ಸುದ್ದಿ 

ವಿವಾಹದ ನಂತರ ಮಹಿಳೆಗೆ ದೈಹಿಕ, ಮಾನಸಿಕ ಹಿಂಸೆ: ವರದಕ್ಷಿಣೆಗೆ ಬಲವಂತ, ಕೊನೆಗೆ ವಿಷ ಸೇವನೆ.

ನಾಗಮಂಗಲ ತಾಲ್ಲೂಕಿನ ಸುಖಧರೆ ಗ್ರಾಮದ ನಿವಾಸಿಯಾದ ಮಹಿಳೆಯೊಬ್ಬರು ತಮ್ಮ ಗಂಡ ಹಾಗೂ ಗಂಡನ ಕುಟುಂಬದವರಿಂದ ದೀರ್ಘಕಾಲದ ದೈಹಿಕ ಮತ್ತು ಮಾನಸಿಕ ಪೀಡೆಗೆ ಒಳಗಾಗಿರುವ ವಿಷಯ ಇದೀಗ ಬೆಳಕಿಗೆ ಬಂದಿದೆ. ಸುಮಾ ಎಂ ಎಸ್ ಅವರ ಮಹಿಳೆಯು 2022ರಲ್ಲಿ ಸುನೀಲ್.ಎಸ್.ಎನ್ ಎಂಬವರೊಂದಿಗೆ ವಿವಾಹವಾದ ಬಳಿಕ, ಪ್ರಾರಂಭದಲ್ಲಿ ಮೂರು ತಿಂಗಳ ಕಾಲ ಸಹಜ ದಾಂಪತ್ಯ ಜೀವನ ನಡೆಸಿದರೂ ನಂತರದಿಂದವೇ ಅವರ ಅತ್ತೆ ಹಾಗೂ ಮಾವನಿಂದ ವರದಕ್ಷಿಣೆಗೆ ಒತ್ತಡ ಹೆಚ್ಚಾಗಿತ್ತು. ವರದಕ್ಷಿಣೆಗಾಗಿ ಬೈದು, ಅವಮಾನಿಸುವುದರ ಜೊತೆಗೆ, ಗಂಡನೂ ಸಹ ಜಮೀನು ಹೆಸರಿನಲ್ಲಿ ಬರೆಸಿಕೊಳ್ಳುವಂತೆ ಬಲವಂತ ಮಾಡಿದ ಬಗ್ಗೆ ಅವರು ದೂರಿನಲ್ಲಿ ತಿಳಿಸಿದ್ದಾರೆ.ಇದೇ ಹಿನ್ನೆಲೆಯಲ್ಲಿ ಪತ್ನಿ ವಿರುದ್ದ ಹಲ್ಲೆ ನಡೆಸಿದ ಸಂದರ್ಭ, ಮಾನಸಿಕವಾಗಿ ಸಹಿಸಲಾಗದೆ ವಿಷ ಸೇವಿಸಿದ ಮಹಿಳೆಯನ್ನು ಗಂಡನೇ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ಬಳಿಕ, ಗಂಡನ ಕುಟುಂಬದಿಂದ ದೂರವಿರುವ ವೇಳೆ, ಪತ್ನಿಗೆ ವಿಚ್ಛೇದನ ನೋಟಿಸ್ ಕಳಿಸಲಾಗಿದೆ ಹಾಗೂ ಬಟ್ಟೆಗಳನ್ನು ಮನೆ ಹೊರಗೆ…

