ಸುದ್ದಿ 

6ನೇ ತರಗತಿ ವಿದ್ಯಾರ್ಥಿ ಕಾಣೆ – ಆದಿಚುಂಚನಗಿರಿ ವಿದ್ಯಾರ್ಥಿ ನಿಲಯದಿಂದ ಬಾಲಕ ಕಾಣೆ

ನಾಗಮಂಗಲ ತಾಲೂಕಿನಲ್ಲಿ ಆದಿಚುಂಚನಗಿರಿ ಯಲ್ಲಿ ಶ್ರೀ ಗುರುಕುಲ ಮಾ. ಶಾಲೆಯ ವಿದ್ಯಾರ್ಥಿ ನಿಲಯದಿಂದ 12 ವರ್ಷದ ಬಾಲಕನೊಬ್ಬ ಕಾಣೆಯಾಗಿರುವ ದುಃಖದ ಘಟನೆ ನಡೆದಿದೆ.ಗಂಗಾಧರ ಬಿನ್ ಶೇಖಪ್ಪ (ವಯಸ್ಸು 25), ವಾರ್ಡನ್, ಶ್ರೀ ಗುರುಕುಲ ಮಾ. ಶಾಲೆ, ಆದಿಚುಂಚನಗಿರಿ, ಅವರು ನೀಡಿದ ದೂರಿನ ಪ್ರಕಾರ, ದೊಡ್ಡಬಳ್ಳಾಪುರದ ನಿವಾಸಿ ರೇವಂತ ಬಿನ್ ನರಸಿಂಹಮೂರ್ತಿ, 6ನೇ ತರಗತಿಯಲ್ಲಿ ಓದುತ್ತಿದ್ದ ಈ ಬಾಲಕನು ವಿದ್ಯಾರ್ಥಿ ನಿಲಯದಿಂದ ಹೊರ ಹೋಗಿ ನಂತರ ಹಾಸ್ಟೆಲ್‌ಗೆ ಮರಳಿಲ್ಲ.ಬಾಲಕನ ಪೋಷಕರು ನಿನ್ನೆ ಬೆಳ್ಳೂರು ಕ್ರಾಸ್ ಹಾಗೂ ಅದರ ಸುತ್ತಮುತ್ತದ ಬಸ್ ನಿಲ್ದಾಣಗಳು ಸೇರಿದಂತೆ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಅವನು ಪತ್ತೆಯಾಗದ ಹಿನ್ನೆಲೆ ಇಂದು ಠಾಣೆಗೆ ದೂರು ನೀಡಲಾಗಿದೆ.ಕಾಣೆಯಾದ ಬಾಲಕನ ವೈಶಿಷ್ಟ್ಯಗಳು ಈ ಕೆಳಕಂಡಂತಿವೆ:ಮುಖಾಕೃತಿಯು: ದುಂಡು ಮುಖಚರ್ಮದ ಬಣ್ಣ: ಗೋಧಿ ಮೈಬಣ್ಣವಸ್ತ್ರಧರಣೆ: ಬಿಳಿ ತುಂಬುತೋಳಿನ ಅಂಗಿ, ನೀಲಿ ಬಣ್ಣದ ಪ್ಯಾಂಟ್, ಕೆಂಪು ಉದ್ದಗೆರೆಎತ್ತರ: ಸುಮಾರು 4 ಅಡಿ 3 ಇಂಚುಈ…

