ಮುಡಾ ತಹಸೀಲ್ದಾರ್ ಕೆ.ವಿ.ರಾಜಶೇಖರ್ ಅಮಾನತು — ಕರ್ತವ್ಯ ಲೋಪ ಸಾಬೀತು!RTI ಕಾರ್ಯಕರ್ತ ನಾಗೇಂದ್ರ ದೂರು ಆಧಾರದಲ್ಲಿ ಸರ್ಕಾರದ ಕ್ರಮ
ಮುಡಾ ತಹಸೀಲ್ದಾರ್ ಕೆ.ವಿ.ರಾಜಶೇಖರ್ ಅಮಾನತು — ಕರ್ತವ್ಯ ಲೋಪ ಸಾಬೀತು!RTI ಕಾರ್ಯಕರ್ತ ನಾಗೇಂದ್ರ ದೂರು ಆಧಾರದಲ್ಲಿ ಸರ್ಕಾರದ ಕ್ರಮ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ವಿಶೇಷ ತಹಸೀಲ್ದಾರ್ ಕೆ.ವಿ. ರಾಜಶೇಖರ್ ರವರನ್ನು ಕರ್ತವ್ಯ ಲೋಪ ಮತ್ತು ಅಧಿಕಾರ ದುರುಪಯೋಗದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ. ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತೆ ಲತಾ ರವರ ನಿರ್ದೇಶನದ ಮೇರೆಗೆ ಮುಡಾ ಆಯುಕ್ತರು ಅಮಾನತು ಆದೇಶ ಹೊರಡಿಸಿದ್ದಾರೆ. ಆರ್‌ಟಿಐ ಕಾರ್ಯಕರ್ತ ಬಿ.ಎನ್. ನಾಗೇಂದ್ರ ರವರು ದಾಖಲಾತಿಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ನೀಡಿದ ದೂರಿನ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮೈಸೂರಿನ ಗೋಕುಲಂ 3ನೇ ಹಂತದ ಮನೆ ಸಂಖ್ಯೆ 867ಕ್ಕೆ 1982ರಲ್ಲಿ ಲಿಲಿಯನ್ ಶಾರದಾ ಜೋಸೆಫ್ ಅವರಿಗೆ 30×40 ಗಾತ್ರದ ನಿವೇಶನ ಮಂಜೂರಾಗಿತ್ತು. ಅವರು 1983ರಲ್ಲಿ ನಿಧನ ಹೊಂದಿದ್ದರೂ, ಆ ಸ್ವತ್ತು ದೀರ್ಘಕಾಲ ಯಾರ ಹೆಸರಿಗೆ ವರ್ಗವಾಗಿರಲಿಲ್ಲ. ಆದರೆ 2024ರ ಮಾರ್ಚ್ 26ರಂದು…
ಮುಂದೆ ಓದಿ..
