ಸುದ್ದಿ 

ಆನ್‌ಲೈನ್ ವಂಚನೆ: ಡ್ರೈ ಫ್ರೂಟ್ ಆರ್ಡರ್ ಮಾಡಿ ₹74,000 ಕಳೆದುಕೊಂಡ ನಾಗರಿಕ

Taluknewsmedia.com

Taluknewsmedia.comಬೆಂಗಳೂರು ಆಗಸ್ಟ್ 16 2025 ಕಾಳಿಗ ರಾಜರಾಜಿ ಎಂಬವರು ಕೊಡುಗೆಹಳ್ಳಿ ಪೊಲೀಸರಿಗೆ ನೀಡಿದ ದೂರು ಪ್ರಕಾರ, 12 ಆಗಸ್ಟ್ 2025 ರಂದು ಆನ್‌ಲೈನ್‌ನಲ್ಲಿ ಡ್ರೈ ಫ್ರೂಟ್ ಆರ್ಡರ್ ಮಾಡಿ ಯುಪಿಐ ಮೂಲಕ ₹299 ಪಾವತಿಸಿದ್ದಾರೆ. ನಂತರದ ದಿನ 7085716403 ಸಂಖ್ಯೆಯಿಂದ ಕರೆ ಮಾಡಿ 30% ರಿಯಾಯಿತಿ ನೀಡುವುದಾಗಿ ತಿಳಿಸಲಾಗಿದೆ. 13 ಆಗಸ್ಟ್ 2025 ರಂದು ಮತ್ತೊಬ್ಬರು 7004098089 ಸಂಖ್ಯೆಯಿಂದ ಕರೆ ಮಾಡಿ, ಹಣ ಮರುಪಾವತಿ ಮಾಡುವ ನೆಪದಲ್ಲಿ ಬ್ಯಾಂಕ್ ಖಾತೆ ವಿವರಗಳನ್ನು ಪಡೆದುಕೊಂಡಿದ್ದಾರೆ. ನಂತರ ಖಾತೆಯಿಂದ ₹74,000 (ವಹಿವಾಟು ಸಂಖ್ಯೆ: 223-5010019677589) ಹಣ ಕಳವಾಗಿದೆ. ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಇದು ಆನ್‌ಲೈನ್ ವಂಚನೆ ಎಂದು ದೃಢಪಟ್ಟಿದ್ದು, ಕೊಡುಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಮುಂದೆ ಓದಿ..
ಸುದ್ದಿ 

ಟೆಲಿಗ್ರಾಂನಲ್ಲಿ ಕೆಲಸದ ಆಮಿಷ – ಮಹಿಳೆಗೆ ₹1.47 ಲಕ್ಷ ವಂಚನೆ

Taluknewsmedia.com

Taluknewsmedia.comಬೆಂಗಳೂರು ಆಗಸ್ಟ್ 16 2025 ಟೆಲಿಗ್ರಾಂ ಪಾರ್ಟ್‌ಟೈಮ್ ಕೆಲಸದ ಆಮಿಷವೊಡ್ಡಿ ಮಹಿಳೆಯೊಬ್ಬರ ಖಾತೆಯಿಂದ ₹1.47 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ಕೊಡುಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಆಗಸ್ಟ್ 11, 2025 ರಂದು CGI Co. Ltd. ಎಂಬ ಐಡಿಯಿಂದ ದೂರುದಾರರಿಗೆ “ಯೂಟ್ಯೂಬ್‌ನಲ್ಲಿ ಸಬ್‌ಸ್ಕ್ರೈಬ್ ಮಾಡಿದರೆ ಹಣ ನೀಡಲಾಗುತ್ತದೆ” ಎಂಬ ಸಂದೇಶವೊಂದು ಬಂದಿತ್ತು. ನಂಬಿದ ಅವರು ಮೊದಲು ನೋಂದಣಿ ಶುಲ್ಕ, ಬಳಿಕ ಜಿ.ಎಸ್.ಟಿ. ಹೆಸರಿನಲ್ಲಿ ಹಣ ವರ್ಗಾಯಿಸಿದರು. maruthicargo@kphdfc, manasacandu-1@okicici, lucky77chintu-1@okaxis, 9449724415@ptaxis, rahulhaieere@ptyes, sambagottapu@okicici ಸೇರಿದಂತೆ ಹಲವಾರು ಖಾತೆಗಳಿಗೆ ಹಣ ಕಳುಹಿಸಿದ ನಂತರ, ಇದು ವಂಚನೆ ಎಂದು ತಿಳಿದುಬಂದಿತು. ಒಟ್ಟು ₹1,47,900 ಕಳೆದುಕೊಂಡ ಮಹಿಳೆ, ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.

