ಸುದ್ದಿ 

ಮನೆಗೆ ನುಗ್ಗಿದ ಅಪರಿಚಿತರು – ₹70,000 ಮೌಲ್ಯದ ಲ್ಯಾಪ್‌ಟಾಪ್, ಮೊಬೈಲ್ ಕಳ್ಳತನ…

ಬೆಂಗಳೂರು, ಜೂನ್ 21: ನಗರದಲ್ಲಿ ಮತ್ತೊಂದು ಮನೆಯ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ. ಜೂನ್ 18ರಂದು ಬೆಳಗ್ಗೆ ಸುಮಾರು 8:00 ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದ್ದು, ಅಪರಿಚಿತರು ಮನೆಗೆ ನುಗ್ಗಿ ವಿವಿಧ ಬೆಲೆಬಾಳುವ ವಸ್ತುಗಳನ್ನು ಕಳುವು ಮಾಡಿದ್ದಾರೆ. ಮಹೇಶ್ವರಿ ಘೋಶ್ ರವರು ನೀಡಿದ ದೂರಿನ ಪ್ರಕಾರ, ಅವರು ಮನೆಯ ಬಾಗಿಲು ತೆರೆದು ಒಳಗಡೆ ಇದ್ದಾಗ ಅಪರಿಚಿತ ವ್ಯಕ್ತಿಗಳು ಅಕ್ರಮವಾಗಿ ಒಳನುಗ್ಗಿ, ಮಹೇಶ್ವರಿ ಘೋಶ್ ಕೆಲಸಮಾಡುವ ಕಂಪನಿಗೆ ಸೇರಿದ ಒಂದು LENOVO-20SL ಲ್ಯಾಪ್‌ಟಾಪ್ (ಮೌಲ್ಯ ರೂ. 50,000), ಲ್ಯಾಪ್‌ಟಾಪ್ ಬ್ಯಾಗ್, ಚಾರ್ಜರ್, ಮೌಸ್, MOTO G-62 ಮೊಬೈಲ್ ಫೋನ್ (ಮೌಲ್ಯ ರೂ. 18,000), ಮೂರು ವೈಯಕ್ತಿಕ ಡೈರಿಗಳು ಮತ್ತು ಕಂಪನಿಗೆ ಸೇರಿದ ದಾಖಲೆಗಳನ್ನು ಕಳುವು ಮಾಡಿದ್ದಾರೆ.ಒಟ್ಟು ಕಳುವಾದ ವಸ್ತುಗಳ ಮೌಲ್ಯವನ್ನು ಅಂದಾಜು ರೂ. 70,000 ಎಂದು ನಿರ್ಧರಿಸಲಾಗಿದೆ. ಘಟನೆಯ ಕುರಿತು ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು,…

ಮುಂದೆ ಓದಿ..
ಸುದ್ದಿ 

ನಾಗಮಂಗಲ ಕಾಲೇಜಿನಲ್ಲಿ ಜಾತಿ ನಿಂದನೆ ಗೊಂದಲ: ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಧನಂಜಯ ವಿರುದ್ಧ ಶಿಕ್ಷಕನ ದೂರು.

ನಾಗಮಂಗಲದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಾತಿ ನಿಂದನೆ ಸಂಬಂಧಿತ ಗಂಭೀರ ಆರೋಪ ಉದ್ಭವಿಸಿದ್ದು, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಧನಂಜಯ ಅವರ ವಿರುದ್ಧ ಅಂಗ್ಲಭಾಷೆ ಉಪನ್ಯಾಸಕ ಶ್ರೀ ಸುರೇಶ್ ವೈ. ಅವರು ಪೊಲೀಸ್ ಠಾಣೆಗೆ ಅಧಿಕೃತ ದೂರು ಸಲ್ಲಿಸಿದ್ದಾರೆ.ದೂರುದಾರರ ಪ್ರಕಾರ, ದಿನಾಂಕ 16/06/2025 ಪ್ರಾಂಶುಪಾಲರ ಕಚೇರಿಯಲ್ಲಿ ನಡೆದ ಸಭೆಯ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ಕುರಿತು ಚರ್ಚೆ ನಡೆಯುತ್ತಿತ್ತು. ಈ ವೇಳೆ ಧನಂಜಯ ಮತ್ತು ಜೀವಶಾಸ್ತ್ರ ಉಪನ್ಯಾಸಕ ಗಂಗಾಧರ ವಿ.ಆರ್. ನಡುವೆ ವಾಗ್ವಾದ ಉಲ್ಬಣಗೊಂಡಿತು. ಮಧ್ಯ ಪ್ರವೇಶಿಸಿ ಸಮ್ಮಜಿಸಲು ಪ್ರಯತ್ನಿಸಿದ ಉಪನ್ಯಾಸಕ ಸುರೇಶ್ ಅವರ ಮೇಲೂ ಧನಂಜಯ ಅವರು ಅನಾದರದ ಮಾತುಗಳನ್ನು ಬಳಸಿ ಗದರಿಸಿದ್ದಾರೆ ಎನ್ನಲಾಗಿದೆ.ಸಭೆಯ ಬಳಿಕ ಧನಂಜಯ ಅವರು ಕಾಲೇಜಿನ ಬಾಗಿಲ ಬಳಿ “ನೀನೇನು ಗಂಗಾಧರನನ್ನು ವಹಿಸಿಕೊಳ್ಳುವುದು ಮಾದಿಗ ಜಾತಿಗೆ ಸರಿಯಾಗಿದೆ. ನೀನು ಮೈಸೂರು ರಸ್ತೆ ಮೇಲೆ ಸಾಯುತ್ತಿರುವೆ” ಎಂಬುದಾಗಿ ಹೇಳಿದ್ದು, ಪರಿಶಿಷ್ಟ ಜಾತಿಗೆ…

ಮುಂದೆ ಓದಿ..
ಸುದ್ದಿ 

ನಾಗಮಂಗಲ ಸರ್ಕಾರಿ ಕಾಲೇಜಿನಲ್ಲಿ ಹಲ್ಲೆ ಘಟನೆ: ಉಪಾಧ್ಯಕ್ಷನಿಗೆ ಜೀವ ಬೆದರಿಕೆ!

ನಾಗಮಂಗಲದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ Colleges Development Committee (CDC) ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿರುವವರು ಹಲ್ಲೆಗೊಳಗಾದ ಘಟನೆ ಶನಿವಾರ ಬೆಳಕಿಗೆ ಬಂದಿದೆ. ತಮ್ಮ ಕರ್ತವ್ಯ ನಿಮಿತ್ತ ಪ್ರಾಂಶುಪಾಲರನ್ನು ಭೇಟಿ ಮಾಡಲು ಕಾಲೇಜಿಗೆ ಆಗಮಿಸಿದ ವೇಳೆ, ಇಬ್ಬರು ಉಪನ್ಯಾಸಕರಿಂದ ಹಲ್ಲೆ ಹಾಗೂ ಜೀವ ಬೆದರಿಕೆ ಎದುರಾದ ಘಟನೆ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ಪಿರ್ಯಾದಿದಾರರ ಹೇಳಿಕೆ ಪ್ರಕಾರ, ಇಂಗ್ಲಿಷ್ ಉಪನ್ಯಾಸಕ ಸುರೇಶ್ ಹಾಗೂ ಜೀವಶಾಸ್ತ್ರ ಉಪನ್ಯಾಸಕ ಗಂಗಾಧರ ಅವರು, ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಅವರನ್ನು ನಿಂದನೆ ಮಾಡಿ, ಶಾರೀರಿಕವಾಗಿ ಗುದ್ದಿ ನೋವುಂಟುಮಾಡಿದ್ದಾರೆ. ಘಟನೆ ವೇಳೆ ಸ್ಥಳಕ್ಕೆ ಬಂದ ವೆಂಕಟೇಶ ಎಂಬವರು ಗಲಾಟೆ ತಪ್ಪಿಸಿದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.”ಮತ್ತೆ ಕಾಲೇಜಿಗೆ ಬಂದರೆ ಕೊಲೆಮಾಡುತ್ತೇವೆ” ಎಂಬ life threat ಕೂಡ ಆರೋಪಿಗಳಿಂದ ಬಂದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ತನಿಖೆ…

ಮುಂದೆ ಓದಿ..
ಅಂಕಣ 

ಯೋಗ ಮತ್ತು ಧ್ಯಾನ,ಧೀರ್ಘ ಲೇಖನ ಓದುವ ತಾಳ್ಮೆಯೂ ಇರಲಿ….

