ಸುದ್ದಿ 

ಬೆಂಗಳೂರು: ಯಲಹಂಕದಲ್ಲಿ ವ್ಯಾಪಾರಿಯ ಮೇಲೆ ಗುಂಪು ದಾಳಿ – ಜೀವ ಬೆದರಿಕೆ ಆರೋಪ

ಬೆಂಗಳೂರು 20 ಆಗಸ್ಟ್ 2025 ಯಲಹಂಕದ ಭದ್ರಪ್ಪ ಲೇಔಟ್‌ನಲ್ಲಿ ಗುಂಪು ದಾಳಿಯ ಪ್ರಕರಣ ಬೆಳಕಿಗೆ ಬಂದಿದೆ. ಮಟನ್ ಶಾಪ್ ನಡೆಸುತ್ತಿದ್ದ ವ್ಯಾಪಾರಿಯೊಬ್ಬರು ಕೊಡುಗೆಹಳ್ಳಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರಕಾರ, ಆಗಸ್ಟ್ 17ರಂದು ರಾತ್ರಿ ಸುಮಾರು 7 ಗಂಟೆಯ ಸಮಯದಲ್ಲಿ ಶೋಭಾ ತುಲೀಪ್ ಹೋಟೆಲ್ ಎದುರು ನವೀದ್ ಮಟನ್ ಕಾಪ್ ಅಂಗಡಿಯನ್ನು ಮುಚ್ಚಿ ಹತ್ತಿರದ ಎನ್‌ಟಿಐ ಮೈದಾನಕ್ಕೆ ತೆರಳಿದ್ದ ವೇಳೆ, ಸುಮಾರು 10–12 ಜನರ ಗುಂಪು ತಡೆದಿದ್ದು, ಮೂವರು ಅಪರಿಚಿತ ಯುವಕರು ಹಠಾತ್ ವಾಗ್ವಾದ ಆರಂಭಿಸಿದ್ದಾರೆ. ನವೀದ್ ಪಾಷಾ ಅವರ ಪ್ರಕಾರ, ಆ ಯುವಕರು ವಿಳಾಸ ಕೇಳಿ ಕಿರಿಕಿರಿ ಮಾಡಿದ್ದು, ಬಳಿಕ ದೈಹಿಕ ದಾಳಿ ನಡೆಸಿದ್ದಾರೆ. ಮುಖ ಹಾಗೂ ಮೈಮೇಲೆ ಕೈಗಳಿಂದ ಹೊಡೆದು ಬೈಯುತ್ತಿರುವ ಸಂದರ್ಭದಲ್ಲಿ, ದೂರುದಾರರ ತಮ್ಮ ಶಾಹುಲ್ ನವಾಜ್ ಜಗಳ ಬಿಡಿಸಲು ಬಂದಾಗ, ಅವನ ಮೇಲೆಯೂ ಹಲ್ಲೆ ನಡೆಸಲಾಗಿದೆ. ಇದರ ನಂತರ ಆರೋಪಿಗಳು “ಇವತ್ತು…

