ಯಲಹಂಕ ಉಪನಗರ ಪೊಲೀಸ್ ಠಾಣೆ ಎಎಸ್‌ಐ ವತಿಯಿಂದ ಉದ್ಯೋಷಣಾ ವಾರಂಟ್ ಮೂಲಕ ಆರೋಪಿತರ ಬಂಧನ
ಬೆಂಗಳೂರು, ಜುಲೈ 7:2025 ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಎಸ್‌ಐ ಶ್ರೀ ಸುರೇಶ್ ಬಾಬು ಅವರ ನೇತೃತ್ವದಲ್ಲಿ ಉದ್ಯೋಷಣಾ ವಾರಂಟ್ ಜಾರಿಗೆ ಮತ್ತೊಂದು ಯಶಸ್ವಿ ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕರಣದಲ್ಲಿ, ರಾಜೀವ್ ಗಾಂಧಿ ನಗರ, ಸಂಭ್ರಮ್ ಕಾಲೇಜ್ ಹತ್ತಿರ ವಾಸಿಸುತ್ತಿರುವ ಅಜೀಮ್ ಬಿನ್ ಆತಾವುಲ್ಲಾ (30 ವರ್ಷ) ವಿರುದ್ಧ ಸಂಬಂಧಿಸಿದ ನ್ಯಾಯಾಲಯವು ಹಲವಾರು ಬಾರಿ ವಾರಂಟ್ ಜಾರಿಗೆ ತಂದಿದ್ದರೂ ಕೂಡ, ಅವರು ನ್ಯಾಯಾಲಯದ ಮುಂದೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದರು. ಆರೋಪಿತನ ಪತ್ತೆಗೆ ಹಲವು ಬಾರಿ ಭದ್ರ ರೀತಿಯಲ್ಲಿ ಪ್ರಯತ್ನ ನಡೆಸಿದರೂ ವಿಫಲವಾದ ಯಲಹಂಕ ಉಪನಗರ ಪೊಲೀಸರು, ದಿನಾಂಕ 05/07/2025 ರಂದು ಸಂಜೆ 5 ಗಂಟೆ ಸುಮಾರಿಗೆ ಸಬ್ ಇನ್‌ಸ್ಪೆಕ್ಟರ್ ಮಂಜುನಾಥ ಡಿ.ಜಿ. (ಟೋ-11684) ಹಾಗೂ ಹೆಡ್ ಕಾನ್ಸ್‌ಟೇಬಲ್ ಧನಂಜಯ ನಾಯಕ್ (ಹೆಚ್.ಸಿ-11360) ರವರ ಸಹಾಯದಿಂದ ಆರೋಪಿತನನ್ನು ಸಂಭ್ರಮ್ ಕಾಲೇಜ್ ಹತ್ತಿರ ವಶಕ್ಕೆ ಪಡೆದು, ಸಂಜೆ 5.45ಕ್ಕೆ…
ಮುಂದೆ ಓದಿ..
