ಸುದ್ದಿ 

ಯಮಹಾ ಬೈಕ್ ಕಳ್ಳತನ: ಕೇರಳಕ್ಕೆ ಹೋದ ಮಾಲೀಕ ವಾಪಸ್ಸು ಬಂದಾಗ ವಾಹನ ಕಾಣೆಯಾದ ಪ್ರಕರಣ

Taluknewsmedia.com

Taluknewsmedia.comಬೆಂಗಳೂರು:22 ಆಗಸ್ಟ್ 2025ಯಲಹಂಕ ಕಟ್ಟಿಗೆನಹಳ್ಳಿ ಎಲ್ಲಿ ಮತ್ತೊಂದು ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ವರದಿಯಾಗಿದೆ. ಅರುಣ್ ಸಿ ಅವರು ನೀಡಿದ ಮಾಹಿತಿಯ ಪ್ರಕಾರ, ಅವರು ತಮ್ಮ Yamaha FZS ಬೈಕ್‌ (ನಂಬರ KA51-C-89295) ಅನ್ನು ಮನೆಯ ಬಳಿ ನಿಲ್ಲಿಸಿ, 01/07/2025 ರಂದು ತಮ್ಮ ಸ್ವಂತ ಊರಾದ ಕೇರಳಕ್ಕೆ ತೆರಳಿದ್ದರು. 21/08/2025 ಬೆಳಿಗ್ಗೆ 9.00 ಗಂಟೆಗೆ ವಾಪಸ್ಸು ಬಂದಾಗ ಬೈಕ್ ಸ್ಥಳದಲ್ಲಿಲ್ಲವೆಂದು ಗಮನಿಸಿದ ಅವರು ತಕ್ಷಣ ಎಲ್ಲಾ ಕಡೆ ಹುಡುಕಾಟ ನಡೆಸಿದರು. ಆದರೆ ವಾಹನ ಪತ್ತೆಯಾಗದ ಕಾರಣ ಅವರು ಯಲಹಂಕ ಪೊಲೀಸ್ ಠಾಣೆಗೆ ದೂರು ದಾಖಲಿಸಿದರು. ಮಾಲೀಕರು ಸುಮಾರು ₹20,000 ನಷ್ಟ ಅನುಭವಿಸಿದ್ದಾರೆಂದು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬೈಕ್ ಕಳ್ಳತನಕ್ಕೆ ಸಂಬಂಧಿಸಿದವರನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ವಾಹನದ ಸುಳಿವು ತಿಳಿದವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