ಮುಂದೆ ಓದಿ..

ಟೆಲಿಗ್ರಾಂನಲ್ಲಿ ಪಾರ್ಟ್‌ಟೈಮ್ ಕೆಲಸದ ಆಮಿಷ – ಮಹಿಳೆಗೆ ₹1.47 ಲಕ್ಷ ವಂಚನೆ

Taluknewsmedia.com

Taluknewsmedia.comಟೆಲಿಗ್ರಾಂನಲ್ಲಿ ಪಾರ್ಟ್‌ಟೈಮ್ ಕೆಲಸದ ಆಮಿಷ – ಮಹಿಳೆಗೆ ₹1.47 ಲಕ್ಷ ವಂಚನೆ ಬೆಂಗಳೂರು ಆಗಸ್ಟ್ 16 2025 ಟೆಲಿಗ್ರಾಂ ಆಮಿಷವೊಡ್ಡಿ ಮಹಿಳೆಯೊಬ್ಬರ ಖಾತೆಯಿಂದ ₹1.47 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ಕೊಡುಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಆಗಸ್ಟ್ 11, 2025 ರಂದು CGI Co. Ltd. ಎಂಬ ಐಡಿಯಿಂದ ದೂರುದಾರರಿಗೆ “ಯೂಟ್ಯೂಬ್‌ನಲ್ಲಿ ಸಬ್‌ಸ್ಕ್ರೈಬ್ ಮಾಡಿದರೆ ಹಣ ನೀಡಲಾಗುತ್ತದೆ” ಎಂಬ ಸಂದೇಶವೊಂದು ಬಂದಿತ್ತು. ನಂಬಿದ ಅವರು ಮೊದಲು ನೋಂದಣಿ ಶುಲ್ಕ, ಬಳಿಕ ಜಿ.ಎಸ್.ಟಿ. ಹೆಸರಿನಲ್ಲಿ ಹಣ ವರ್ಗಾಯಿಸಿದರು. maruthicargo@kphdfc, manasacandu-1@okicici, lucky77chintu-1@okaxis, 9449724415@ptaxis, rahulhaieere@ptyes, sambagottapu@okicici ಸೇರಿದಂತೆ ಹಲವಾರು ಖಾತೆಗಳಿಗೆ ಹಣ ಕಳುಹಿಸಿದ ನಂತರ, ಇದು ವಂಚನೆ ಎಂದು ತಿಳಿದುಬಂದಿತು. ಒಟ್ಟು ₹1,47,900 ಕಳೆದುಕೊಂಡ ಮಹಿಳೆ, ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.