ಮುಂದೆ ಓದಿ..
ಸುದ್ದಿ 

ಬೆಂಗಳೂರು: ವಿದೇಶಿ ಪ್ರಜೆಗೆ ಮನೆ ಬಾಡಿಗೆ – ಮಹಿಳೆ ವಿರುದ್ಧ ಪ್ರಕರಣ

ಬೆಂಗಳೂರು: ವಿದೇಶಿ ಪ್ರಜೆಗೆ ಮನೆ ಬಾಡಿಗೆ – ಮಹಿಳೆ ವಿರುದ್ಧ ಪ್ರಕರಣ ಬೆಂಗಳೂರು 20 ಆಗಸ್ಟ್ 2025ನಗರದ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಭದ್ರಪ್ಪ ಲೇಔಟ್, ಮಾರುತಿನಗರದಲ್ಲಿ ವಿದೇಶಿ ಪ್ರಜೆಗೆ ಅನಧಿಕೃತವಾಗಿ ಮನೆ ಬಾಡಿಗೆಗೆ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಆಗಸ್ಟ್ 17 ರಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಕೊಡಿಗೆಹಳ್ಳಿಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ, ಮಾರುತಿನಗರ 1ನೇ ಮುಖ್ಯರಸ್ತೆಯ ಮನೆ ನಂ.218, 1ನೇ ಮಹಡಿಯಲ್ಲಿ ವಾಸಿಸುತ್ತಿದ್ದ ವಿದೇಶಿ ಪ್ರಜೆಯ ಬಗ್ಗೆ ಮಾಹಿತಿ ದೊರಕಿತು. ಮನೆಯನ್ನು ಮಾಲೀಕರಾದ ಶ್ರೀಮತಿ ಗಂಗಾರಾಣಿ, ಸಂಜಯ್ ನಗರದ ನಿವಾಸಿ, ವಿದೇಶಿ ಪ್ರಜೆ ಡುಮೊ ಎಲ್.ಪಿ. ಫ್ರೆಡರಿಕ್ (39 ವರ್ಷ, ನೈಜೀರಿಯಾ ಮೂಲದವರು) ಅವರಿಗೆ ಬಾಡಿಗೆಗೆ ನೀಡಿರುವುದು ಪತ್ತೆಯಾಯಿತು. ಮನೆಯಿಂದ ದೊರೆತ ಮಾಹಿತಿಯ ಪ್ರಕಾರ, ಕಳೆದ 2 ತಿಂಗಳಿಂದ ಫ್ರೆಡರಿಕ್ ವಾಸವಾಗಿದ್ದು, ಪ್ರತಿ ತಿಂಗಳು ರೂ.9,450 ಬಾಡಿಗೆ ನೀಡುತ್ತಿದ್ದಾರೆ. ಆದರೆ, ಸಂಬಂಧಪಟ್ಟ…

ಮುಂದೆ ಓದಿ..
ಸುದ್ದಿ 

ಬೆಂಗಳೂರಿನ ತಿಮ್ಮಣ್ಣ ಲೇಔಟ್ ಕೊಡುಗೆ ಹಳ್ಳಿಯಲ್ಲಿ 54 ವರ್ಷದ ಉಮೇಶ್ ಕಾಣೆಯಾದ ಪ್ರಕರಣ

ಬೆಂಗಳೂರು 20 ಆಗಸ್ಟ್ 2025ತಿಮ್ಮಣ್ಣ ಲೇಔಟ್ ಕೊಡುಗೆಹಳ್ಳಿ ಎಲ್ಲಿ ವಾಸವಿರುವ 54 ವರ್ಷದ ಉಮೇಶ್ ಕಾಣೆಯಾದ ಪ್ರಕರಣ ದಾಖಲಾಗಿದೆ. ಕೊಡಿಗೆಹಳ್ಳಿ ಪೊಲೀಸರ ಪ್ರಕಾರ, ಯಶಸ್ ವಿ ಅವರು ನೀಡಿದ ಮಾಹಿತಿಯಂತೆ ಉಮೇಶ್ ತಮ್ಮ ಕುಟುಂಬ ಸಮೇತ ನಗರದ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದರು. ಇವರು ಮನೆಯಲ್ಲಿಯೇ ಇರುತ್ತಿದ್ದರೂ, ದಿನಾಂಕ 21-07-2025 ರಂದು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಮನೆಯಿಂದ ಹೊರಟ ಬಳಿಕ ವಾಪಸ್ ಮನೆಗೆ ಮರಳಿಲ್ಲ. ಹಿಂದೆಯೂ ಒಮ್ಮೆ ಮನೆಯಿಂದ ಹೊರಟು 15 ದಿನಗಳ ಬಳಿಕ ಮನೆಗೆ ವಾಪಸ್ ಬಂದಿದ್ದರು. ಆದರೆ ಈ ಬಾರಿ 10-08-2025 ರವರೆಗೂ ಕಾಯುತ್ತಿದ್ದರೂ ವಾಪಸ್ ಬಾರದ ಕಾರಣ, ಕುಟುಂಬಸ್ಥರು ಕೊಡುಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಂಧು-ಬಳಗ ಹಾಗೂ ಸ್ನೇಹಿತರ ಬಳಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಕಾಣೆಯಾದ ಉಮೇಶ್ ಅವರ ವಯಸ್ಸು 54 ವರ್ಷ. ಇವರ ಚಹರೆ: ಕೋಲು ಮುಖ, ಬಿಳಿ…

