ಮನೆ ಲೀಸ್ ಹೆಸರಿನಲ್ಲಿ ಮೋಸ – ಮಾಲೀಕರಿಗೆ ತೊಂದರೆ
ಬೆಂಗಳೂರು, ಜುಲೈ 8:2025 ಆರ್.ಕೆ. ಹೆಗಡೆನಗರದಲ್ಲಿನ ಮನೆಯ ಮಾಲೀಕರೊಬ್ಬರು ಲೀಸ್ ಹೆಸರಿನಲ್ಲಿ ಮೋಸಕ್ಕೀಡಾದ ಘಟನೆ ನಡೆದಿದೆ. ಶೇಖ್ ಅನ್ವರ್ ಬಾಷಾ ಎಂಬವರು ತಮ್ಮ ಮನೆಯನ್ನು NH Newly Homes ಕಂಪನಿಯ ಪ್ರತಿನಿಧಿಗಳಾದ ಸೈಪ್ ಉರ್ ರೆಹಮಾನ್ ಮತ್ತು ಸೈಯದ್ ಅಬ್ಬಾಸ್ ಅವರಿಗೆ ತಿಂಗಳಿಗೆ ₹21,000 ಬಾಡಿಗೆಯಲ್ಲಿ ಹಾಗೂ ₹1,50,000 ಠೇವಣಿಯಲ್ಲಿ 11 ತಿಂಗಳ ಅವಧಿಗೆ ಬಾಡಿಗೆಗೆ ನೀಡಿದ್ದರು. ಆದರೆ, ಅವರು ಬಾಡಿಗೆ ಹಣವನ್ನು ಪಾವತಿಸದೇ, ಮನೆಗೆ ಪಹೀಮ್ ತಾಜ್ ಎಂಬವರ ಕುಟುಂಬವನ್ನು ಲೀಸ್ ಹೆಸರಿನಲ್ಲಿ ನುಡಿದುಕೊಂಡಿದ್ದಾರೆ. ಮನೆ ಖಾಲಿ ಮಾಡುವಂತೆ ಕೇಳಿದಾಗ ಅವರು “ಲೀಸ್ ಹಣ ಕೊಟ್ಟಿದ್ದೇವೆ, ಅದು ಹಿಂದಿರುಗಿಸಿದರೆ ಮಾತ್ರ ಹೊರಡುತ್ತೇವೆ” ಎಂದು ಹೇಳಿದ್ದಾರೆ. ಇದಲ್ಲದೆ, ಪ್ರಾಣ ಬೆದರಿಕೆ ಸಹ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಶೇಖ್ ಅನ್ವರ್ ಬಾಷಾ ಅವರು ಈ ಬಗ್ಗೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ…
ಮುಂದೆ ಓದಿ..