ಮುಂದೆ ಓದಿ..
ಸುದ್ದಿ 

ಹೆಬ್ಬಾಳ ಶಿಕ್ಷಕಿಯ ವಿರುದ್ಧ ಕಿರುಕುಳ – ಪ್ರಕರಣ ದಾಖಲು

Taluknewsmedia.com

Taluknewsmedia.comಬೆಂಗಳೂರು: ಆಗಸ್ಟ್ 16 2025ಹೆಬ್ಬಾಳದಲ್ಲಿರುವ ಕೆ.ಪಿ.ಎಸ್ ಶಾಲೆಯೊಬ್ಬ ಶಿಕ್ಷಕಿಯು, ತನ್ನ ಮೇಲೆ ಕಿರುಕುಳ ಮತ್ತು ಬೆದರಿಕೆ ಹಾಕಿದ ಆರೋಪದ ಮೇಲೆ ವಿಶ್ವನಾಥ್ ಎಂಬ ವ್ಯಕ್ತಿಯ ವಿರುದ್ಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ಪ್ರಕಾರ, ಆರೋಪಿಯು ಸುಮಾರು ಎಂಟು ತಿಂಗಳಿನಿಂದ ಪರಿಚಯವಾಗಿದ್ದು, ಜುಲೈ 18ರಿಂದ ಶಿಕ್ಷಕಿಯ ಮನೆಯಲ್ಲಿ ಹಾರ್ನ್ ಹೊಡೆದು ತೊಂದರೆ ನೀಡುತ್ತಿದ್ದನು ಮತ್ತು ಕೆಲಸಕ್ಕೆ ಹೋಗುವಾಗ ಪ್ರತಿದಿನ ಹಿಂಬಾಲಿಸುತ್ತಿದ್ದನು. ಆಗಸ್ಟ್ 1ರಂದು ಸಂಜೆ 5 ಗಂಟೆಗೆ, ಶಿಕ್ಷಕಿ ಮತ್ತು ಅವರ ಮಗಳನ್ನು ಹಿಂಬಾಲಿಸಿ ಬಂದು ಆವಾಚ್ಯ ಶಬ್ದಗಳಿಂದ ಬೈದು ಬಾಯಿಂದ ಉಗುಳಿದ್ದಾನೆ. ಪರಿಚಯದ ಆರಂಭದಲ್ಲಿ ಶಿಕ್ಷಕಿಯ ವೈಯಕ್ತಿಕ ಫೋಟೋಗಳನ್ನು ತೆಗೆದುಕೊಂಡಿದ್ದ ಆರೋಪಿಯು, ಅವುಗಳನ್ನು ಅವರ ತಂಗಿಯ ಮೊಬೈಲ್‌ಗೆ ಕಳುಹಿಸಿ, ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚುವುದಾಗಿ ಬೆದರಿಕೆ ಹಾಕಿದ್ದಾನೆ. ಆಗಸ್ಟ್ 7ರಂದು ಶಿಕ್ಷಕಿಯ ಮಾಜಿ ಪತಿಯೊಂದಿಗೆ ನಡೆದ ಮಾತುಕತೆಯ ಆಡಿಯೋವನ್ನು ವಾಟ್ಸ್‌ಆಪ್ ಮೂಲಕ…

ಮುಂದೆ ಓದಿ..
ಸುದ್ದಿ 

ಮಹಾಭಾರತದ ಕೃಷ್ಣ ಎಂಬ ವ್ಯಕ್ತಿತ್ವದ ಸುತ್ತ………..

Taluknewsmedia.com

Taluknewsmedia.comಮಹಾಭಾರತದ ಕೃಷ್ಣಎಂಬ ವ್ಯಕ್ತಿತ್ವದ ಸುತ್ತ……….. ಎಂತಹ ಅತ್ಯದ್ಭುತ ಪಾತ್ರವದು, ಸಾಹಿತ್ಯಿಕವಾಗಿ ಇರಬಹುದು, ವ್ಯಾವಹಾರಿಕವಾಗಿ ಇರಬಹುದು, ಕಾಲ್ಪನಿಕವಾಗಿ ಇರಬಹುದು ಅಥವಾ ವ್ಯಕ್ತಿತ್ವದ ದೃಷ್ಟಿಯಿಂದ ಇರಬಹುದು. ಸರಿಸುಮಾರು ಪರಿಪೂರ್ಣ ಎಂಬ ಅಭಿಪ್ರಾಯ ಮೂಡಿಸುವ ಪಾತ್ರವದು……. ಅರಿಷಡ್ವರ್ಗಗಳು, ನವ ರಸಗಳು, ಅರವತ್ನಾಲಕ್ಕು ವಿದ್ಯೆಗಳು ಸೇರಿ ಎಲ್ಲಾ ರೀತಿಯ ಅನುಭವಗಳು ಅದರಲ್ಲಿ ಅಡಕವಾಗಿದೆ. ಬಹುತೇಕ ಸಕಲಕಲಾವಲ್ಲಬ…….. ಹೇಗೆ ಅದೊಂದು ಅದ್ಬುತ ಪಾತ್ರವೋ, ಶಕ್ತಿಶಾಲಿಯೋ ಹಾಗೆಯೇ ಕೃಷ್ಣನ ಪ್ರತಿ ನಡೆಯನ್ನು ಅಷ್ಟೇ ತೀಕ್ಷ್ಣವಾಗಿ ಪ್ರಶ್ನಿಸುತ್ತಾ ಸಾಗಬಹುದು. ಕೆಲವುಗಳಿಗೆ ನಿರ್ದಿಷ್ಟ – ಖಚಿತ ಉತ್ತರ, ಮತ್ತೆ ಕೆಲವು ವೇಳೆ ಪಲಾಯನ ವಾದ, ಇನ್ನೊಮ್ಮೆ ಜನ್ಮಾಂತರಗಳಲ್ಲಿ ಅಡಗುವುದು, ಮಗದೊಮ್ಮೆ ಆ ಕ್ಷಣದ ಸತ್ಯ, ಮತ್ತೊಮ್ಮೆ ಗೊಂದಲದ ಸಮರ್ಥನೆ, ನಾನೇ ಸರಿ ಎಂಬ ಹಠ, ಸ್ವಲ್ಪ ವಾಸ್ತವವಾದಿ, ಹೆಚ್ಚು ದುರಹಂಕಾರಿ, ಅಪಾರ ತಂತ್ರಗಳು ಹಾಗೆಯೇ ಉದಾರಿ, ತ್ಯಾಗಿ ಇನ್ನೂ ಎಲ್ಲಾ ಭಾವಗಳ ಸಂಗಮ ಈ ಕೃಷ್ಣ….. ಇತರ ಕೆಲವು…

