ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ 11 ಹಸುವಿನ ಕರುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದ ಆರೋಪಿಗಳು ಬಂಧನ
ದೇವಲಾಪುರ ಹೋಬಳಿಯ ಕುಂಟಾನಕೊಪ್ಪಲು ಗ್ರಾಮ ಗೇಟ್ ಬಳಿ ಸಂಭವಿಸಿದ ಕಾರು ಅಪಘಾತದಿಂದ ಹಸುವಿನ ಕರುಗಳ ಅಕ್ರಮ ಸಾಗಾಟ ಬೆಳಕಿಗೆ ಬಂದಿದೆ. ಈ ಘಟನೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ನಾಗಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ನಾಗಮಂಗಲ ಕಡೆಯಿಂದ ಹುಲಿಯೂರುದುರ್ಗ ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರು (ನಂ. ಕೆಎ 01 ಎಂಡಿ 9542) ನಿಗದಿತ ವೇಗ ಮೀರಿ ಅಜಾಗರೂಕತೆಯಿಂದ ಚಾಲನೆ ಮಾಡಲಾಗಿದ್ದು, ಕುಂಟಾನಕೊಪ್ಪಲು ಗೇಟ್ ಬಳಿ ಮರಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಘಟನೆ ಕುರಿತು ಮಾಹಿತಿ ಪಡೆದ ನಾಗಮಂಗಲ ಪೊಲೀಸ್ ಠಾಣೆಯ ಪಿಎಸ್ಐ ರಾಜೇಂದ್ರ ಜೆ ಅವರು ಠಾಣೆಯ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ, ಕಾರಿನೊಳಗೆ ಸುಮಾರು ಒಂದು ತಿಂಗಳೊಳಗಿನ 11 ಹಸುವಿನ ಕರುಗಳನ್ನು ಪತ್ತೆಹಚ್ಚಲಾಯಿತು. ಈ ಕರುಗಳ ಬಾಯಿ ಮತ್ತು ಕಾಲುಗಳನ್ನು ದಾರಯಿಂದ ಕಟ್ಟಲಾಗಿದ್ದು, ಅವುಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ಕಸಾಯಿಖಾನೆಗೆ ಕೊಂಡೊಯ್ಯಲಾಗುತ್ತಿತ್ತು. ಪೊಲೀಸರು ಸ್ಥಳದಲ್ಲಿದ್ದ ಇಬ್ಬರನ್ನು ಬಂಧಿಸಿದ್ದು, ಆರೋಪಿತರನ್ನು…
ಮುಂದೆ ಓದಿ..
