ಸುದ್ದಿ 

ಚೈನ್ ಸ್ನಾಚಿಂಗ್: ಪಾಪಾಯ ಲೇಔಟ್‌ನಲ್ಲಿ ಮಹಿಳೆಯಿಂದ ಚೈನ್ ಕಿತ್ತು ಪರಾರಿಯಾಗುತ್ತಿದ್ದ ಆರೋಪಿ ಸಾರ್ವಜನಿಕರಿಂದ ಹಿಡಿತ

Taluknewsmedia.com

Taluknewsmedia.comಬೆಂಗಳೂರು, ಜುಲೈ 30, 2025:ನಗರದ ಪಾಪಾಯ ಲೇಔಟ್‌ನಲ್ಲಿ ಮಹಿಳೆಯೊಬ್ಬರಿಂದ ಚೈನ್ ಕಿತ್ತು ಬೈಕ್‌ನಲ್ಲಿ ಪರಾರಿಯಾಗುತ್ತಿದ್ದ ಆರೋಪಿ ಸಾರ್ವಜನಿಕರ ಸಹಕಾರದಿಂದ ಹಿಡಿತಕ್ಕೆ ಲಭ್ಯನಾದ ಘಟನೆ ಜುಲೈ 29 ರಂದು ಬೆಳಿಗ್ಗೆ ಸಂಭವಿಸಿದೆ. ಸಮಾಚಾರದ ಪ್ರಕಾರ, ಬೆಳಿಗ್ಗೆ ಸುಮಾರು 7:35ರ ಸಮಯದಲ್ಲಿ ಪಾಪಾಯ ಲೇಔಟ್ 6ನೇ ಕ್ರಾಸ್‌ನ ಹತ್ತಿರ ಅನಾಮಿಕ ಆರೋಪಿ ಹಿಂಬದಿಯಿಂದ ಬೈಕ್‌ನಲ್ಲಿ ಬಂದು ಮಹಿಳೆಯೊಬ್ಬಳ ಗಲಭೆಯನ್ನಾಗಿ ರೋಲ್ಡ್ ಗೋಲ್ಡ್ ಚೈನ್ ಕಿತ್ತು ಪರಾರಿಯಾದನು. ಮಹಿಳೆಯ ಚೀಕ್ಷೆಗೆ ಸ್ಪಂದಿಸಿದ ಪಕ್ಕದ ಮನೆಯ ಭುವನ್ ಕುಮಾರ್ ಮತ್ತು ಶ್ರೀಮತಿ ಗಾಯತ್ರಿ ತಕ್ಷಣ ಸಹಾಯಕ್ಕೆ ಧಾವಿಸಿದರು. ರಸ್ತೆ ಕೊನೆಗೊಂಡ ಹಿನ್ನೆಲೆಯಲ್ಲಿ ಆರೋಪಿ ಹಿಂದಕ್ಕೆ ಬೈಕ್ ತಿರುಗಿಸಲು ಯತ್ನಿಸಿದ್ದಾಗ, ಸಾರ್ವಜನಿಕರು ಧೈರ್ಯದಿಂದ ಅವನನ್ನು ಹಿಡಿದು ಕಬ್ಬಿಣದ ಹಿಡಿತದಲ್ಲಿ ಬಡಿಸಿದರು. ವಿಷಯ ತಿಳಿದ ಹೊಯ್ಸಳ 164 ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಆರೋಪಿ ಹರ್ಮಿದ್ ಸಿಂಗ್ ನನ್ನು ವಶಕ್ಕೆ ಪಡೆದು, ಗಾಯಗಳಿಗಾಗಿ ಯಲಹಂಕ ಸಾರ್ವಜನಿಕ…