ಮುಂದೆ ಓದಿ..
ಸುದ್ದಿ 

ಘೋರ ರಸ್ತೆ ಅಪಘಾತದಲ್ಲಿ ಯುವತಿಯ ದುರ್ಮರಣ

Taluknewsmedia.com

Taluknewsmedia.comಬೆಂಗಳೂರು ಗ್ರಾಮಾಂತರ 22 ಆಗಸ್ಟ್ 2025ದೊಡ್ಡಬಳ್ಳಾಪುರ ಬಾಷೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ನಿವಾಸಿ ಜಯಶ್ರೀ ಬಿ.ಆರ್ (22) ಅವರು ದುರಂತ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಪ್ರಕರಣ ವರದಿಯಾಗಿದೆ. ಜಯಶ್ರೀ ಎಂ.ಬಿ.ಎ ವ್ಯಾಸಂಗ ಮಾಡುತ್ತಿದ್ದು, ಪ್ರತಿದಿನದಂತೆ 21 ಆಗಸ್ಟ್ ಬೆಳಿಗ್ಗೆ 8 ಗಂಟೆಗೆ ಮನೆತನಕ್ಕೆ ತಿಳಿಸಿ KA51-X-6439 ನಂಬರಿನ ಟಿವಿಎಸ್ ವೆಗೋ ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ಹೊರಟಿದ್ದರು. ಬೆಳಿಗ್ಗೆ ಸುಮಾರು 8:30ಕ್ಕೆ ಮಾರಸಂದ್ರ ಗ್ರಾಮದ ಎಸ್.ಎಂ.ಎಸ್ ಬಾರ್ & ರೆಸ್ಟೋರೆಂಟ್ ಮುಂಭಾಗ ಬೆಂಗಳೂರು–ದೊಡ್ಡಬಳ್ಳಾಪುರ ರಸ್ತೆಯಲ್ಲಿ, KA02-AF-9951 ನಂಬರಿನ ಟಾಟಾ ಟಿಪ್ಪರ್ ಲಾರಿ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಿಸಿದ ಪರಿಣಾಮ ಜಯಶ್ರೀ ಅವರ ವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಜಯಶ್ರೀ ಬಿದ್ದು, ಲಾರಿಯ ಚಕ್ರ ತಲೆಯ ಮೇಲೆ ಹರಿದು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಘಟನೆಯ ಕುರಿತು ಮಾಹಿತಿ ದೊರೆತ ತಕ್ಷಣ ಜಯಶ್ರೀ ಅವರ ತಂದೆ-ತಾಯಿ ಸ್ಥಳಕ್ಕೆ ಬಂದು ಪರಿಶೀಲಿಸಿ ರಾಜಾನುಕುಂಟೆ…

ಮುಂದೆ ಓದಿ..
ಸುದ್ದಿ 

ಸಂಪಿಗೆಹಳ ಪೊಲೀಸ್ ಠಾಣೆ – ಎಂ.ಡಿ.ಎಂ.ಎ ವಶಪಡಿಕೆ ಪ್ರಕರಣ

Taluknewsmedia.com

Taluknewsmedia.comಬೆಂಗಳೂರು 22 ಆಗಸ್ಟ್ 2022ದಿನಾಂಕ 21-08-2025 ಮಧ್ಯರಾತ್ರಿ, ಸಂಪಿಗೆಹಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ರವರ ನೇತೃತ್ವದಲ್ಲಿ, ಥಣಿಸಂದ್ರದ ಅಲಿ ಮಸೀದಿ ಹತ್ತಿರದ ಕಾರ್ ಗ್ಯಾರೇಜ್‌ನಲ್ಲಿ ದಾಳಿ ನಡೆಸಲಾಯಿತು. ಮಾಹಿತಿ ಆಧಾರವಾಗಿ, ಗ್ಯಾರೇಜ್‌ನಲ್ಲಿ ಒಬ್ಬ ವ್ಯಕ್ತಿ ಎಂ.ಡಿ.ಎಂ.ಎ ಮಾದಕ ವಸ್ತು ಸಂಗ್ರಹಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಕಾಯುತ್ತಿದ್ದನೆಂಬ ಸುಳಿವು ಪೊಲೀಸರಿಗೆ ದೊರಕಿತ್ತು. ಪಂಚರು ಮತ್ತು ಸಿಬ್ಬಂದಿಗಳೊಂದಿಗೆ ದಾಳಿ ಮಾಡಿದ ವೇಳೆ, ಆರೋಪಿ ಸೈಯ್ಯದ್ ಜಾವೀದ್ ಅಲಿಯಾಸ್ ಬೆಂಡ್ ಜಾವೀದ್ (34 ವರ್ಷ) ಬಂಧಿತನಾಗಿದ್ದು, ಅವನಿಂದ ಸುಮಾರು 13 ಗ್ರಾಂ ಎಂ.ಡಿ.ಎಂ.ಎ, ಒಂದು ತೂಕದ ಯಂತ್ರ ಹಾಗೂ ಚಾಕು ವಶಪಡಿಸಿಕೊಳ್ಳಲಾಗಿದೆ. ಸೋಕೊ ತಂಡದಿಂದ ವಶಪಡಿಸಿದ ವಸ್ತು ಎಂ.ಡಿ.ಎಂ.ಎ ಆಗಿರುವುದು ಖಚಿತಪಡಿಸಲಾಯಿತು. ಆರೋಪಿಯ ವಿರುದ್ಧ ಸಂಬಂಧಿತ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