ಮುಂದೆ ಓದಿ..
ಸುದ್ದಿ 

ಎಚ್.ಎಸ್.ಆರ್ ಲೇಔಟ್‌ನಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳುವು

.ಬೆಂಗಳೂರು, ಜೂನ್ 21:ಎಚ್.ಎಸ್.ಆರ್ ಲೇಔಟ್‌ನ ನಿವಾಸಿ ಶ್ರೀಮತಿ ಜಮುನಾ ಅವರ ಮನೆಯ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಅಪರಿಚಿತರು ಕಳುವು ಮಾಡಿಕೊಂಡು ಹೋಗಿರುವ ಘಟನೆ ಜೂನ್ 17ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಈ ಸಂಬಂಧ ಅವರು ಹೆಚ್.ಎಸ್.ಆರ್ ಲೇಔಟ್‌ನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಜಮುನಾ ಅವರು ಸುಮಾರು 8-9 ವರ್ಷಗಳಿಂದ ಬೆಂಗಳೂರು ನಗರದ ಎಚ್.ಎಸ್.ಆರ್ ಲೇಔಟ್, 6ನೇ ಸೆಕ್ಟರ್, 16ನೇ ಬಿ ಕ್ರಾಸ್, 5ನೇ ಮೇನ್ ರಸ್ತೆಯಲ್ಲಿರುವ ನಂ.470, 1ನೇ ಮಹಡಿಯಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಿದ್ದು, ಗೃಹಿಣಿಯಾಗಿದ್ದಾರೆ.ಜೂನ್ 17ರಂದು ಬೆಳಿಗ್ಗೆ 8:00ರಿಂದ 8:30ರ ನಡುವೆ ತಮ್ಮ ಸುಜುಕಿ ಆಕ್ಸೆಸ್ (ದೃಡೀಕರಣ ಸಂಖ್ಯೆ: KA05LX2577, ಬಣ್ಣ: ಕಪ್ಪು, ಮಾದರಿ: 2023, ಮೌಲ್ಯ: ₹77,000/-ದ್ವಿಚಕ್ರ ವಾಹನವನ್ನು ಮನೆಯ ಮುಂದೆ ನಿಲ್ಲಿಸಲಾಗಿತ್ತು. ಆದರೆ ಅದೆ ದಿನ ಸಂಜೆ 6:00 ರಿಂದ 6:30ರ ನಡುವೆ ಅವರು ವಾಹನವನ್ನು ಪರಿಶೀಲಿಸಿದಾಗ ಅದು ಅಲ್ಲಿ ಕಾಣಿಸಿಕೊಂಡಿಲ್ಲ.ಸುತ್ತಮುತ್ತಲಿನ…

ಮುಂದೆ ಓದಿ..
ಸುದ್ದಿ 

ಕೋರಮಂಗಲದಲ್ಲಿ ಮಂಗಳಮುಖಿಯರ ಮೇಲೆ ಹಲ್ಲೆ: 6 ಜನರಿಂದ ಜೀವ ಬೆದರಿಕೆ.

ಬೆಂಗಳೂರು, ಜೂನ್ 21: ನಗರದ ಕೋರಮಂಗಲದ 5ನೇ ಬ್ಲಾಕ್ ಪ್ರದೇಶದಲ್ಲಿ ಇಬ್ಬರು ಮಂಗಳಮುಖಿಯರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಮಂಗಳಮುಖಿಗಳಾದ ಜಾನು @ ಜುನೈದ್ ಹಾಗೂ ಶೀಫಾ ಎಂಬುವವರು ಈ ಘಟನೆಯಲ್ಲಿ ಬಲಿಯಾಗಿದ್ದು, ಇಬ್ಬರೂ ಕೂಡ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಜಾನುವು ನೀಡಿದ ಮಾಹಿತಿಯಂತೆ, ಜೂನ್ 18ರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಜಾನು ಮತ್ತು ಶೀಫಾ ಇಬ್ಬರೂ ಬದ್ಮಾಶ್ ಪಬ್ ಹತ್ತಿರ ರಸ್ತೆಯ ಪಕ್ಕ ನಿಂತಿದ್ದರು. ಈ ಸಂದರ್ಭದಲ್ಲಿ ಆಟೋದಲ್ಲಿ ಬಂದ ನಾಲ್ವರು ಯುವಕರು, ಒಬ್ಬ ಯುವತಿ ಮತ್ತು ಒಬ್ಬ ಮಂಗಳಮುಖಿಯು ಅಕ್ರಮವಾಗಿ ಅವರನ್ನು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ನಿಂದನೆ ನಡೆಸಿದ್ದಾರೆ. ಮಂಗಳಮುಖಿಯರಿಗೆ ಕೈಗಳಿಂದ ಹಲ್ಲೆ ಮಾಡಿತಲೆಯನ್ನು ರಸ್ತೆಯಲ್ಲಿ ಸಾಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಸಿದರೆಂದು ತಿಳಿಸಲಾಗಿದೆ. ಅದಲ್ಲದೆ, ಶೀಫಾಳ ಖಾಸಗಿ ಭಾಗಕ್ಕೆ ಹೊಡೆದು, “ಸೂಳೆ ಮುಂಡೆರೆ, ನಿಮ್ಮನ್ನು…