ಮುಂದೆ ಓದಿ..
ಸುದ್ದಿ 

ವಾಸಸ್ಥಳದ ಪಾರ್ಕಿಂಗ್ ವಿಚಾರವಾಗಿ ಜಗಳ – ವ್ಯಕ್ತಿಗೆ ಹಲ್ಲೆ, ಮೂವರು ಸಂಬಂಧಿಕರ ಸಹ ಭಾಗವಹಿಕೆ

Taluknewsmedia.com

Taluknewsmedia.comಬೆಂಗಳೂರು, ಜುಲೈ 30, 2025: ನಗರದ ಒಂದೇ ಅಪಾರ್ಟ್ಮೆಂಟ್ ಪಾರ್ಕಿಂಗ್ ಸಮಸ್ಯೆ ಇತ್ತೀಚೆಗೆ ಗಂಭೀರ ಹಲ್ಲೆಗೆ ಕಾರಣವಾಗಿದೆ. ಯಲಹಂಕ ಹೋಬಳಿಯ ಫ್ಲಾಟ್ ಒಂದರಲ್ಲಿ ವಾಸವಿದ್ದ ಪುರುಷನೊಬ್ಬನಿಗೆ ಅವನ ಪಾರ್ಕಿಂಗ್ ಸ್ಥಳವನ್ನು ಅಕ್ರಮವಾಗಿ ಅತಿಕ್ರಮಿಸಿದ್ದ ಇನ್ನೊಬ್ಬ ನಿವಾಸಿಯಿಂದ ಜೀವ ಬೆದರಿಕೆ ಹಾಗೂ ಶಾರೀರಿಕ ಹಲ್ಲೆ ನಡೆದಿರುವ ಬಗ್ಗೆ ಪ್ರಕರಣ ದಾಖಲಾಗಿದೆ. 2024ರ ಮಾರ್ಚ್ ತಿಂಗಳಲ್ಲಿ ಫ್ಲಾಟ್ ಖರೀದಿಸಿದ ದಿನೇಶ್ ಎಂ ಆರ್ ಅವರು, ಆ ಸಮಯದಲ್ಲಿ 2 ಕಾರ್ ಪಾರ್ಕಿಂಗ್ ಸ್ಥಳಗಳನ್ನು ಹೊಂದಿದ್ದರು. ಆದರೆ ಕಳೆದ 6 ತಿಂಗಳಿನಿಂದ ಜಾರ್ಜ್ ಸ್ಟೀಫನ್ ಎಂಬ ವ್ಯಕ್ತಿ ದಿನೇಶ್ ಅವರ ಪಾರ್ಕಿಂಗ್ ಸ್ಥಳದಲ್ಲಿ ತನ್ನ ಕಾರನ್ನು ನಿಲ್ಲಿಸುತ್ತಿದ್ದು, ಎಷ್ಟೇ ಮನವಿ ಮಾಡಿದರೂ ಸ್ಥಳ ತೆರವು ಮಾಡಿಲ್ಲ. ಜುಲೈ 28ರಂದು ಬೆಳಿಗ್ಗೆ 10 ಗಂಟೆಗೆ, ದಿನೇಶ್ ಎಮ್ ಆರ್ ಅವರು ಸ್ಥಳಕ್ಕೆ ತೆರಳಿ ಪಾರ್ಕಿಂಗ್ ತೆರವು ಮಾಡುವಂತೆ ಕೇಳಿದಾಗ, ಜಾರ್ಜ್ ಸ್ಟೀಫನ್ ಜೀವ…

ಮುಂದೆ ಓದಿ..
ಸುದ್ದಿ 

ಯಲಹಂಕದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಜಮೀನು ಹತ್ತಿಸಿಕೊಂಡ ಆರೋಪ – ಐವರು ವಿರುದ್ಧ ಎಫ್‌ಐಆರ್

