ಕಾಣೆಯಾದ ಯುವತಿ: ಪೋಷಕರಿಂದ ಮಗಳ ಪತ್ತೆಗಾಗಿ ಮನವಿ
ಹುಬ್ಬಳ್ಳಿಯ ಸೆಟ್ಲ್ ಮೆಂಟ್ 6ನೇ ಕ್ರಾಸ್ ನಿವಾಸಿ ಮಾರುತಿ ನವಲಗುಂದ ಅವರು ದಿನಾಂಕ 21-06-2025 ರಂದು ತಮ್ಮ ಅಪ್ರಾಪ್ತ ವಯಸ್ಸಿನ ಮಗಳಾದ ಕು: ದೀಪಿಕಾ (ವಯಸ್ಸು: 17 ವರ್ಷ 01 ತಿಂಗಳು) ಕಾಣೆಯಾಗಿರುವ ಕುರಿತು ಹುಬ್ಬಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪಿರ್ಯಾದಿದಾರರ ಹೇಳಿಕೆಯಂತೆ, ದೀಪಿಕಾ ಬೆಳಿಗ್ಗೆ 10.00 ರಿಂದ 10.30 ಗಂಟೆಯ ನಡುವೆ “ಆಧಾರ್ ಕಾರ್ಡ್ ಮಾಡಿಸಿಕೊಂಡು ಬರುತ್ತೇನೆ” ಎಂದು ಹೇಳಿ ಮನೆಯಿಂದ ಹೊರಟು ಹೋಗಿದ್ದಳು. ಆದರೆ ಅಷ್ಟರಿಂದಲೂ ಮನೆಗೆ ಹಿಂದಿರುಗಿಲ್ಲ. ಸಂಬಂಧಿಕರು, ಸ್ನೇಹಿತರು ಹಾಗೂ ಗುರುತಿನ ಎಲ್ಲಾ ಕಡೆ ಹುಡುಕಿದರೂ ಈವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಯುವತಿಯನ್ನು ಶೀಘ್ರ ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ದೀಪಿಕಾ ಬಗ್ಗೆ ಯಾವುದೇ ಮಾಹಿತಿ ಪಡೆದಿದ್ದರೆ, ದಯವಿಟ್ಟು ಸಮೀಪದ ಪೊಲೀಸ್ ಠಾಣೆಗೆ ತಕ್ಷಣ ಮಾಹಿತಿ ನೀಡಬೇಕೆಂದು…
ಮುಂದೆ ಓದಿ..