ಮುಂದೆ ಓದಿ..
ಸುದ್ದಿ 

ಬನ್ನೇರಘಟ್ಟ ರಸ್ತೆಯ ಮೋಟಾರ್ ಪಾರ್ಟ್ಸ್ ಗೋಡೌನ್‌ನಲ್ಲಿ ಕಳ್ಳತನ : ಲಕ್ಷಾಂತರ ಮೌಲ್ಯದ ವಸ್ತುಗಳು ಕಳುವು.

ಬೆಂಗಳೂರು, ಜೂನ್ 21 – ನಗರದ ಬನ್ನೇರಘಟ್ಟ ಮುಖ್ಯರಸ್ತೆಯ ಬಸವನಪುರದಲ್ಲಿರುವ ಟಿ-ಜಾನ್ ಕಾಲೇಜ್ ಹತ್ತಿರದ ಮೋಟಾರ್ ಪಾರ್ಟ್ಸ್ ಗೋಡೌನ್‌ನಲ್ಲಿ ಕಳ್ಳತನ ನಡೆದಿದ್ದು, ಸುಮಾರು ₹2.25 ಲಕ್ಷ ಮೌಲ್ಯದ ಪರಿಕರಗಳು ಕಳುವಾಗಿವೆ. ಈ ಕುರಿತು ಗೋಡೌನ್ ಮಾಲೀಕರು ಹುಳಿಮಾವು ಪೊಲೀಸರಿಗೆ ದೂರು ನೀಡಿದ್ದಾರೆ. ಹಜ್ವಲ್ ಪಾಶ ಬಿನ್ ಸಾಬುಲಾಲ (58), ಲಾಲ್ಜೀ ನಗರ, ಲಕ್ಕಸಂದ್ರ ನಿವಾಸಿ, ಅವರು ತಮ್ಮ ಕುಟುಂಬದೊಂದಿಗೆ ವಾಸವಿದ್ದು, ಜೀವನೋಪಾಯಕ್ಕಾಗಿ ಬನ್ನೇರಘಟ್ಟ ಮುಖ್ಯರಸ್ತೆಯಲ್ಲಿ ಸ್ಕ್ರಾಪ್ ಮೋಟಾರ್ ಪಾರ್ಟ್ಸ್ ಎಂಬ ಹೆಸರಿನಲ್ಲಿ ಗೋಡೌನ್ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದರು.ಹಜ್ವಲ್ ಪಾಶ ಬಿನ್ ಸಾಬುಲಾಲ್ ರವರ ಪ್ರಕಾರ, 15/06/2025 ರಂದು ಸಂಜೆ 7:30 ಗಂಟೆಗೆ ಅವರು ತಮ್ಮ ಗೋಡೌನ್ ಅನ್ನು ಮುಚ್ಚಿ ಮನೆಗೆ ಹೋದರು. ಆದರೆ 16/06/2025 ರಂದು ಸಂಜೆ 5:00 ಗಂಟೆಗೆ ಅವರು ಪುನಃ ಗೋಡೌನ್‌ಗೆ ಹೋದಾಗ, ಅಲ್ಲಿ ಸಂಗ್ರಹಿಸಿದ್ದ ಕಾಪರ್ ಹಾಗೂ ಬ್ರಾಸ್ ಐಟಂಗಳು, ಕಾಪರ್ ವೈಯರ್‌ಗಳು…

