ನೆರಿಗಾ ಗ್ರಾಮದ ಸರ್ಕಾರಿ ಜಮೀನಿನಲ್ಲಿ ತ್ಯಾಜ್ಯ ಸುರಿಯುವ ಅಕ್ರಮ: ಗ್ರಾಮಸ್ಥರ ಆಕ್ರೋಶ
ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿಯ ನೆರಿಗಾ ಗ್ರಾಮದ ಸರ್ವೆ ನಂ. 24 ರಲ್ಲಿನ ಸರ್ಕಾರಿ ಜಮೀನಿನಲ್ಲಿ ತ್ಯಾಜ್ಯ ಹಾಗೂ ಮಲೀನ ಪದಾರ್ಥಗಳನ್ನು ಲಾರಿಗಳ ಮೂಲಕ ಅಕ್ರಮವಾಗಿ ಸುರಿಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಪರಿಸರ ಮಾಲಿನ್ಯ ಉಂಟಾಗಿ ಗ್ರಾಮಸ್ಥರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಈ ಸಂಬಂಧ ಪೊಲೀಸ್ ಠಾಣೆಗೆ ಗ್ರಾಮಸ್ಥರು ದೂರು ನೀಡಿದ್ದಾರೆ. ಒಟ್ಟು 6 ಎಕರೆ 05 ಗುಂಟೆಯಷ್ಟು ಜಮೀನಿನ ಪೈಕಿ 4 ಎಕರೆ 10 ಗುಂಟೆ ಭಾಗ ಖರಾಬು ಜಾಗವಾಗಿದ್ದು, ಅದನ್ನು ನಿರ್ಲಕ್ಷ್ಯವಾಗಿ ಕಸ ಸುರಿವ ಸ್ಥಳವಾಗಿ ಬಳಸಲಾಗುತ್ತಿದೆ. ಸ್ಥಳೀಯರು ನೀಡಿದ ದೂರಿನ ಪ್ರಕಾರ, ಪ್ರವೀಣ್ ಕುಮಾರ್ ಬಿನ್ ಕೃಷ್ಣಪ್ಪ, ವೆಂಕಟೇಶ್ ಬಿನ್ ಲೇ. ನರಸಿಂಹ, ಮತ್ತು ಕಿಶೋರ್ ಬಿನ್ ಶಿವ ಎಂಬವರು ಬಿಬಿಎಂಪಿಯಿಂದ ತ್ಯಾಜ್ಯವನ್ನು ಲಾರಿಗಳ ಮೂಲಕ ತಂದು, ಕಾನೂನುಬಾಹಿರವಾಗಿ ಜಮೀನಿನಲ್ಲಿ ಸುರಿಸುತ್ತಿದ್ದಾರೆ. ದಿನಾಂಕ 25 ಜುಲೈ 2025ರ ರಾತ್ರಿ, KA-51-5-1045,…
ಮುಂದೆ ಓದಿ..
