ರಾಜಾಜಿನಗರದ 31 ವರ್ಷದ ವಕೀಲೆಯರು ಕಾಣೆಯಾದ ಘಟನೆ
ಬೆಂಗಳೂರು: 30 ಆಗಸ್ಟ್ 2025ನಗರದ ರಾಜಾಜಿನಗರದ ನಿವಾಸಿ ಹಾಗೂ ವಕೀಲೆಯಾದ ದಿಶಾ ಕೆ. ದಿನಕರ್ (31) ಅವರು ಕಳೆದ ಕೆಲವು ದಿನಗಳಿಂದ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಯಲಹಂಕ ಉಪನಗರ ಪೊಲೀಸರ ಮಾಹಿತಿ ಪ್ರಕಾರ, ದಿಶಾ ಅವರು ರಾಜಾಜಿನಗರದಲ್ಲಿ ವಕೀಲೆಯಾಗಿ ಕೆಲಸ ಮಾಡುತ್ತಿದ್ದು, ಶಶಿಕುಮಾರ್ ಎಂಬುವರೊಂದಿಗೆ ಸ್ನೇಹ ಹೊಂದಿದ್ದರು. ಈ ಸಂಬಂಧವನ್ನು ಮನೆಯವರು ವಿರೋಧಿಸಿದ್ದರು. ನಂತರ, 18 ಮಾರ್ಚ್ 2025ರಂದು ಮನೆಯಿಂದ ತೆರಳಿ, ಕೊರಮಂಗಲದ ಪಿಜಿ ವಸತಿಗೃಹದಲ್ಲಿ ವಾಸಿಸಲು ಆರಂಭಿಸಿದ್ದರು. ಆದರೆ, 9 ಆಗಸ್ಟ್ 2025ರಂದು “ಮನೆಗೆ ಬರುತ್ತೇನೆ” ಎಂದು ತಿಳಿಸಿ ಹೊರಟಿದ್ದರೂ ಇಂದಿನವರೆಗೆ ವಾಪಸ್ ಆಗಿರಲಿಲ್ಲ. ಮೊಬೈಲ್ ಕರೆಗೂ ಸ್ಪಂದಿಸದೆ, ಕೆಲಸದ ಸ್ಥಳ ಮತ್ತು ಸ್ನೇಹಿತರ ಬಳಿ ವಿಚಾರಿಸಿದರೂ ಯಾವುದೇ ಸುಳಿವು ಸಿಗಲಿಲ್ಲ ಎಂದು ಕುಟುಂಬಸ್ಥರು ಯಲಹಂಕ ಉಪನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಕಾಣೆಯಾದ ದಿಶಾ ಕೆ. ದಿನಕರ್ ಅವರು 31 ವರ್ಷದವರಾಗಿದ್ದು, ಎತ್ತರ 5.4…
ಮುಂದೆ ಓದಿ..
