ಸುದ್ದಿ 

ವಿಶಾಲ ಮೆಡಿಕಲ್ ಬಳಿ ಸ್ಕೂಟರ್-ಲಾರಿ ಡಿಕ್ಕಿ – ಯುವಕ ಗಂಭೀರವಾಗಿ ಗಾಯ

Taluknewsmedia.com

Taluknewsmedia.comಬೆಂಗಳೂರು: ನಗರದ ಸಿ.ಬಿ.ಐ ಮುಖ್ಯ ರಸ್ತೆಯ ವಿಶಾಲ ಮೆಡಿಕಲ್ ಹತ್ತಿರ ನಡೆದ ರಸ್ತೆ ಅಪಘಾತದಲ್ಲಿ 20 ವರ್ಷದ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಪೊಲೀಸರ ಪ್ರಕಾರ, ಆಗಸ್ಟ್ 7ರಂದು ರಾತ್ರಿ ಸುಮಾರು 9.30ರ ವೇಳೆಗೆ ಹಿತೇಶ್ ಎಂ (20) ಸ್ಕೂಟರ್‌ (KA-41-HB-7777) ನಲ್ಲಿ ಸಂಚರಿಸುತ್ತಿದ್ದಾಗ, ಹಿಂದೆ ಬಂದ ಸಿಮೆಂಟ್ ಲಾರಿ (KA-51-A-8939) ವೇಗವಾಗಿ ಬಂದು ಸ್ಕೂಟರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯಿಂದ ಹಿತೇಶ್ ರಸ್ತೆ ಮೇಲೆ ಬಿದ್ದು ಎಡ ಕಾಲಿಗೆ ತೀವ್ರ ಪೆಟ್ಟಾಗಿದ್ದು, ಸ್ಕೂಟರ್‌ ಕೂಡ ಜಖಂಗೊಂಡಿದೆ. ಅಪಘಾತದ ನಂತರ, ಲಾರಿ ಚಾಲಕನೇ ಗಾಯಾಳುವನ್ನು ಸ್ಥಳೀಯರ ಸಹಾಯದಿಂದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಕರೆದೊಯ್ದು ಒಳರೋಗಿಯಾಗಿ ದಾಖಲಿಸಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಲಾರಿ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.

ಮುಂದೆ ಓದಿ..
ಸುದ್ದಿ 

ಆನೆಕಲ್‌ನಲ್ಲಿ ನಕಲಿ ಸಿಗರೇಟ್ ಮಾರಾಟ – ITC ಕಂಪನಿ ಪ್ರತಿನಿಧಿಯಿಂದ ದೂರು

Taluknewsmedia.com

Taluknewsmedia.comಆನೆಕಲ್, ಆ. 9 – ಆನೆಕಲ್ ತಾಲೂಕಿನ ತಾಳಿ ರಸ್ತೆಯಲ್ಲಿರುವ ಒಂದು ಪ್ರೊವಿಷನ್ ಅಂಗಡಿಯಲ್ಲಿ ನಕಲಿ ಸಿಗರೇಟ್ ಮಾರಾಟವಾಗುತ್ತಿರುವ ಬಗ್ಗೆ ITC ಕಂಪನಿಯ ಅಧಿಕೃತ ಪ್ರತಿನಿಧಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮುರಗನ್ ಬಿನ್ ತಂಗಮಣಿ ಅವರು 30 ಮೇ 2025ರ ಅಧಿಕಾರ ಪತ್ರದ ಆಧಾರದಲ್ಲಿ ಕಂಪನಿಯ ಪರವಾಗಿ ನಕಲಿ ಸಿಗರೇಟ್‌ಗಳ ಪತ್ತೆ, ದೂರು ಹಾಗೂ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿದ್ದಾರೆ. ITC ಕಂಪನಿ Insignia, India Kings, Gold Flake, Wills Navy Cut, Players ಸೇರಿದಂತೆ ಹಲವು ಪ್ರಸಿದ್ಧ ಬ್ರ್ಯಾಂಡ್‌ಗಳ ಮಾಲೀಕತ್ವ ಹೊಂದಿದೆ. ಆಗಸ್ಟ್ 8 ಮತ್ತು 9 ರಂದು, ಮುರುಗನ್ ರವರು ಹಾಗೂ ಕಂಪನಿಯ ತನಿಖಾಧಿಕಾರಿ ಮಣಿಮಾರನ್ ಅವರು ಆನೆಕಲ್ ಟೌನ್ ತಾಳಿ ರಸ್ತೆಯಲ್ಲಿರುವ K.L.S Provision Store ನಲ್ಲಿ Kings ಮತ್ತು Kings Lights ಬ್ರ್ಯಾಂಡ್‌ನ ಸಿಗರೇಟ್‌ಗಳನ್ನು ಖರೀದಿಸಿದ್ದು, ಅವು…

