ಆದಿಚುಂಚನಗಿರಿ ಬೆಟ್ಟದ ಪಾದದಲ್ಲಿ ಅಕ್ರಮ ಇಸ್ಪೀಟ್ ಜೂಜಾಟ ದಾಳಿ: 15 ಮಂದಿ ಬಂಧನ, ₹43,000 ನಗದು ವಶ
ಮಂಡ್ಯ ಜಿಲ್ಲೆಯ ಬೆಳ್ಳೂರು ಹೋಬಳಿಯ ಆದಿಚುಂಚನಗಿರಿ ಬೆಟ್ಟದ ಕೆಳಭಾಗದಲ್ಲಿ ನಡೆದ ಅಕ್ರಮ ಇಸ್ಪೀಟ್ ಜೂಜಾಟ ದಾಳಿಯಲ್ಲಿ 15 ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.ಲಭಿಸಿದ ಖಚಿತ ಮಾಹಿತಿಯ ಮೇಲೆ ಬೆಳ್ಳೂರು ಟೌನ್ ಠಾಣೆಯ ಪಿಎಸ್‌ಐ ರವಿಕುಮಾರ್ ವೈ ಏನ್ ಅವರ ನೇತೃತ್ವದಲ್ಲಿ ತಂಡವೇ ಸ್ಥಳಕ್ಕೆ ದಾಳಿ ನಡೆಸಿತು. ದಾಳಿ ವೇಳೆ ಸಾರ್ವಜನಿಕ ಸ್ಥಳದಲ್ಲಿ ಸುಮಾರು 15 ಮಂದಿ ಗಂಡಸರು ಹಣವನ್ನು ಪಣವಾಗಿ ಇಟ್ಟುಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಜಾಟದಲ್ಲಿ ತೊಡಗಿರುವುದು ಪತ್ತೆಯಾಯಿತು.ದಾಳಿಯಲ್ಲಿ ಒಟ್ಟು ₹43,000 ನಗದು ಹಾಗೂ 52 ಇಸ್ಪೀಟ್ ಎಲೆಗಳು, ಪ್ಲಾಸ್ಟಿಕ್ ತಾಟು ಜಪ್ತಿ ಮಾಡಲಾಗಿದೆ. ಬಂಧಿತರಲ್ಲಿ ಕೆಲವರು ಆಟೋ ಚಾಲಕರು, ಕಾರು ಚಾಲಕರು, ವ್ಯಾಪಾರಸ್ಥರು ಹಾಗೂ ಕೃಷಿಕರು ಇದ್ದಾರೆ. ಬಂಧಿತರು ಚನ್ನಪಟ್ಟಣ, ರಾಮನಗರ ಮತ್ತು ಮಂಡ್ಯದಿಂದ ಬಂದಿದ್ದು, ಸ್ಥಳೀಯರಂತೆ “ನಾಮಕರಣ ಕಾರ್ಯಕ್ರಮಕ್ಕೆ ಆಗಮಿಸಿದ್ದೆವು” ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.ಬಂಧಿತರ ಹೆಸರುಗಳು ಮತ್ತು ವಯಸ್ಸುಗಳು:1. ಉಮೇಶ್ (57),…
ಮುಂದೆ ಓದಿ..
