ಸಿರಾದಲ್ಲಿ ಸ್ಯಾಂಡಲ್ ವುಡ್ ಕಿರುಚಿತ್ರೋತ್ಸವ : ರಾಜ್ಯಮಟ್ಟದ ಸ್ವರ ಶೃಂಗಾರ ಸ್ಪರ್ಧೆ ಆಕರ್ಷಣೆ
ಸಿರಾದಲ್ಲಿ ಸ್ಯಾಂಡಲ್ ವುಡ್ ಕಿರುಚಿತ್ರೋತ್ಸವ : ರಾಜ್ಯಮಟ್ಟದ ಸ್ವರ ಶೃಂಗಾರ ಸ್ಪರ್ಧೆ ಆಕರ್ಷಣೆ ಸಿರಾ (ತುಮಕೂರು ಜಿಲ್ಲೆ): ಕಲಾಕಾರ್ ಈವೆಂಟ್ಸ್ ರಂಜನೆ ಚಿಂತನೆ ವೇದಿಕೆ ಮತ್ತು ಸಿರಾ ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸಿರಾದಲ್ಲಿ ಮೂರು ದಿನಗಳ “ಸಿರಾ ಸ್ಯಾಂಡಲ್ ವುಡ್ ಕಿರುಚಿತ್ರೋತ್ಸವ” ಹಾಗೂ ರಾಜ್ಯಮಟ್ಟದ ಸ್ವರ ಶೃಂಗಾರ ಕರೋಕೆ ಗೀತ ಗಾಯನ ಸ್ಪರ್ಧೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ಕಾರ್ಯಕ್ರಮವು ನವೆಂಬರ್ 15, 16 ಮತ್ತು 17 ರಂದು ಸಿರಾ ನಗರದಲ್ಲಿರುವ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಬಯಲು ರಂಗಮಂದಿರದಲ್ಲಿ ನಡೆಯಲಿದ್ದು, ಕಿರುಚಿತ್ರಗಳು ಹಾಗೂ ಆಲ್ಬಂ ಹಾಡುಗಳ ಪ್ರದರ್ಶನ ಮತ್ತು ಸ್ಪರ್ಧೆಗಳು ನಡೆಯಲಿವೆ. ರಾಜ್ಯಾದ್ಯಂತದ ಪ್ರತಿಭಾವಂತ ಕಲಾವಿದರು, ಗಾಯಕ-ಗಾಯಕಿಯರು, ನಿರ್ದೇಶಕರು, ನಿರ್ಮಾಪಕರು ಹಾಗೂ ಕಿರುಚಿತ್ರ ಕ್ಷೇತ್ರದ ಪೋಷಕರು ಈ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಗಣ್ಯರು ಹಾಗೂ ಸ್ಥಳೀಯ ಗಣ್ಯಮಾನ್ಯರು ಉಪಸ್ಥಿತರಿದ್ದು…
ಮುಂದೆ ಓದಿ..