ಮುಂದೆ ಓದಿ..
ಸುದ್ದಿ 

ಆನೇಕಲ್‌ನಲ್ಲಿ ಅಪಾರ್ಟ್‌ಮೆಂಟ್ ನಿರ್ಮಾಣ ಸ್ಥಳದಿಂದ ವೈರ್‌ ಬಂಡಲ್‌ ಕಳ್ಳತನ

Taluknewsmedia.com

Taluknewsmedia.comಆನೇಕಲ್: ಆನೇಕಲ್ ತಾಲೂಕು, ಸರ್ಜಾಪುರ ಹೋಬಳಿ, ಅಡಿಗಾರಕಲಹಳ್ಳಿ ರಸ್ತೆಯ ಎಸ್.ಮೇಡಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ “ವಿಲಾರ ಲಗೆಸಿ” ಅಪಾರ್ಟ್‌ಮೆಂಟ್‌ ನಿರ್ಮಾಣ ಸ್ಥಳದಲ್ಲಿ ಕಳ್ಳತನ ಘಟನೆ ನಡೆದಿದೆ. ಪೊಲೀಸರಿಗೆ ಲಭಿಸಿದ ಮಾಹಿತಿಯ ಪ್ರಕಾರ, ವಿಚಾರ ಇನ್ಮಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ವತಿಯಿಂದ ನಿರ್ಮಾಣ ಹಂತದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಭಾಗಶಃ ಕಟ್ಟಡ ಕಾರ್ಯ ಪೂರ್ಣಗೊಂಡಿದ್ದು, ವೈರಿಂಗ್ ಕೆಲಸ ನಡೆಯುತ್ತಿದೆ. ವೈರಿಂಗ್ ಕಾರ್ಯಕ್ಕಾಗಿ ಕೆಳಮಹಡಿಯಲ್ಲಿ ಇಡಲಾಗಿದ್ದ 1 sq, 1.5 sq, 2.5 sq ಮತ್ತು 4 sq ಗಾತ್ರದ ವೈರ್‌ ಬಂಡಲ್‌ಗಳನ್ನು ದಿನಾಂಕ 06ಆಗಸ್ಟ್‌ 2025ರ ರಾತ್ರಿ ಅಪರಿಚಿತ ಕಳ್ಳರು ಕಾಂಪೌಂಡ್‌ ಹಾರಿ ಕಳ್ಳತನ ಮಾಡಿದ್ದಾರೆ. ಕಳುವಾದ ವಸ್ತುಗಳ ನಿಖರ ಮೌಲ್ಯ ಇನ್ನೂ ಲೆಕ್ಕ ಹಾಕಲಾಗುತ್ತಿದ್ದು, ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ಗಳು ಮತ್ತು ಸಿಬ್ಬಂದಿಯಿಂದ ವಿಚಾರಣೆ ನಡೆಸಿದರೂ, ಕಳ್ಳರ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ಈ ಸಂಬಂಧ ಪೀಡಿತರು ದಿನಾಂಕ 08 ಆಗಸ್ಟ್‌…

ಮುಂದೆ ಓದಿ..
ಸುದ್ದಿ 

ಧ್ಯಾನಸ್ಥ ಬದುಕು…….