ಮುಂದೆ ಓದಿ..
ಸುದ್ದಿ 

ಸಾಂಕೇತಿಕವಾಗಿ ನಾಯಿಗಳು ಯಾರು ?ಊಹಿಸಿ……….

Taluknewsmedia.com

Taluknewsmedia.comಸಾಂಕೇತಿಕವಾಗಿ ನಾಯಿಗಳು ಯಾರು ?ಊಹಿಸಿ………. ಬೀದಿ ನಾಯಿಗಳ ಬಗ್ಗೆ ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಚರ್ಚೆಗಳು ಆಗುತ್ತಿರುವಾಗ ಕಾಡಿನ ನಾಯಿಯ ಪ್ರವೇಶ…… ಕಾಡಿನ ನಾಯಿಯೊಂದು ಆಹಾರ ಹುಡುಕುತ್ತಾ ದಾರಿ ತಪ್ಪಿಸಿಕೊಂಡು ನಾಡಿಗೆ ಬಂದಿದೆ…. ‌.‌‌‌‌‌…….‌ ಮಳೆಗಾಲದ ಈ ಸಮಯದಲ್ಲಿ ಅದಕ್ಕೆ ಕಾಡಿನಲ್ಲಿ ಆಹಾರದ ಕೊರತೆ ಕಾಡಿತು. ಬಹುತೇಕ ಮಾಂಸಹಾರಿ ಪ್ರಾಣಿ ನಾಯಿ……….. ರಾತ್ರಿಯೆಲ್ಲಾ ಸಂಚರಿಸುತ್ತಾ ಯಾವುದೋ ಹಾದಿ ಹಿಡಿದು ಸಾಗುತ್ತಿರುವಾಗ ಆಕಸ್ಮಿಕವಾಗಿ ಕಾಡು ಕೊನೆಯಾಗಿ ಬೆಳಗಿನ ಹೊತ್ತಿಗೆ ತನಗರಿವಿಲ್ಲದೆ ಮತ್ತು ತಾನೆಂದೂ ನೋಡಿರದ ನಗರ ಪ್ರವೇಶಿಸಿತು…………. ಕಾಡ ನಾಯಿಯಾದರೂ ಇತ್ತೀಚಿನ ವರ್ಷಗಳಲ್ಲಿ ಆಹಾರ ಸರಿಯಾಗಿ ಸಿಗದೆ ಸ್ವಲ್ಪ ಬಡಕಲು ದೇಹದ ನಾಯಿ ಆಟದ ಮೈದಾನದಲ್ಲಿ ತನ್ನದೇ ನಾಯಿ ಪಂಗಡದ ವಿವಿಧ ಆಕಾರದ ದಷ್ಟಪುಷ್ಟ ನಾಯಿಗಳು ಸಂಚರಿಸುತ್ತಿರುವುದನ್ನು ನೋಡಿ ಖುಷಿಯಾಯಿತು. ತಾನು ಸರಿಯಾದ ದಾರಿಯಲ್ಲೇ ಇದ್ದೇನೆ ಎಂದು ಭಾವಿಸಿ ಅದರ ಹತ್ತಿರ ಹೋಗುತ್ತಿದ್ದಂತೆ ಅದರ ಮಾಲೀಕರು ಕಿರುಚುತ್ತಾ ಕೈಯಲ್ಲಿದ್ದ ಕೋಲಿನಿಂದ…

