21 ವರ್ಷದ ಯುವತಿ ನಾಪತ್ತೆ – ಮದುವೆಯಾಗಿ ಹೊಗಿದ್ದ ಇರಬಹುದೆಂದು ಪೋಷಕರ ಶಂಕೆ
ಬೆಂಗಳೂರು – 25 ಜುಲೈ 2025 ಕಮ್ಮಗೊಂಡನಹಳ್ಳಿಯಲ್ಲಿ 21 ವರ್ಷದ ಯುವತಿ ಮರಿಯಾ ಮೆರ್ಲಿನ್ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈಕೆ ಬಿಎ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯಾಗಿದ್ದು, ಕಳೆದ 21 ಜುಲೈ 2025 ರಂದು ಬೆಳಿಗ್ಗೆ 11:30ರ ಸುಮಾರಿಗೆ “ಸ್ವಲ್ಪ ಹೊತ್ತಲ್ಲಿ ಬರುತ್ತೇನೆ” ಎಂದು ಹೇಳಿ ಮನೆಯಿಂದ ಹೊರಟು ಹೋದ ನಂತರ ವಾಪಸ್ ಬಾರದೇ ಕಾಣೆಯಾಗಿದ್ದಾಳೆ. ಮರಿಯಾ ಮೆರ್ಲಿನ್ ಅವರ ತಾಯಿ ನೀಡಿದ ದೂರಿನ ಪ್ರಕಾರ, ಈಕೆ ಕಳೆದ ಎರಡು ತಿಂಗಳಿನಿಂದ ತನ್ನ ತಾಯಿಯ ಜೊತೆಗೆ ವಾಸವಿದ್ದಳು. ಈಕೆ ಹಿಂದೆ ಸಿಮ್ಸನ್ ವರದರಾಜು ಎಂಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು ಮತ್ತು ಒಂದು ಸಮಯದಲ್ಲಿ ಆತನೊಂದಿಗೆ ವಾಸಿಸಿದ್ದಳು. ಇದೀಗ ಮರಿಯಾ ಮತ್ತೆ ಆತನೊಂದಿಗೆ ಹೋಗಿರಬಹುದೆಂಬ ಶಂಕೆ ಪೋಷಕರಿಗಿದೆ. ಮರಿಯಾ ಮೆರ್ಲಿನ್ ಅವರ ವೈಶಿಷ್ಟ್ಯಗಳು ಹೀಗಿವೆ – ಗೋಧಿ ಬಣ್ಣ, 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲುಮುಖ. ಬಲ…
ಮುಂದೆ ಓದಿ..
