ಆನ್‌ಲೈನ್ ವಂಚನೆ: ಗ್ರಾಹಕರ ಕ್ರೆಡಿಟ್ ಕಾರ್ಡ್‌ನಿಂದ ₹40,183 ಅಕ್ರಮ ವಹಿವಾಟು

ನಗರದಲ್ಲೊಂದು ಮತ್ತೊಂದು ಆನ್‌ಲೈನ್ ಹಣಕಾಸು ವಂಚನೆಯ ಘಟನೆ ಬೆಳಕಿಗೆ ಬಂದಿದೆ. HSBC ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕ ಶ್ರೀ ರಮೀಜ್ ರಾಜಾ ಅಮನುಲ್ಲಹಾ ರವರು ತಮ್ಮ ಕಾರ್ಡ್‌ನಿಂದ ಅಕ್ರಮವಾಗಿ ಹಣ ವರ್ಗಾವಣೆಗೊಂಡ ಬಗ್ಗೆ ಸುಬ್ರಹ್ಮಣ್ಯಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಶ್ರೀ ರಮೀಜ್ ರಾಜಾ ಅಮನುಲ್ಲಹಾ ರವರ ಪ್ರಕಾರ, ಅವರು ಹೊಂದಿರುವ Visa Platinum ಕ್ರೆಡಿಟ್ ಕಾರ್ಡ್ (ನಂ. 4862 XXXX XXXX 2595) ಮೂಲಕ ದಿನಾಂಕ 08.06.2025 ರಂದು Jioeat.in ಎಂಬ ಆನ್‌ಲೈನ್ ಆಹಾರ ವಿತರಣಾ ವೇದಿಕೆಯ ಲಿಂಕ್ ಮೂಲಕ ಆರ್ಡರ್ ಮಾಡಲು ಯತ್ನಿಸಿದ್ದು, ಆ ಸಮಯದಲ್ಲಿ ಬಂದ ಓಟಿಪಿ (OTP) ಅನ್ನು ಅವರು ಶೇರ್ ಮಾಡಿದ ಬಳಿಕ ತಮ್ಮ ಗಮನಕ್ಕೆ ಬಾರದ ರೀತಿಯಲ್ಲಿ ಹಂತ ಹಂತವಾಗಿ ಮೊತ್ತ ₹40,183 ರಷ್ಟು ಹಣವನ್ನು ಅನಧಿಕೃತವಾಗಿ ವರ್ಗಾಯಿಸಲಾಗಿದೆ. ಶ್ರೀ ರಮೀಜ್ ರಾಜಾ ಅಮನುಲ್ಲಹಾ ಮಾಹಿತಿ ಪ್ರಕಾರ, ಈ…

ಮುಂದೆ ಓದಿ..
ಸುದ್ದಿ 

28 ವರ್ಷದ ಯುವತಿ ಅನುಶ್ರೀ ನಾಪತ್ತೆ – ಕುಟುಂಬಸ್ಥರಿಂದ ಪೊಲೀಸ್ ತನಿಖೆಗೆ ಮನವಿ..

