ಮಳ್ಳಿಕೊಪ್ಪಲು ಗ್ರಾಮದಲ್ಲಿ ಜಮೀನಿನ ವಿವಾದದಿಂದ ಹಲ್ಲೆ: ದಂಪತಿಗೆ ಗಾಯ
ನಾಗಮಂಗಲ ತಾಲ್ಲೂಕಿನ ಮಳ್ಳಿಕೊಪ್ಪಲು ಗ್ರಾಮದಲ್ಲಿ ಜಮೀನಿನ ಹಕ್ಕು ಸಂಬಂಧಿಸಿದ ವಿಚಾರದಿಂದ ಉಂಟಾದ ವಿವಾದ ಹಲ್ಲೆಗೆ ದಾರಿ ತೋರಿದೆ. ಈ ಘಟನೆಯಲ್ಲಿ ದಂಪತಿಗೆ ಗಾಯಗಳಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶೀಲಮ್ಮ ಅವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು, ಅದರ ಪ್ರಕಾರ ಅವರು ದೇವಲಾಪುರ ಹೋಬಳಿಯ ಮಳ್ಳಿಕೊಪ್ಪಲು ಗ್ರಾಮದಲ್ಲಿರುವ ಸರ್ವೇ ನಂ. 56 ರಲ್ಲಿನ ಸುಮಾರು 1 ಎಕರೆ 32 ಕುಂಟೆ ಜಮೀನನ್ನು ತಮ್ಮ ಮಗ ಅನಿಲ್ ಕುಮಾರ್ ಎಂ.ವಿ. ಅವರ ಹೆಸರಿನಲ್ಲಿ ಬಿ.ಪಿ. ಪ್ರಕಾಶ ಬಿನ್ ಪುಟ್ಟಪರವರಿಂದ ಜನರಲ್ ಪವರ್ ಆಫ್ ಅಟಾರ್ನಿಯ ಮೂಲಕ ಪಡೆದಿದ್ದು, ಕುಟುಂಬ ಸಮೇತ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು. ಶೀಲಮ್ಮ ಪ್ರಕಾರ,(ಕೋಂ ಶ್ರೀನಿವಾಸ), ಚಿಕ್ಕತಾಯಮ್ಮ (ಕೋಂ ವೆಂಕಟೇಶ), ಶ್ರೀನಿವಾಸ (ಕೋಂ ವೆಂಕಟೇಶ), ಜಯಮ್ಮ (ಕೋಂ ಗಂಗರಸಯ್ಯ), ಶಾರದಾ (ಕೋಂ ಅರಸೇಗೌಡ) ಮತ್ತು ತೇಜಸ್ ಗೌಡ (ಬಿನ್ ಅರಸೇಗೌಡ) ಎಂಬವರು ತಮ್ಮ ಹಸು ಮತ್ತು…
ಮುಂದೆ ಓದಿ..