ಮುಂದೆ ಓದಿ..
ಸುದ್ದಿ 

ಮನೆಗೆ ನುಗ್ಗಿದ ಅಪರಿಚಿತರು – ₹70,000 ಮೌಲ್ಯದ ಲ್ಯಾಪ್‌ಟಾಪ್, ಮೊಬೈಲ್ ಕಳ್ಳತನ…

ಬೆಂಗಳೂರು, ಜೂನ್ 21: ನಗರದಲ್ಲಿ ಮತ್ತೊಂದು ಮನೆಯ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ. ಜೂನ್ 18ರಂದು ಬೆಳಗ್ಗೆ ಸುಮಾರು 8:00 ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದ್ದು, ಅಪರಿಚಿತರು ಮನೆಗೆ ನುಗ್ಗಿ ವಿವಿಧ ಬೆಲೆಬಾಳುವ ವಸ್ತುಗಳನ್ನು ಕಳುವು ಮಾಡಿದ್ದಾರೆ. ಮಹೇಶ್ವರಿ ಘೋಶ್ ರವರು ನೀಡಿದ ದೂರಿನ ಪ್ರಕಾರ, ಅವರು ಮನೆಯ ಬಾಗಿಲು ತೆರೆದು ಒಳಗಡೆ ಇದ್ದಾಗ ಅಪರಿಚಿತ ವ್ಯಕ್ತಿಗಳು ಅಕ್ರಮವಾಗಿ ಒಳನುಗ್ಗಿ, ಮಹೇಶ್ವರಿ ಘೋಶ್ ಕೆಲಸಮಾಡುವ ಕಂಪನಿಗೆ ಸೇರಿದ ಒಂದು LENOVO-20SL ಲ್ಯಾಪ್‌ಟಾಪ್ (ಮೌಲ್ಯ ರೂ. 50,000), ಲ್ಯಾಪ್‌ಟಾಪ್ ಬ್ಯಾಗ್, ಚಾರ್ಜರ್, ಮೌಸ್, MOTO G-62 ಮೊಬೈಲ್ ಫೋನ್ (ಮೌಲ್ಯ ರೂ. 18,000), ಮೂರು ವೈಯಕ್ತಿಕ ಡೈರಿಗಳು ಮತ್ತು ಕಂಪನಿಗೆ ಸೇರಿದ ದಾಖಲೆಗಳನ್ನು ಕಳುವು ಮಾಡಿದ್ದಾರೆ.ಒಟ್ಟು ಕಳುವಾದ ವಸ್ತುಗಳ ಮೌಲ್ಯವನ್ನು ಅಂದಾಜು ರೂ. 70,000 ಎಂದು ನಿರ್ಧರಿಸಲಾಗಿದೆ. ಘಟನೆಯ ಕುರಿತು ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು,…

ಮುಂದೆ ಓದಿ..
ಸುದ್ದಿ 

ನಾಗಮಂಗಲ ಕಾಲೇಜಿನಲ್ಲಿ ಜಾತಿ ನಿಂದನೆ ಗೊಂದಲ: ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಧನಂಜಯ ವಿರುದ್ಧ ಶಿಕ್ಷಕನ ದೂರು.

ನಾಗಮಂಗಲದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಾತಿ ನಿಂದನೆ ಸಂಬಂಧಿತ ಗಂಭೀರ ಆರೋಪ ಉದ್ಭವಿಸಿದ್ದು, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಧನಂಜಯ ಅವರ ವಿರುದ್ಧ ಅಂಗ್ಲಭಾಷೆ ಉಪನ್ಯಾಸಕ ಶ್ರೀ ಸುರೇಶ್ ವೈ. ಅವರು ಪೊಲೀಸ್ ಠಾಣೆಗೆ ಅಧಿಕೃತ ದೂರು ಸಲ್ಲಿಸಿದ್ದಾರೆ.ದೂರುದಾರರ ಪ್ರಕಾರ, ದಿನಾಂಕ 16/06/2025 ಪ್ರಾಂಶುಪಾಲರ ಕಚೇರಿಯಲ್ಲಿ ನಡೆದ ಸಭೆಯ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ಕುರಿತು ಚರ್ಚೆ ನಡೆಯುತ್ತಿತ್ತು. ಈ ವೇಳೆ ಧನಂಜಯ ಮತ್ತು ಜೀವಶಾಸ್ತ್ರ ಉಪನ್ಯಾಸಕ ಗಂಗಾಧರ ವಿ.ಆರ್. ನಡುವೆ ವಾಗ್ವಾದ ಉಲ್ಬಣಗೊಂಡಿತು. ಮಧ್ಯ ಪ್ರವೇಶಿಸಿ ಸಮ್ಮಜಿಸಲು ಪ್ರಯತ್ನಿಸಿದ ಉಪನ್ಯಾಸಕ ಸುರೇಶ್ ಅವರ ಮೇಲೂ ಧನಂಜಯ ಅವರು ಅನಾದರದ ಮಾತುಗಳನ್ನು ಬಳಸಿ ಗದರಿಸಿದ್ದಾರೆ ಎನ್ನಲಾಗಿದೆ.ಸಭೆಯ ಬಳಿಕ ಧನಂಜಯ ಅವರು ಕಾಲೇಜಿನ ಬಾಗಿಲ ಬಳಿ “ನೀನೇನು ಗಂಗಾಧರನನ್ನು ವಹಿಸಿಕೊಳ್ಳುವುದು ಮಾದಿಗ ಜಾತಿಗೆ ಸರಿಯಾಗಿದೆ. ನೀನು ಮೈಸೂರು ರಸ್ತೆ ಮೇಲೆ ಸಾಯುತ್ತಿರುವೆ” ಎಂಬುದಾಗಿ ಹೇಳಿದ್ದು, ಪರಿಶಿಷ್ಟ ಜಾತಿಗೆ…