ನಗರದ ಸರ್ಜಾಪುರ ಮುಖ್ಯರಸ್ತೆಯ ಮುಳ್ಳೂರು ಕಾಲೋನಿಯಲ್ಲಿ ವಾಸಿಸುತ್ತಿರುವ ನಾರಾಯಣಪ್ಪ ಎಂಬುವವರು ತಮ್ಮ 28 ವರ್ಷದ ಮಗಳು ಅನುಶ್ರೀ ಎನ್. ನಾಪತ್ತೆಯಾಗಿರುವ ಬಗ್ಗೆ ಹೆಚ್.ಎಸ್.ಆರ್ ಲೇಔಟ್‌ನ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಅನುಶ್ರೀ ಹೆಚ್.ಎಸ್.ಆರ್ ಲೇಔಟ್‌ನ URR ರಾಯಲ್ ಕಾಂಪ್ಲೆಕ್ಸ್‌ನಲ್ಲಿ ಇರುವ ಟೆಟ್ರೋ ಪಾರ್ಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಪ್ರತಿದಿನ ಬೆಳಗ್ಗೆ 9 ಗಂಟೆಗೆ ಕೆಲಸಕ್ಕೆ ತೆರಳಿ ಸಂಜೆ 7:30ರ ವೇಳೆಗೆ ಮನೆಗೆ ಹಿಂದಿರುಗುತ್ತಿದ್ದರು. ಆದರೆ, ಜೂನ್ 18ರಂದು ಬೆಳಿಗ್ಗೆ 9 ಗಂಟೆಗೆ ಕ್ಯಾಬ್‌ನಲ್ಲಿ ಮನೆಯಿಂದ ಹೊರಟ ನಂತರ ಅವರು ವಾಪಸ್ ಮನೆಗೆ ಬಂದಿಲ್ಲ. ಆ ದಿನ ಸಾಯಂಕಾಲ 8 ಗಂಟೆಗೆ ಕುಟುಂಬದವರು ಅನುಶ್ರೀ ಅವರ ಮೊಬೈಲ್ ಸಂಖ್ಯೆ ಗೆ ಕರೆಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿರುವುದಾಗಿ ತಿಳಿದು ಬಂದಿದೆ. ಮರುದಿನ ಕೆಲಸದ ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಿದಾಗ ಅವರು ಆ…

ಮುಂದೆ ಓದಿ..
ಸುದ್ದಿ 

ಹಳೆಯ ಮರದ ರೆಂಬೆ ಬಿದ್ದು ಯುವಕನ ದುರ್ಮರಣ: ಅಧಿಕಾರಿಗಳ ನಿರ್ಲಕ್ಷ್ಯತೆ ವಿರುದ್ಧ ಕುಟುಂಬಸ್ತರ ಆಕ್ರೋಶ ..

ಹಳೆಯ ಮರದ ರೆಂಬೆ ಬಿದ್ದು ಯುವಕನ ದುರ್ಮರಣ: ಅಧಿಕಾರಿಗಳ ನಿರ್ಲಕ್ಷ್ಯತೆ ವಿರುದ್ಧ ಕುಟುಂಬಸ್ತರ ಆಕ್ರೋಶ .. ನಗರದ ಬಿ.ಎಸ್.ಕೆ 1ನೇ ಹಂತದ ಅಶೋಕನಗರದ 16ನೇ ಮೈನ್‌ರೋಡ್ ಬಳಿ ನಡೆದ ದುರ್ಘಟನೆಯಲ್ಲಿ 29 ವರ್ಷದ ಯುವಕ ಅಕ್ಷಯ್ ಎಂ.ಎಸ್ ಸಾವಿಗೀಡಾಗಿರುವ ದುರಂತ ಘಟನೆ ನಡೆದಿದೆ. ಈ ಘಟನೆಗೆ ಕಾರಣ ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳ ನಿರ್ಲಕ್ಷ್ಯತೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಅಕ್ಷಯ್ ಅವರು ದಿನಾಂಕ 15/06/2025 ರಂದು ಭಾನುವಾರ ಮಧ್ಯಾಹ್ನ 12.30ರ ಸುಮಾರಿಗೆ ಮಾಂಸ ಖರೀದಿಸಲು ತನ್ನ ಸ್ಕೂಟರ್‌ನಲ್ಲಿ ಹೊರಟಿದ್ದಾಗ, ಬ್ರಹ್ಮ ಚೈತನ್ಯ ಮಂದಿರದ ಬಳಿ ರಸ್ತೆ ಪಕ್ಕದಲ್ಲಿರುವ ಹಳೆಯ ಮರದ ಒಣಗಿದ ರೆಂಬೆ ಅವರ ತಲೆಯ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಜಯನಗರದಲ್ಲಿರುವ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಅವರು ದಿನಾಂಕ 19/06/2025 ರಂದು ಮಧ್ಯಾಹ್ನ 1 ಗಂಟೆಗೆ ನಿಧನರಾದರು.…