ಮುಂದೆ ಓದಿ..
ಸುದ್ದಿ 

ಯಶವಂತಪುರದಲ್ಲಿ ಸ್ಕೂಟರ್ ಕಳ್ಳತನ ಪ್ರಕರಣ

Taluknewsmedia.com

Taluknewsmedia.comಯಶವಂತಪುರದಲ್ಲಿ ಸ್ಕೂಟರ್ ಕಳ್ಳತನ ಪ್ರಕರಣಬೆಂಗಳೂರು 22 ಆಗಸ್ಟ್ 2025ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ಕೂಟರ್ ಕಳ್ಳತನ ಪ್ರಕರಣ ವರದಿಯಾಗಿದೆ. 27 ವರ್ಷದ ಅಹಾರ್.ಟಿ ಬಿನ್ ಥಹಾ ವಿ ಅವರು ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಅವರು ಯಶವಂತಪುರದಲ್ಲಿರುವ ಬೆಲೆಕ್ ಇಂಡಿಯಾ ಲಿಮಿಟೆಡ್‌ನಲ್ಲಿ ಹೆಚ್.ಆರ್ ಆಗಿ ಕೆಲಸ ಮಾಡುತ್ತಿದ್ದು, ದಿನಾಂಕ 19.08.2025ರ ಮಧ್ಯರಾತ್ರಿ ಸುಮಾರು 2.20ಕ್ಕೆ ತಮ್ಮ ಹೊಂಡಾ ದ್ವಿಚಕ್ರ ವಾಹನ (ನಂಬರು: KL-23-P-6201) ಅನ್ನು ತಮ್ಮ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದರು. ಬೆಳಿಗ್ಗೆ ಸುಮಾರು 7.30ಕ್ಕೆ ನೋಡಿದಾಗ ವಾಹನ ಕಾಣಿಸದೆ ಹೋದ ಕಾರಣ, ಅನಾಮಿಕರು ಸುಮಾರು ₹40,000 ಮೌಲ್ಯದ ಸ್ಕೂಟರ್‌ನ್ನು ಕಳವು ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಪಿರ್ಯಾದುದಾರರು ತಮ್ಮ ಕೆಲಸದ ನಿರತೆಯಿಂದ ತಡವಾಗಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮುಂದೆ ಓದಿ..
ಸುದ್ದಿ 

