ಸ್ವಚ್ಚಂದ – ಸ್ವತಂತ್ರ – ಮುಕ್ತ – ಬದುಕು.
ಸ್ವಚ್ಚಂದ – ಸ್ವತಂತ್ರ – ಮುಕ್ತ – ಬದುಕು. ” Looking ugly and madness is the ultimate status (Freedom ) of mind “ ” ಕುರೂಪ ಅಥವಾ ರೂಪವಂತರಲ್ಲವಾಗಿರುವುದು ಮತ್ತು ಹುಚ್ಚು ಮನಸ್ಥಿತಿ, ವ್ಯಕ್ತಿಯ ಪರಿಪೂರ್ಣ ಸ್ವಾತಂತ್ರ್ಯದ ಅಂತಿಮ ಹಂತ “ಎಂಬ ಅರ್ಥದ ಇಂಗ್ಲೀಷ್ ನಾಣ್ಣುಡಿಯೊಂದು ಬಹಳ ಹಿಂದೆ ಓದಿದ ನೆನಪು….. ವ್ಯಾವಹಾರಿಕ ಜಗತ್ತಿನಲ್ಲಿ ಇದು ಅಷ್ಟಾಗಿ ಅನ್ವಯವಾಗುವುದಿಲ್ಲ. ಏಕೆಂದರೆ ಇಲ್ಲಿ ಮುಖವಾಡಗಳೇ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತದೆ. ನಮ್ಮ ಎಲ್ಲ ಭಾವನೆಗಳನ್ನು ಸಹ ಮುಖವಾಡದ ಮರೆಯಲ್ಲಿಯೇ ವ್ಯಕ್ತಪಡಿಸಬೇಕು. ಕಾನೂನು, ನೈತಿಕತೆ, ಸಂಬಂಧಗಳು, ವ್ಯವಹಾರ, ಶಿಷ್ಟಾಚಾರ, ಕೊಳ್ಳುಬಾಕ ಸಂಸ್ಕೃತಿ ಎಲ್ಲವೂ ನಮ್ಮನ್ನು ಮುಖವಾಡದಲ್ಲಿ ಮರೆಮಾಚಿಕೊಳ್ಳಲು ಒತ್ತಡ ಹೇರುತ್ತದೆ. ಇಲ್ಲದಿದ್ದರೆ ಬದುಕು ನಡೆಯುವುದೇ ಇಲ್ಲ…. ಆದರೆ ನಿಜವಾದ ಸ್ವಚ್ಛಂದ ಮಾನಸಿಕ ಸ್ವಾತಂತ್ರ್ಯ ದೇವರು ಧರ್ಮದ ಹಂಗಿಲ್ಲದ, ಆಧ್ಯಾತ್ಮಿಕ ಸ್ಥಿತಪ್ರಜ್ಞತೆಯ ಭಾವದಲ್ಲಿ ಇದರ ಅನುಭವವಾಗುತ್ತದೆ….. ಬಗೆಹರಿಸಲಾಗದ,…
ಮುಂದೆ ಓದಿ..