ಜೂನ್ 21, ಅಂತರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಯೋಗ ಮತ್ತು ಧ್ಯಾನದ ಪರಿಕಲ್ಪನೆಯ ಸುತ್ತ ಒಂದಷ್ಟು ಅನಿಸಿಕೆಗಳು……..ಕಾಯಕವೇ ಕೈಲಾಸ ಎಂದು ತನ್ನ ಶ್ರಮದಿಂದಲೇ ತನ್ನ ಅಗತ್ಯಗಳನ್ನು ಪೂರೈಸಿಕೊಂಡು ಬದುಕನ್ನು ಸರಳವಾಗಿ, ಸಹಜವಾಗಿ, ಪ್ರಕೃತಿಯ ನಿಷ್ಠೆಯಿಂದ ಬದುಕು ಸಾಗಿಸುತ್ತಿದ್ದರೆ ಅದೇ ಖಂಡಿತವಾಗಲೂ ಅತ್ಯುತ್ತಮ ಜೀವನ ಶೈಲಿ. ಬಹುಶಃ ನಾಗರಿಕತೆಯ ಪ್ರಾರಂಭದಲ್ಲಿ ಮನುಷ್ಯ ಹೀಗೆ ಇತರ ಎಲ್ಲಾ ಪ್ರಾಣಿಗಳಂತೆ ಜೀವಿಸುತ್ತಿದ್ದನು. ಅಂದರೆ ಹೆಚ್ಚು ದೈಹಿಕ ಶ್ರಮ, ಕಡಿಮೆ ಮಾನಸಿಕ ಒತ್ತಡ, ಹಸಿವಾದಾಗ ತಿನ್ನುವುದು, ನಿದ್ದೆ ಬಂದಾಗ ನಿದ್ದೆ ಮಾಡುವುದು, ಅಗತ್ಯಕ್ಕೆ ಅನುಗುಣವಾಗಿ ದೈಹಿಕ ಕಾಮನೆಗಳನ್ನು ಪೂರೈಸಿಕೊಳ್ಳುವುದು, ಎಲ್ಲಿಂದ ಎಲ್ಲಿಗೋ ಪಯಣ, ನಾಳೆಯ ಚಿಂತೆ ಇಲ್ಲ, ಹಿಂದಿನ ನೆನಪುಗಳಿಲ್ಲ, ಇಂದಿನ ಬದುಕಷ್ಟೇ ಮುಖ್ಯ ಎಂಬ ಸನ್ನಿವೇಶದಲ್ಲಿ ಯೋಗ ಧ್ಯಾನಗಳ ಅವಶ್ಯಕತೆ ಅಷ್ಟಾಗಿ ಇರಲಿಲ್ಲ….. ಆದರೆ ಸಮಾಜ ಮುಂದುವರಿದಷ್ಟು ಮನುಷ್ಯನ ಅಗತ್ಯಗಳು ಹೆಚ್ಚಾಗಿ, ಕುಟುಂಬ ವ್ಯವಸ್ಥೆ ಸಂಕೀರ್ಣವಾದಷ್ಟು ಮನುಷ್ಯನ ದೇಹ ಮತ್ತು ಮನಸ್ಸಿನ…

ಮುಂದೆ ಓದಿ..
ಸುದ್ದಿ 

ಬಸವೇಶ್ವರನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನಕ್ಕೆ ಅವಕಾಶ: ಪಳನಿಸ್ವಾಮಿ ವಿರುದ್ಧ ಕಾನೂನು ಕ್ರಮ