Taluknewsmedia.com

Taluknewsmedia.comಧ್ಯಾನಸ್ಥ ಬದುಕು……. ಬಾಹ್ಯ ಸಾಧನೆಯ ಶಿಖರವೇರಲು ನಾವು ಮಾಡಬೇಕಾದ ಪ್ರಯತ್ನ…………….. ಎತ್ತರದ ಬೆಟ್ಟದ ಮೇಲೆ ನಿಂತು ಕೆಳಗೆ  ನೋಡಿದಾಗ ಗಿಡ ಮರಗಳು ಮುಖ್ಯವಾಗಿ ಮನುಷ್ಯರು ಅತ್ಯಂತ ಚಿಕ್ಕದಾಗಿ ಕಾಣುತ್ತಾರೆ……… ಇದನ್ನೇ ಒಂದು ಸಂಕೇತವಾಗಿ ಬಳಸಿಕೊಂಡು ನೋಡಿದಾಗ………… ನಾವು ಸಾಧನೆಯಲ್ಲಿ ಎತ್ತರೆತ್ತರಕ್ಕೆ ಏರಿದಾಗ ನಮ್ಮ ಸುತ್ತಮುತ್ತಲಿನ ಜನ ನಮಗಿಂತ ಕೆಳಗಿರುವಂತೆ ಭಾಸವಾಗುತ್ತದೆ……… ನಮ್ಮನ್ನು ಪ್ರೀತಿಸುವ, ನಮ್ಮ ಯಶಸ್ಸಿಗೆ ಸಂತೋಷಿಸುವ, ನಮಗೆ ಮಾರ್ಗದರ್ಶನ ಮಾಡುವ ಜನರ ನಡುವೆ ನಾವು ಎಲ್ಲೇ ಇದ್ದರೂ ನೆಮ್ಮದಿಯಿಂದ ಇರುತ್ತೇವೆ………. ಆದರೆ,ನಾನಾ ಕಾರಣಗಳಿಂದ ನಮ್ಮನ್ನು ದ್ವೇಷಿಸುವ, ಅಸೂಯೆ ಪಡುವ, ನಮ್ಮ ಕಾಲೆಳೆಯುವ, ನಮಗೆ ತೊಂದರೆ ಕೊಡುವ ಜನರ ನಡುವೆ ನಾವು ವಾಸಿಸುವುದು ಕಷ್ಟವಾದಾಗ ನಾವು ಸಾಧನೆಯ ಬೆಟ್ಟವನ್ನು ‌ಏರಲು ಪ್ರಯತ್ನಿಸಬೇಕು……….. ಇಲ್ಲದಿದ್ದರೆ ಈ ಜನರ ನಡುವೆ ನಮ್ಮ ಬದುಕು ಅಸಹನೆಯಿಂದಲೇ ಮುಗಿದು ಹೋಗುತ್ತದೆ……. ಹಾಗಾದರೆ ಸಾಧನೆ ಎಂದರೇನು ? ನಮ್ಮ ‌ಸಾಮಾನ್ಯ ಜನರ ಭಾವನೆಯಲ್ಲಿ ಹೆಚ್ಚು ಹೆಚ್ಚು…

ಮುಂದೆ ಓದಿ..
ಸುದ್ದಿ 

ಜನುಮದಿನದ ಶುಭ ಹಾರೈಕೆಗೆ ಪ್ರತಿ ವಂದನೆ…….. ( ಆಗಸ್ಟ್ 7 )

