ಲಂಚ ಸ್ವೀಕರಿಸುವುದು ಸಾಬೀತಾದರೆ ವಜಾ” ಆದರೆ ಲಂಚದ ಮೂಲವನ್ನು ಮುಚ್ಚಿಡುತ್ತೀರಾ ಸಚಿವರೇ?
ಲಂಚ ಸ್ವೀಕರಿಸುವುದು ಸಾಬೀತಾದರೆ ವಜಾ” ಆದರೆ ಲಂಚದ ಮೂಲವನ್ನು ಮುಚ್ಚಿಡುತ್ತೀರಾ ಸಚಿವರೇ? ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರಾದ ಜಿ. ಪರಮೇಶ್ವರ್ ಅವರು — “ಪೊಲೀಸರು ಲಂಚ ಸ್ವೀಕರಿಸುವುದು ಸಾಬೀತಾದರೆ ಸೇವೆಯಿಂದ ವಜಾ ಮಾಡಲಾಗುತ್ತದೆ” ಎಂದು ಹೇಳಿಕೆ ನೀಡಿರುವುದು ಜನರ ಗಮನ ಸೆಳೆದಿದೆ. ಆದರೆ ಜನಸಾಮಾನ್ಯರ ಮನದಲ್ಲಿ ಎದ್ದಿರುವ ಪ್ರಶ್ನೆ — ಲಂಚ ಕೊಡುವ ವ್ಯವಸ್ಥೆ, ಲಂಚಕ್ಕೆ ಕಾರಣವಾಗುವ ಪೋಸ್ಟಿಂಗ್ ಮಾಫಿಯಾ ಬಗ್ಗೆ ಯಾರು ಮಾತನಾಡುತ್ತಾರೆ? ಸಾಮಾನ್ಯ ಪೋಲೀಸ್ ಅಧಿಕಾರಿ ಅಥವಾ ಪಿಡಿಓ ಮಟ್ಟದ ನೌಕರರು ಅಧಿಕಾರಕ್ಕೆ ಬಂದ ಕೂಡಲೇ ಲಕ್ಷಾಂತರ ರೂಪಾಯಿ ನೀಡಿ ಪೋಸ್ಟಿಂಗ್ ಪಡೆಯಬೇಕಾಗುತ್ತದೆ ಎಂಬುದು ಮುಚ್ಚಿದ ರಹಸ್ಯವಲ್ಲ. ಹೀಗಾಗಿ ಆ ಹಣವನ್ನು ವಾಪಸ್ ಪಡೆಯಲು ಕೆಲವರು ಜನರಿಂದ ಲಂಚ ತಗೊಳ್ಳುತ್ತಾರೆ. ನಂತರ ಸರ್ಕಾರದವರು “ಲಂಚ ತಗೊಳ್ಳಬೇಡಿ” ಎಂಬ ನೈತಿಕ ಪಾಠ ಹೇಳುವುದು ಜನರ ಕಿವಿಗೆ ವ್ಯಂಗ್ಯವಾಗಿ ಕೇಳುತ್ತದೆ. ಜನರ ಕೋಪದ ಧ್ವನಿಯೇ ಹೀಗಿದೆ..…
ಮುಂದೆ ಓದಿ..