Taluknewsmedia.com

Taluknewsmedia.comಬೆಂಗಳೂರು, ಜುಲೈ 30, 2025: ಯಲಹಂಕದ ಸಿಂಗುಪುರ ಗ್ರಾಮದಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿ ವಾಸವಿದ್ದ ವ್ಯಕ್ತಿಯೊಬ್ಬರ ಮೇಲೆ, ನಕಲಿ ದಾಖಲೆಗಳ ಆಧಾರದ ಮೇಲೆ ಹಕ್ಕು ಪಡೆದಿರುವುದಾಗಿ ತೋರಿಸಿಕೊಂಡು ಮನೆ ಖಾಲಿ ಮಾಡುವಂತೆ ಬೆದರಿಕೆ ಹಾಕಿರುವ ಐವರು ವಿರುದ್ಧ ವಿದ್ಯಾರಣ್ಯಪುರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಪಿರ್ಯಾದಿದಾರರು ಕುವೆಂಪುನಗರದ ಸಿಂಗುಪುರದಲ್ಲಿ ಸರ್ವೆ ನಂ.109 ರಲ್ಲಿರುವ 600 ಚದರ ಅಡಿಯ ಜಾಗದಲ್ಲಿ ಮನೆ ನಿರ್ಮಿಸಿ ತಮ್ಮ ತಾಯಿಯ ಹೆಸರಲ್ಲಿ 2016 ರಲ್ಲಿ ಅನಧಿಕೃತ ಕಟ್ಟಡಕ್ಕೆ regularisation ಅರ್ಜಿ ಸಲ್ಲಿಸಿದ್ದರು. ಆದರೆ 2023 ರಲ್ಲಿ ಅವರ ತಾಯಿ ಮೃತರಾದ ನಂತರ, 2024 ರ ಜನವರಿಯಲ್ಲಿ ನಾಲ್ಕು ಮತ್ತು ಐದನೇ ಆರೋಪಿಗಳು ಈ ಭೂಮಿ ಖರೀದಿಸಿದ್ದೇವೆಂದು ತೀವ್ರವಾಗಿ ಬೆದರಿಕೆ ಹಾಕತೊಡಗಿದರು. ಪಿರ್ಯಾದಿದಾರರು ದಾಖಲೆ ಪರಿಶೀಲನೆ ನಡೆಸಿದಾಗ, ಆರೋಪಿಗಳು ನಕಲಿ ಹಕ್ಕುಪತ್ರ, ಪರವಾನಗಿ ಮತ್ತು ಖಾತಾ ನಂಬರ್ಗಳನ್ನು ಸೃಷ್ಟಿಸಿಕೊಂಡು, ಈ ಜಮೀನನ್ನು 1974 ರಲ್ಲಿ ಮೊದಲನೇ…

ಮುಂದೆ ಓದಿ..
ಸುದ್ದಿ 

ಯಲಹಂಕ ಅಪಾರ್ಟ್‌ಮೆಂಟ್‌ನಲ್ಲಿ ಬಟ್ಟೆ ಒಣಗಿಸುವ ವಿಚಾರಕ್ಕೆ ಜಗಳ: ಮಹಿಳೆ ವಿರುದ್ಧ ದೈಹಿಕ ಹಲ್ಲೆ ಆರೋಪ