Taluknewsmedia.com

Taluknewsmedia.comಜನುಮದಿನದ ಶುಭ ಹಾರೈಕೆಗೆ ಪ್ರತಿ ವಂದನೆ…….. ( ಆಗಸ್ಟ್ 7 ) ಅಷ್ಟು ಸುಲಭವಲ್ಲ ಪ್ರೀತಿಗೆ ಪ್ರತಿ ವಂದನೆ ಹೇಳುವುದು……… ಯಾರಾದರೂ ನಮ್ಮನ್ನು ಟೀಕಿಸಿದರೆ, ನಿಂದಿಸಿದರೆ, ಹೊಡೆದರೆ ನಾವು ಅದಕ್ಕೆ ಒಂದಷ್ಟು ನಮ್ಮ ಮಿತಿಯಲ್ಲಿ ಅದೇ ರೀತಿ ಪ್ರತಿಕ್ರಿಯಿಸಬಹುದು ಅಥವಾ ನಿರ್ಲಕ್ಷಿಸಬಹುದು. ಆದರೆ ಪ್ರೀತಿ ಅಭಿಮಾನದ ನುಡಿಗಳಿಗೆ ಪ್ರತಿ ವಂದನೆ ತುಂಬಾ ಕಷ್ಟ. ಅಕ್ಷರಗಳಿಗೆ ನಿಲುಕದ ಭಾವವದು. ಮಾನವೀಯ ಮೌಲ್ಯಗಳ ಪುನರುತ್ಥಾನದ ಕನಸಿನ ಯಾತ್ರೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಾರಂಭಿಸಿ ಮುಂದೆ ಅದರ ಸಹಾಯದಿಂದಲೇ ರಾಜ್ಯಾದ್ಯಂತ ಪಾದಯಾತ್ರೆ ಮಾಡಿ ಈಗಲೂ ಓದು ಬರಹ ಮತ್ತು ಕಾರ್ಯಕ್ರಮಗಳ ಮೂಲಕ ಒಂದಷ್ಟು ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ. ಅದಕ್ಕೆ ಸಿಗುತ್ತಿರುವ ಸ್ಪಂದನೆಗೆ ಸಾಕ್ಷಿಯಾಗಿ ಜನ್ಮದಿನದ ನೆನಪಿನಲ್ಲಿ ನೀವುಗಳು ಶುಭ ಕೋರಿರುವುದು ನನಗೆ ತಲುಪಿದೆ. ಇಂದಿನ ಆಧುನಿಕ ಸಮಾಜದಲ್ಲಿ ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ಪ್ರಾಮಾಣಿಕತೆಯನ್ನು ಉಳಿಸಿಕೊಳ್ಳುವುದೇ ಒಂದು ಸವಾಲು. ವಿಚಿತ್ರವೆಂದರೆ, ಆತ್ಮ…

ಮುಂದೆ ಓದಿ..
ಸುದ್ದಿ 

ವ್ಯಕ್ತಿ ಮತ್ತು ಸಮಾಜದ ಘನತೆಯನ್ನು ಕಾಪಾಡೋಣ……..

Taluknewsmedia.com

Taluknewsmedia.comಧರ್ಮಸ್ಥಳದ ಪರ ವಿರೋಧದ ವಾದ ವಿವಾದಗಳು, ಚರ್ಚೆಗಳು, ಮಾತುಗಳು ದಿಕ್ಕು ತಪ್ಪುತ್ತಿದೆ. ಭಾಷೆ ಮತ್ತು ಭಾವನೆಗಳು ತೀರಾ ಕೆಳಹಂತಕ್ಕೆ ಇಳಿದಿವೆ ಮತ್ತು ಕ್ರೌರ್ಯವನ್ನು ಸೃಷ್ಟಿಸುತ್ತಿವೆ ಹಾಗು ಹೊರಹಾಕುತ್ತಿದೆ. ನಮ್ಮದೇ ಜನಗಳು, ನಾವೆಲ್ಲ ಭಾರತೀಯರು, ಬಹುತೇಕ ಕನ್ನಡಿಗರು, ಹೆಚ್ಚು ಕಡಿಮೆ ಸಹಪಾಠಿಗಳು, ಸಹವರ್ತಿಗಳು, ಸಮಕಾಲೀನರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ‌, ಎಲ್ಲರಿಗೂ ಬಹುತೇಕ ವಿದ್ಯಾಭ್ಯಾಸ ಇದೆ. ಸಾಮಾನ್ಯ ತಿಳುವಳಿಕೆಯೂ ಇದೆ. ಪರವಾಗಿ ವಾದ ಮಾಡುವವರಿಗೆ ಧರ್ಮ, ಭಕ್ತಿ, ಸಂಪ್ರದಾಯ ಹೆಚ್ಚು ಕಡಿಮೆ ಮೂಲವಾದರೆ, ವಿರೋಧವಾಗಿ ಮಾತನಾಡುತ್ತಿರುವವರಿಗೆ ಬಹುತೇಕ ಬುದ್ಧ, ಗಾಂಧಿ, ಅಂಬೇಡ್ಕರ್, ಬಸವಣ್ಣ, ವಿವೇಕಾನಂದ ಮುಂತಾದವರ ಚಿಂತನೆಗಳೇ ಮೂಲಾಧಾರ. ಇಷ್ಟರ ನಡುವೆಯೂ ಈ ಜನಗಳ ವರ್ತನೆ ಎಷ್ಟು ಕೆಳಮಟ್ಟಕ್ಕೆ ಇಳಿದಿದೆ ಎಂದರೆ ಕುಡುಕನೊಬ್ಬ ತೀರಾ ನಿಯಂತ್ರಣ ಮೀರಿ ಕುಡಿದಾಗ ಆಡುವ ಮಾತುಗಳಂತೆ, ಹುಚ್ಚನೊಬ್ಬನ ಹೊಲಸು ಮಾತುಗಳಂತೆ, ಮಾನಸಿಕ ರೋಗಿಯೊಬ್ಬನ ಸ್ಥಿಮಿತ ಕಳೆದುಕೊಂಡ ಭಾಷೆಯಂತೆ, ಕೆಟ್ಟ ಕೊಳಕ ಭಾಷೆಯನ್ನು ಮಾಧ್ಯಮ ಮತ್ತು…

