ಕಾಲೇಜಿಗೆ ಹೋಗಿದಾಕೆ ಮರಳದ ಬಾಲಕಿ – ಪೋಷಕರ ಆತಂಕ, ಹುಡುಗನ ಮೇಲೆ ಅನುಮಾನ
ಬೆಂಗಳೂರು ಆಗಸ್ಟ್ 6 2025ನಗರದ ನಿವಾಸಿಯಾದ ಲಕ್ಷ್ಮಿ ಅವರ ಎರಡನೇ ಮಗಳು ದಿನಾಂಕ 04/08/2025 ರಂದು ಬೆಳಿಗ್ಗೆ 10.00 ಗಂಟೆಗೆ “ಕಾಲೇಜಿಗೆ ಹೋಗುತ್ತಿದ್ದೇನೆ” ಎಂದು ಹೇಳಿ ಮನೆಯಿಂದ ಹೊರಟಿದ್ದಾಳೆ. ಆದರೆ, ಅದೇ ದಿನ ಸಂಜೆಗೂ ಮನೆಗೆ ವಾಪಸ್ ಬರದೆ ಕಾಣೆಯಾಗಿದ್ದಾಳೆ. ಈ ಕುರಿತು ಪೋಷಕರು ಯಲಹಂಕ ಉಪನವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಾಲಕಿ 17 ವರ್ಷದವಳಾಗಿದ್ದು, ಗೋಲು ಮುಖ, ಬಿಳಿ ಮೈಬಣ್ಣ ಹೊಂದಿದ್ದಾಳೆ. ಎಡಗಣಿನ ಮೇಲೆ ಮಚ್ಚೆ ಇದ್ದು, ದೂರಹೋಗುವಾಗ ನೀಲಿ ಬಣ್ಣದ ಫ್ರಾಕ್ ಧರಿಸಿದ್ದಳು ಎಂಬುದಾಗಿ ಪೋಷಕರು ತಿಳಿಸಿದ್ದಾರೆ. ತಾವು ಎಲ್ಲಾ ಕಡೆ ಹುಡುಕಿದರೂ ಯಾವುದೇ ಮಾಹಿತಿ ಸಿಗದೆ ನಿರಾಶರಾದ ಪೋಷಕರು, ಮಲ್ಲಿ ಕಾರ್ಜುನ್ ಎಂಬ ಯುವಕನು ಈಕೆಯನ್ನು ಕರೆದುಕೊಂಡು ಹೋಗಿರಬಹುದೆಂಬ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಯಲಹಂಕ ಉಪನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹುಡುಕಾಟ ಪ್ರಾರಂಭಿಸಿದ್ದಾರೆ. ಈಕೆಯ ಬಗ್ಗೆ ಮಾಹಿತಿ ಇರುವವರು ಸ್ಥಳೀಯ ಪೊಲೀಸ್ ಠಾಣೆಗೆ…
ಮುಂದೆ ಓದಿ..