ವಿದ್ಯಾರಣ್ಯಪುರದಲ್ಲಿ ಗಾಂಜಾ ಮಾರಾಟಗಾರ ಬಂಧನ

Taluknewsmedia.com

Taluknewsmedia.com ಬೆಂಗಳೂರು:22 ಆಗಸ್ಟ್ 2025ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಪಿಎಸ್‌ಐ ಇಬ್ರಾಹಿಂ ಅವರಿಗೆ ಬಂದ ಖಚಿತ ಮಾಹಿತಿಯ ಆಧಾರದ ಮೇಲೆ ಖಾಲಿ ಜಾಗದ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ನಡೆಸಿ ಬಂಧಿಸಲಾಗಿದೆ. 20 ಆಗಸ್ಟ್ 2025 ರಂದು ಸಂಜೆ 6 ಗಂಟೆಯ ಸುಮಾರಿಗೆ ನಡೆದ ದಾಳಿಯಲ್ಲಿ, ಮರೂನ್ ಶರ್ಟ್ ಧರಿಸಿದ್ದ ಕಿರಣ್ @ ಕಿರಣ್ ಬೇಡಿ (25) ಎಂಬ ವ್ಯಕ್ತಿಯನ್ನು ವಿದ್ಯಾರಣ್ಯಪುರ ಪೊಲೀಸರು ವಶಕ್ಕೆ ಪಡೆದರು. ಆರೋಪಿಯಿಂದ 821 ಗ್ರಾಂ ಗಾಂಜಾ, 8 ಚಿಕ್ಕ ಪ್ಲಾಸ್ಟಿಕ್ ಪ್ಯಾಕೆಟ್‌ಗಳು ಮತ್ತು ₹500 ಮುಖಬೆಲೆಯ ನೋಟು ವಶಪಡಿಸಿಕೊಳ್ಳಲಾಗಿದೆ. ಕಿರಣ್ ವಿಶಾಖಪಟ್ಟಣಂನಿಂದ ಗಾಂಜಾ ತಂದು ವಿದ್ಯಾರ್ಥಿಗಳು ಹಾಗೂ ಐಟಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದನೆಂದು ತನಿಖೆಯಲ್ಲಿ ಬಹಿರಂಗವಾಗಿದೆ. ಅವನು ಪ್ರತಿ ಪ್ಯಾಕೆಟ್ ಅನ್ನು ₹500ಕ್ಕೆ ಮಾರಾಟ ಮಾಡುತ್ತಿದ್ದನೆಂದು ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಹಾಗೂ ವಶಪಡಿಸಿದ ಮಾಲುಗಳನ್ನು ಠಾಣೆಗೆ ಕರೆತರಲಾಗಿದ್ದು, ಮುಂದಿನ ಕಾನೂನು…

ಮುಂದೆ ಓದಿ..
ಸುದ್ದಿ 

ಯುವತಿ ಕಾಣೆಯಾಗಿರುವ ಘಟನೆ – ಯಲಹಂಕದಲ್ಲಿ ಪೋಷಕರ ಮನವಿ

Taluknewsmedia.com

Taluknewsmedia.com ಬೆಂಗಳೂರು: 22 ಆಗಸ್ಟ್ 2025ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿಯೊಬ್ಬಳು ಕಾಣೆಯಾಗಿರುವ ಘಟನೆ ವರದಿಯಾಗಿದೆ. ವಿದ್ಯಾರಣ್ಯಪುರ ಪೊಲೀಸರ ಮಾಹಿತಿಯ ಪ್ರಕಾರ, ಲಕ್ಷ್ಮಿಪತಿ ಅವರು ತಮ್ಮ ಕುಟುಂಬದೊಂದಿಗೆ ಯಲಹಂಕದಲ್ಲಿರುವ ಮನೆಯಲ್ಲಿ ವಾಸವಾಗಿದ್ದು, ಮಗಳೊಂದಿಗೆ ಹಣಕಾಸಿನ ವಿಷಯವಾಗಿ ಮನೆಯಲ್ಲಿ ಕೆಲ ಮಾತುಕತೆ ನಡೆದಿತ್ತು. ದಿನಾಂಕ 13.08.2025 ರಂದು ಲಕ್ಷ್ಮಿಪತಿ ಅವರು ತಮ್ಮ ಊರಾದ ಮಾಲಗಡಿ ತೆರಳಿದ್ದರು. ಅವರ ಪತ್ನಿ ಬೆಳಿಗ್ಗೆ 9 ಗಂಟೆಗೆ ಕೆಲಸಕ್ಕೆ ಹೋದರು. ಆ ಸಮಯದಲ್ಲಿ ಮಗಳು ಮತ್ತು ಮಗ ಮನೆಯಲ್ಲೇ ಇದ್ದರು. ಮಧ್ಯಾಹ್ನ ಸುಮಾರು 12:30 ಗಂಟೆಗೆ, ಮಗಳು “ಹೊರಗಡೆ ಕೆಲಸವಿದೆ” ಎಂದು ಹೇಳಿ ಮನೆಯಿಂದ ಹೊರಟಿದ್ದು, ನಂತರ ವಾಪಾಸಾಗಲಿಲ್ಲ. ಸಂಜೆ 6 ಗಂಟೆಗೆ ಮನೆಗೆ ಬಂದ ಪೋಷಕರು ಮಗಳು ಮನೆಗೆ ವಾಪಾಸಾಗಿಲ್ಲವೆಂದು ಗಮನಿಸಿದರು. ಸ್ನೇಹಿತರು ಮತ್ತು ಸಂಬಂಧಿಕರ ಬಳಿ ವಿಚಾರಿಸಿದರೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಕಾಣೆಯಾಗಿರುವ ಬಗ್ಗೆ ಸ್ಪಷ್ಟ ಮಾಹಿತಿ ದೊರಕದ…