Taluknewsmedia.com

Taluknewsmedia.comಬೆಂಗಳೂರು, ಜುಲೈ 30 , 2025:ನಗರದ ಯಲಹಂಕ ಪ್ರದೇಶದ ಅಪಾರ್ಟ್‌ಮೆಂಟ್‌ ಒಂದರಲ್ಲಿ ಬಟ್ಟೆ ಒಣಗಿಸುವ ಸ್ಥಳದ ವಿಚಾರದಿಂದ ಜಗಳ ಉಂಟಾಗಿ, ಮಹಿಳೆಯೊಬ್ಬರು ತಮ್ಮ ನೆರೆಹೊರೆಯವರಿಂದ ದೈಹಿಕ ಹಲ್ಲೆಗೆ ಒಳಗಾದ ಘಟನೆ ನಡೆದಿದೆ. ಈ ಸಂಬಂಧ ಸಂಬಂಧಿತ ಮಹಿಳೆ ಠಾಣೆಯಲ್ಲಿ ದೂರು ನೀಡಿದ್ದಾರೆ.ಅಶ್ವಿನಿ ಕೊಟ ಅವರ ಪ್ರಕಾರ, ಅವರು ಪ್ರತಿದಿನದಂತೆ ತಮ್ಮ ಬಟ್ಟೆಗಳನ್ನು ಅಪಾರ್ಟ್‌ಮೆಂಟ್‌ನ ನಿಗದಿತ ಸ್ಥಳದಲ್ಲಿ ಒಣಗಿಸಲು ಹಾಕಿದಾಗ, ಅದೇ ಜಾಗದಲ್ಲಿ ಪಾಯಲ್ ಎಂಬವರೂ ತಮ್ಮ ಹಸಿ ಬಟ್ಟೆಗಳನ್ನು ಹಾಕಿದ್ದರಂತೆ. ಈ ಬಗ್ಗೆ ಶಾಂತಿಯುತವಾಗಿ ಮಾತನಾಡಿದ ದೂರುದಾರರಿಗೆ, ಪಾಯಲ್ ಅವರು ಪ್ರತಿಕ್ರಿಯೆ ನೀಡುವ ಬದಲು ಕೂದಲು ಎಳೆದು, ದೈಹಿಕವಾಗಿ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದೇ ಮಹಿಳೆ, ಹಿಂದೆ ಪಾರ್ಕಿಂಗ್ ಜಾಗದ ವಿಷಯದಲ್ಲೂ ತಕರಾರು ಮಾಡಿದ್ದರಲ್ಲದೆ, ಕಿರುಕುಳ ನೀಡುತ್ತಿದ್ದಾಳೆ ಎನ್ನಲಾಗಿದೆ. ಇದರಿಂದ ದೂರುದಾರರಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳವಾಗುತ್ತಿದೆ ಎಂಬುದಾಗಿ…

ಮುಂದೆ ಓದಿ..
ಸುದ್ದಿ 

ಚಿನ್ನಾಭರಣ ಕಳವು: ಮನೆಗೆ ಬೀಗ ಹಾಕಿದ ವೇಳೆ ಕಳ್ಳತನ

Taluknewsmedia.com

Taluknewsmedia.comಬೆಂಗಳೂರು, ಜುಲೈ 30, 2025: ಬೆಂಗಳೂರು ನಗರ ಯಲಹಂಕ ಓಲ್ಡ್ ಟೌನ್ ವ್ಯಾಪ್ತಿಯ ಸಿಂಗನಾಯಕನಹಳ್ಳಿಯಲ್ಲಿ ಮನೆಯ ಬಾಗಿಲು ಬೀಗ ಮುರಿದು ನಡೆದಿರುವ ಚಿನ್ನಾಭರಣ ಮತ್ತು ನಗದು ಕಳ್ಳತನ ಪ್ರಕರಣವನ್ನು ರಾಜನಕುಂಟೆ ಪೊಲೀಸರು ದಾಖಲಿಸಿದ್ದಾರೆ. ಆಕ್ಸಿಸ್ ಬ್ಯಾಂಕ್‌ನಲ್ಲಿ ಶಾಖಾ ನಿರ್ವಾಹಕರಾಗಿರುವ ದೂರುದಾರರು 25ನೇ ತಾರಿಖು ಸಂಜೆ 6 ಗಂಟೆ ಸುಮಾರಿಗೆ ತಮ್ಮ ಹೆಂಡತಿ ಹಾಗೂ ಮಗುವಿನೊಂದಿಗೆ ತಮ್ಮ ಸ್ವಂತ ಊರಿಗೆ ತೆರಳಿದ್ದರು. ಅವರು ತೆರಳುವ ಮುನ್ನ ಬಾಡಿಗೆ ಮನೆಯ ಬಾಗಿಲಿಗೆ ಬೀಗ ಹಾಕಿದ್ದರು. ಮರುದಿನ 28ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಅವರು ಮನೆಗೆ ಮರಳಿದಾಗ, ಬಾಗಿಲು ತೆರೆದಿದ್ದು, ಒಳಗೆ ಪರಿಶೀಲಿಸಿದಾಗ ಹಿಂಬಾಗದ ಡೋರ್ ಲಾಕ್ ಬೆಂಡಾಗಿದ್ದು, ಬೆಡ್ ರೂಮ್‌ನಲ್ಲಿನ ಬೀರುವಿನ ಲಾಕರ್ ಮುರಿಯಲ್ಪಟ್ಟಿತ್ತು. ಲಾಕರ್‌ನೊಳಗೆ ಇಡಲಾಗಿದ್ದ ಸುಮಾರು 18 ಗ್ರಾಂ ಚಿನ್ನದ ಸರ, 7 ಗ್ರಾಂ ಚಿನ್ನದ ಓಲೆ, ಮಗುವಿನ ಉಡದಾರ, ಚೈನು, ಕೈ/ಕಾಲು ಬಳೆಗಳು ಹಾಗೂ…

