ತಲೆಮರೆಸಿಕೊಂಡ ಆರೋಪಿಯನ್ನು ತಮಿಳುನಾಡಿನಲ್ಲಿ ಬಂಧಿಸಿದ ಯಲಹಂಕ ಉಪನಗರ ಪೊಲೀಸರು
ಬೆಂಗಳೂರು, ಜುಲೈ 28: 20252008ರಲ್ಲಿ ದಾಖಲಾಗಿದ್ದ ಎಲ್‌ಪಿಆರ್ ಪ್ರಕರಣ (ಅ.ಸಂ. 457/380) ಸಂಬಂಧಿಸಿದಂತೆ, ಪೊಲೀಸರ ಗಟ್ಟಿದ ಕಾರ್ಯಾಚರಣೆ ಯಶಸ್ವಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯಾಗಿದ್ದ ಎ-2, ಮುರುಗೇಶ.ಪಿ @ ಮೈಕಲ್ @ ಮುರುಗೇಸನ್ (55), ತಂದೆ: ಲೇಟ್ ಪಳನಿ, ತಮಿಳುನಾಡು ರಾಜ್ಯದ ವೇಲೂರು ಜಿಲ್ಲೆಯ ಚೇತ್ ಪೇಟೆ ಗ್ರಾಮ ನಿವಾಸಿಯಾಗಿದ್ದನು, ಈವರೆಗೆ ತಲೆಮರೆಸಿಕೊಂಡಿದ್ದ. ಪತ್ರದ ಆಧಾರದ ಮೇಲೆ ತನಿಖಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಅವರು ತಮಿಳುನಾಡಿಗೆ ತೆರಳಿ ಜುಲೈ 25ರ ರಾತ್ರಿ ಮನೆಯ ನಂ.38, ಊರ್ದು ನಗರ, ಚೇತ್ ಪೇಟೆ ಪ್ರದೇಶದಲ್ಲಿ ಹುಡುಕಾಟ ನಡೆಸಿದರು. ಈ ವೇಳೆ ಆರೋಪಿಯು ಅಲ್ಲೇ ಇರುವುದಾಗಿ ದೃಢಪಟ್ಟ ಹಿನ್ನೆಲೆಯಲ್ಲಿ ಬೆಳಗಿನ ಜಾವ 03:00 ಗಂಟೆಗೆ ಯಲಹಂಕ ಉಪನಗರ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಆತನ ವಿರುದ್ಧ ಸಿಸಿ ನಂ: 19000/2012 ದಾಖಲೆಯಿದ್ದು, ಈಗ ಆತನನ್ನು ನ್ಯಾಯದ ಮುಂದಕ್ಕೆ ಹಾಜರುಪಡಿಸಲು ಕ್ರಮ ಕೈಗೊಳ್ಳಲಾಗಿದೆ.…
ಮುಂದೆ ಓದಿ..