ಮುಂದೆ ಓದಿ..
ಅಂಕಣ 

ಬೆಳಗಿನ ವಾಯುವಿಹಾರದಲ್ಲಿ ಕಂಡದ್ದು……..

ಬೆಳಗಿನ ವಾಯುವಿಹಾರದಲ್ಲಿ ಕಂಡದ್ದು…….. ಎಂದಿನಂತೆ ಬೆಳಗಿನ 4 ಗಂಟೆಗೆ ಎದ್ದವನು ಅಂದಿನ ಬರಹಗಳನ್ನು ಬರೆದು Post ಮಾಡಿ 5/30 ಕ್ಕೆ ಸರಿಯಾಗಿ ಮನೆಯಿಂದ ಹೊರಟೆ….. ತುಂತುರು ಹನಿಗಳ ನಡುವೆ ತೂರಿಬಂದ ತಣ್ಣನೆಯ ಗಾಳಿ ಮೈಸೋಕಿಸಿ ರೋಮಾಂಚನ ಉಂಟುಮಾಡಿತು. ಆಹ್ಲಾದಕರ ವಾತಾವರಣ ಗಿಡಮರಗಳ ನಡುವಿನಿಂದ ತೂರಿಬಂದ ಪಕ್ಷಿಗಳ ಕಲರವ – ಮಂದಿರದಿಂದ ಭಕ್ತಿಗೀತೆ ಮಸೀದಿಯಿಂದ ನಮಾಜು, ಚರ್ಚಿನಿಂದ ಪ್ರಾರ್ಥನೆ ಮೂಡಿ ಬರುತ್ತಿದ್ದು ಸಂಗೀತದ ರಸಾನುಭವ ಮುದನೀಡಿತು……… ಬೆಳಗ್ಗೆ ಸೇವಿಸಿದ್ದ ಅಸ್ಸಾಂನ ರುಚಿ ರುಚಿಯಾದ ಮಸಾಲಾ ಟೀ ಸ್ವಾದ ಗಂಟಲಿನಿಂದ ಕೆಳಗಿಳಿದು ದೇಹ ಬೆಚ್ಚಗಾಗಿಸಿ ಸಂಭ್ರಮಿಸಿತು… ಹಾಗೇ ಸ್ವಲ್ಪ ದೂರ ನಡೆಯುತ್ತಿದ್ದಂತೆ ಒಂದು ರಸ್ತೆಯ ಬದಿಯಲ್ಲಿ ಸುಮಾರು 10/12 ವರ್ಷದ ಆಸುಪಾಸಿನ ಒಂದಷ್ಟು ಮಕ್ಕಳು ನಡುಗುವ ಚಳಿಯಲ್ಲೂ ಆ ದಿನದ ಪತ್ರಿಕೆಗಳನ್ನು ವಿಂಗಡಿಸಿ ಸೈಕಲ್ ಗೆ ಕಟ್ಟಿ ಗಡಿಬಿಡಿಯಲ್ಲಿ ಹೊರಡುವ ಆತುರದಲ್ಲಿದ್ದರು. ಅವರಿಗೆ ಸಿಗುವ ಸಂಬಳ ತಿಂಗಳಿಗೆ 500/1000 ಇರಬಹುದಷ್ಟೇ.ಎಷ್ಟೋ…

ಮುಂದೆ ಓದಿ..
ಸುದ್ದಿ 

ಶಿಗ್ಗಾಂವಿ ತಾಲೂಕ್ ಬಂಕಾಪುರದಲ್ಲಿ 18 ವರ್ಷದ ವಿದ್ಯಾರ್ಥಿನಿ ಕಾಣೆ..