ಮುಂದೆ ಓದಿ..
ಸುದ್ದಿ 

ಮನೆಗೆ ನುಗ್ಗಿ ಹಲ್ಲೆ – ನಾಲ್ವರು ವಿರುದ್ಧ ದೂರು ದಾಖಲು

Taluknewsmedia.com

Taluknewsmedia.comಬೆಂಗಳೂರು ಜುಲೈ 30 2025 –ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಲ್ವರು ವ್ಯಕ್ತಿಗಳು ಮಹಿಳೆಯೊಬ್ಬರ ಮನೆಗೆ ಬಲವಂತವಾಗಿ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಆಕೆ ಮತ್ತು ಆಕೆಯ ಮಗನಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ಸಂಬಂಧ ದೇವನಹಳ್ಳಿ ನ್ಯಾಯಾಲಯದಲ್ಲಿ ಪಿರ್ಯಾದು ದಾಖಲಾಗಿ ಪ್ರಕರಣ ದಾಖಲಾಗಿದೆ. ಪಿರ್ಯಾದಿದಾರರ ದೂರಿನ ಪ್ರಕಾರ, ಏಪ್ರಿಲ್ 10ರಂದು ಸಂಜೆ 5:00 ರಿಂದ 5:30ರ ವೇಳೆಗೆ ರಾಮಾಂಜನಪ್ಪ, ಚಂದ್ರು (ಪಿರ್ಯಾದಿದಾರರ ಸಹೋದರನ ಮಕ್ಕಳು), ರಮೇಶ್ ಹಾಗೂ ಅವರ ತಂದೆ ಸೇರಿ ನಾಲ್ವರು ಆರೋಪಿಗಳು ಮನೆಗೆ ನುಗ್ಗಿ, ಪಿರ್ಯಾದಿದಾರರ ಮಗ ವೆಂಕಟೇಶ್‌ಗೆ ಕೊಲೆ ಬೆದರಿಕೆ ಹಾಕಿ, ಇಬ್ಬರಿಗೂ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ವೇಳೆ ಪಿರ್ಯಾದಿದಾರರ ಸೀರೆ ಹರಿದು, ಕೈಬಳೆಗಳು ತೂರಿ ಹೋಗಿದ್ದು, ಅವರ ಕೈ, ಎದೆ ಹಾಗೂ ಮುಖದಲ್ಲಿ ಗಾಯಗಳಾಗಿವೆ. ಬಳಿಕ ಅವರು ಯಲಹಂಕ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಘಟನೆಯ…

