ಹುಬ್ಬಳ್ಳಿ ಮಹಿಳೆ ಮೇಲೆ ಗಂಡನಿಂದ ಕ್ರೂರ ಹಲ್ಲೆ ಹಾಗೂ ಕೊಲೆ ಯತ್ನ
ಹುಬ್ಬಳ್ಳಿ, ಜೂನ್ 25 : ಪತ್ನಿಯನ್ನು ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳಿಸಿ ಕೊಲೆ ಮಾಡಲು ಯತ್ನಿಸಿದ ಗಂಭೀರ ಆರೋಪದಡಿ ಫಯಾಜ್ ಅಹ್ಮದ ವಿರುದ್ಧ ಇಬ್ಬರು ದೂರುದಾರೆಯರ ವತಿಯಿಂದ ಇಬ್ಬರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಪಿರ್ಯಾದಿದಾರಳಾದ ಮಹಿಳೆ ತನ್ನ ಗಂಡನಾದ ಫಯಾಜ್ ಅಹ್ಮದ (ತಂದೆ: ಮಹ್ಮದ ಇಕಾಲ ಕುಸುಗಲಿ) ಈತನ ವಿರುದ್ಧ ಹುಬ್ಬಳ್ಳಿ-ಧಾರವಾಡ ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಹಿಂದಿನಿಂದಲೇ ಎರಡು ಪ್ರಕರಣಗಳನ್ನು ದಾಖಲಿಸಿದ್ದಳು. ಇದಕ್ಕೆ ಸೇಡಾಗಿ, ದಿನಾಂಕ 12/06/2025 ರಂದು ಬೆಳಿಗ್ಗೆ 8:30 ಗಂಟೆ ಸುಮಾರಿಗೆ, ಮಹಿಳೆ ವಾಸವಿದ್ದ ಚೇತನಾನಗರ, ಗೋಕುಲ ರಸ್ತೆಯ ಬಾಡಿಗೆ ಮನೆಯಲ್ಲಿ ಈತನಿಂದ ಹಲ್ಲೆ ನಡೆಯಿತು. “ನನ್ನನ್ನು ಜೈಲಿಗೆ ಕಳಿಸಿದ್ದೀಯಾ ಎಂದು ತುಂಬಾ ಕೀಳುಮಟ್ಟದ ಅವಾಚ್ಯ ಶಬ್ದಗಳಿಂದ ಬೈದು ಹೀಯಾಳಿಸಿ ಇವತ್ತು ನಿನ್ನ ಜೀವಸಹಿತ ಬಿಡುವುದಿಲ್ಲ, ನಿನ್ನನ್ನು ಕೊಲೆ ಮಾಡಿಯೇ ಹೋಗುತ್ತೇನೆ” ಎಂದು ಬೆದರಿಕೆ…
ಮುಂದೆ ಓದಿ..