ಮುಂದೆ ಓದಿ..
ಸುದ್ದಿ 

ನಾಗಮಂಗಲ ಸರ್ಕಾರಿ ಕಾಲೇಜಿನಲ್ಲಿ ಹಲ್ಲೆ ಘಟನೆ: ಉಪಾಧ್ಯಕ್ಷನಿಗೆ ಜೀವ ಬೆದರಿಕೆ!

ನಾಗಮಂಗಲದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ Colleges Development Committee (CDC) ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿರುವವರು ಹಲ್ಲೆಗೊಳಗಾದ ಘಟನೆ ಶನಿವಾರ ಬೆಳಕಿಗೆ ಬಂದಿದೆ. ತಮ್ಮ ಕರ್ತವ್ಯ ನಿಮಿತ್ತ ಪ್ರಾಂಶುಪಾಲರನ್ನು ಭೇಟಿ ಮಾಡಲು ಕಾಲೇಜಿಗೆ ಆಗಮಿಸಿದ ವೇಳೆ, ಇಬ್ಬರು ಉಪನ್ಯಾಸಕರಿಂದ ಹಲ್ಲೆ ಹಾಗೂ ಜೀವ ಬೆದರಿಕೆ ಎದುರಾದ ಘಟನೆ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ಪಿರ್ಯಾದಿದಾರರ ಹೇಳಿಕೆ ಪ್ರಕಾರ, ಇಂಗ್ಲಿಷ್ ಉಪನ್ಯಾಸಕ ಸುರೇಶ್ ಹಾಗೂ ಜೀವಶಾಸ್ತ್ರ ಉಪನ್ಯಾಸಕ ಗಂಗಾಧರ ಅವರು, ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಅವರನ್ನು ನಿಂದನೆ ಮಾಡಿ, ಶಾರೀರಿಕವಾಗಿ ಗುದ್ದಿ ನೋವುಂಟುಮಾಡಿದ್ದಾರೆ. ಘಟನೆ ವೇಳೆ ಸ್ಥಳಕ್ಕೆ ಬಂದ ವೆಂಕಟೇಶ ಎಂಬವರು ಗಲಾಟೆ ತಪ್ಪಿಸಿದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.”ಮತ್ತೆ ಕಾಲೇಜಿಗೆ ಬಂದರೆ ಕೊಲೆಮಾಡುತ್ತೇವೆ” ಎಂಬ life threat ಕೂಡ ಆರೋಪಿಗಳಿಂದ ಬಂದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ತನಿಖೆ…

ಮುಂದೆ ಓದಿ..
ಅಂಕಣ 

ಯೋಗ ಮತ್ತು ಧ್ಯಾನ,ಧೀರ್ಘ ಲೇಖನ ಓದುವ ತಾಳ್ಮೆಯೂ ಇರಲಿ….