ಮುಂದೆ ಓದಿ..
ಸುದ್ದಿ 

“ಸತ್ಯಕ್ಕೆ ನಿಂತವನಿಗೆ ಇಂಥ ಅಂತ್ಯವೇನಾ?” – ಹಾರಗದ್ದೆ

Taluknewsmedia.com

Taluknewsmedia.comಹಾರಗದ್ದೆ ಬ್ಯಾಂಕ್ ಮ್ಯಾನೇಜರ್ ಆತ್ಮಹ*ತ್ಯೆ: ಕಿರುಕುಳ, ವಂಚನೆ, ವ್ಯವಸ್ಥೆಯ ವೈಫಲ್ಯಕ್ಕೆ ಬಲಿಯಾದ ಪ್ರಕಾಶ್ “ಸತ್ಯಕ್ಕೆ ನಿಂತವನಿಗೆ ಇಂಥ ಅಂತ್ಯವೇನಾ?” – ಹಾರಗದ್ದೆ ಗ್ರಾಮದಲ್ಲಿ ಎಲ್ಲೆಡೆ ಕೇಳಿಬರುತ್ತಿರುವ ಪ್ರಶ್ನೆ ಇದು. 41 ವರ್ಷದ ಬ್ಯಾಂಕ್ ವ್ಯವಸ್ಥಾಪಕ ಪ್ರಕಾಶ್ ಅವರು ಸಹೋದ್ಯೋಗಿಗಳ ಕಿರುಕುಳ ಹಾಗೂ ಬ್ಯಾಂಕಿನ ಆಂತರಿಕ ವಂಚನೆಯಿಂದ ನೊಂದು ತನ್ನ ಜೀವ ತ್ಯಜಿಸಿರುವುದು ನಿಜಕ್ಕೂ ಸಮಾಜವೇ ಆತ್ಮಾವಲೋಕನ ಮಾಡಬೇಕಾದ ಘಟನೆ. ಡೆತ್ ನೋಟ್‌ನಲ್ಲಿ ಬಿಚ್ಚಿಟ್ಟ ವಂಚನೆ ಪ್ರಕಾಶ್ ತಮ್ಮ ಡೆತ್ ನೋಟ್‌ನಲ್ಲಿ ಬ್ಯಾಂಕಿನ ಕೆಲ ಸಿಬ್ಬಂದಿಗಳೇ ತಮ್ಮ ಸಾವಿಗೆ ಕಾರಣ ಎಂದು ಬರೆದು ಹೋಗಿದ್ದಾರೆ. ಅಕೌಂಟೆಂಟ್ ನಾಗರಾಜ್ಕ್ಯಾಷಿಯರ್ ರೂಪಾಕಂಪ್ಯೂಟರ್ ಆಪರೇಟರ್ ಸಂದೀಪ್ರೂಪಾ ಅವರ ಸಂಬಂಧಿ ಶ್ರೀನಿವಾಸ್ ಈ ನಾಲ್ವರು ಸೇರಿ ₹1 ಕೋಟಿಗೂ ಅಧಿಕ ಹಣ ಲೂಟಿ ಮಾಡಿ, ತನ್ನನ್ನು ಬಲೆಗೆಳೆದು ಕಿರುಕುಳ ನೀಡಿದರು ಎಂದು ಪ್ರಕಾಶ್ ಬರೆದು ಹೋಗಿರುವುದು ನಿಜಕ್ಕೂ ಆಘಾತಕಾರಿಯ ಸಂಗತಿ. ಮಾನಸಿಕ ಹಿಂಸೆ –…