ಮುಂದೆ ಓದಿ..
ಸಿನೆಮಾ ಸುದ್ದಿ 

ಫ್ಯಾಮಿಲಿ ಥ್ರಿಲ್ಲರ್ ಚಿತ್ರದಲ್ಲಿ ಕೃಷ್ಣ ಅಜಯರಾವ್ ಯೋಗರಾಜ ಭಟ್- ದಿನಕರ್ ಚಾಲನೆ

ನನ್ ಮಗಳೇ ಹೀರೋಯಿನ್ ಸೇರಿದಂತೆ ಹಲವು ಸದಭಿರುಚಿಯ ಚಿತ್ರಗಳ ನಿರ್ದೇಶಕ ಎಸ್.ಕೆ. ಬಾಹುಬಲಿ ಇದೀಗ ಕೃಷ್ಣ ಅಜೇಯ್ ರಾವ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪಿ.ಕೆ. ಪ್ರೊಡಕ್ಷನ್ಸ್ ಮೂಲಕ ನಿರ್ಮಾಪಕ ಕಿರಣ್ ಅವರು ಮೊದಲ ಬಾರಿಗೆ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದ ಮುಹೂರ್ತ ಸಮಾರಂಭ ಶ್ರೀ ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಪ್ರಥಮ ದೃಶ್ಯಕ್ಕೆ ಯೋಗರಾಜ ಭಟ್ಟರು ಕ್ಲಾಪ್ ಮಾಡಿದರೆ, ದಿನಕರ್ ತೂಗುದೀಪ ಕ್ಯಾಮೆರಾ ಚಾಲನೆ ಮಾಡಿದರು. ನಿರ್ದೇಶಕ ಎಂ.ಡಿ. ಶ್ರೀಧರ್, ಎಸ್. ನಾರಾಯಣ್, ಶಿವತೇಜಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಫ್ಯಾಮಿಲಿ ಥ್ರಿಲ್ಲರ್ ಚಿತ್ರದಲ್ಲಿ ಕೃಷ್ಣ ಅಜಯರಾವ್ ಯೋಗರಾಜ ಭಟ್- ದಿನಕರ್ ಚಾಲನೆ. ಲವರ್ ಬಾಯ್, ಆಕ್ಷನ್ ಹೀರೋ, ಭಗ್ನ ಪ್ರೇಮಿಯಾಗಿ ಕಾಣಿಸಿಕೊಂಡಿದ್ದ ಅಜಯ್ ರಾವ್ ಈ ಚಿತ್ರದ ಮೂಲಕ ರಗಡ್ ಹೀರೋ ಆಗುತ್ತಿದ್ದಾರೆ. ಮುಹೂರ್ತದ ನಂತರ ನಿರ್ದೇಶಕ ಬಾಹುಬಲಿ ಮಾತನಾಡುತ್ತ…

ಮುಂದೆ ಓದಿ..
ಸುದ್ದಿ 

ವಿಚಾರಣೆಗೆ ಹಾಜರಾಗದೇ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಿದ ಎ.ಎಸ್.ಐ.

ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಸುಮಾರು ಒಂದು ವರ್ಷದಿಂದ ಎ.ಎಸ್.ಐ ಹುದ್ದೆಯಲ್ಲಿ ಪ್ರೊಕ್ರೋಮೇಷನ್ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ, ತಮ್ಮ ಕಾರ್ಯತತ್ಪರತೆ ಹಾಗೂ ಮಾಹಿತಿ ನೆಲೆಸಿದ ಕಾರ್ಯಾಚರಣೆ ಮೂಲಕ ಅಪರಾಧಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳೀಯ ಪಿಎಸ್‌ಐ ಶ್ರೀ ಶ್ರೀನಿವಾಸ ಕೆ.ಆರ್ ಅವರ ಮಾರ್ಗದರ್ಶನದಲ್ಲಿ, ಠಾಣೆಯ ಎಚ್‌.ಸಿ. ಪ್ರದೀಪ್ ಕುಮಾರ್ (ಸಿಪಾಯಿ ಸಂಖ್ಯೆ 8988) ಅವರ ಸಹಕಾರದೊಂದಿಗೆ, 2013ರ ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿಯನ್ನು ಬಂಧಿಸಲಾಗಿದೆ. ಈತನ ಮೇಲೆ ಥಾಣೆ ಮೊಕದ್ದಮೆ ಸಂಖ್ಯೆ 273/2013 ಅಡಿಯಲ್ಲಿ ಭದ್ರತಾ ಅಪರಾಧ IPC ಸೆಕ್ಷನ್ 392 ಅಡಿ ಪ್ರಕರಣ ದಾಖಲಿಸಲಾಗಿತ್ತು. ನಾಗೇಶ್ ಬಿನ್ ಪಾಪಣ್ಣ (ವಯಸ್ಸು 33), ಕೇರಾಫ್ ಜಯಮ್ಮ, ಮುನೇಶ್ವರ ಬಡಾವಣೆ, ಬನ್ನೇರುಘಟ್ಟ, ಬೆಂಗಳೂರು ಜಿಲ್ಲೆ ನಿವಾಸಿಯಾಗಿರುವ ಈತನು, ಮಾನ್ಯ ನ್ಯಾಯಾಲಯದಲ್ಲಿ ಜಾಮೀನು ಪಡೆದು ವಿಚಾರಣೆಗೆ ಹಾಜರಾಗಬೇಕಾಗಿದ್ದರೂ ನಿರಂತರ ಗೈರಾಗುತ್ತಾ ಬಂದಿದ್ದ. ನ್ಯಾಯಾಲಯವು ಈತನ ವಿರುದ್ಧ ಹಲವಾರು ಬಾರಿ ವಾರೆಂಟ್…

ಮುಂದೆ ಓದಿ..
ಸುದ್ದಿ 

ಯಶವಂತಪುರದಲ್ಲಿ ಗಾಂಜಾ ಮಾರಾಟ: ಬಿಹಾರ ಮೂಲದ ವ್ಯಕ್ತಿಯಿಂದ 1.9 ಕೆ.ಜಿ ಗಾಂಜಾ ವಶ.

ಯಶವಂತಪುರದ 90 ರೂಟ್ ರಸ್ತೆಯ ಚರ್ಚ್ ಮುಂಭಾಗದ ಖಾಲಿ ಜಾಗದಲ್ಲಿ ಗಾಂಜಾ ಮಾರಾಟದ ಚಟುವಟಿಕೆಯಲ್ಲಿ ತೊಡಗಿದ್ದ ಬಿಹಾರ ಮೂಲದ ವ್ಯಕ್ತಿಯೊಬ್ಬನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ದಾಳಿ ವೇಳೆ ಆರೋಪಿತನಿಂದ 1.9 ಕೆ.ಜಿ ಗಾಂಜಾ ಹಾಗೂ ನಗದು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಯಶವಂತಪುರ ಪೊಲೀಸ್ ಠಾಣೆಯ ಉಪನಿರೀಕ್ಷಕ (ಪಿಎಸ್‌ಐ) ಶ್ರೀ ಈರಣ್ಣ ನಣಜಗಿ ಅವರು ನೀಡಿದ ಮಾಹಿತಿ ಪ್ರಕಾರ, ದಿನಾಂಕ 19/06/2025 ರಂದು ಸಂಜೆ ಸುಮಾರು 6 ಗಂಟೆ ಸುಮಾರಿಗೆ ಗಸ್ತಿನಲ್ಲಿದ್ದ ವೇಳೆ ಖಚಿತ ಬಾತ್ಮೀದಾರರಿಂದ ಮಾದಕ ವಸ್ತು ಮಾರಾಟದ ಮಾಹಿತಿ ಲಭಿಸಿದ ತಕ್ಷಣ, ಸಹಾಯಕ ಪೊಲೀಸ್ ಆಯುಕ್ತರ ಅನುಮತಿಯನ್ನು ಪಡೆದು ತಂಡದೊಂದಿಗೆ ದಾಳಿ ನಡೆಸಲಾಯಿತು. ಪಂಚರರು ಮತ್ತು ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ದಾಳಿ ನಡೆಸಿದಾಗ, ಅಲ್ಲಿ ಇದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಅವನು ದಿನೇಶ್ ಮಂಡಲ್ (30 ವರ್ಷ) ಎಂಬ ಬಿಹಾರ…

