ಮೈಸೂರು ಜಿಲ್ಲಾಸ್ಪತ್ರೆಯ ಗಂಭೀರ ಸ್ಥಿತಿ: ಸಿಬ್ಬಂದಿ ಕೊರತೆಯಿಂದ ಸೇವೆ ಕುಂಠಿತ – ರೋಗಿಗಳ ಪರದಾಟ ಹೆಚ್ಚಳ
ಮೈಸೂರು ಜಿಲ್ಲಾಸ್ಪತ್ರೆಯ ಗಂಭೀರ ಸ್ಥಿತಿ: ಸಿಬ್ಬಂದಿ ಕೊರತೆಯಿಂದ ಸೇವೆ ಕುಂಠಿತ – ರೋಗಿಗಳ ಪರದಾಟ ಹೆಚ್ಚಳ ವೈದ್ಯರು ಹಾಗೂ ಪರಿಚಾರಕರ ಕೊರತೆಯಿಂದ 300 ಹಾಸಿಗೆ ಸಾಮರ್ಥ್ಯವಿದ್ದರೂ ಕೇವಲ 200 ಹಾಸಿಗೆಗಳಷ್ಟೇ ಉಪಯೋಗದಲ್ಲಿವೆ. ಕೆ.ಆರ್. ಆಸ್ಪತ್ರೆಯ ಬೃಹತ್ ಭಾರ ಹಂಚಿಕೊಳ್ಳಬೇಕಿದ್ದ ಜಿಲ್ಲಾಸ್ಪತ್ರೆ ಇನ್ನೂ ಅಭಿವೃದ್ಧಿಯ ಹಂತಕ್ಕೆ ತಲುಪಿಲ್ಲ. ವರ್ಷಕ್ಕೆ 3 ಲಕ್ಷಕ್ಕೂ ಹೆಚ್ಚು ಹೊರರೋಗಿಗಳು ಹಾಗೂ ಸುಮಾರು 10 ಸಾವಿರ ಒಳರೋಗಿಗಳು ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರೂರಿನ ಜಿಲ್ಲಾಸ್ಪತ್ರೆ ಈಗ ಗಂಭೀರ ಮಾನವ ಬಲ ಮತ್ತು ಮೂಲಸೌಕರ್ಯ ಸಂಕಷ್ಟವನ್ನು ಎದುರಿಸುತ್ತಿದೆ. ‘ವೈದ್ಯಕೀಯ ಸೇವೆಗಳ ಕೇಂದ್ರ’ವೆಂದು ರೂಪಿಸಬೇಕಿದ್ದ ಈ ಆಸ್ಪತ್ರೆ, ವೈದ್ಯರು–ಸಿಬ್ಬಂದಿಯ ಕೊರತೆಯಿಂದ ತನ್ನ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ವಿಫಲವಾಗಿದೆ. ಜಿಲ್ಲಾಸ್ಪತ್ರೆಗೆ 300 ಹಾಸಿಗೆಗಳ ಅನುಮೋದನೆ ಇದ್ದರೂ, ಅಗತ್ಯ ವೈದ್ಯಕೀಯ ಸಿಬ್ಬಂದಿ ಲಭ್ಯವಿಲ್ಲದ ಕಾರಣ ಆಸ್ಪತ್ರೆಯನ್ನು 200 ಹಾಸಿಗೆಗಳ ಮಟ್ಟಕ್ಕೆ ಮಾತ್ರ ಸೀಮಿತಗೊಳಿಸಲಾಗಿದ್ದು, ಇದು ರೋಗಿಗಳ ಮೇಲಿನ…
ಮುಂದೆ ಓದಿ..