ಮುಂದೆ ಓದಿ..
ಸುದ್ದಿ 

ಹಾನಗಲ್ ತಾಲ್ಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ

Taluknewsmedia.com

Taluknewsmedia.comಇತ್ತೀಚಿಗೆ ಆಗಸ್ಟ್ 19ನೆ ತಾರೀಕಿನಂದು ಹಾನಗಲ್ ನಗರದ ಪ್ರಮುಖ ಧಾಬಾ ಒಂದರಲ್ಲಿ ಅಕ್ರಮ ಮದ್ಯ ಮಾರಾಟ ಪ್ರಕರಣವೊಂದು ಬೆಳಕಿಗೆ ಬಂದಿದೆ. ದಿನಾಂಕ 19/08/2025 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ಹಾನಗಲ್ ತಾಲೂಕಿನ ಒಬ್ಬ ಹೋಟೆಲ್ ಬಿಸಿನೆಸ್ ವ್ಯಾಪಾರಿಯಾದ ಮಂಜುನಾಥ್ ನಾರಯಣ ಕಲಾಲ್ ಎಂಬಾತ ವ್ಯಕ್ತಿ (ವಯಸ್ಸು 32 ವರ್ಷ) ಹಾನಗಲ್ ನಗರದ APMC ಸಮೀಪದ ತನ್ನ ಸ್ವಂತ ಧಾಭಾ ನಿಸರ್ಗ ದಾಬಾ ನಲ್ಲಿ ಮದ್ಯಪಾನ ನಿಷೇಧ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ ಇವರು 650 ಎಂ ಎಲ್ ದ 02 ರಾಯಲ್ ಚಾಲೆಂಜರ್ಸ್ ಸ್ಟ್ರಾಂಗ್ ಬಿಯರ್ ಬಾಟಲ್ಗಳ ಹಾಗು ಇನ್ನಿತರ ದೊಡ್ಡ ದೊಡ್ಡ ಬ್ರಾಂಡ್ ಬಿಯರ್ ಬಾಟಲ್ಗಳನ್ನು ಶೇಖರಿಸಿ ಮಾರುತ್ತಿದ್ದದ್ದು ಕಂಡು ಬಂದಿರುವುದು ಇದನ್ನು ತಿಳಿದ ಹಾನಗಲ್ ನಗರದ ಪೊಲೀಸರು ತಕ್ಷಣ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಅವರ ಮೇಲೆ ಹಾನಗಲ್ ನಗರ…