ಮುಂದೆ ಓದಿ..
ಸುದ್ದಿ 

ಲಾರಿ ಸ್ಟ್ಯಾಂಡ್ ಬಳಿ ಅಕ್ರಮ ಗಾಂಜಾ ಮಾರಾಟ: ಇಬ್ಬರು ಯುವಕರು ಪೊಲೀಸರ ಬಲೆಗೆ..

ನಗರದ ಲಾರಿ ಸ್ಟ್ಯಾಂಡ್ ಬಳಿಯ ರವಿತೇಜ್ ಪೆಟ್ರೋಲ್ ಬಂಕ್ ಹತ್ತಿರದ ಖಾಲಿ ಜಾಗದಲ್ಲಿ ಅಕ್ರಮ ಗಾಂಜಾ ಸಾಗಣೆ ಮತ್ತು ಮಾರಾಟ ನಡೆಯುತ್ತಿದೆಯೆಂಬ ಖಚಿತ ಮಾಹಿತಿಯ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. R. M. C ಯಾರ್ಡ್ ಯ ಪೊಲೀಸ್ ಅಧಿಕಾರಿಗಳು ದಿನಾಂಕ 19/06/2025 ರಂದು ಸಂಜೆ ಸುಮಾರು 7.30ರ ಸುಮಾರಿಗೆ ಗಸ್ತಿನಲ್ಲಿ ಇದ್ದಾಗ, ಬಾತ್ಮಿದಾರರಿಂದ ದೊರೆತ ಖಚಿತ ಮಾಹಿತಿಯ ಮೇರೆಗೆ ತಕ್ಷಣವೇ ಸ್ಥಳಕ್ಕೆ ಧಾವಿಸಿದರು. ಅಲ್ಲಿಗೆ ಬೇಟಿ ನೀಡಿದಾಗ, ರಾಜುಕುಮಾರ್ ಮತ್ತು ಸೌರವ್ ಎಂಬ ಇಬ್ಬರು ವ್ಯಕ್ತಿಗಳು ಮಾಧಕ ವಸ್ತುವಾದ ಗಾಂಜಾವನ್ನು ಅಕ್ರಮವಾಗಿ ತಮ್ಮ ವಶದಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದು ದೃಢಪಟ್ಟಿದೆ. ಈ ಮೂಲಕ ಅವರು ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದರೆಂದು ತಿಳಿದುಬಂದಿದ್ದು, ಸಾಮಾಜಿಕ ಸ್ವಾಸ್ಥ್ಯತೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಕ್ರಿಯೆಯಲ್ಲಿ ತೊಡಗಿದ್ದರು ಎಂಬ ಆರೋಪ ಕೇಳಿಬಂದಿದೆ. ಆರೋಪಿಗಳ ವಿರುದ್ಧ ಸಂಬಂಧಿತ…

