ಕಣಿ ಹೇಳ್ತೀನಿ ಅಣ್ಣ ಕಣಿ,ಕಣಿ ಹೇಳ್ತೀನಿ ಅಕ್ಕ ಕಣಿ,….
ಕಣಿ……. ಕಣಿ ಹೇಳ್ತೀನಿ ಅಣ್ಣ ಕಣಿ,ಕಣಿ ಹೇಳ್ತೀನಿ ಅಕ್ಕ ಕಣಿ,….. ಖರೇನೇ ಹೇಳ್ತೀನಿ,ಸುಳ್ಳಾಡಂಗಿಲ್ಲ ನಾ, ನೋಟಿನ ಬಣ್ಣ ಬದಲಾಗೈತಿಮನ್ಸರ ಬದುಕೂ ಬದಲಾಗ್ತೈತಿ,ರಾಜನ ಪ್ರಭುತ್ವ ಕುಣಿತೈತಿ,ಭ್ರಷ್ಟರ ಮನಸ್ಸು ಕುದಿತೈತಿ,ಬಡವನ ಪ್ರಾಣ ಕುಸಿತೈತಿ. ಕಣಿ ಹೇಳ್ತೀನಿ ಅಕ್ಕ ಕಣಿ,…. ತರಕಾರಿ ಮಾರೌರ್ರು –ಹಣ್ಣು ಮಾರೌರ್ರು,ಮೀನು ಕೋಳಿ ಮಾರೌರ್ರು –ಪಾತ್ರೆ ಪಗಡೆ ಮಾರೌರ್ರು,ಕೂಲಿ ಮಾಡೌರ್ರು –ಮಂತ್ರ ತಂತ್ರ ಮಾಡೌರ್ರು,ಕಟಿಂಗ್ ಮಾಡೌರ್ರು –ಇಸ್ತ್ರೀ ಮಾಡೌರ್ರು,ಬದುಕು ಕುಸಿತೈತಿ…. ಕಂಪ್ಯೂಟರ್ ಮಾರೌರ್ರು –ಆನ್ ಲೈನ್ ವ್ಯಾಪಾರ ಮಾಡೌರ್ರು,ಈಗಾಗ್ಲೇ ಕಲಿತೌರ್ರು –ಒಂದಕ್ಕೆರಡು ಲಾಭ ಮಾಡೌರ್ರು,ದಲ್ಲಾಳಿ ಮಾಡೌರ್ರುಬದುಕು ಕುಣಿತೈತಿ. ಕಣಿ ಹೇಳ್ತೀನಿ ತಾಯಿ ಕಣಿ,…… ಕಾಂಚಾನ ಕುಣಿತೈತಿ –ಮನ್ಸತ್ವ ನೆಗಿತೈತಿ,ರಾಜಾನ ಕನಸು ದೊಡ್ಡದೈತಿ,ಬಡವನ ಆಯಸ್ಸು ಸಣ್ಣದೈತಿ,…. ನೂರ್ಕಳ್ರು ತಪ್ಪಿಸ್ಕಂಡ್ರು ಅಮಾಯಕನಿಗೆ ಹೊಡಿಬ್ಯಾಡ್ರಿ ಅಂತೈತಿ,ಕಾಲ ಬದಲಾಗೈತಿ,ಒಬ್ ಕಳ್ಳನ್ ಹಿಡಿಯಾಕ ಸಾವ್ರ ಅಮಾಯಕ್ರಿಗೆ ಹೊಡ್ದೈತಿ. ಕಣಿ ಹೇಳ್ತೀನಿ ಯಪ್ಪಾ ಕಣಿ,…. ಬಡವಾನ ಮನ್ಸಾಗ ಗೊಂದಲೈತಿ,ವ್ಯಾಪಾರಿ ಮುಖದಾಗ ನಗುವೈತಿ,ಹಾಲು ವಿಷವಾಗ್ತೈತಿ –ಕಾಲ ಉರುಳಾಗ್ತೈತಿ,ಕಳ್ರು…
ಮುಂದೆ ಓದಿ..