ಮುಂದೆ ಓದಿ..
ಸುದ್ದಿ 

ಹಟ್ನ ಗ್ರಾಮದಲ್ಲಿ ಅಕ್ರಮ ಮದ್ಯ ವಿತರಣೆ : ಆರೋಪಿತನಿಂದ ಮದ್ಯ ಹಾಗೂ ಲೋಟ ವಶ

ಹಟ್ನ ಗ್ರಾಮದಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ, ಬೆಳ್ಳೂರು ಠಾಣೆಯ ಪೊಲೀಸರು ದಾಳಿ ನಡೆಸಿ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ದಿನಾಂಕ 19/06/2025 ರಂದು ಸಂಜೆ 04:30 ಗಂಟೆಗೆ ಈ ದಾಳಿ ನಡೆಯಿತು.ಪಿಎಸ್‌ಐ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಪ್ರಕಾಶ್ (CP-679), ಕಾಂತ (CP-254), ರಮೇಶ್ (CP-490) ಹಾಗೂ ಇಬ್ಬರು ಪಂಚಾಯತ್ ಸದಸ್ಯರು ಪಾಲ್ಗೊಂಡರು. ದಾಳಿ ವೇಳೆ ಹಟ್ನ ಗೇಟ್ ಬಳಿಯ ಕ್ಯಾಂಡಿಮೆಂಟ್ಸ್ ಅಂಗಡಿಯಲ್ಲಿ ಸಾರ್ವಜನಿಕರಿಗೆ ಪ್ಲಾಸ್ಟಿಕ್ ಲೋಟಗಳಲ್ಲಿ ಮದ್ಯ ನೀಡುತ್ತಿದ್ದ ದೇವರಾಜು ಬಿನ್ ಬಸವೇಗೌಡ (35),ಹಟ್ನ ಗ್ರಾಮಸ್ಥನನ್ನು ಬಂಧಿಸಲಾಯಿತು.ಆತನಿಂದ 180 ಎಂ.ಎಲ್. Old Admiral Brandy ಯ 4 ಟೆಟ್ರಾ ಪ್ಯಾಕ್‌ಗಳು ಹಾಗೂ 3 ಪ್ಲಾಸ್ಟಿಕ್ ಲೋಟಗಳು ವಶಪಡಿಸಿಕೊಳ್ಳಲಾಗಿದೆ. ಪ್ಯಾಕ್‌ಗಳ ಒಟ್ಟು ಮೌಲ್ಯ ₹540 ರೂ. ಆಗಿದೆ. ದೇವರಾಜು ಯಾವುದೇ ಅಧಿಕೃತ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯ ನೀಡುತ್ತಿದ್ದ…

ಮುಂದೆ ಓದಿ..
ಅಂಕಣ 

ಹುಚ್ಚು ಯೋಚನೆ ಮತ್ತು ಯೋಜನೆ…….

ಕಾವೇರಿ ಆರತಿ ಮತ್ತು ಕೆಆರ್‌ಎಸ್ ಜಲಾಶಯದ ಬಳಿ ಬೃಹತ್ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಿಸುವ ಸರ್ಕಾರದ ತೀರ್ಮಾನ……….. ಯಾಕ್ರೀ ಸ್ವಾಮಿ, ನದಿಯನ್ನು ಇಟ್ಕೊಂಡು ರಾಜಕೀಯನೋ, ದುಡ್ಡು ಮಾಡಲಿಕ್ಕೋ, ಪ್ರಚಾರ ಪಡೆಯಲಿಕ್ಕೋ ಪ್ರಯತ್ನ ಪಡ್ತೀರಿ. ಅದೊಂದು ಜೀವ ಜಲ. ಅದನ್ನು ಅದರ ಪಾಡಿಗೆ ಬಿಟ್ಟು ಬಿಡಿ……ಕೃಷಿಗಾಗಿಯೋ, ಕುಡಿಯುವ ನೀರಿಗಾಗಿಯೋ ಎಷ್ಟು ಸಾಧ್ಯವೋ ಅಷ್ಟು ಅದನ್ನ ಸಹಜ ರೀತಿಯಲ್ಲೇ ಉಪಯೋಗಿಸಿಕೊಳ್ಳಿ ಅಷ್ಟೇ. ಅದು ನದಿಗೆ ನೀವು ಕೊಡಬಹುದಾದ ಬಹುದೊಡ್ಡ ಕೊಡುಗೆ. ಅದು ಬಿಟ್ಟು ಅನಾವಶ್ಯಕವಾಗಿ ಕಾವೇರಿ ಆರತಿ ಎನ್ನುವ ಕಾರ್ಯಕ್ರಮ ಮಾಡಿ ಆ ನದಿಯನ್ನು ಕಲ್ಮಶ ಮಾಡುವುದಲ್ಲದೆ, ಮೌಢ್ಯವನ್ನು ಬಿತ್ತುತ್ತಿದ್ದೀರಿ………. ಗಂಗಾರತಿ ಎಂಬ ಕಾರ್ಯಕ್ರಮ ಇದೇ ರೀತಿಯ ಮೌಢ್ಯ. ಇದು ಅದರ ನಕಲು. ಜನರನ್ನು ಭಾವನಾತ್ಮಕವಾಗಿ ಸೆಳೆಯುವ ರಾಜಕೀಯ ಕುತಂತ್ರ. ಜನರಲ್ಲಿ ಗುಲಾಮಿ ಮನಸ್ಥಿತಿ ಬೆಳೆಸುವ ಹುನ್ನಾರ……… ನದಿ ನೀರಿಗೆ ಒಂದಷ್ಟು ಗೌರವ, ಒಂದಷ್ಟು ಪ್ರೀತಿ ಕೊಡಬೇಕೆಂಬುದು ನಿಜ, ಅದು ಸಹಜವಾಗಿಯೇ…