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರದ ಕೊಟ್ಟಿಗೇರಿ ಓಣಿಯಲ್ಲಿ 18 ವರ್ಷದ ಯುವತಿ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.ಪೊಲೀಸರ ಪ್ರಕಾರ, ಪ್ರತಿಕ್ಷಾ ಕಟ್ಟಿಮಣಿ ತಂದೆ ಜಗದೀಶ ಕಟ್ಟಿಮಣಿ, ವಯಸ್ಸು 18 ವರ್ಷ ಎಂಬ ವಿದ್ಯಾರ್ಥಿನಿ ಆಗಸ್ಟ್ 11 ರ ಮಧ್ಯಾಹ್ನ 12 ಗಂಟೆ ಸುಮಾರಿಗೆ ತನ್ನ ಮನೆಯಿಂದ “ಆಧಾರ್ ಕಾರ್ಡ್ ಮತ್ತು SSLC ಮಾರ್ಕ್ಸ್ ಕಾರ್ಡ್ ಝರಾಕ್ಸ ಮಾಡಿಸಿಕೊಂಡು ಬರುತ್ತೇನೆ” ಎಂದು ಹೇಳಿಕೊಂಡು ಮನೆಯಿಂದ ಹೊರಟಿದ್ದಾಳೆ. ಆದರೆ ಅವಳು ಮನೆಗೆ ಮರಳಿಲ್ಲ ಕುಟುಂಬಸ್ಥರು ತುಂಬಾ ಆತಂಕಕ್ಕೊಳಗಾಗಿದ್ದಾರೆತಾಯಿ ವೀಣಾ ಕಟ್ಟಿಮಣಿ ಅವರು ತಮ್ಮ ಮಗಳು ಪತ್ತೆಯಾಗದೇ ಇರುವ ಹಿನ್ನೆಲೆಯಲ್ಲಿ 13 ಆಗಸ್ಟ್ ರಂದು ಬಂಕಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಹುಡುಕಾಟ ಮುಂದುವರೆಸಿದ್ದಾರೆ : ವರದಿ ಪ್ರಮೋದ್ ಜನಗೇರಿ ಹಾನಗಲ್ ತಾಲೂಕ್ ಆಲದಕಟ್ಟಿ ತಾಲೂಕ್ ನ್ಯೂಸ್ .ಹಾವೇರಿ 6360821691 https://taluknewsmedia.com/PRAMODJANAGERI.html

ಮುಂದೆ ಓದಿ..
ಸುದ್ದಿ 

ಶಿಗ್ಗಾಂವಿ ತಾಲೂಕ್ ಬಂಕಾಪುರದಲ್ಲಿ 18 ವರ್ಷದ ವಿದ್ಯಾರ್ಥಿನಿ ಕಾಣೆ

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರದ ಕೊಟ್ಟಿಗೇರಿ ಓಣಿಯಲ್ಲಿ 18 ವರ್ಷದ ಯುವತಿ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಪೊಲೀಸರ ಪ್ರಕಾರ, ಪ್ರತಿಕ್ಷಾ ಕಟ್ಟಿಮಣಿ ತಂದೆ ಜಗದೀಶ ಕಟ್ಟಿಮಣಿ, ವಯಸ್ಸು 18 ವರ್ಷ ಎಂಬ ವಿದ್ಯಾರ್ಥಿನಿ ಆಗಸ್ಟ್ 11 ರ ಮಧ್ಯಾಹ್ನ 12 ಗಂಟೆ ಸುಮಾರಿಗೆ ತನ್ನ ಮನೆಯಿಂದ “ಆಧಾರ್ ಕಾರ್ಡ್ ಮತ್ತು SSLC ಮಾರ್ಕ್ಸ್ ಕಾರ್ಡ್ ಝರಾಕ್ಸ ಮಾಡಿಸಿಕೊಂಡು ಬರುತ್ತೇನೆ” ಎಂದು ಹೇಳಿಕೊಂಡು ಮನೆಯಿಂದ ಹೊರಟಿದ್ದಾಳೆ. ಆದರೆ ಅವಳು ಮನೆಗೆ ಮರಳಿಲ್ಲ ಕುಟುಂಬಸ್ಥರು ತುಂಬಾ ಆತಂಕಕ್ಕೊಳಗಾಗಿದ್ದಾರೆ ತಾಯಿ ವೀಣಾ ಕಟ್ಟಿಮಣಿ ಅವರು ತಮ್ಮ ಮಗಳು ಪತ್ತೆಯಾಗದೇ ಇರುವ ಹಿನ್ನೆಲೆಯಲ್ಲಿ 13 ಆಗಸ್ಟ್ ರಂದು ಬಂಕಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಹುಡುಕಾಟ ಮುಂದುವರೆಸಿದ್ದಾರೆ : ವರದಿ ಪ್ರಮೋದ್ ಜನಗೇರಿಹಾನಗಲ್ ತಾಲೂಕ್ ಆಲದಕಟ್ಟಿತಾಲೂಕ್ ನ್ಯೂಸ್ .ಹಾವೇರಿ6360821691

