಸುಮಾರು 8.45ಕ್ಕೆ ಯಲಹಂಕದ ಕಡೆಗೆ ತೆರಳುತ್ತಿದ್ದಾಗ, ಸುಮಾರು 9.10ರ ಸುಮಾರಿಗೆ ಆಯೇಶಾ ಹೋಟೆಲ್ ಹತ್ತಿರ ಕೆಎ 01 ಎಸ್ 7128 ನಂಬರಿನ ಬೈಕ್ ಸವಾರ ಏಕಾಏಕಿ ರಸ್ತೆ ಮಧ್ಯಕ್ಕೆ ಬಂದಿದ್ದಾನೆ. ಸಂಜಯ್ ಅವರು ತಕ್ಷಣ ಬ್ರೇಕ್ ಹಾಕಿ ಹಾರ್ನ್ ಹಾಕಿದ ಹಿನ್ನೆಲೆಯಲ್ಲಿ ಬೈಕ್ ಸವಾರ ಕೋಪಗೊಂಡು ಅವಾಚ್ಯ ಪದಗಳಿಂದ ನಿಂದಿಸಿ, ಶರ್ಟ್ ಕಾಲರ್ ಹಿಡಿದು ಮೂಗಿಗೆ ಹೊಡೆದಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳವಾಗಿ, ಸ್ಥಳಕ್ಕೆ…

ಮುಂದೆ ಓದಿ..
ಸುದ್ದಿ 

ಕೊಡಿಗೆಹಳ್ಳಿ ವೇಶ್ಯಾವಾಟಿಕೆ ದಂಧೆ – ಮಹಿಳಾ ಸಂರಕ್ಷಣಾ ದಳದ ದಾಳಿ

Taluknewsmedia.com

Taluknewsmedia.com ಬೆಂಗಳೂರು:23 ಆಗಸ್ಟ್ 2025ಬೆಂಗಳೂರು ನಗರದ ಕೊಡಿಗೆಹಳ್ಳಿಯಲ್ಲಿ ನಡೆಯುತ್ತಿದ್ದ ಅಕ್ರಮ ವೇಶ್ಯಾವಾಟಿಕೆ ದಂಧೆಯನ್ನು ಪತ್ತೆಹಚ್ಚುವಲ್ಲಿ ಸಿಸಿಬಿ ಮಹಿಳಾ ಸಂರಕ್ಷಣಾ ದಳ ಯಶಸ್ವಿಯಾಗಿದೆ. 2025ರ ಆಗಸ್ಟ್ 22ರಂದು ಸಂಜೆ 5.15ರ ಸುಮಾರಿಗೆ, ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಕೊಡುಗೆಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಪ್ರವೀಣ್ ಪ್ರೈ ಅವರು ನೀಡಿದ ಮಾಹಿತಿಯ ಮೇರೆಗೆ, ಕೊಡಿಗೆಹಳ್ಳಿಯ ವಿದ್ಯಾರಣ್ಯಪುರದಲ್ಲಿರುವ ಮನೆ ಮೇಲೆ ದಾಳಿ ನಡೆಸಲಾಯಿತು. ಪದ್ಮಾ (ಲೇಟ್ ಹೇಮಂತ್ ಕುಮಾರ್), ನಿವಾಸಿ – ನಂ.118, ವಿದ್ಯಾರಣ್ಯಪುರ, ಬೆಂಗಳೂರು, ಅವರು ತಮ್ಮ ಮನೆಯನ್ನು ಬಾಡಿಗೆಗೆ ಪಡೆದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರೆಂದು ಪತ್ತೆಯಾಗಿದೆ. ತನಿಖೆಯ ಪ್ರಕಾರ, ಅವರು ತಮ್ಮ ಮೊಬೈಲ್ ನಂಬರ್ 87929 79435 ಮುಖಾಂತರ ಗಿರಾಕಿಗಳನ್ನು ಸಂಪರ್ಕಿಸಿ, ಹೆಚ್ಚಿನ ಹಣ ಪಡೆದು ಸ್ಥಳೀಯ ಹಾಗೂ ಹೊರರಾಜ್ಯದ ಮಹಿಳೆಯರನ್ನು ಪುಸಲಾಯಿಸಿ, ಅಕ್ರಮ ವೇಶ್ಯಾವಾಟಿಕೆಗೆ ಒದಗಿಸುತ್ತಿದ್ದರು. ಅವರ ವಿರುದ್ಧ ಐಟಿಪಿ ಕಾಯ್ದೆ ಕಲಂ 3, 4, 5 ಹಾಗೂ…

ಮುಂದೆ ಓದಿ..
ಸುದ್ದಿ 

ಬೆಂಗಳೂರಿನ ಸಹಕಾರನಗರದಲ್ಲಿ 34 ವರ್ಷದ ವ್ಯಕ್ತಿ ಕಾಣೆ

Taluknewsmedia.com

Taluknewsmedia.comಬೆಂಗಳೂರು 23 ಆಗಸ್ಟ್ 2025ಸಹಕಾರನಗರದಲ್ಲಿ 34 ವರ್ಷದ ಕೃಪ ಎಂಬ ವ್ಯಕ್ತಿ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಕುಟುಂಬದವರ ಮಾಹಿತಿಯಂತೆ, ಆಗಸ್ಟ್ 19, 2025 ರಂದು ಮಧ್ಯಾಹ್ನ 12 ಗಂಟೆಗೆ ಗಾರೆ ಕೆಲಸಕ್ಕಾಗಿ ಸಹಕಾರನಗರಕ್ಕೆ ತೆರಳಿದ ಕೃಪ ಅವರು ಅಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಆಕಸ್ಮಿಕವಾಗಿ ಕೈ ತಾಗಿದ್ದು, ಆಕೆ 112 ತುರ್ತು ಸೇವೆಗೆ ಕರೆ ಮಾಡಿ ದೂರು ನೀಡಿದರು. ಸ್ಥಳಕ್ಕೆ ಕೊಡಿಗೆಹಳ್ಳಿ ಪೊಲೀಸರು ಬಂದು ವಿಚಾರಣೆ ನಡೆಸುತ್ತಿದ್ದಾಗ ಭಯಗೊಂಡ ಕೃಪ ಓಡಿ ಹೋಗಿದ್ದು, ನಂತರ ಮನೆಗೆ ಮರಳಲಿಲ್ಲ. ಹಲವೆಡೆ ಹುಡುಕಿದರೂ ಅವರ ಪತ್ತೆಯಾಗಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ. ಕೃಪ ಅವರ ಲಕ್ಷಣಗಳು: ದುಂಡು ಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, 5 ಅಡಿ ಎತ್ತರ. ಅವರು ಕನ್ನಡ, ತೆಲುಗು ಹಾಗೂ ತಮಿಳು ಮಾತನಾಡಲು ಬಲ್ಲವರು. ಕಾಣೆಯಾಗುವ ವೇಳೆ ಪರ್ಪಲ್ ಬಣ್ಣದ ಶರ್ಟ್ ಮತ್ತು ಗ್ರೇ ಬಣ್ಣದ…

ಮುಂದೆ ಓದಿ..