ಮುಂದೆ ಓದಿ..
ಸುದ್ದಿ 

ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ತಾಯಿ ನೆಲವನ್ನು ಸ್ಮರಿಸುತ್ತಾ……..

Taluknewsmedia.com

Taluknewsmedia.comತಾಯ್ನೆಲ……. ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ತಾಯಿ ನೆಲವನ್ನು ಸ್ಮರಿಸುತ್ತಾ…….. 78 ರ ಯೌವ್ವನದ ಸೃಷ್ಟಿಯ ಅತ್ಯದ್ಭುತ, ಅತ್ಯಾಕರ್ಷಕ ಭರತ ಖಂಡವೇ,……. ನಿನ್ನೊಂದಿಗೆ ಈ ಕ್ಷಣ ನಾನಿರುವುದೇ ಒಂದು ಸೌಭಾಗ್ಯ.ಅದಕ್ಕೆ ಕೃತಜ್ಞತೆ ಸಲ್ಲಿಸುತ್ತಾ….. ಸ್ವಾತಂತ್ರ್ಯ ಪಡೆದ 78 ವರ್ಷಗಳು …… ಸಂವಿಧಾನ ಸ್ವೀಕರಿಸಿ 75 ವರ್ಷಗಳು…… ಆದರೆ,ನಿನ್ನ ಅಸ್ತಿತ್ವ ಸಹಸ್ರಾರು ವರ್ಷಗಳ ನಿರಂತರ ಚಲನೆಯಿಂದ ಕೂಡಿದೆ…… ನನ್ನ ಭರತ ಖಂಡವೇ ಏನೆಂದು ವರ್ಣಿಸಲಿ – ಎಷ್ಟೆಂದು ವರ್ಣಿಸಲಿ ನಿನ್ನನ್ನು …… ಪದಗಳು – ಭಾವಗಳು – ಕಲ್ಪನೆಗಳಿಗೂ ನಿಲುಕದ ನಿನ್ನನ್ನು ಹೇಗೆಂದು ಹಿಡಿದಿಡಲಿ ಈ ಪುಟ್ಟ ಹೃದಯದಲಿ…. ರಾಮಾಯಣ – ಮಹಾಭಾರತ – ಭಗವದ್ಗೀತೆಗಳೆಂಬ – ಅಸಾಮಾನ್ಯ ಬೃಹತ್ ಗ್ರಂಥಗಳು ನಿನ್ನಲ್ಲೇ ಸೃಷ್ಟಿಯಾದವು…….. ಗೌತಮ ಬುದ್ಧ – ಮಹಾವೀರರೆಂಬ ಚಿಂತನ ಚಿಲುಮೆಗಳಿಗೆ ಜನ್ಮ ನೀಡಿದ್ದು ನೀನೇ……. ಹಿಮಗಿರಿಯ ಸೌಂದರ್ಯ – ನಿತ್ಯ ಹರಿದ್ವರ್ಣದ ಕಾಡುಗಳು – ತುಂಬಿ ತುಳುಕುವ ನದಿಗಳು…

ಮುಂದೆ ಓದಿ..
ಸುದ್ದಿ 

ಪ್ರಜಾಪ್ರಭುತ್ವ — ಸ್ವಾತಂತ್ರ್ಯ – ಸ್ವೇಚ್ಛೆ – ಗುಲಾಮಿತನ……..