ಮುಂದೆ ಓದಿ..
ಸುದ್ದಿ 

ವಾಟ್ಸ್‌ಆಪ್ ಹ್ಯಾಕ್ ಮಾಡಿ, ಸ್ನೇಹಿತ ಎಂದು ನಂಬಿಸಿ ₹70,000 ಮೋಸ – ಸೈಬರ್ ಕ್ರೈಂನಲ್ಲಿ ದೂರು

ವಾಟ್ಸ್‌ಆಪ್ ಖಾತೆ ಹ್ಯಾಕ್ ಮಾಡಿ ಹಣದ ಬೇಡಿಕೆ ಇಟ್ಟು, ಆನ್‌ಲೈನ್ ಮೂಲಕ ₹70,000 ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಗಂಡೆಪಲ್ಲಿ ಮಧು ಎಂಬವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಮಧು ರವರು ನೀಡಿರುವ ದೂರಿನ ಪ್ರಕಾರ, ಜೂನ್ 19, 2025 ರಂದು ಬೆಳಿಗ್ಗೆ ಸುಮಾರು 11:30ಕ್ಕೆ ಅವರ ಸ್ನೇಹಿತ ವೆಂಕಟಶಿವ ಪ್ರಸಾದ್ ಅವರ ವಾಟ್ಸ್‌ಆಪ್ ನಂಬರ್ (8197449432) ಮೂಲಕ ಹಣಕ್ಕಾಗಿ ಸಂದೇಶ ಬಂದಿದೆ. ಕೆಲಸದ ಒತ್ತಡದಲ್ಲಿದ್ದ ಮಧು, ಅದು ನಿಜವಾದ ಸಂದೇಶವೆಂದು ನಂಬಿ ಯಾವುದೇ ದೃಢೀಕರಣವಿಲ್ಲದೇ ಮೆಸೇಜಿನಲ್ಲಿ ನೀಡಲಾಗಿದ್ದ 8271987069 ನಂಬರ್‌ಗೆ PhonePe ಮತ್ತು Google Pay ಮೂಲಕ ಒಟ್ಟು ₹70,000 ಹಣವನ್ನು ವರ್ಗಾವಣೆ ಮಾಡುತ್ತಾರೆ. ಆದರೆ ಸ್ವಲ್ಪ ಹೊತ್ತಿನ ನಂತರ, ಅವರ ಇತರ ಸ್ನೇಹಿತರೂ ಇದೇ ರೀತಿಯ ವಾಟ್ಸ್‌ಆಪ್ ಸಂದೇಶಗಳನ್ನು ಪಡೆದಿದ್ದಾರೆ ಎಂಬ ಮಾಹಿತಿ ಮಧುವಿಗೆ ಲಭ್ಯವಾಗಿದ್ದು, ತಕ್ಷಣವೇ ಆತ…

ಮುಂದೆ ಓದಿ..
ಸುದ್ದಿ 

ಅಕ್ರಮ ಕುದುರೆ ರೇಸ್ ಬೆಟ್ಟಿಂಗ್ ಜೂಜಾಟಕ್ಕೆ ಸಿಸಿಬಿ ದಾಳಿ – ಇಬ್ಬರು ಆರೋಪಿತರ ಬಂಧನ…

ನಗರದ ನುರಾನಿ ಮಸೀದಿ ಹತ್ತಿರ, ಅಲ್‌ಅಮೀನ್ ಅಪಾರ್ಟ್‌ಮೆಂಟ್ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ನಡೆಯುತ್ತಿದ್ದ ಅಕ್ರಮ ಕುದುರೆ ರೇಸ್ ಬೆಟ್ಟಿಂಗ್ ಜೂಜಾಟದ ಮೇಲೆ ಸಿಸಿಬಿ (ಕೇಂದ್ರ ಅಪರಾಧ ವಿಭಾಗ) ವಿಶೇಷ ವಿಚಾರಣಾ ದಳದ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾದರು. ದಿ. 18.06.2025 ರಂದು ಸಂಜೆ ಸುಮಾರು 4.45ರ ವೇಳೆಗೆ ಪ್ರಕರಣ ಸಂಬಂಧ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್ಸ್‌ಪೆಕ್ಟರ್ ನಾಗಪ್ಪ ಅಂಬಿಗೇರ್ ಅವರು ದಳದ ಎಸಿಪಿ ಅವರಿಂದ ಶೋಧನಾ ವಾರೆಂಟ್ ಹಾಗೂ ದಾಳಿ ನಡೆಸಲು ನ್ಯಾಯಾಲಯದ ಅನುಮತಿ ಪಡೆದು ಸ್ಥಳಕ್ಕೆ ತೆರಳಿದರು. ಪೊಲೀಸರು ಪಂಚರ ಸಮಕ್ಷಮದಲ್ಲಿ ಸಾಯಂಕಾಲ 6.40ರ ವೇಳೆಗೆ ದಾಳಿ ನಡೆಸಿ ಆರೋಪಿತರಾದ ಉಜ್ವಲ್ ಮತ್ತು ಮಂಜುನಾಥ್ ಎಂಬುವರನ್ನು ಸ್ಥಳದಲ್ಲಿಯೇ ಬಂಧಿಸಿದರು. ಬಂಧಿತರಿಂದ ₹9,300 ನಗದು, 2 ಮೊಬೈಲ್ ಫೋನ್‌ಗಳು ಹಾಗೂ 21 ಆನ್‌ಲೈನ್ ಬೆಟ್ಟಿಂಗ್ ಸ್ಕ್ರೀನ್‌ಶಾಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತರು ಯಾವುದೇ ವಿಧದ ಅಧಿಕೃತ…