ಮುಂದೆ ಓದಿ..
ಸುದ್ದಿ 

ಬೆಂಗಳೂರು ಯುವಕ ಕಾಣೆಯಾದ ಪ್ರಕರಣ: ಸಹೋದರಿ ಪೊಲೀಸ್ ಠಾಣೆಗೆ ದೂರು ಸಲ್ಲಿಕೆ

Taluknewsmedia.com

Taluknewsmedia.comಬೆಂಗಳೂರು, ಜುಲೈ 30, 2025:ಐಟಿ ಉದ್ಯೋಗಿಯಾಗಿರುವ ಯುವತಿಯೊಬ್ಬರು ತಮ್ಮ ತಮ್ಮ ಕಾಣೆಯಾಗಿರುವ ಕುರಿತು ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಯುವಕ ಕಿರಣ್ ಪ್ರಸಾದ್ ಎಸ್ (27) ಕಳೆದ ನಾಲ್ಕು ದಿನಗಳಿಂದ ಸಂಪರ್ಕಕ್ಕೆ ಬಂದಿಲ್ಲವೆಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ, ಕಿರಣ್ ಪ್ರಸಾದ್ ಬೆಂಗಳೂರಿನ ಬಾಗಲೂರಿನ ಸಂತೆ ಸರ್ಕಲ್ ಎದುರಿನ ಶ್ರೀ ಲಕ್ಷ್ಮಿ ಗಣಪತಿ ಪಿಜಿಯಲ್ಲಿ ವಾಸವಿದ್ದು, ಬಿ.ಕೆ.ಹಳ್ಳಿಯ ಇ-ಮುದ್ರಾ ಕಂಪನಿಯಲ್ಲಿ ಮಾನವ ಸಂಪನ್ಮೂಲ (HR) ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ. ತನ್ನ ಫೋನ್‌ನ್ನು ಉತ್ತರಿಸದೇ ಹೋದ ಹಿನ್ನೆಲೆಯಲ್ಲಿ, ಜುಲೈ 27ರಂದು ಪಿಜಿಗೆ ಹೋಗಿ ಪರಿಶೀಲಿಸಿದ ಸಹೋದರಿಯು, ಮೊಬೈಲ್ ಹಾಗೂ ಬ್ಯಾಗ್ ಕಿರಣ್‌ನ ರೂಮಿನಲ್ಲಿ ಇದ್ದರೂ ಆತನೇ ಕಾಣೆಯಾಗಿರುವುದನ್ನು ಗಮನಿಸಿದರು. ಪಿಜಿಯಲ್ಲಿ ವಾಸಿಸುತ್ತಿದ್ದ ಇತರರ ಪ್ರಕಾರ, ಕಿರಣ್ ಅವರನ್ನು ಕೊನೆಯದಾಗಿ ಜುಲೈ 25ರಂದು ರಾತ್ರಿ ನೋಡಲಾಗಿತ್ತು. ಪಿಜಿಯ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯ ನಂತರ, ಆತನು ಜುಲೈ 26ರಂದು ಬೆಳಿಗ್ಗೆ…

ಮುಂದೆ ಓದಿ..
ಸುದ್ದಿ 

ಮದುವೆಯ ಹೆಸರಲ್ಲಿ ಮೋಸ: ಮತಾಂತರ ಒತ್ತಾಯದಿಂದ ಮಹಿಳೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು

