ದೇವನಹಳ್ಳಿ: ವೀಲಿಂಗ್ ಮಾಡುತ್ತಿದ್ದ ಯುವಕ ಬಂಧನ
Taluknewsmedia.com ಬೆಂಗಳೂರು 18 ಆಗಸ್ಟ್ 2025 ದೇವನಹಳ್ಳಿಯ ಬಿ.ಬಿ.ರಸ್ತೆಯ ಮೇಲೆ ಸ್ಕೂಟರ್‌ನಲ್ಲಿ ಅತಿವೇಗವಾಗಿ ಹಾಗೂ ಅಜಾಗರೂಕತೆಯಿಂದ ವೀಲಿಂಗ್ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. 15 ಆಗಸ್ಟ್ 2025ರಂದು ಬೆಳಿಗ್ಗೆ ಸುಮಾರು 8:20ರ ಹೊತ್ತಿಗೆ, ಕೋಗಿಲು ಜಂಕ್ಷನ್ ಬಳಿ ಪಹರೆಯಲ್ಲಿ ತೊಡಗಿದ್ದ ಯಲಹಂಕ ಟ್ರಾಫಿಕ್ ಪೊಲೀಸರು ಸಾರ್ವಜನಿಕರಿಂದ ಬಂದ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಹೊಂಡಾ ಡಿಯೋ (KA-04-CH-7706) ಮೇಲೆ ವೀಲಿಂಗ್ ಮಾಡುತ್ತಾ ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಿದ್ದ ಯುವಕನನ್ನು ತಡೆದು ಯಲಹಂಕ ಸಂಚಾರಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ತನಿಖೆಯಲ್ಲಿ ಬಂಧಿತ ಯುವಕನ ಹೆಸರು ರಿಹಾನ್ ಬಿನ್ ರಫೀ (19), ವಾಸ: ಕಾವಲ ಬೈರಸಂದ್ರ ಬಸ್ ನಿಲ್ದಾಣ ಹತ್ತಿರ, ಆರ್.ಟಿ.ನಗರ, ಬೆಂಗಳೂರು ಎಂದು ತಿಳಿದುಬಂದಿದೆ. ಪೊಲೀಸರು ಆರೋಪಿಯ ವಿರುದ್ಧ ಅತಿವೇಗ, ಅಜಾಗರೂಕ ಚಾಲನೆ ಹಾಗೂ ಸಾರ್ವಜನಿಕರ ಪ್ರಾಣಕ್ಕೆ ಅಪಾಯ ಉಂಟುಮಾಡುವಂತಹ ಕೃತ್ಯ ಕುರಿತಂತೆ ಪ್ರಕರಣ ದಾಖಲಿಸಿದ್ದಾರೆ.…
ಮುಂದೆ ಓದಿ..