Taluknewsmedia.com

Taluknewsmedia.comಪ್ರಜಾಪ್ರಭುತ್ವ — ಸ್ವಾತಂತ್ರ್ಯ – ಸ್ವೇಚ್ಛೆ – ಗುಲಾಮಿತನ…….. ಈ ಪದಗಳ ನಿಜವಾದ ಅರ್ಥವನ್ನು, ಆಶಯವನ್ನು ಗ್ರಹಿಸಲು ಓದು, ಅಧ್ಯಯನ, ಚಿಂತನೆ, ಅನುಭವ, ಅನುಭಾವ, ಸಂವೇದನಾಶೀಲತೆ, ಕ್ರಿಯಾಶೀಲತೆ, ವಿಶಾಲತೆ, ಒಳ್ಳೆಯತನ, ಭೌಗೋಳಿಕ, ಕಾನೂನಾತ್ಮಕ ಮತ್ತು ಪ್ರಾಕೃತಿಕ ಮೌಲ್ಯಗಳ ಜ್ಞಾನ ಇರಬೇಕಾಗುತ್ತದೆ. ಇಲ್ಲದಿದ್ದರೆ ಎಲ್ಲವೂ ಒಂದು ಹುಚ್ಚರ ಸಂತೆಯಂತೆ ಭಾಸವಾಗುತ್ತದೆ. ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಕ್ರಾಂತಿಯಿಂದ ಇವುಗಳ ನಡುವಿನ ವ್ಯತ್ಯಾಸವನ್ನು ಗ್ರಹಿಸುವಲ್ಲಿ ನಾವು ವಿಫಲರಾಗುತ್ತಿದ್ದೇವೆ ಎನಿಸುತ್ತದೆ. ಈ ವಿಫಲತೆಯನ್ನು ರಾಜಕಾರಣಿಗಳು, ಅಧಿಕಾರಿಗಳು ಮತ್ತು ಕಾರ್ಪೊರೇಟ್ ಕುಳಗಳು ಬಹಳ ಯಶಸ್ವಿಯಾಗಿ ಉಪಯೋಗಿಸಿಕೊಂಡು ಜನರನ್ನು ನೇರ ನಿಯಂತ್ರಣಕ್ಕೆ ಒಳಪಡಿಸಿಕೊಂಡಿದೆ. ಒಂದು ರೀತಿ ಶ್ವಾನಗಳಿಗೆ ಬಿಸ್ಕೆಟ್ ಹಾಕುವಂತೆ ಜನರ ಮನೋಭಾವವನ್ನೇ ದಿವಾಳಿತನದತ್ತ ದೂಡಿ ಜೀತದಾಳುಗಳಂತೆ ಉಪಯೋಗಿಸಿಕೊಳ್ಳುತ್ತಿದೆ. ತಿನ್ನುವುದಕ್ಕಾಗಿ ಬದುಕಬೇಕೋ, ಬದುಕುವುದಕ್ಕಾಗಿ ತಿನ್ನಬೇಕೋ ಎಂಬ ಗೊಂದಲ ಸೃಷ್ಟಿ ಮಾಡಿದೆ. ಆದರೆ ತಿನ್ನುವುದಕ್ಕೂ, ಬದುಕುವುದಕ್ಕೂ ಜೀವನ ಪರ್ಯಂತ ದುಡಿಯಲೇ ಬೇಕಾದ ಅನಿವಾರ್ಯತೆಯಂತು ಸೃಷ್ಟಿಯಾಗಿದೆ. ಬಹುತೇಕ…