Taluknewsmedia.com

Taluknewsmedia.comಬೆಂಗಳೂರು, ಜುಲೈ 30, 2025: ಬೆಂಗಳೂರು ನಿವಾಸಿಯೊಬ್ಬ ಯುವತಿಯು ತನ್ನ ಗಂಡನ ವಿರುದ್ಧ ತಾನು ಮದುವೆಯಾಗಿದ್ದ ಬಳಿಕ ಧರ್ಮ ಬದಲಾಯಿಸಲು ಒತ್ತಾಯ ಮಾಡುತ್ತಿದ್ದನೆಂದು ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 2017ರಲ್ಲಿ ಗಂಗಮ್ಮ ದೇವಸ್ಥಾನದಲ್ಲಿ ಮದುವೆಯಾದ ಈ ದಂಪತಿಗೆ ಗಂಡು ಮಗು ಜನಿಸಿದೆ. ಆದರೆ ಮದುವೆಯ ನಂತರ ಗಂಡನು ತನ್ನ ಧರ್ಮವನ್ನು ಮರೆಮಾಚಿದ್ದನು ಎಂಬುದು ಮಹಿಳೆಗೆ ತಿಳಿದಿದೆ. ಈತನಿಂದ ದಿನನಿತ್ಯದ ದೈಹಿಕ ಹಾಗೂ ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಮಗು ಮತ್ತು ತನ್ನ ಹಕ್ಕುಗಳನ್ನು ಕಾಪಾಡಿಕೊಳ್ಳಲು ಮಹಿಳೆ ತನ್ನ ಪೋಷಕರ ಮನೆಗೆ ಹಿಂತಿರುಗಿದ್ದಾರೆ. ಗಂಡನು ಮತಾಂತರಕ್ಕೆ ಒಪ್ಪಿಕೊಳ್ಳದಿದ್ದರೆ ಮಗು ಕೊಡುವುದಿಲ್ಲ ಎಂಬ ಬೆದರಿಕೆಯನ್ನು ನೀಡುತ್ತಿದ್ದನೆಂದು ದೂರಿನಲ್ಲಿ ಹೇಳಲಾಗಿದೆ. ವಿದ್ಯಾರಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ಮುಂದೆ ಓದಿ..
ಸುದ್ದಿ 

ಮಾಲ್ ಆಫ್ ಏಷಿಯಾದ ಬಳಿ ದ್ವಿಚಕ್ರ ವಾಹನ ಕಳವು ಪ್ರಕರಣ

Taluknewsmedia.com

Taluknewsmedia.comಬೆಂಗಳೂರು, ಜುಲೈ 30, 2025:ಮಾಲ್ ಆಫ್ ಏಷಿಯಾ ಬಳಿ ವಾಹನ ಕಳವು ಪ್ರಕರಣವೊಂದು ವರದಿಯಾಗಿದೆ. ಮಲ್ಲೇಶ್ವರಂ ನಿವಾಸಿಯಾಗಿರುವ ದೂರುದಾರರು ತಮ್ಮ ಕೆಲಸಕ್ಕೆಂದು 24 ಜುಲೈ 2025 ರಂದು ಸಂಜೆ 4 ಗಂಟೆಗೆ ಮಾಲ್ ಆಫ್ ಏಷಿಯಾದ ಹೋಮ್ ಸೆಂಟರ್ ಕಂಪನಿಗೆ ಕಾರ್ಪೆಂಟರ್ ಕೆಲಸಕ್ಕಾಗಿ ತೆರಳಿದ್ದರು. ರಾತ್ರಿ 10 ಗಂಟೆಗೆ ಕೆಲಸ ಮುಗಿಸಿ ಹೊರಬಂದಾಗ, ಅವರು ಪಾರ್ಕ್ ಮಾಡಿಕೊಂಡಿದ್ದ ಸ್ಥಳದಲ್ಲಿ ತಮ್ಮ ಹೆರೋ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನ ಕಾಣೆಯಾಗಿರುವುದನ್ನು ಗಮನಿಸಿದರು. ಕಳವಾದ ವಾಹನದ ವಿವರಗಳು ಹೀಗಿವೆ: ನಮೂದಿನ ಸಂಖ್ಯೆ: KA-03-JN-4161 ಚಸ್ಸಿಸ್ ಸಂಖ್ಯೆ: MBLHAR079HHH50529 ಎಂಜಿನ್ ಸಂಖ್ಯೆ: HA10AGHHH51753 ಬಣ್ಣ: ಕಪ್ಪು (VBK) ಮಾದರಿ: 2017 ವಿಮೆ: ಐಸಿಐಸಿಐ ಲೋಂಬಾರ್ಡ್ ಇನ್ಸೂರೆನ್ಸ್, ಪಾಲಿಸಿ ನಂ. 3005/2012698413/80/0000011768 ಮೌಲ್ಯ: ರೂ. 60,000 ಕೊಡಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಾರ್ವಜನಿಕರಿಗೆ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ಪೊಲೀಸ್ ಇಲಾಖೆಗೆ…