ಜೂನ್ 21, ಅಂತರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಯೋಗ ಮತ್ತು ಧ್ಯಾನದ ಪರಿಕಲ್ಪನೆಯ ಸುತ್ತ ಒಂದಷ್ಟು ಅನಿಸಿಕೆಗಳು……..ಕಾಯಕವೇ ಕೈಲಾಸ ಎಂದು ತನ್ನ ಶ್ರಮದಿಂದಲೇ ತನ್ನ ಅಗತ್ಯಗಳನ್ನು ಪೂರೈಸಿಕೊಂಡು ಬದುಕನ್ನು ಸರಳವಾಗಿ, ಸಹಜವಾಗಿ, ಪ್ರಕೃತಿಯ ನಿಷ್ಠೆಯಿಂದ ಬದುಕು ಸಾಗಿಸುತ್ತಿದ್ದರೆ ಅದೇ ಖಂಡಿತವಾಗಲೂ ಅತ್ಯುತ್ತಮ ಜೀವನ ಶೈಲಿ. ಬಹುಶಃ ನಾಗರಿಕತೆಯ ಪ್ರಾರಂಭದಲ್ಲಿ ಮನುಷ್ಯ ಹೀಗೆ ಇತರ ಎಲ್ಲಾ ಪ್ರಾಣಿಗಳಂತೆ ಜೀವಿಸುತ್ತಿದ್ದನು. ಅಂದರೆ ಹೆಚ್ಚು ದೈಹಿಕ ಶ್ರಮ, ಕಡಿಮೆ ಮಾನಸಿಕ ಒತ್ತಡ, ಹಸಿವಾದಾಗ ತಿನ್ನುವುದು, ನಿದ್ದೆ ಬಂದಾಗ ನಿದ್ದೆ ಮಾಡುವುದು, ಅಗತ್ಯಕ್ಕೆ ಅನುಗುಣವಾಗಿ ದೈಹಿಕ ಕಾಮನೆಗಳನ್ನು ಪೂರೈಸಿಕೊಳ್ಳುವುದು, ಎಲ್ಲಿಂದ ಎಲ್ಲಿಗೋ ಪಯಣ, ನಾಳೆಯ ಚಿಂತೆ ಇಲ್ಲ, ಹಿಂದಿನ ನೆನಪುಗಳಿಲ್ಲ, ಇಂದಿನ ಬದುಕಷ್ಟೇ ಮುಖ್ಯ ಎಂಬ ಸನ್ನಿವೇಶದಲ್ಲಿ ಯೋಗ ಧ್ಯಾನಗಳ ಅವಶ್ಯಕತೆ ಅಷ್ಟಾಗಿ ಇರಲಿಲ್ಲ….. ಆದರೆ ಸಮಾಜ ಮುಂದುವರಿದಷ್ಟು ಮನುಷ್ಯನ ಅಗತ್ಯಗಳು ಹೆಚ್ಚಾಗಿ, ಕುಟುಂಬ ವ್ಯವಸ್ಥೆ ಸಂಕೀರ್ಣವಾದಷ್ಟು ಮನುಷ್ಯನ ದೇಹ ಮತ್ತು ಮನಸ್ಸಿನ…

ಮುಂದೆ ಓದಿ..
ಸುದ್ದಿ 

ಬಸವೇಶ್ವರನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನಕ್ಕೆ ಅವಕಾಶ: ಪಳನಿಸ್ವಾಮಿ ವಿರುದ್ಧ ಕಾನೂನು ಕ್ರಮ