ನಾಗಮಂಗಲ, ಜೂನ್ 19, 2025 : ನಾಗಮಂಗಲ ಪಟ್ಟಣದ ಬಸವೇಶ್ವರನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಅವಕಾಶ ನೀಡಿದ ಪ್ರಕರಣವೊಂದರಲ್ಲಿ ಪಳನಿಸ್ವಾಮಿ ಎಂಬಾತನ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ. ದಿನಾಂಕ 19-06-2025 ರಂದು ಸಂಜೆ 4 ಗಂಟೆ ಸುಮಾರಿಗೆ ಕೆ. ಮಲೆನಹಳ್ಳಿ ಗೇಟ್ ಬಳಿ ರಸ್ತೆಯಲ್ಲಿ ತೊಡಗಿದ್ದ ಪೊಲೀಸರು ಬಾತ್ಮೀದಾರರಿಂದ ದೊರೆತ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದರು. ಮಾಹಿತಿ ಪ್ರಕಾರ, ಪಳನಿಸ್ವಾಮಿ ತನ್ನ ಅಂಗಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಅವಕಾಶ ಮಾಡಿಕೊಡುತ್ತಿದ್ದನು.ಸ್ಥಳಕ್ಕೆ ತೆರಳಿದ ಪೊಲೀಸರು ಹಾಗೂ ಪಂಚರ ತಂಡದವರ ಮುಡಿಯಲ್ಲಿ, ಇಬ್ಬರು ವ್ಯಕ್ತಿಗಳು ಮದ್ಯಪಾನ ಮಾಡುತ್ತಿದ್ದನ್ನು ಕಂಡುಬಂದಿದ್ದು, ಪೊಲೀಸರು ಸ್ಥಳಕ್ಕೆ ಕೂಡಲೇ ಅವರಿಬ್ಬರು ಪರಾರಿಯಾಗಿದ್ದಾರೆ. ಅಂಗಡಿಯೊಳಗಿದ್ದ ಪಳನಿಸ್ವಾಮಿಗೆ ವಿಚಾರಣೆ ನಡೆಸಿದಾಗ, ಆತ ಅಂಗಡಿಯ ವ್ಯವಹಾರಕ್ಕಾಗಿ ಈ ರೀತಿಯ ಅವಕಾಶ ನೀಡುತ್ತಿದ್ದೇನೆ ಎಂದು ಒಪ್ಪಿಕೊಂಡನು.ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ರಾಜ ವಿಸ್ಕಿ…

ಮುಂದೆ ಓದಿ..
ಸುದ್ದಿ 

ಹೊಂಡಾ ಡಿಯೋ ದ್ವಿಚಕ್ರ ವಾಹನ ಕಳ್ಳತನ. ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ದಾಖಲು.

ಬೆಂಗಳೂರು, ಜೂನ್ 21 – ನಗರದ ನಿವಾಸಿಯಾದ ಆಯೇಶ್ ಪರ್ವೀಸ್ ತಮ್ಮ ಹೊಂಡಾ ಡಿಯೋ ದ್ವಿಚಕ್ರ ವಾಹನ ಕಳ್ಳತನವಾದ ಕುರಿತು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಘಟನೆಯು ದಿನಾಂಕ 16 ಜೂನ್ 2025 ರಂದು ರಾತ್ರಿ ಸಂಭವಿಸಿದೆ. ಆಯೇಶ್ ಪರ್ವೀಸ್ ತಮ್ಮ ಹೊಂಡಾ ಡಿಯೋ ದ್ವಿಚಕ್ರ ವಾಹನ (ನಂ: KA-51-EQ-4720) ಅನ್ನು ತಮ್ಮ ನಿವಾಸದ ಸಮೀಪ ಪಾರ್ಕ್ ಮಾಡಿಕೊಂಡಿದ್ದರು. ಇದರಲ್ಲಿ ಚಾಸಿಸ್ ಸಂಖ್ಯೆ: ME4JF393JF7081636 ಮತ್ತು ಎಂಜಿನ್ ಸಂಖ್ಯೆ: JF39E71081834 ಆಗಿದೆ. ಅವರು ಕೊನೆಯದಾಗಿ ವಾಹನವನ್ನು ದಿನಾಂಕ 16/06/2025 ರಂದು ರಾತ್ರಿ 10:30 ಗಂಟೆಗೆ ನೋಡಿದ್ದು, ನಂತರದ ದಿನದಂದು, 17/06/2025 ರಂದು ಬೆಳಿಗ್ಗೆ 6:00 ಗಂಟೆಗೆ ವಾಹನ ನಾಪತ್ತೆಯಾಗಿರುವುದು ಅವರ ಗಮನಕ್ಕೆ ಬಂದಿದೆ.ಸುಮಾರು ₹65,000 ಮೌಲ್ಯದ ಈ ವಾಹನವನ್ನು ಎಲ್ಲೆಡೆ ಹುಡುಕಿದರೂ ಪತ್ತೆಯಾಗದ ಹಿನ್ನೆಲೆ, ಅವರು ಮೈಕೋ ಬಡಾವಣೆಯ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ದೂರು ಸ್ವೀಕರಿಸಿಕೊಂಡ ಪೊಲೀಸರು ಪ್ರಕರಣ…

ಮುಂದೆ ಓದಿ..
ಸುದ್ದಿ 

ಕೀರ್ತಿ ಪ್ರೈಡ್ ಅಪಾರ್ಟ್‌ಮೆಂಟ್ ಪಾರ್ಕಿಂಗ್‌ನಿಂದ ದ್ವಿಚಕ್ರ ವಾಹನ ಕಳ್ಳತನ.

