ನಡೆಯಲರಿಯದೆ ನುಡಿಯಲರಿಯದೆ ಲಿಂಗವ ಪೂಜಿಸಿ ಫಲವೇನು ?
” ನಡೆಯಲರಿಯದೆ ನುಡಿಯಲರಿಯದೆ ಲಿಂಗವ ಪೂಜಿಸಿ ಫಲವೇನು ? ………… ಬಸವಣ್ಣ ನಮ್ಮ ಆತ್ಮಾವಲೋಕನಕ್ಕಾಗಿ ಅಧ್ಬುತ ನುಡಿಗಳು. ಈಗಲ್ಲಾ 12 ನೇ ಶತಮಾನದ ಕಾಲದಲ್ಲಿ ಬಸವಣ್ಣ ಬರೆದ ವಚನ. ಈಗ ಅತ್ಯಂತ ಪ್ರಸ್ತುತ ಎಂದು ಅನಿಸುತ್ತಿದೆ. ಅರ್ಥ ಕಳೆದುಕೊಂಡ ನಮ್ಮ ನಡೆ ನುಡಿಗಳ ಈ ಸಂದರ್ಭದಲ್ಲಿ ಈ ಮಾತುಗಳು ತುಂಬಾ ಕಾಡುತ್ತಿದೆ. ಅದಕ್ಕಾಗಿ…… ಬಹಳಷ್ಟು ಜನ ನನ್ನನ್ನು ಕೇಳುತ್ತಾರೆ….. ನೀವು ಯಾವಾಗಲೂ ಸಮಾಜದಲ್ಲಿರುವ ಕೆಟ್ಟ ಅಂಶಗಳ ಬಗ್ಗೆಯೇ ಹೆಚ್ಚು ಮಾತನಾಡುತ್ತೀರಿ ಮತ್ತು ಬರೆಯುತ್ತೀರಿ. ಏಕೆ?ಇಲ್ಲಿನ ಒಳ್ಳೆಯಅಂಶಗಳು ನಿಮಗೆ ಕಾಣುವುದಿಲ್ಲವೆ? ಸಮಾಜದಲ್ಲಿನ ಶಾಂತಿ, ಸಾಮರಸ್ಯ, ಅಭಿವೃದ್ಧಿ ನಿಮಗೆಗೋಚರಿಸುವುದಿಲ್ಲವೆ ? ಧರ್ಮ, ದೇವರು, ಜಾತಿಗಳಿಂದ ನಮ್ಮ ಮೇಲಾಗಿರುವ ಒಳ್ಳೆಯ ಪರಿಣಾಮಗಳು ನಿಮಗೆ ತಿಳಿಯುವುದಿಲ್ಲವೆ ? ಭಕ್ತಿ, ನಂಬಿಕೆ, ಭಾವನೆಗಳು ವ್ಯೆಚಾರಿಕತೆಗಿಂತ ಬಲಿಷ್ಟವಾಗಿಲ್ಲವೆ ?…… ನೀವು ನೋಡುವ ದೃಷ್ಟಿ ಸರಿ ಇಲ್ಲ ,ನಿಮ್ಮ ಮನಸ್ಸು ಶುಧ್ದವಿಲ್ಲ,ನೀವು ಒಂದು ರೀತಿಯ ಕೊಳಕರು. ಆದ್ದರಿಂದಲೇ…
ಮುಂದೆ ಓದಿ..