ಮುಂದೆ ಓದಿ..
ಸುದ್ದಿ 

ಮಧ್ಯರಾತ್ರಿ ಕಾರು-ಸ್ಕೂಟರ್ ಅಪಘಾತ: ಸ್ಕೂಟರ್ ಸವಾರನಿಗೆ ಗಾಯ

Taluknewsmedia.com

Taluknewsmedia.comಬೆಂಗಳೂರು, ಆ.6 – ನಗರದ ಜಕ್ಕೂರು ಪ್ರದೇಶದಿಂದ ಬ್ಯಾಟರಾಯನ ಜಂಕ್ಷನ್ ಕಡೆಗೆ ಸಾಗುತ್ತಿದ್ದ ಕಾರು ಮಧ್ಯರಾತ್ರಿ ಅಪಘಾತಕ್ಕೀಡಾಗಿ ಒಂದು ಸ್ಕೂಟರ್ ಡಿಕ್ಕಿಯಾದ ಪರಿಣಾಮ, ಸ್ಕೂಟರ್ ಸವಾರನಿಗೆ ಗಾಯವಾಗಿರುವ ಘಟನೆ ನಡೆದಿದೆ. ದಿನಾಂಕ 05.08.2025 ರಂದು ರಾತ್ರಿ 12:48 ಗಂಟೆ ಸುಮಾರಿಗೆ, ತಮ್ಮ ಸ್ನೇಹಿತರು ಅಶಿಕಾ ಕ್ರಿಪಾಲ್, ಗೌತಮ್ ಜಿ, ರಿತಿಕಾ ಮತ್ತು ಶ್ರೀನಾಥ್ ರವರೊಂದಿಗೆ ತಮ್ಮ ಕಾರು (ನಂಬರ್: KA.05 NN.9317) ಯಲ್ಲಿ ಪ್ರಯಾಣಿಸುತ್ತಿದ್ದರು. ಅವರು ಕೆಂಪು ಸಿಗ್ನಲ್ ಬಂದ ಹಿನ್ನೆಲೆಯಲ್ಲಿ ಕಾರನ್ನು ನಿಲ್ಲಿಸಿದ್ದರು. ಆ ಸಮಯದಲ್ಲಿ ಹಿಂದಿನಿಂದ ಬಂದ ಎಲೆಕ್ಟ್ರಿಕ್ ಸ್ಕೂಟರ್ (ವಾಹನ ನಂಬರ್: KA.04.KR.9499) ನ ಸವಾರನು ತನ್ನ ವಾಹನವನ್ನು ಅತೀವ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ, ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕಾರಿನ ಹಿಂಭಾಗದ ಭಾಗ ಜಖಂಗೊಂಡಿದ್ದು, ಸ್ಕೂಟರ್ ಕೂಡ ಹಾನಿಗೊಳಗಾಗಿದೆ. ಸ್ಕೂಟರ್ ಸವಾರನ ಮುಖಕ್ಕೆ ಗಾಯವಾಗಿದ್ದು, ಸಾರ್ವಜನಿಕರ ಸಹಾಯದಿಂದ ಆತನನ್ನು…

