41 ವರ್ಷದ ತಬ್ರಿಜ್ ಖಾನ್ ಕಾಣೆಯಾಗಿರುವ ಘಟನೆ – ಕುಟುಂಬಸ್ಥರಿಂದ ಪೊಲೀಸರು ಜತೆಗೆ ಸಹಕಾರ ಕೋರಿಕೆ
ಬೆಂಗಳೂರು, ಜುಲೈ 9:2025ನಗರದ ಸಾರಾಯಿಪಾಳ್ಯ ಫಾತೀಮಾ ಲೇಔಟ್ ನಿವಾಸಿಯಾದ 41 ವರ್ಷದ ತಬ್ರಿಜ್ ಖಾನ್ ಎಂಬವರು ಜೂನ್ 28 ರಂದು ಮಧ್ಯಾಹ್ನ 3 ಗಂಟೆಗೆ ಕೆಲಸಕ್ಕೆ ಹೋಗಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಮನೆಗೆ ವಾಪಸ್ ಬಾರದೇ ಅವರು ಕಣ್ಮರೆಯಾಗಿದ್ದು, ಈ ಕುರಿತು ಅವರ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತಬ್ರಿಜ್ ಖಾನ್ ಅವರು ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದು, ಸಾಮಾನ್ಯ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿರುವವರು. ಅವರು ಕಪ್ಪು ಬಣ್ಣದ ಕನ್ನಡಕ ಧರಿಸುತ್ತಿದ್ದು, ಕೊನೆಗೆ ಕಂಡಾಗ ಕೆಂಪು ತುಂಬು ತೋಳಿನ ಶರ್ಟ್ ಮತ್ತು ನೀಲಿ ಪ್ಯಾಂಟ್ ಧರಿಸಿದ್ದರು. ಕನ್ನಡ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಕಾಣೆಯಾಗಿದ್ದ ನಂತರ ಕುಟುಂಬಸ್ಥರು ಸಂಬಂಧಿಕರು ಹಾಗೂ ಪರಿಚಿತರಲ್ಲಿ ವಿಚಾರಣೆ ನಡೆಸಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ತಬ್ರಿಜ್ ಖಾನ್ ಅವರ ಮೊಬೈಲ್ ನಂಬರಿಗೂ ಸಂಪರ್ಕಿಸಲು ಪ್ರಯತ್ನಿಸಿದಾಗ ಫೋನ್ ಸ್ವಿಚ್ ಆಫ್ ಆಗಿದೆ ಎಂದು…
ಮುಂದೆ ಓದಿ..