ಮುಂದೆ ಓದಿ..
ಅಂಕಣ 

ಸ್ವಚ್ಚಂದ – ಸ್ವತಂತ್ರ – ಮುಕ್ತ – ಬದುಕು.

ಸ್ವಚ್ಚಂದ – ಸ್ವತಂತ್ರ – ಮುಕ್ತ – ಬದುಕು. ” Looking ugly and madness is the ultimate status (Freedom ) of mind “ ” ಕುರೂಪ ಅಥವಾ ರೂಪವಂತರಲ್ಲವಾಗಿರುವುದು ಮತ್ತು ಹುಚ್ಚು ಮನಸ್ಥಿತಿ, ವ್ಯಕ್ತಿಯ ಪರಿಪೂರ್ಣ ಸ್ವಾತಂತ್ರ್ಯದ ಅಂತಿಮ ಹಂತ “ಎಂಬ ಅರ್ಥದ ಇಂಗ್ಲೀಷ್ ನಾಣ್ಣುಡಿಯೊಂದು ಬಹಳ ಹಿಂದೆ ಓದಿದ ನೆನಪು….. ವ್ಯಾವಹಾರಿಕ ಜಗತ್ತಿನಲ್ಲಿ ಇದು ಅಷ್ಟಾಗಿ ಅನ್ವಯವಾಗುವುದಿಲ್ಲ. ಏಕೆಂದರೆ ಇಲ್ಲಿ ಮುಖವಾಡಗಳೇ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತದೆ. ನಮ್ಮ ಎಲ್ಲ ಭಾವನೆಗಳನ್ನು ಸಹ ಮುಖವಾಡದ ಮರೆಯಲ್ಲಿಯೇ ವ್ಯಕ್ತಪಡಿಸಬೇಕು. ಕಾನೂನು, ನೈತಿಕತೆ, ಸಂಬಂಧಗಳು, ವ್ಯವಹಾರ, ಶಿಷ್ಟಾಚಾರ, ಕೊಳ್ಳುಬಾಕ ಸಂಸ್ಕೃತಿ ಎಲ್ಲವೂ ನಮ್ಮನ್ನು ಮುಖವಾಡದಲ್ಲಿ ಮರೆಮಾಚಿಕೊಳ್ಳಲು ಒತ್ತಡ ಹೇರುತ್ತದೆ. ಇಲ್ಲದಿದ್ದರೆ ಬದುಕು ನಡೆಯುವುದೇ ಇಲ್ಲ…. ಆದರೆ ನಿಜವಾದ ಸ್ವಚ್ಛಂದ ಮಾನಸಿಕ ಸ್ವಾತಂತ್ರ್ಯ ದೇವರು ಧರ್ಮದ ಹಂಗಿಲ್ಲದ, ಆಧ್ಯಾತ್ಮಿಕ ಸ್ಥಿತಪ್ರಜ್ಞತೆಯ ಭಾವದಲ್ಲಿ ಇದರ ಅನುಭವವಾಗುತ್ತದೆ….. ಬಗೆಹರಿಸಲಾಗದ,…