ಬೆಂಗಳೂರು, ಜೂನ್ 21 2025:ನಗರದ ದೊಡ್ಡತೋಗೂರಿನಲ್ಲಿ ವ್ಯಕ್ತಿಯೊಬ್ಬರ ದ್ವಿಚಕ್ರ ವಾಹನ ಕಳ್ಳತನವಾದ ಘಟನೆ ನಡೆದಿದ್ದು, ಈ ಕುರಿತು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅರುಲ್ ಆನಂದನ್ ಅವರು ದೊಡ್ಡತೋಗೂರಿನ ಕೀರ್ತಿ ಪ್ರೈಡ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದು, ತಮ್ಮ ಸುಜಿಕಿ ಆಕ್ಸಿಸ್ 125 (ವಾಹನ ಸಂಖ್ಯೆ KA-05-LQ-4304) ದ್ವಿಚಕ್ರ ವಾಹನವನ್ನು ದಿನಾಂಕ 27-05-2025ರಂದು ರಾತ್ರಿ 8:45 ಗಂಟೆಗೆ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದರು.ಪರಿವಾರಿಕ ಕಾರಣಗಳಿಂದ ಊರಿಗೆ ತೆರಳಿದ್ದ ದೂರುದಾರರು 10-06-2025ರಂದು ಬೆಳಿಗ್ಗೆ 7:30 ಗಂಟೆಗೆ ವಾಪಸ್ ಬಂದು ನೋಡಿದಾಗ ತಮ್ಮ ವಾಹನವು ಪಾರ್ಕಿಂಗ್‌ನಲ್ಲಿ ಕಾಣಿಸದ ಹಿನ್ನೆಲೆ ತಡವಾಗಿ ಬಂದು ಪೊಲೀಸ್ ಠಾಣೆಗೆ ದೂರು ನೀಡಿದರು. ಯಾರೋ ಅಪರಿಚಿತ ವ್ಯಕ್ತಿಗಳು ಪಾರ್ಕಿಂಗ್‌ನಲ್ಲಿದ್ದ ವಾಹನವನ್ನು ಕಳ್ಳತನ ಮಾಡಿದ ಅನುಮಾನ ವ್ಯಕ್ತವಾಗಿದೆ.ಕಳ್ಳತನವಾದ ವಾಹನದ ವಿವರಗಳು:ವಾಹನದ ಬ್ರ್ಯಾಂಡ್: ಸುಜಿಕಿ ಆಕ್ಸಿಸ್ 125ಮಾದರಿ: 2022ಬಣ್ಣ: ಮ್ಯಾಟ್ ಬ್ಲ್ಯಾಕ್ವಾಹನ ಸಂಖ್ಯೆ: KA-05-LQ-4304ಎಂಜಿನ್ ನಂ.: AF217288981ಚೆಸ್ಸಿಸ್ ನಂ.:…