ಮುಂದೆ ಓದಿ..
ಸುದ್ದಿ 

ಅಜಾಗರೂಕ ಬಸ್ ಡ್ರೈವರ್ ಡಿಕ್ಕಿಯಿಂದ ಆಟೋ ಚಾಲಕನಿಗೆ ಗಂಭೀರ ಗಾಯ

Taluknewsmedia.com

Taluknewsmedia.comಬೆಂಗಳೂರು, ಆಗಸ್ಟ್ 4 – ನಗರದ ಬಿ.ಬಿ.ರಸ್ತೆಯ ಬ್ಯಾಟರಾಯನಪುರ ಫ್ಲೈಓವರ್ ಬಳಿ ಇಂದು ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿ ಆಟೋ ಚಾಲಕರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಮಂಜುನಾಥ್ ವಿವರಗಳ ಪ್ರಕಾರ, ದಿನಾಂಕ 04.08.2025 ರಂದು ಮಧ್ಯಾಹ್ನ ಸುಮಾರು 3 ಗಂಟೆ ಸಮಯದಲ್ಲಿ, ಮಂಜುನಾಥ್ ಅವರ ತಮ್ಮ ಆಟೋ ರಿಕ್ಷಾ (ವಾಹನ ಸಂಖ್ಯೆ KA.01.AC.0354) ನಲ್ಲಿ ರೇವಾ ಕಾಲೇಜಿನ ಬಳಿದಿಂದ ಶ್ರೀರಾಮಪುರದ ಕಡೆಗೆ ಪ್ರಯಾಣಿಕನೊಬ್ಬನೊಂದಿಗೆ ತೆರಳುತ್ತಿದ್ದರು. ಈ ವೇಳೆ, ಬಿ.ಬಿ.ರಸ್ತೆಯ ಬ್ಯಾಟರಾಯನಪುರ ಫ್ಲೈಓವರ್ ಬಳಿ ಪೋಲೈಫ್ ಆಸ್ಪತ್ರೆಯ ಎದುರು ಸಿಟಿ ಕಡೆಗೆ ಸಾಗುತ್ತಿದ್ದಾಗ, ಹಿಂದಿನಿಂದ ಅತಿವೇಗದಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ (ವಾಹನ ಸಂಖ್ಯೆ KA.40.F.1293) ಅವರ ಆಟೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಆಟೋ ರಸ್ತೆಗೆ ಉರುಳಿ ಬಿದ್ದು, ಚಾಲಕನ ಬಲಗಾಲು ಆಟೋ ಕೆಳಗೆ ಸಿಲುಕಿ ಉಜ್ಜಲ್ಪಟ್ಟಿದೆ. ಇದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದು, ಬಲಗಾಲಿನ ಪಾದ ಮತ್ತು ಎರಡೂ…

ಮುಂದೆ ಓದಿ..
ಸುದ್ದಿ 

ಮಾರನಾಯಕನಹಳ್ಳಿಯಲ್ಲಿ ಮನೆ ಕಳ್ಳತನ: ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳವು

Taluknewsmedia.com

Taluknewsmedia.comಮಾರನಾಯಕನಹಳ್ಳಿ ಗ್ರಾಮದಲ್ಲಿನ ಖಾಲಿ ಮನೆಯೊಂದರಲ್ಲಿ ಕಳ್ಳರು ಬೀಗ ಮುರಿದು ಪ್ರವೇಶಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ ಘಟನೆ ಬೆಳಕಿಗೆ ಬಂದಿದೆ. ರಂಜಿತ ರವರ ಪ್ರಕಾರ, ದಿನಾಂಕ 01/08/2025 ರಂದು ಅವರು ಕುಟುಂಬ ಸಮೇತ ಗ್ರಾಮಕ್ಕೆ ಹೋಗಿದ್ದರು. ದಿನಾಂಕ 04/08/2025 ರಂದು ಬೆಳಗ್ಗೆ 7-40 ರ ಸುಮಾರಿಗೆ ಮನೆಗೆ ಹಿಂದಿರುಗಿದಾಗ ಬಾಗಿಲು ಮುರಿದ ಸ್ಥಿತಿಯಲ್ಲಿ ಕಾಣಿಸಿಕೊಂಡಿತು. ಮನೆಯೊಳಗೆ ಪ್ರವೇಶಿಸಿದಾಗ ದೇವರ ಕೋಣೆಯ ವಸ್ತುಗಳು ಚೆಲ್ಲಾಪಿಲ್ಲಾಗಿ ಬಿದ್ದಿದ್ದು, ಅಲ್ಲಿದ್ದ ಹುಂಡಿಯಲ್ಲಿ ಇಡಲಾಗಿದ್ದ ರೂ. 6,000 ನಗದು ಕಾಣೆಯಾಗಿತ್ತು. ಇದೇ ವೇಳೆ, ಬೆಡ್ ರೂಮಿನಲ್ಲಿ ಇಟ್ಟಿದ್ದ ಸೂಟ್ ಕೇಸ್ ನಲ್ಲಿದ್ದ ಕೆಳಗಿನ ವಸ್ತುಗಳು ಕಳವಾಗಿವೆ: 5 ಜೋಡಿ ಚಿನ್ನದ ಓಲೆ 5 ಚಿನ್ನದ ಉಂಗುರ 1 ಜೋಡಿ ಮಾಟಿ 1 ಜೋಡಿ ಬೆಳ್ಳಿ ಕಾಲು ಚೈನ್ 6 ಜೋಡಿ ಚಿನ್ನದ ಚಿಕ್ಕ ಓಲೆ ರೂ. 16,000 ನಗದು…

