ಮಾಲೀಕತ್ವದ ಕಟ್ಟಡಕ್ಕೆ ಬೆದರಿಕೆ: 50 ಲಕ್ಷ ರೂ ಬೇಡಿಕೆಯ ಆರೋಪ
ನಗರದ ಸಹಕಾರ ನಗರ ಪ್ರದೇಶದಲ್ಲಿ ಖಾಸಗಿ ಆಸ್ತಿಗೆ ಸಂಬಂಧಿಸಿದವಾಗಿ ಜಮೀನುದಾರರೊಬ್ಬರು ತಮಗೆ ಕಟ್ಟಡವನ್ನು ನೆಲಸಮಗೊಳಿಸುವ ಬೆದರಿಕೆ ಬಂದಿದ್ದು, ಹಣ ನೀಡುವಂತೆ ಒತ್ತಾಯಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಶ್ರೀ ರವೀಶ್ ಗೌಡ ಹಳೆಯ ಸೈಟ್ ನಂ. 61/5ರಲ್ಲಿ ಶಾಂತಿಯುತವಾಗಿ ಸ್ವಾಧೀನ ಹೊಂದಿದ ಭೂಮಿಯಲ್ಲಿ B.B.M.P. ಯೋಜನೆ ಅನುಮತಿಗೆ ಅನುರೂಪವಾಗಿ ಕಟ್ಟಡವನ್ನು ನಿರ್ಮಿಸಿದ್ದಾರೆ. ಈ ಭೂಮಿ ಹಲವು ಹಂತಗಳಲ್ಲಿ ಪರಿವರ್ತನೆಗೊಂಡು ಪ್ರಸ್ತುತ ಸೈಟ್ ನಂ. 61/8 ಆಗಿದ್ದು, ಸಂಬಂಧಿತ ದಾಖಲೆಗಳು ಸಹ ಇವೆ ಎಂದು ಅವರು ತಿಳಿಸಿದ್ದಾರೆ. ಆದರೆ ಈ ಆಸ್ತಿಗೆ ಸಂಬಂಧವಿಲ್ಲದ ಬಿ.ಪಿ. ಮಂಜುನಾಥ್ ಗೌಡ ಎಂಬವರು, ಶ್ರೀ ರವೀಶ್ ಗೌಡ ವಿರುದ್ಧ RTI ಮೂಲಕ ಮಾಹಿತಿ ಪಡೆದು, ಬಿಬಿಎಂಪಿ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ಇಲಾಖೆ ಸೇರಿದಂತೆ ಹಲವು ಸಂಸ್ಥೆಗಳಿಗೆ ದೂರುಗಳನ್ನು ನೀಡುತ್ತಿದ್ದಾರೆ. ಕಟ್ಟಡವನ್ನು “ಅಕ್ರಮ ಆಶ್ರಮ” ಎಂದು ಗುರುತಿಸಿ ವಿವಿಧ ದಿಕ್ಕಿನಲ್ಲಿ…
ಮುಂದೆ ಓದಿ..