ಮುಂದೆ ಓದಿ..
ಸುದ್ದಿ 

ಹಿರಿಯ ರೈತ ನಾರಾಯಣ ಗೌಡ ರಿಗೆ ರಸ್ತೆಯ ಅಪಘಾತದಲ್ಲಿ ಗಂಭೀರ ಗಾಯ : ಚಿಕಿತ್ಸೆ ವೆಚ್ಚ ಭರಿಸಲು ನಿರಾಕರಿಸಿದ ಬೈಕ್ ಸವಾರ.

ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿಯ ನಾಗತಿಹಳ್ಳಿ ಗ್ರಾಮದಲ್ಲಿ ನಡೆದ ಒಂದು ರಸ್ತೆ ಅಪಘಾತದಲ್ಲಿ ಹಿರಿಯ ರೈತರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆರೋಪಿ ಬೈಕ್ ಸವಾರ ಚಿಕಿತ್ಸೆ ವೆಚ್ಚ ಭರಿಸಲು ನಿರಾಕರಿಸಿದ್ದರಿಂದ ಗಾಯಾಳು ಕುಟುಂಬದವರು ಈಗ ಪೊಲೀಸ್ ದೂರು ದಾಖಲಿಸಿದ್ದಾರೆ.ಎನ್. ನಿಕೇಶ್ (38), ರವರ ಪ್ರಕಾರ ನಾಗತಿಹಳ್ಳಿ ಗ್ರಾಮ, ತಮ್ಮ ತಂದೆ ಎನ್.ಎಂ. ನಾರಾಯಣಗೌಡ (65) ಅವರು “ಕದಬಹಳ್ಳಿಗೆ ಹೋಗಿ ಬರುತ್ತೇನೆ” ಎಂದು ಹೊಂಡಾ ಡಿಯೋ ಸ್ಕೂಟರ್ (ನಂ. ಕೆಎ-41-ಇ.ಕ್ಯೂ-7137) ನಲ್ಲಿ ಹೊರಟಿದ್ದರು. ಬಳಿಕ, ಅವರ ಗ್ರಾಮಸ್ಥ ಎನ್.ಟಿ. ನಾಗರಾಜೇಗೌಡ ಅವರನ್ನು ಸ್ಕೂಟರ್ ಹಿಂಬದಿಯಲ್ಲಿ ಕೂರಿಸಿಕೊಂಡು ಎ.ನಾಗತಿಹಳ್ಳಿ ಕಡೆಗೆ ವಾಪಸ್ಸಾಗುತ್ತಿದ್ದರು.ತಮ್ಮ ಗ್ರಾಮದ ಎನ್.ಟಿ. ಬಾಲಮೂರ್ತಿ ಅವರ ತೋಟದ ಹತ್ತಿರ ರಸ್ತೆಯ ಎಡಭಾಗದಲ್ಲಿ ಬರುತ್ತಿದ್ದ ಸಂದರ್ಭದಲ್ಲಿ, ಎದುರಿನಿಂದ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಹೋಂಡಾ ಶೈನ್ ಬೈಕ್ (ನಂ. ಕೆಎ-50-ವೈ-8184) ಡಿಕ್ಕಿಯಾಗಿ ಇಬ್ಬರೂ ಕೆಳಗೆ ಬಿದ್ದಿದ್ದಾರೆ.ಅಪಘಾತ ಮಾಡಿದ ಬೈಕ್ ಸವಾರನು ಇದೇ…