ಮುಂದೆ ಓದಿ..
ಸುದ್ದಿ 

ಆನೇಕಲ್‌ನಲ್ಲಿ ಅಜಾಗರೂಕ ಚಾಲನೆ: ಕಾರು ಡಿಕ್ಕಿಯಿಂದ ವ್ಯಕ್ತಿಗೆ ಗಂಭೀರ ಗಾಯ

Taluknewsmedia.com

Taluknewsmedia.comಆನೇಕಲ್, ಆಗಸ್ಟ್ 6 –ಆನೇಕಲ್ ತಾಲ್ಲೂಕಿನ ಸುಣವಾರ ಗೇಟ್ ಬಳಿ ಕಾರು ಡಿಕ್ಕಿಯಿಂದ ಒಬ್ಬ ವ್ಯಕ್ತಿಗೆ ಗಂಭೀರ ಗಾಯವಾಗಿರುವ ಘಟನೆ ದಿನಾಂಕ 03/08/2025 ರಂದು ಸಂಜೆ ಸಂಭವಿಸಿದೆ. ಈ ಬಗ್ಗೆ ಗಾಯಾಳುವಾದ ದೇವರಾಜು ಅವರ ಪತ್ನಿ ಮುನಿಲಕ್ಷ್ಮಿ ಅವರು ಆನೇಕಲ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಮುನಿಲಕ್ಷ್ಮಿಯವರ ಹೇಳಿಕೆಯಂತೆ, ದಿನಾಂಕ 03ರಂದು ಸಂಜೆ ಸುಮಾರು 7:20 ಗಂಟೆಗೆ ಯಾರೋ ವ್ಯಕ್ತಿ ಕರೆ ಮಾಡಿ ದೇವರಾಜು ಅವರಿಗೆ ಅಪಘಾತವಾಗಿದ್ದು ಅವರು ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ತಕ್ಷಣ ಆಸ್ಪತ್ರೆಗೆ ಧಾವಿಸಿದ ಮುನಿಲಕ್ಷ್ಮಿಯವರಿಗೆ, ಈ ಘಟನೆ ನಿಜವಾಗಿರುವುದು ತಿಳಿದು ಬಂದಿದೆ. ಅಪಘಾತದ ವಿವರವನ್ನು ದೇವರಾಜು ತಿಳಿಸುತ್ತಾ, ಅವರು ಕೆಲಸ ಮುಗಿಸಿಕೊಂಡು ಸುಣವಾರ ಗೇಟ್ ಬಳಿ ಬಾರ್ ಎದುರಿನಿಂದ ನಡೆದುಕೊಂಡು ಮನೆಗೆ ತೆರಳುತ್ತಿದ್ದಾಗ, ಕೆಎ 51 ಎಂ ಎಲ್ 2982 ಎಂಬ ನಂಬರಿನ ಕಾರು, ಅತೀವೇಗ ಹಾಗೂ…

ಮುಂದೆ ಓದಿ..