ನಾಗಮಂಗಲ, ಜೂನ್ 19, 2025 : ನಾಗಮಂಗಲ ಪಟ್ಟಣದ ಬಸವೇಶ್ವರನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಅವಕಾಶ ನೀಡಿದ ಪ್ರಕರಣವೊಂದರಲ್ಲಿ ಪಳನಿಸ್ವಾಮಿ ಎಂಬಾತನ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ. ದಿನಾಂಕ 19-06-2025 ರಂದು ಸಂಜೆ 4 ಗಂಟೆ ಸುಮಾರಿಗೆ ಕೆ. ಮಲೆನಹಳ್ಳಿ ಗೇಟ್ ಬಳಿ ರಸ್ತೆಯಲ್ಲಿ ತೊಡಗಿದ್ದ ಪೊಲೀಸರು ಬಾತ್ಮೀದಾರರಿಂದ ದೊರೆತ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದರು. ಮಾಹಿತಿ ಪ್ರಕಾರ, ಪಳನಿಸ್ವಾಮಿ ತನ್ನ ಅಂಗಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಅವಕಾಶ ಮಾಡಿಕೊಡುತ್ತಿದ್ದನು.ಸ್ಥಳಕ್ಕೆ ತೆರಳಿದ ಪೊಲೀಸರು ಹಾಗೂ ಪಂಚರ ತಂಡದವರ ಮುಡಿಯಲ್ಲಿ, ಇಬ್ಬರು ವ್ಯಕ್ತಿಗಳು ಮದ್ಯಪಾನ ಮಾಡುತ್ತಿದ್ದನ್ನು ಕಂಡುಬಂದಿದ್ದು, ಪೊಲೀಸರು ಸ್ಥಳಕ್ಕೆ ಕೂಡಲೇ ಅವರಿಬ್ಬರು ಪರಾರಿಯಾಗಿದ್ದಾರೆ. ಅಂಗಡಿಯೊಳಗಿದ್ದ ಪಳನಿಸ್ವಾಮಿಗೆ ವಿಚಾರಣೆ ನಡೆಸಿದಾಗ, ಆತ ಅಂಗಡಿಯ ವ್ಯವಹಾರಕ್ಕಾಗಿ ಈ ರೀತಿಯ ಅವಕಾಶ ನೀಡುತ್ತಿದ್ದೇನೆ ಎಂದು ಒಪ್ಪಿಕೊಂಡನು.ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ರಾಜ ವಿಸ್ಕಿ…

ಮುಂದೆ ಓದಿ..
ಸುದ್ದಿ 

ಹೊಂಡಾ ಡಿಯೋ ದ್ವಿಚಕ್ರ ವಾಹನ ಕಳ್ಳತನ. ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ದಾಖಲು.

ಬೆಂಗಳೂರು, ಜೂನ್ 21 – ನಗರದ ನಿವಾಸಿಯಾದ ಆಯೇಶ್ ಪರ್ವೀಸ್ ತಮ್ಮ ಹೊಂಡಾ ಡಿಯೋ ದ್ವಿಚಕ್ರ ವಾಹನ ಕಳ್ಳತನವಾದ ಕುರಿತು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಘಟನೆಯು ದಿನಾಂಕ 16 ಜೂನ್ 2025 ರಂದು ರಾತ್ರಿ ಸಂಭವಿಸಿದೆ. ಆಯೇಶ್ ಪರ್ವೀಸ್ ತಮ್ಮ ಹೊಂಡಾ ಡಿಯೋ ದ್ವಿಚಕ್ರ ವಾಹನ (ನಂ: KA-51-EQ-4720) ಅನ್ನು ತಮ್ಮ ನಿವಾಸದ ಸಮೀಪ ಪಾರ್ಕ್ ಮಾಡಿಕೊಂಡಿದ್ದರು. ಇದರಲ್ಲಿ ಚಾಸಿಸ್ ಸಂಖ್ಯೆ: ME4JF393JF7081636 ಮತ್ತು ಎಂಜಿನ್ ಸಂಖ್ಯೆ: JF39E71081834 ಆಗಿದೆ. ಅವರು ಕೊನೆಯದಾಗಿ ವಾಹನವನ್ನು ದಿನಾಂಕ 16/06/2025 ರಂದು ರಾತ್ರಿ 10:30 ಗಂಟೆಗೆ ನೋಡಿದ್ದು, ನಂತರದ ದಿನದಂದು, 17/06/2025 ರಂದು ಬೆಳಿಗ್ಗೆ 6:00 ಗಂಟೆಗೆ ವಾಹನ ನಾಪತ್ತೆಯಾಗಿರುವುದು ಅವರ ಗಮನಕ್ಕೆ ಬಂದಿದೆ.ಸುಮಾರು ₹65,000 ಮೌಲ್ಯದ ಈ ವಾಹನವನ್ನು ಎಲ್ಲೆಡೆ ಹುಡುಕಿದರೂ ಪತ್ತೆಯಾಗದ ಹಿನ್ನೆಲೆ, ಅವರು ಮೈಕೋ ಬಡಾವಣೆಯ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ದೂರು ಸ್ವೀಕರಿಸಿಕೊಂಡ ಪೊಲೀಸರು ಪ್ರಕರಣ…

ಮುಂದೆ ಓದಿ..