ಮುಂದೆ ಓದಿ..
ಅಂಕಣ 

ಸಾವಿನ ಮಾರ್ಗಗಳ ಹುಡುಕಾಟದಲ್ಲಿ ಮಾನವ ಜನಾಂಗ……….

ಬಟ್ಟೆ ಇಲ್ಲದೆ, ಊಟವಿಲ್ಲದೆ, ವಸತಿ ಇಲ್ಲದೆ, ಕುಟುಂಬಗಳಿಲ್ಲದೆ, ವಾಹನಗಳಿಲ್ಲದೆ, ಶಾಲಾ-ಕಾಲೇಜುಗಳಿಲ್ಲದೆ, ಆಸ್ಪತ್ರೆ, ಸರ್ಕಾರಗಳಿಲ್ಲದೆ ಹೇಗೋ ಬದುಕುತ್ತಿದ್ದ ಮಾನವ ಅತ್ಯಂತ ವೇಗವಾಗಿ ತನ್ನ ಸುಖ ಭೋಗಕ್ಕೆ ಎಷ್ಟೆಲ್ಲಾ ಸಾಧ್ಯವೋ ಅಷ್ಟೆಲ್ಲಾ ಅನುಕೂಲಗಳನ್ನು ಮಾಡಿಕೊಳ್ಳುತ್ತಾ ಇಂದಿನ ಪರಿಸ್ಥಿತಿ ತಲುಪಿದ್ದಾನೆ……ಗಂಟೆಗೆ ನಾಲ್ಕು ಸಾವಿರಕ್ಕೂ ಹೆಚ್ಚು ಕಿಲೋಮೀಟರ್ ವೇಗದಲ್ಲಿ ಸಂಚರಿಸಬಹುದಾದ ಯುದ್ಧ ವಿಮಾನಗಳು, ಚಂದ್ರಗ್ರಹ, ಮಂಗಳ ಲೋಕಕ್ಕೆ ಹೋಗಬಹುದಾದ ರಾಕೆಟ್ ಗಳು, ವಿಶ್ವದ ಯಾವ ಜಾಗವನ್ನು ಬೇಕಾದರೂ ಮನೆಯಲ್ಲಿ ಕುಳಿತು ನೋಡಬಹುದಾದ ಸಂಪರ್ಕ ಸಾಧನಗಳು, ಯಾರೊಂದಿಗೆ ಬೇಕಾದರೂ ಸಂವಹನ ನಡೆಸಬಹುದಾದ ಮಾಧ್ಯಮಗಳು, ಇನ್ನೂ ಮುಂದುವರೆದು ಇತ್ತೀಚೆಗೆ ಬೆಳವಣಿಗೆ ಆಗುತ್ತಿರುವ ಎಐ ತಂತ್ರಜ್ಞಾನ, ಜೊತೆಗೆ ವಿಧವಿಧದ ಭಕ್ಷ್ಯ ಭೋಜನಗಳನ್ನು, ಬಣ್ಣ ಬಣ್ಣದ ಬಟ್ಟೆಗಳನ್ನು, ಮಾದಕ ಪಾನೀಯಗಳನ್ನು, ಅತ್ಯುತ್ತಮ ಸಂಬಂಧಗಳನ್ನು, ವೈಭವೋಪೇತ ಮನೆಗಳು ಎಲ್ಲವನ್ನು ಇಟ್ಟುಕೊಂಡು, ಸುಖಪಡಬೇಕಾದ ಕಾಲದಲ್ಲಿ ಮನುಷ್ಯ ಸಾವಿನ ಮಾರ್ಗಗಳ ಹುಡುಕಾಟದಲ್ಲಿರುವುದು ” ನಗೆಯು ಬರುತಿದೆ ಎನಗೆ ನಗೆಯು ಬರುತಿದೆ ” ಎಂಬ…