ಮುಂದೆ ಓದಿ..
ಸುದ್ದಿ 

ಬೆಂಗಳೂರು: 17 ವರ್ಷದ ಬಾಲಕಿ ಕಾಣೆಯಾದ ಪ್ರಕರಣ

ಬೆಂಗಳೂರು 18 ಆಗಸ್ಟ್ 2025 ಹೆಬ್ಬಾಳ ಕೆಂಪಾಪುರದ ಜೈನ್ ಎಂಟೇಜ್ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯ 17 ವರ್ಷದ ಮಗಳು ಕಾಣೆಯಾದ ಘಟನೆ ಬೆಳಕಿಗೆ ಬಂದಿದೆ. ಯಲಹಂಕ ಉಪನಗರ ಪೊಲೀಸರ ಮಾಹಿತಿಯ ಪ್ರಕಾರ, ದೂರಿನುದಾರರ ಮಗಳು ಕುಮಾರಿ ನಮ್ರತಾ (17 ವರ್ಷ), ಯಲಹಂಕದ ಶೇಷಾದ್ರಿಪುರಂ ಕಾಲೇಜಿನಲ್ಲಿ 2ನೇ ವರ್ಷದ ಕಾರ್ಮಸ್ ವ್ಯಾಸಂಗ ಮಾಡುತ್ತಿದ್ದಾಳೆ. ದಿನಾಂಕ 16 ಆಗಸ್ಟ್ 2025 ರಂದು ಬೆಳಿಗ್ಗೆ 8 ಗಂಟೆಗೆ ಕಾಲೇಜಿಗೆ ತೆರಳಿದ ಆಕೆ ಮಧ್ಯಾಹ್ನ 1.30ರ ಸುಮಾರಿಗೆ ಯಾವುದೋ ಹುಡುಗನ ಜೊತೆ ವಿಡಿಯೋ ಕಾಲ್ ಮಾಡುತ್ತಿದ್ದಳು ಎಂದು ದೂರಿನುದಾರರ ಮಗ ಅನಿರುದ್ಧ ಹೇಳಿದ್ದಾನೆ. ಆ ನಂತರ ನಮ್ರತಾ ತನ್ನ ಸ್ನೇಹಿತರಿಗೆ ತಮಿಳುನಾಡಿಗೆ ಹೋಗುತ್ತಿದ್ದೇನೆ ಎಂದು ತಿಳಿಸಿ, ತನ್ನ ಫೋನ್ ಸ್ವಿಚ್ ಆಫ್ ಮಾಡಿ ಕಾಣೆಯಾಗಿದ್ದಾಳೆ. ಮನೆಯವರು, ಸ್ನೇಹಿತರು, ಬಂಧು-ಬಳಗ ಹಾಗೂ ಅಕ್ಕಪಕ್ಕದವರಲ್ಲಿ ವಿಚಾರಿಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಕಾಣೆಯಾದ ನಮ್ರತಾ —…

