ಕನ್ನಡದ ಗೌರವ ಕಾಪಾಡೋಣ, ಬೆಳೆಸೋಣ: ಬಿ.ವೈ. ವಿಜಯೇಂದ್ರ
ಕನ್ನಡದ ಗೌರವ ಕಾಪಾಡೋಣ, ಬೆಳೆಸೋಣ: ಬಿ.ವೈ. ವಿಜಯೇಂದ್ರ ಶಿಕಾರಿಪುರ, ನ.1: ಕನ್ನಡ ರಾಜ್ಯೋತ್ಸವದ ಅಂಗವಾಗಿ ತಾಲೂಕು ಆಡಳಿತ ಹಾಗೂ ಕನ್ನಡ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಸಾವಿರಾರು ವರ್ಷಗಳ ಪರಂಪರೆ, ಸಂಸ್ಕೃತಿ ಹಾಗೂ ಇತಿಹಾಸವನ್ನು ಹೊತ್ತು ತಂದಿರುವ ಕನ್ನಡ ಭಾಷೆ ನಮ್ಮ ಗೌರವ, ನಮ್ಮ ಗುರುತು. ಪ್ರತಿಯೊಬ್ಬ ಕನ್ನಡಿಗನು ಕನ್ನಡ ಮಾತನಾಡುವುದು, ಬರೆಯುವುದು ಹಾಗೂ ಬಳಸುವುದು ತನ್ನ ಹೆಮ್ಮೆಯ ವಿಷಯವಾಗಿರಬೇಕು,” ಎಂದರು. ಅವರು ಮುಂದುವರೆದು, “ಕನ್ನಡ ಕೇವಲ ಭಾಷೆಯಲ್ಲ — ಅದು ನಮ್ಮ ಆತ್ಮ. ಕನ್ನಡವನ್ನು ಬಳಸುವುದರಿಂದ ನಾವು ನಮ್ಮ ಸಂಸ್ಕೃತಿಯನ್ನು ಜೀವಂತವಾಗಿಟ್ಟುಕೊಳ್ಳುತ್ತೇವೆ. ಆದ್ದರಿಂದ ಎಲ್ಲ ಕ್ಷೇತ್ರಗಳಲ್ಲಿಯೂ ಕನ್ನಡದ ಬಳಕೆಯನ್ನು ಹೆಚ್ಚಿಸಬೇಕು, ಅದರ ಬೆಳವಣಿಗೆಗೆ ನಾವು ಹೊಣೆಗಾರರಾಗಬೇಕು,” ಎಂದು ಹೇಳಿದರು.…
ಮುಂದೆ ಓದಿ..
