ಸೀರಸಂದ್ರ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಧ್ಯಪಾನ – ವ್ಯಕ್ತಿ ವಶಕ್ಕೆ
ಬೆಂಗಳೂರು, ಆಗಸ್ಟ್ 5, 2025:ಹೆಸರಘಟ್ಟ ಹೋಬಳಿ ಯಲಹಂಕ ತಾಲ್ಲೂಕಿನ ಸೀರಸಂದ್ರ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಧ್ಯಪಾನಕ್ಕೆ ಅವಕಾಶ ನೀಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಕುರಿತು ರಾಜನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಅಗಸ್ಟ್ 1ರಂದು ಸಂಜೆ 4 ಗಂಟೆಗೆ ಗಸ್ತಿನಲ್ಲಿ ಇದ್ದ ಪೊಲೀಸರಿಗೆ ಸ್ಥಳೀಯರಿಂದ ಸೀರಸಂದ್ರ ಗ್ರಾಮದ ನಿವಾಸಿ ನಾಗರಾಜು ಬಿನ್ ಸಿದ್ದಲಿಂಗಪ್ಪ ಎಂಬವರು ತಮ್ಮ ಮನೆಯ ಮುಂಭಾಗದಲ್ಲೇ ಕೆಲವು ಆಸಾಮಿಗಳಿಗೆ ಮಧ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಈ ಮೂಲಕ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟಾಗುತ್ತಿದೆ ಎಂಬ ಮಾಹಿತಿ ಲಭಿಸಿತು. ಈ ಮಾಹಿತಿ ಹಿನ್ನೆಲೆಯಲ್ಲಿ ರಾಜನಕುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗ್ರಾಮ ಪಂಚಾಯತ್ ಸದಸ್ಯರನ್ನು ಕರೆದುಕೊಂಡು ನಾಗರಾಜರ ಮನೆ ಬಳಿ ಪರಿಶೀಲನೆ ನಡೆಸಿದರು. ಸಂಜೆ 4:45ರ ವೇಳೆಗೆ ನಾಗರಾಜರ ಮನೆಯ ಮುಂಭಾಗದಲ್ಲಿ ಕೆಲವರು ಮಧ್ಯಪಾನ ಮಾಡುತ್ತಿರುವುದು ದೃಷ್ಟಿಗೋಚರವಾಯಿತು. ಪೊಲೀಸರು ಧಾಳಿ ನಡೆಸಿದಾಗ, ಹಲವು…
ಮುಂದೆ ಓದಿ..
