ಮಾಡಿದ್ದುಣ್ಣೋ ಮಹಾರಾಯ…….
ಬೇವು ಬಿತ್ತಿ ಮಾವಿನ ಫಲವನ್ನು ನಿರೀಕ್ಷಿಸಿದರೆಂತಯ್ಯ……. ನಾನು ಕೆಲವರು ವಿರುದ್ಧ ದೂರು ಕೊಡಬೇಕಿದೆ. ಯಾರಿಗೆ ಕೊಡಲಿ, ಎಲ್ಲಿ ಕೊಡಲಿ, ತಿಳಿದವರು ದಯವಿಟ್ಟು ಸ್ವಲ್ಪ ಮಾಹಿತಿ ನೀಡಿ…….. ಸಿನಿಮಾ, ಜಾಹೀರಾತುಗಳಲ್ಲಿ ಅಶ್ಲೀಲ ದೃಶ್ಯಗಳನ್ನು ಪ್ರದರ್ಶಿಸುವ ಮಂದಿಯ ವಿರುದ್ಧ ದೂರು ಕೊಡಬೇಕಿದೆ, ಅದೇ ಸಿನಿಮಾಗಳಲ್ಲಿ ಮಚ್ಚು, ಲಾಂಗು ಬಾಂಬು, ಬಂದೂಕು, ರಕ್ತ, ಹಿಂಸೆ, ಸೇಡು ತೋರಿಸಿ ಸಮಾಜವನ್ನು ದಾರಿ ತಪ್ಪಿಸುವವರ ವಿರುದ್ಧ ದೂರು ನೀಡಬೇಕಿದೆ, ಧಾರವಾಹಿಗಳಲ್ಲಿ ಮಾನವೀಯ ಮೌಲ್ಯಗಳನ್ನು ನಾಶಪಡಿಸಿ ಅದರ ವಿರುದ್ಧ ಮೌಲ್ಯಗಳನ್ನು ಪ್ರತಿಪಾದಿಸುವ, ಕೌಟುಂಬಿಕ ಮೌಲ್ಯಗಳನ್ನು ಅಪವಿತ್ರಗೊಳಿಸಿ ಅನೈತಿಕ ಸಂಬಂಧಗಳನ್ನು ನೈತಿಕ ಗೊಳಿಸುವ ಕಥೆಗಳ ವಿರುದ್ಧ ದೂರು ನೀಡಬೇಕಿದೆ, ರಿಯಾಲಿಟಿ ಶೋಗಳ ಹೆಸರಿನಲ್ಲಿ ಬಿಗ್ ಬಾಸ್ ರೀತಿಯ ಅತ್ಯಂತ ಕೀಳು ಅಭಿರುಚಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವವರ ವಿರುದ್ಧ ದೂರು ನೀಡಬೇಕಿದೆ, ಸರ್ಕಾರದ ಪ್ರತಿ ಕಚೇರಿಯಲ್ಲಿ ಲಂಚಕ್ಕಾಗಿ ಒತ್ತಾಯಿಸುವ, ಕಿರುಕುಳಕೊಡುವ ಅಧಿಕಾರಿಗಳ ವಿರುದ್ಧ ದೂರು ನೀಡಬೇಕಿದೆ, ಬೆಂಗಳೂರಿನ ಪ್ರಮುಖ…
ಮುಂದೆ ಓದಿ..
