ಮನೆಗೆ ನುಗ್ಗಿ ಹಲ್ಲೆ – ನಾಲ್ವರು ವಿರುದ್ಧ ದೂರು ದಾಖಲು
ಬೆಂಗಳೂರು ಜುಲೈ 30 2025 –ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಲ್ವರು ವ್ಯಕ್ತಿಗಳು ಮಹಿಳೆಯೊಬ್ಬರ ಮನೆಗೆ ಬಲವಂತವಾಗಿ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಆಕೆ ಮತ್ತು ಆಕೆಯ ಮಗನಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ಸಂಬಂಧ ದೇವನಹಳ್ಳಿ ನ್ಯಾಯಾಲಯದಲ್ಲಿ ಪಿರ್ಯಾದು ದಾಖಲಾಗಿ ಪ್ರಕರಣ ದಾಖಲಾಗಿದೆ. ಪಿರ್ಯಾದಿದಾರರ ದೂರಿನ ಪ್ರಕಾರ, ಏಪ್ರಿಲ್ 10ರಂದು ಸಂಜೆ 5:00 ರಿಂದ 5:30ರ ವೇಳೆಗೆ ರಾಮಾಂಜನಪ್ಪ, ಚಂದ್ರು (ಪಿರ್ಯಾದಿದಾರರ ಸಹೋದರನ ಮಕ್ಕಳು), ರಮೇಶ್ ಹಾಗೂ ಅವರ ತಂದೆ ಸೇರಿ ನಾಲ್ವರು ಆರೋಪಿಗಳು ಮನೆಗೆ ನುಗ್ಗಿ, ಪಿರ್ಯಾದಿದಾರರ ಮಗ ವೆಂಕಟೇಶ್ಗೆ ಕೊಲೆ ಬೆದರಿಕೆ ಹಾಕಿ, ಇಬ್ಬರಿಗೂ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ವೇಳೆ ಪಿರ್ಯಾದಿದಾರರ ಸೀರೆ ಹರಿದು, ಕೈಬಳೆಗಳು ತೂರಿ ಹೋಗಿದ್ದು, ಅವರ ಕೈ, ಎದೆ ಹಾಗೂ ಮುಖದಲ್ಲಿ ಗಾಯಗಳಾಗಿವೆ. ಬಳಿಕ ಅವರು ಯಲಹಂಕ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಘಟನೆಯ…
ಮುಂದೆ ಓದಿ..