ಮುಂದೆ ಓದಿ..
ಸುದ್ದಿ 

ನಾಗಮಂಗಲದಲ್ಲಿ ಎರಡು ಕಾರುಗಳ ನಡುವೆ ಅಪಘಾತ : ತಪ್ಪಿದ ಪ್ರಾಣಾಪಾಯ

ನಾಗಮಂಗಲ-ಮಂಡ್ಯ ರಸ್ತೆ ವೆಂಕಟೇಶ್ವರ ಟಾಕೀಸ್ ಹತ್ತಿರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಗಂಭೀರ ನಷ್ಟ ಸಂಭವಿಸಿದೆ. ಸದ್ಯಕ್ಕೆ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ.ಎನ್.ಜಿ. ನಾಗೇಗೌಡ (62), ನಾಗೇಗೌಡನಪಾಳ್ಯ ಗ್ರಾಮದ ರೈತರೊಬ್ಬರು, ತಮ್ಮ ಕುಟುಂಬ ಸಮೇತ ಇನ್ನೊವಾ ಕ್ರಿಸ್ತಾ ಕಾರಿನಲ್ಲಿ (KA-06 Z-4681) ಮದುವೆ ಕಾರ್ಯಕ್ರಮ ಮುಗಿಸಿಕೊಂಡು ತಮ್ಮ ಊರಿಗೆ ವಾಪಸ್ ಆಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕಾರನ್ನು ಅವರ ಮಗ ಗೋವಿಂದರಾಜು ಚಾಲನೆ ಮಾಡುತ್ತಿದ್ದರು.ವೆಂಕಟೇಶ್ವರ ಟಾಕೀಸ್ ಹತ್ತಿರ ಟಿಎನ್-04 ಎಜೆ-8928 ಸಂಖ್ಯೆದ ಮಾರುತಿ ರಿಡ್ಜ್ ಕಾರು ನಿರ್ಲಕ್ಷ್ಯದಿಂದ ಯು-ಟರ್ನ್ ತೆಗೆದುಕೊಂಡಾಗ ಇನ್ನೊವಾ ಕಾರಿಗೆ ಬಲಭಾಗದಲ್ಲಿ ಡಿಕ್ಕಿಯಾಗಿದೆ. ಡಿಕ್ಕಿಯಿಂದ ಇನ್ನೊವಾ ಕಾರಿನ ಎರಡೂ ಬಲಭಾಗದ ಬಾಗಿಲುಗಳು ಜಖಂಗೊಂಡಿದ್ದು, ಮಾರುತಿ ಕಾರಿನ ಮುಂಭಾಗದ ಬಂಪರ್ ಹಾಗೂ ಚಾಸಿಸು ಧ್ವಂಸವಾಗಿದೆ.ಘಟನೆಯ ನಂತರ ಎರಡೂ ವಾಹನದ ಚಾಲಕರು ವಾಹನಗಳನ್ನು ರಸ್ತೆಯ ಪಕ್ಕ ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಸದ್ಯಕ್ಕೆ ಯಾವುದೇ ವ್ಯಕ್ತಿಗೆ…

ಮುಂದೆ ಓದಿ..
ಸುದ್ದಿ 

ಎಚ್‌.ಎಸ್‌.ಆರ್ ಲೇಔಟ್‌ನಲ್ಲಿ ಪಿಜಿ ಗೃಹದಲ್ಲಿ ದೊಡ್ಡ ಮಟ್ಟದ ಕಳ್ಳತನ – ಲಕ್ಷಾಂತರ ಮೌಲ್ಯದ ಎಲೆಕ್ಟ್ರಾನಿಕ್ ಸಾಧನಗಳು ಮಾಯ.

ಬೆಂಗಳೂರು, ಮೇ 21: ನಗರದ ಹೆಚ್.ಎಸ್.ಆರ್ ಲೇಔಟ್‌ನ 7ನೇ ಸೆಕ್ಟರ್, 21ನೇ ಕ್ರಾಸ್‌ನಲ್ಲಿ ಇರುವ ಖಾಸಗಿ ಪಿಜಿ ನಿವಾಸದಲ್ಲಿ ಇಂದು ಬೆಳಗಿನ ಜಾವ ದುಷ್ಟರು ಎಂಟ್ರಿ ಕೊಟ್ಟು ಲಕ್ಷಾಂತರ ಮೌಲ್ಯದ ಎಲೆಕ್ಟ್ರಾನಿಕ್ ಸಾಧನಗಳನ್ನು ಕಳವು ಮಾಡಿದ ಘಟನೆ ಬೆಳಕಿಗೆ ಬಂದಿದೆ.ದೀಪಾಂಶು ಅವರು ತಮ್ಮ ಸ್ನೇಹಿತ ಸಾಮ್ರಾಟ್ ಜೊತೆ “ಜೋಲೋ ಇಂಕ್ಸ್” ಪಿಜಿಯಲ್ಲಿ ವಾಸವಿದ್ದು, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮೇ 18ರ ಬೆಳಗಿನ ಜಾವ 4:20ರ ವೇಳೆಗೆ ಅವರು ಮಲಗಿದ್ದಾಗ, ಪಿಜಿ ಬಾಗಿಲಿನ ಕೀ ಹೊರಗಡೆ ಬಿಟ್ಟಿದ್ದನ್ನ ನೋಡಿ ಯಾರೊ ಅಪರಿಚಿತ ವ್ಯಕ್ತಿ ಪಿಜಿಯೊಳಗೆ ನುಗ್ಗಿ ಬೆಲೆಬಾಳುವ ವಸ್ತುಗಳನ್ನು ಎತ್ತಿಕೊಂಡು ಹೋಗಿದ್ದಾರೆ.ಕಳುವಾದ ವಸ್ತುಗಳ ವಿವರ:ಮ್ಯಾಕ್‌ಬುಕ್ ಎಯರ್ M2 – ರೂ. 50,000ಐಪ್ಯಾಡ್ ಪ್ರೋ – ರೂ. 30,000ಐಫೋನ್ 15 – ರೂ. 60,000ವಿವೋ 200E ಮೊಬೈಲ್ – ರೂ. 12,000ಮ್ಯಾಕ್‌ಬುಕ್ ಎಂ ಪ್ರೋ – ರೂ. 50,000ಲ್ಯಾಪ್‌ಟಾಪ್…