ಮುಂದೆ ಓದಿ..
ಸುದ್ದಿ 

ಜೆ.ಪಿ ನಗರದಲ್ಲಿ ಹೋಂಡಾ ಆ್ಯಕ್ಟಿವಾ ಕಳ್ಳತನ – ಸೆಕ್ಯೂರಿಟಿ ಗಾರ್ಡಿನ ದ್ವಿಚಕ್ರ ವಾಹನ.

ಬೆಂಗಳೂರು, ಜೂನ್ 19:ನಗರದ ಜಯನಗರ 4ನೇ ಬ್ಲಾಕ್‌ನ ಎನ್.ಪಿ.ಎಸ್ ಶಾಲೆಯ ಎದುರು ನಿಲ್ಲಿಸಿದ್ದ ಒಂದು ಸೆಕೆಂಡ್ ಹ್ಯಾಂಡ್ ಹೋಂಡಾ ಆ್ಯಕ್ಟಿವಾ ದ್ವಿಚಕ್ರ ವಾಹನವು ಕಾಣೆಯಾಗಿರುವ ಪ್ರಕರಣ ನಡೆದಿದೆ. ಗಾಡಿಯ ಮಾಲೀಕರಾಗಿರುವ ಸೆಕ್ಯೂರಿಟಿ ಗಾರ್ಡು ಈ ಬಗ್ಗೆ ತಿಲಕ್ ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.2024ರಲ್ಲಿ ಖರೀದಿಸಿದ KA-03-JS-8638 ನೋಂದಾಯಿತ ನಂಬರ್ ಹೊಂದಿರುವ 2018 ಮಾದರಿಯ ಗ್ರೇ ಬಣ್ಣದ ಹೋಂಡಾ ಆ್ಯಕ್ಟಿವಾ ಸ್ಕೂಟರ್ ಅನ್ನು ಅವರು ಪ್ರತಿದಿನದಂತೆ 2025ರ ಜೂನ್ 11ರಂದು ಬೆಳಿಗ್ಗೆ 7:30ರ ಸಮಯದಲ್ಲಿ ಶಾಲೆಯ ಮುಂದೆ ನಿಲ್ಲಿಸಿ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ 2:00 ಗಂಟೆ ಸುಮಾರಿಗೆ ವಾಪಸ್ ಬಂದಾಗ, ವಾಹನವು ನಿಲ್ಲಿಸಿದ್ದ ಸ್ಥಳದಲ್ಲಿ ಕಾಣೆಯಾಗಿದ್ದು, ಎಲ್ಲೆಡೆ ಹುಡುಕಿದರೂ ಪತ್ತೆಯಾಗಿಲ್ಲ.ಬದರಿನಾಥ್ ಚಟರ್ಜಿಯವರು ಕೆಲ ದಿನಗಳ ಹಿಂದೆ ಗಾಡಿಯ ಕೀ ಕಳೆದುಕೊಂಡ ಕಾರಣ ಸ್ಕೂಟರ್ ಅನ್ನು ಡೈರೆಕ್ಟ್ ಸ್ಟಾರ್ಟ್ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ. ಇದನ್ನು ಅಪಾಯದ ಅವಕಾಶವನ್ನಾಗಿ ಮಾಡಿಕೊಂಡು…

ಮುಂದೆ ಓದಿ..
ಸುದ್ದಿ 

ಮಹಿಳೆಯ ಇಚ್ಛೆಯ ವಿರುದ್ಧ ಲೈಂಗಿಕ ಕ್ರಿಯೆ ಹಾಗೂ ಜೀವ ಬೆದರಿಕೆ: ಚರಣ್‌ಜಿತ್‌ಸಿಂಗ್ ಎಂಬುವವನ ವಿರುದ್ಧ ಪಿಸಿಆರ್ ದಾಖಲೆ.