ಮುಂದೆ ಓದಿ..
ಸುದ್ದಿ 

ಮಾಡಿದ್ದುಣ್ಣೋ ಮಹಾರಾಯ…….

Taluknewsmedia.com

Taluknewsmedia.comಬೇವು ಬಿತ್ತಿ ಮಾವಿನ ಫಲವನ್ನು ನಿರೀಕ್ಷಿಸಿದರೆಂತಯ್ಯ……. ನಾನು ಕೆಲವರು ವಿರುದ್ಧ ದೂರು ಕೊಡಬೇಕಿದೆ. ಯಾರಿಗೆ ಕೊಡಲಿ, ಎಲ್ಲಿ ಕೊಡಲಿ, ತಿಳಿದವರು ದಯವಿಟ್ಟು ಸ್ವಲ್ಪ ಮಾಹಿತಿ ನೀಡಿ…….. ಸಿನಿಮಾ, ಜಾಹೀರಾತುಗಳಲ್ಲಿ ಅಶ್ಲೀಲ ದೃಶ್ಯಗಳನ್ನು ಪ್ರದರ್ಶಿಸುವ ಮಂದಿಯ ವಿರುದ್ಧ ದೂರು ಕೊಡಬೇಕಿದೆ, ಅದೇ ಸಿನಿಮಾಗಳಲ್ಲಿ ಮಚ್ಚು, ಲಾಂಗು ಬಾಂಬು, ಬಂದೂಕು, ರಕ್ತ, ಹಿಂಸೆ, ಸೇಡು ತೋರಿಸಿ ಸಮಾಜವನ್ನು ದಾರಿ ತಪ್ಪಿಸುವವರ ವಿರುದ್ಧ ದೂರು ನೀಡಬೇಕಿದೆ, ಧಾರವಾಹಿಗಳಲ್ಲಿ ಮಾನವೀಯ ಮೌಲ್ಯಗಳನ್ನು ನಾಶಪಡಿಸಿ ಅದರ ವಿರುದ್ಧ ಮೌಲ್ಯಗಳನ್ನು ಪ್ರತಿಪಾದಿಸುವ, ಕೌಟುಂಬಿಕ ಮೌಲ್ಯಗಳನ್ನು ಅಪವಿತ್ರಗೊಳಿಸಿ ಅನೈತಿಕ ಸಂಬಂಧಗಳನ್ನು ನೈತಿಕ ಗೊಳಿಸುವ ಕಥೆಗಳ ವಿರುದ್ಧ ದೂರು ನೀಡಬೇಕಿದೆ, ರಿಯಾಲಿಟಿ ಶೋಗಳ ಹೆಸರಿನಲ್ಲಿ ಬಿಗ್ ಬಾಸ್ ರೀತಿಯ ಅತ್ಯಂತ ಕೀಳು ಅಭಿರುಚಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವವರ ವಿರುದ್ಧ ದೂರು ನೀಡಬೇಕಿದೆ, ಸರ್ಕಾರದ ಪ್ರತಿ ಕಚೇರಿಯಲ್ಲಿ ಲಂಚಕ್ಕಾಗಿ ಒತ್ತಾಯಿಸುವ, ಕಿರುಕುಳಕೊಡುವ ಅಧಿಕಾರಿಗಳ ವಿರುದ್ಧ ದೂರು ನೀಡಬೇಕಿದೆ, ಬೆಂಗಳೂರಿನ ಪ್ರಮುಖ…

ಮುಂದೆ ಓದಿ..