ಮುಂದೆ ಓದಿ..
ಅಂಕಣ 

ಲೋಕಾಯುಕ್ತ ಭ್ರಷ್ಟಾಚಾರ……

ತಾಯ ಎದೆ ಹಾಲೆ ವಿಷವಾದರೆ, ಬೇಲಿಯೇ ಎದ್ದು ಹೊಲ ಮೇಯ್ದರೆ,ರಕ್ಷಕರೇ ಭಕ್ಷಕರಾದರೇ,ಕಾಯುವವರೇ ಕೊಲ್ಲುವವರಾದರೇ,ಲೋಕಾಯುಕ್ತವೇ ಭ್ರಷ್ಠವಾದರೆ, ಶಿವ ಶಿವ ಶಿವಾ…….. ಭ್ರಷ್ಟಾಚಾರವೆಂಬುದು ಎಷ್ಟು ವ್ಯಾಪಕವಾಗಿದೆ ಎಂದರೆ ಮನುಷ್ಯನ ದೇಹದ ನರ ನಾಡಿಗಳಲ್ಲೂ ಭ್ರಷ್ಟಾಚಾರದ ವಿಷ ತುಂಬಿಕೊಂಡಿರುವಂತಿದೆ. ಅಂದರೆ ಕೆಟ್ಟ, ಭ್ರಷ್ಟ ಹಣದ ಪ್ರಭಾವ ಇಡೀ ಸಮಾಜವನ್ನು ಆವರಿಸಿಕೊಂಡಿದೆ. ಹಣ ಹೇಗಾದರೂ ಇರಲಿ, ಹೇಗಾದರೂ ಬರಲಿ ಹಣದಿಂದ ಎಲ್ಲವನ್ನೂ ಪಡೆಯಬಹುದು ಎನ್ನುವ ಮನೋಭಾವನೆಯ ವಾತಾವರಣ ಎಲ್ಲರಲ್ಲೂ ನಿರ್ಮಾಣವಾಗಿದೆ. ಈ ಪರಿಸ್ಥಿತಿಯಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತ್ರ ಮಾತನಾಡುವುದು ಮೂರ್ಖತನವಾಗುತ್ತದೆ. ಬಹುತೇಕ ಪ್ರತಿಯೊಬ್ಬರು ಹಣದ ಹಿಂದೆಯೇ ಬಿದ್ದಿದ್ದಾರೆ. ಶಿಕ್ಷಣಕ್ಕೆ ಹಣ, ಆರೋಗ್ಯಕ್ಕೆ ಹಣ, ಊಟಕ್ಕೆ ಹಣ, ಪ್ರವಾಸಕ್ಕೆ ಹಣ, ಬಟ್ಟೆಗೆ ಹಣ, ವಸತಿಗೆ ಹಣ, ಮನೆಯ ಗೃಹೋಪಯೋಗಿ ವಸ್ತುಗಳಿಗೆ ಹಣ, ಸಂಪರ್ಕ ಸಾಧನಗಳಿಗೆ ಹಣ, ಮದುವೆಗೆ ಹಣ, ನಾಮಕರಣಕ್ಕೆ ಹಣ, ಹುಟ್ಟುಹಬ್ಬಕ್ಕೆ ಹಣ, ವಾರ್ಷಿಕೋತ್ಸವಕ್ಕೆ ಹಣ, ಜೀವ ವಿಮೆಗೆ ಹಣ, ವಿದ್ಯುತ್ ಬಿಲ್ಲಿಗೆ…

ಮುಂದೆ ಓದಿ..