ಮುಂದೆ ಓದಿ..
ಸುದ್ದಿ 

ವೀರಸಾಗರದಲ್ಲಿ ಗಣೇಶ ಹಬ್ಬದ ಚರ್ಚೆ ವೇಳೆ ಯುವಕನ ಮೇಲೆ ಹಲ್ಲೆ

Taluknewsmedia.com

Taluknewsmedia.comಬೆಂಗಳೂರು ಆಗಸ್ಟ್ 12 2025ವೀರಸಾಗರ ಮುಖ್ಯರಸ್ತೆಯ ಹತ್ತಿರ ಗಣೇಶ ಹಬ್ಬದ ವ್ಯವಸ್ಥೆ ಕುರಿತು ಚರ್ಚಿಸುತ್ತಿದ್ದ ಯುವಕನ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಘಟನೆ 9 ಆಗಸ್ಟ್ ರಾತ್ರಿ ನಡೆದಿದೆ. ಯಲಹಂಕ ಉಪನಗರ ಪೊಲೀಸರ ಮಾಹಿತಿಯಂತೆ, ರಾತ್ರಿ 11:30ರ ಸುಮಾರಿಗೆ ನಾಗು ಎಂಬಾತ ತನ್ನ ಸಹೋದರ ಹಾಗೂ ರಾಜು ಎಂಬಾತನೊಂದಿಗೆ ಕಾರಿನಲ್ಲಿ ಬಂದು, ಆನಂದ ಅವರ ತಮ್ಮನನ್ನು ಹೊಡೆದಿದ್ದಾನೆ. ಮಧ್ಯ ಪ್ರವೇಶ ಮಾಡಿದ ಆನಂದ್ ಅವರಿಗೂ ಹೊಡೆದು ಬಾಯಿ ಮತ್ತು ಕಣ್ಣಿನ ಹತ್ತಿರ ಗಾಯಪಡಿಸಲಾಗಿದೆ. ಗಾಯಗೊಂಡವರು ಮೈತ್ರಿ ಕ್ಲಿನಿಕ್ ಕಡೆ ತೆರಳುತ್ತಿದ್ದಾಗ, ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಅರುಣ ಅಪಾರ್ಟ್ಮೆಂಟ್ ಹತ್ತಿರ ನಾಗು, ರಾಜು, ಅನೀಲ್ ಮತ್ತು ಇತರರು ಚಾಕು ಹಾಗೂ ಬ್ಯಾಟ್ ಹಿಡಿದು ಮತ್ತೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದರೆಂದು ಯಲಂಕ ಸಂಚಾರಿ ಪೊಲೀಸ್ ಠಾಣೆಯ ದೂರಿನಲ್ಲಿ ಹೇಳಲಾಗಿದೆ. ಗಾಯಗೊಂಡ ಪೀಡಿತನನ್ನು ಕುಟುಂಬಸ್ಥರು ಯಲಹಂಕ ಸರ್ಕಾರಿ…

ಮುಂದೆ ಓದಿ..
ಸುದ್ದಿ 

ಜೆ.ಪಿ.ನಗರದಲ್ಲಿ ಯುವಕ ಕಾಣೆ – ಪೊಲೀಸರ ಶೋಧ ಮುಂದುವರಿಕೆ

Taluknewsmedia.com

Taluknewsmedia.comಬೆಂಗಳೂರು ಆಗಸ್ಟ್ 12 2025ಬೆಂಗಳೂರು: ಜೆ.ಪಿ.ನಗರದಲ್ಲಿ 19 ವರ್ಷದ ಯುವಕ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.ಯಲಹಂಕ ಉಪನಗರ ಪೊಲೀಸರ ಪ್ರಕಾರ, ವೆಂಕಟೇಶ್ ಹಾಗೂ ಅವರ ಮಗ ಕಿಶೋರ್ (19)ರ ನಡುವೆ ಆಗಸ್ಟ್ 8ರಂದು ಆಂಜಿನೇಯ ದೇವಾಸಾನದ ಹತ್ತಿರ ಕುಟುಂಬ ಸಂಬಂಧಿತ ವಿಚಾರವಾಗಿ ವಾಗ್ವಾದ ನಡೆದಿದೆ. ಬಳಿಕ ಮಧ್ಯಾಹ್ನ ಸುಮಾರು 3 ಗಂಟೆಗೆ ಕಿಶೋರ್ ಮನೆಯಿಂದ ಹೊರಗೆ ಹೋಗಿ ವಾಪಸು ಬಂದಿಲ್ಲ. ಕುಟುಂಬದವರು ಎಲ್ಲೆಡೆ ಹುಡುಕಿದರೂ ಯಾವುದೇ ಮಾಹಿತಿ ಸಿಗದ ಕಾರಣ, ವೆಂಕಟೇಶ್ ಅವರು ಯಲಹಂಕ ಉಪನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವಕನ ಪತ್ತೆ ಕಾರ್ಯ ಕೈಗೊಂಡಿದ್ದು, ಯಾರಾದರೂ ಮಾಹಿತಿ ತಿಳಿದಿದ್ದರೆ ಕೂಡಲೇ ಪೊಲೀಸರಿಗೆ ತಿಳಿಸಲು ಮನವಿ ಮಾಡಿದ್ದಾರೆ.

ಮುಂದೆ ಓದಿ..