ಬೆಂಗಳೂರು, ಜೂನ್ 19, 2025 –ಬೆಂಗಳೂರು ನಗರದ ಚಿಕ್ಕಪೇಟೆಯಲ್ಲಿ ಅತಿಥಿ ಲಾಡ್ಜ್‌ ಒಂದರಲ್ಲಿ ಮಹಿಳೆಯೊಬ್ಬರ ಇಚ್ಛೆಯ ವಿರುದ್ಧ ಲೈಂಗಿಕ ಕ್ರಿಯೆ ನಡೆಸಿ, ತಡೆಯೊಡ್ಡಿದಾಗ ಪ್ರಾಣ ಬೆದರಿಕೆ ಹಾಕಿದ ಘಟನೆ ಬೆಳಕಿಗೆ ಬಂದಿದೆ. ಆರೋಪಿಯ ವಿರುದ್ಧ ನ್ಯಾಯಾಲಯದ ಆದೇಶದಂತೆ ಪಿಸಿಆರ್ ದಾಖಲಿಸಿ, ಪ್ರಕರಣ ದಾಖಲಾತಿ ನಡೆಯುತ್ತಿದೆ.ಶ್ರೀಮತಿ ಜೋಶಿನ್ ಫರ್ನಾಂಡಿಸ್ ಅವರು ನೀಡಿದ ದೂರಿನ ಪ್ರಕಾರ, 2019ರ ಏಪ್ರಿಲ್ 24ರಂದು ಗೋವಾದಲ್ಲಿ ಚರಣ್‌ಜಿತ್‌ಸಿಂಗ್ ಕಲಾ ಎಂಬಾತನ ಪರಿಚಯವಾಗಿತ್ತು. ಅವರು ಕಾಲಕಾಲಕ್ಕೆ ಭೇಟಿಯಾಗುತ್ತಿದ್ದು, 2025ರ ಫೆಬ್ರವರಿ 18ರಂದು ಇಬ್ಬರೂ ಚಿಕ್ಕಪೇಟೆಯ ಶಿವಗಂಗಾ ಲಾಡ್ಜ್‌ನಲ್ಲಿ 15 ದಿನಗಳ ಕಾಲ ರೂಂ ಬುಕ್ ಮಾಡಿಕೊಂಡಿದ್ದರು.ಶ್ರೀಮತಿ ಜೋಶಿನ್ ರವರ ಆರೋಪದ ಪ್ರಕಾರ, ಚರಣ್‌ಜಿತ್‌ಸಿಂಗ್ ಪ್ರತಿದಿನ ಮದ್ಯಪಾನ ಮಾಡಿ, ಆಕೆಯ ಸ್ಪಷ್ಟ ವಿರೋಧವನ್ನು ಲೆಕ್ಕಿಸದೇ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಈ ಕೃತ್ಯಕ್ಕೆ ತಡೆ ನೀಡಲು ಯತ್ನಿಸಿದಾಗ, ಕತ್ತನ್ನು ಹಿಸುಕಿ ಕೊಲ್ಲಲು ಪ್ರಯತ್ನ ಪಟ್ಟು, ಆಕೆಗೆ ಪ್ರಾಣ…