ಮುಂದೆ ಓದಿ..
ಸುದ್ದಿ 

ಯಲಹಂಕದಲ್ಲಿ ಎಂ.ಡಿ.ಎಂ.ಎ ವಶ – ಮನೆಮಾಲಕಿಗೆ ಪ್ರಕರಣ ದಾಖಲಾತಿ

Taluknewsmedia.com

Taluknewsmedia.comಬೆಂಗಳೂರು, 21 ಆಗಸ್ಟ್ 2025ಯಲಹಂಕ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ದಸ್ತೆಗಿರಿ ಕಾರ್ಯಾಚರಣೆಯಲ್ಲಿ ವಿದೇಶಿ ಪ್ರಜೆಗಳಿಂದ ಭಾರಿ ಪ್ರಮಾಣದ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಯಲಹಂಕ ಉಪನಗರ ಪೊಲೀಸರ ಮಾಹಿತಿ ಪ್ರಕಾರ, ವಿದ್ಯಾರಣ್ಯಪುರ ಅಂಚೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಬ್ರಿಟ್ ಮತ್ತು ಕೋಡು ಎಂಬ ವಿದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದು, ಇವರ ಬಳಿಯಿಂದ 700 ಗ್ರಾಂ ತೂಕದ, ಸುಮಾರು 70 ಲಕ್ಷ ರೂ. ಮೌಲ್ಯದ ಎಂ.ಡಿ.ಎಂ.ಎ (ಎಕ್ಸ್ಟಸಿ) ಪತ್ತೆಯಾಗಿದೆ. ಈ ಪ್ರಕರಣದ ಸಂಬಂಧವಾಗಿ NDPS ಕಾಯ್ದೆ 1985ರ ಸೆಕ್ಷನ್‌ಗಳು 8(c), 21, 22(c) ಹಾಗೂ Foreigners Act 1946ರ ಸೆಕ್ಷನ್ 14 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ವೇಳೆ, ವಿದೇಶಿ ಪ್ರಜೆಗಳಿಗೆ ಬಾಡಿಗೆ ಮನೆಯನ್ನು ನೀಡಿದ ಮನೆಮಾಲಕಿ ಜಯಶ್ರೀ ಅಲಿಯಾಸ್ ಜಯಮ್ಮ ಅವರ ಮೇಲೂ ಪ್ರಕರಣ ದಾಖಲಿಸಲಾಗಿದೆ. ಅವರು FRRO ಅಧಿಕಾರಿಗಳಿಂದ ಪಡೆದ ಸಿ-ಫಾರ್ಮ್ ಮಾಹಿತಿಯನ್ನು ಸ್ಥಳೀಯ…

ಮುಂದೆ ಓದಿ..
ಸುದ್ದಿ 

ನೋ ಪಾರ್ಕಿಂಗ್ ನಿಯಮ ಉಲ್ಲಂಘನೆ – ವಾಹನ ಚಾಲಕ ವಿರುದ್ಧ ಕ್ರಮ

Taluknewsmedia.com

Taluknewsmedia.com ಬೆಂಗಳೂರು, 21 ಆಗಸ್ಟ್ 2025ನಗರದ ಮೇಜರ್ ಸಂದಿಹ ಉನ್ನಿಕೃಷ್ಣನ್ ಮುಖ್ಯರಸ್ತೆಯ ಮ್ಯಾಕ್‌ಡೊನಾಲ್ಡ್ ಸ್ಟೋರ್ ಮುಂಭಾಗದಲ್ಲಿ “ನೋ ಪಾರ್ಕಿಂಗ್” ಬೋರ್ಡ್ ಕೆಳಗೆ ಸರಕು ವಾಹನವನ್ನು ನಿಲ್ಲಿಸಿದ್ದ ಘಟನೆ ಬೆಳಕಿಗೆ ಬಂದಿದೆ. ಸಂಜೆ ಸುಮಾರು 5.58ರ ಹೊತ್ತಿಗೆ ಕೋಬ್ರಾ ಗಸ್ತು ಕರ್ತವ್ಯದಲ್ಲಿದ್ದಯಲಹಂಕ ಸಂಚಾರಿ ಪೊಲೀಸರು ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದುದನ್ನು ಗಮನಿಸಿ, ಟಾಟಾ ಇಂಟ್ರಾ ಗುಡ್ ವಾಹನ (ಕೆಎ-53-ವೈ-9734) ಅನ್ನು ಸ್ಥಳದಲ್ಲಿಯೇ ಪರಿಶೀಲಿಸಿದರು. ವಾಹನ ಚಾಲಕನನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದಾಗ, ಆತನು ನಾಗರಾಜು ಎಂ (29), ಮಗ ಮುನಿಸ್ವಾಮಿ, ನಿವಾಸಿ – 560049 ಎಂದು ಪತ್ತೆಯಾಯಿತು. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡಚಣೆ ಉಂಟುಮಾಡಿದ ಕಾರಣ, ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದೆ ಓದಿ..