ಮುಂದೆ ಓದಿ..
ಸುದ್ದಿ 

ದೇವನಹಳ್ಳಿ: ವೀಲಿಂಗ್ ಮಾಡುತ್ತಿದ್ದ ಯುವಕ ಬಂಧನ

ಬೆಂಗಳೂರು 18 ಆಗಸ್ಟ್ 2025 ದೇವನಹಳ್ಳಿಯ ಬಿ.ಬಿ.ರಸ್ತೆಯ ಮೇಲೆ ಸ್ಕೂಟರ್‌ನಲ್ಲಿ ಅತಿವೇಗವಾಗಿ ಹಾಗೂ ಅಜಾಗರೂಕತೆಯಿಂದ ವೀಲಿಂಗ್ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. 15 ಆಗಸ್ಟ್ 2025ರಂದು ಬೆಳಿಗ್ಗೆ ಸುಮಾರು 8:20ರ ಹೊತ್ತಿಗೆ, ಕೋಗಿಲು ಜಂಕ್ಷನ್ ಬಳಿ ಪಹರೆಯಲ್ಲಿ ತೊಡಗಿದ್ದ ಯಲಹಂಕ ಟ್ರಾಫಿಕ್ ಪೊಲೀಸರು ಸಾರ್ವಜನಿಕರಿಂದ ಬಂದ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಹೊಂಡಾ ಡಿಯೋ (KA-04-CH-7706) ಮೇಲೆ ವೀಲಿಂಗ್ ಮಾಡುತ್ತಾ ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಿದ್ದ ಯುವಕನನ್ನು ತಡೆದು ಯಲಹಂಕ ಸಂಚಾರಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ತನಿಖೆಯಲ್ಲಿ ಬಂಧಿತ ಯುವಕನ ಹೆಸರು ರಿಹಾನ್ ಬಿನ್ ರಫೀ (19), ವಾಸ: ಕಾವಲ ಬೈರಸಂದ್ರ ಬಸ್ ನಿಲ್ದಾಣ ಹತ್ತಿರ, ಆರ್.ಟಿ.ನಗರ, ಬೆಂಗಳೂರು ಎಂದು ತಿಳಿದುಬಂದಿದೆ. ಪೊಲೀಸರು ಆರೋಪಿಯ ವಿರುದ್ಧ ಅತಿವೇಗ, ಅಜಾಗರೂಕ ಚಾಲನೆ ಹಾಗೂ ಸಾರ್ವಜನಿಕರ ಪ್ರಾಣಕ್ಕೆ ಅಪಾಯ ಉಂಟುಮಾಡುವಂತಹ ಕೃತ್ಯ ಕುರಿತಂತೆ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ…

ಮುಂದೆ ಓದಿ..
ಸುದ್ದಿ 

ಬೆಂಗಳೂರು: 80 ಸಾವಿರ ರೂಪಾಯಿ ಮೌಲ್ಯದ ಸ್ಕೂಟರ್ ಕಳ್ಳತನ

ಬೆಂಗಳೂರು 18 ಆಗಸ್ಟ್ 2025ಯಲಹಂಕ ತಾಲೂಕಿನ ಕಟ್ಟಿಗೆನಹಳ್ಳಿ ಯಲಿ ಮತ್ತೊಂದು ಸ್ಕೂಟರ್ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಮಾಹಿತಿಯ ಪ್ರಕಾರ, ದೂರುದಾರರ ಮಗ ಶೇಖ್ ಮುತಾಹಿರ್ ಅವರು ಬೂದು ಬಣ್ಣದ ಸ್ಕೂಟರ್ (KA-402120-125) ಅನ್ನು 27 ಜುಲೈ 2025 ರಂದು ಬೆಳಗ್ಗೆ ಸುಮಾರು 10:15 ಗಂಟೆಗೆ ಓಡಿಸಿಕೊಂಡು ಹೋಗಿದ್ದರು. ಆದರೆ, 28 ಜುಲೈ 2025 ರಂದು ಬೆಳಗ್ಗೆ 10 ಗಂಟೆಯ ವೇಳೆಗೆ ಸ್ಕೂಟರ್ ನಿಲ್ಲಿಸಿದ್ದ ಸ್ಥಳದಲ್ಲಿ ಕಾಣೆಯಾಗಿರುವುದು ಪತ್ತೆಯಾಗಿದೆ. ಅಪರಿಚಿತರು ವಾಹನವನ್ನು ಕಳವು ಮಾಡಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಕಳವಾದ ಸ್ಕೂಟರ್ ಮೌಲ್ಯವನ್ನು ಸುಮಾರು ₹80,000 ಎಂದು ಅಂದಾಜಿಸಲಾಗಿದೆ. ಫಿರ್ಯಾದಿನ ಮೇರೆಗೆ ಯಲಹಂಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಪತ್ತೆಹಚ್ಚಿ ಸ್ಕೂಟರ್ ವಾಪಸ್ ಪಡೆಯಲು ತನಿಖೆ ಆರಂಭಿಸಿದ್ದಾರೆ.

ಮುಂದೆ ಓದಿ..