ಮುಂದೆ ಓದಿ..
ಸುದ್ದಿ 

ವ್ಯಾಪಾರದ ಹೆಸರಿನಲ್ಲಿ ನಂಬಿಕೆ ದ್ರೋಹ – ಲಕ್ಷಾಂತರ ರೂಪಾಯಿ ವಂಚನೆಯ ಪ್ರಕರಣ ದಾಖಲೆ

ಬೆಂಗಳೂರು, ಜೂನ್ 19:ನಗರದ ಚಿಕ್ಕಪೇಟೆ ಪ್ರದೇಶದಲ್ಲಿರುವ ‘ಅರಾಧನಾ ಟೆಕ್ಸ್ಟೈಲ್ಸ್’ ಅಂಗಡಿಯಲ್ಲಿ ವ್ಯಾಪಾರದ ಹೆಸರಿನಲ್ಲಿ ನಂಬಿಕೆ ದ್ರೋಹ ಹಾಗೂ ಲಕ್ಷಾಂತರ ರೂಪಾಯಿಗಳ ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಅಂಗಡಿಯ ಮಾಲಕರು ನಾಲ್ವರು ವ್ಯಕ್ತಿಗಳ ವಿರುದ್ಧ ಪಿಸಿಆರ್ (PCR) ಸಲ್ಲಿಸಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ನ್ಯಾಯಾಲಯವನ್ನು ಮನವಿ ಮಾಡಿದ್ದಾರೆ. ಮಾಹಿತಿ ಪ್ರಕಾರ, ಅಂಗಡಿಯ ನಿರ್ವಹಣೆಗೆ ನೇಮಿಸಲಾಗಿದ್ದ ಹರೇಂದ್ರನಾಥ ಎಂಬಾತನು ಮಾಲಕರ ವಿಶ್ವಾಸಕ್ಕೆ ಧಕ್ಕೆ ತಂದಿರುವುದಾಗಿ ಆರೋಪಿಸಲಾಗಿದೆ. ಅಂಗಡಿಯ ಕೀಲಿಯನ್ನು ಪಡೆದ ನಂತರ, ಮಾಲಿಕರ ಅನುಮತಿಯಿಲ್ಲದೆ ರೂ. 18 ಲಕ್ಷ ಮೌಲ್ಯದ ಸೀರೆಗಳನ್ನು ಯಾವುದೇ ಬಿಲ್ ರವಾನೆ ಇಲ್ಲದೇ ಮಾರಾಟ ಮಾಡಿದ್ದಾರೆ. ಅಷ್ಟರಲ್ಲಿ, ಕೌಟುಂಬಿಕ ಸಮಸ್ಯೆ ಹೆಸರಿನಲ್ಲಿ ಫೋನ್ ಪೇ ಮೂಲಕ ರೂ. 6,86,300/- ಹಣ ಪಡೆದಿದ್ದು, ಒಂದು ತಿಂಗಳಲ್ಲಿ ಹಿಂದಿರುಗಿಸುತ್ತೇನೆ ಎಂಬ ಭರವಸೆ ನೀಡಿದರೂ ಈವರೆಗೆ ಹಣ ವಾಪಸ್ಸಾಗಿಲ್ಲ. ಇದೇ ರೀತಿಯಲ್ಲಿ, ಇನ್ನಿಬ್ಬರು ಸೀರೆ ಏಜೆಂಟ್‌ಗಳಾದ ರಮೇಶ್…

ಮುಂದೆ ಓದಿ..
ಸುದ್ದಿ 

ಹೆಚ್‌ಎಸ್‌ಆರ್ ಲೇಔಟ್‌ ನಲ್ಲಿ ಪಿಜಿ ದೊರೆಯುತ್ತದೆ ಎಂದು ನಂಬಿಸಿ, ಯುವಕನಿಂದ ₹1.17 ಲಕ್ಷ ವಂಚನೆ