ಮುಂದೆ ಓದಿ..
ಅಂಕಣ 

ಮೂರನೇ ಮ‌ಹಾಯುಧ್ಧದ ಸಾಧ್ಯತೆ ಎಷ್ಟು ಮತ್ತು ಹೇಗೆ……..

ಎರಡು ಮಹಾ ಯುದ್ಧಗಳ ಪ್ರಾಥಮಿಕ ಕಾರಣಗಳು, ಯುದ್ಧಪೂರ್ವದ ಬೆಳವಣಿಗೆಗಳು, ಯುದ್ಧ ಪ್ರಾರಂಭವಾಗಲು ಕಾರಣವಾದ ದಿಢೀರ್ ಘಟನೆಗಳು, ಯುದ್ಧ ಮುಂದುವರಿದ ರೀತಿ ಮತ್ತು ಯುದ್ಧ ಮುಕ್ತಾಯವಾಗಲು ತೆಗೆದುಕೊಂಡ ಸಮಯ ‌ಹಾಗು ಅದಕ್ಕೆ ಕಾರಣವಾದ ಅಂಶಗಳು, ನಂತರದ ಆಂತರಿಕ ಸಂಘರ್ಷಗಳು ಮುಂತಾದ ಈ ಎಲ್ಲವನ್ನು ಮತ್ತೊಮ್ಮೆ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಈಗ ನಡೆಯುತ್ತಿರುವ ಘಟನೆಗಳು ಸ್ವಲ್ಪಮಟ್ಟಿಗೆ ಅದಕ್ಕೆ ತಾಳೆಯಾಗುತ್ತದೆ ಜೊತೆಗೆ ಕೆಲವು ಸನ್ನಿವೇಶಗಳು ಸಂಪೂರ್ಣ ಭಿನ್ನವೂ ಆಗಿದೆ…….ಎರಡೂ ಮಹಾ ಯುದ್ಧಗಳ ಕೇಂದ್ರ ಬಿಂದು ಯೂರೋಪ್ ಖಂಡವೇ ಆದರೂ ಜೊತೆಗೆ ಎರಡೂ ಮಹಾ ಯುದ್ಧಗಳ ಕೊನೆಯ ಹಂತದಲ್ಲಿ ಅಮೆರಿಕ ಪ್ರವೇಶ ಮಾಡಿರುವುದು, ತದನಂತರ ಅನಾಹುತಗಳಾದ ಮೇಲೆ ಯುದ್ಧ ಕೆಲವು ಒಪ್ಪಂದಗಳೊಂದಿಗೆ ಮುಕ್ತಾಯವಾಗಿದೆ…… ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿಯೇ ಅಮೆರಿಕ ದೊಡ್ಡಣ್ಣನ ಪಾತ್ರವನ್ನು ನಿರ್ವಹಿಸಿ, ಅಲ್ಲಿಂದ ಇಲ್ಲಿಯವರೆಗೆ ಬಹುತೇಕ ವಿಶ್ವ ನಾಯಕತ್ವದ ಸ್ಥಾನವನ್ನು ನಿಭಾಯಿಸಿದೆ ಮತ್ತು ಉಳಿಸಿಕೊಂಡಿದೆ. ಅದಕ್ಕಾಗಿ ಎಲ್ಲಾ ರೀತಿಯ ತಂತ್ರ, ಕುತಂತ್ರ, ಚಾಣಕ್ಯ…

ಮುಂದೆ ಓದಿ..