ಬೆಂಗಳೂರು, ಜೂನ್ 19 – ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಪಿಜಿ (ಪೇಯಿಂಗ್ ಗೆಸ್ಟ್‌) ಬೇಕೆಂದು ಹುಡುಕುತ್ತಿದ್ದ ಒಬ್ಬ ಸಾಫ್ಟ್‌ವೇರ್ ಉದ್ಯೋಗಿಯು ಆನ್‌ಲೈನ್ ವಂಚನೆಗೆ ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಅರ್ಜಿದಾರರಾದ ಪ್ರಶಾಂತ್ ಕುಮಾರ್ ಪ್ರಜಾಪತಿ ಅವರು ಈ ಸಂಬಂಧ ದೂರು ದಾಖಲಿಸಿದ್ದಾರೆ.ಪ್ರಶಾಂತ್ ರವರು #72, ಫಸ್ಟ್ ಫ್ಲೋರ್, 14ನೇ ಮೇನ್, 16ನೇ ಕ್ರಾಸ್‌ ರೋಡ್, ಐಪಿಎಸ್ ಕಾಲೋನಿ, ಸೆಕ್ಟರ್ 4, ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸವಾಗಿದ್ದು, BUYSTARS ARKRMY TECHNOLOGY PVT LTD ಎಂಬ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು MagicBricks ಎಂಬ ಹೌಸಿಂಗ್ ವೆಬ್‌ಸೈಟ್‌ ಮೂಲಕ ಪಿಜಿ ಹುಡುಕುತ್ತಿದ್ದ ಸಂದರ್ಭದಲ್ಲಿ ‘ಸ್ವಸ್ತಿಕ್’ ಎಂಬ ವ್ಯಕ್ತಿ (ಮೊಬೈಲ್: 7879588250) ಪಿಜಿ ಮ್ಯಾನೇಜರ್ ಎಂದು ಪರಿಚಯಿಸಿಕೊಂಡು, ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಪಿಜಿ ಇರುವುದಾಗಿ ತಿಳಿಸಿದರು.ಇದನ್ನು ನಂಬಿದ ಪ್ರಶಾಂತ್ ಮೊದಲು ₹2,000 ಟೋಕನ್ ಅಮೌಂಟ್ ಅನ್ನು 2025ರ ಜೂನ್ 8 ರಂದು QR…

ಮುಂದೆ ಓದಿ..
ಸುದ್ದಿ 

ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಸಿಬಿ ಅಧಿಕಾರಿಗಳಿಂದ ವಿಶೇಷ ಶೋಧನೆ – ನಿಷೇಧಿತ ವಸ್ತುಗಳ ಪತ್ತೆ!

ಬೆಂಗಳೂರು, ಜೂನ್ 19:ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿಸಿಬಿ ಅಧಿಕಾರಿಗಳ ನೇತೃತ್ವದಲ್ಲಿ ದಿನಾಂಕ 16-06-2025 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿಶೇಷ ಶೋಧನಾ ಕಾರ್ಯಾಚರಣೆ ನಡೆಯಿತು. ಉಪ ಪೊಲೀಸ್ ಆಯುಕ್ತ (ಅಪರಾಧ-2) ರವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಯಿತು. ಶೋಧನೆಯ ವೇಳೆ ಪತ್ತೆಯಾದ ವಸ್ತುಗಳು: ಸಿಸಿಬಿ ಸಂಘಟಿತ ಅಪರಾಧ ದಳ (ಪೂರ್ವ) PI ಕಿರಣ್ ಕುಮಾರ್ ಮತ್ತು ತಂಡವು ವಿಚಾರಣಾಧೀನ ಬಂಧಿಗಳು ತಂಗಿರುವ ಬ್ಯಾರಕ್ ನಂ.5/2ರಲ್ಲಿ ಶೋಧನೆ ನಡೆಸಿ ₹5,500 ನಗದು, ಕಸ್ತೂರಿ ಮೇತಿ ಸೊಪ್ಪು, ಬೆಂಕಿ ಪೊಟ್ಟಣ, SK ಬೀಡಿ ಪ್ಯಾಕೆಟ್‌ಗಳು, ಗಾಂಜಾ ಸೇದುವ ಕೊಳವೆಗಳು, ಚಾಕುಗಳು, ಗುಟ್ಕಾ ಪ್ಯಾಕೆಟ್‌ಗಳು ಮತ್ತು ಸುಣ್ಣದ ಡಬ್ಬಿಗಳನ್ನು ಪತ್ತೆಹಚ್ಚಿದ್ದಾರೆ. ವಿಶೇಷ ವಿಚಾರಣಾ ದಳ PI ಶಿವಕುಮಾರ್ ಹಾಗೂ PI ಶ್ರೀನಿವಾಸ ಜಿ.ಟಿ ನೇತೃತ್ವದ ತಂಡವು VIP ಸೆಕ್ಯೂರಿಟಿ ಬ್ಯಾರಕ್ ನಂ.2, ರೂಮ್ ನಂ.2ರಲ್ಲಿ ಸಜಾ…

ಮುಂದೆ ಓದಿ..